»   » ವಿಮರ್ಶೆ: 'ನಕಲಿ ಮಾರ್ಕ್ಸ್ ಕಾರ್ಡ್' ವಿರುದ್ಧ ಹೋರಾಡುವ 'ಅತಿರಥ'

ವಿಮರ್ಶೆ: 'ನಕಲಿ ಮಾರ್ಕ್ಸ್ ಕಾರ್ಡ್' ವಿರುದ್ಧ ಹೋರಾಡುವ 'ಅತಿರಥ'

Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ತಮಿಳಿನ 'ಕನಿಥನ್' ಚಿತ್ರದ ರಿಮೇಕ್ ಇಲ್ಲಿ 'ಅತಿರಥ' ಆಗಿದೆ. 'ಅತಿರಥ' ಮನರಂಜನೆ ಜೊತೆಗೆ ಒಂದು ಸಂದೇಶ ಹೇಳಿರುವ ಸಿನಿಮಾ. ಇಡೀ ಸಿನಿಮಾ 'ನಕಲಿ ಸರ್ಟಿಫಿಕೇಟ್' ಎನ್ನುವ ಅಂಶದ ಸುತ್ತ ಸುತ್ತುತ್ತೆ.

  Rating:
  3.0/5
  Star Cast: ಚೇತನ್, ಲತಾ ಹೆಗಡೆ, ಸಾಧು ಕೋಕಿಲ, ಅವಿನಾಶ್
  Director: ಮಹೇಶ್ ಬಾಬು

  ಕಥೆ ಓಕೆ, ಚಿತ್ರಕಥೆ ಅಷ್ಟಕ‍ಷ್ಟೇ

  ಒಂದು ಸಣ್ಣ ಸುದ್ದಿ ವಾಹಿನಿಯಲ್ಲಿ ವರದಿಗಾರನಾಗಿ ಕೆಲಸ ಮಾಡುವ ಹುಡುಗ ಆಕಾಶ್ (ಚೇತನ್). ಈತನಿಗೆ ಬಿ.ಬಿ.ಸಿ ನ್ಯೂಸ್ ಚಾನೆಲ್ ನಲ್ಲಿ ರಿಪೋರ್ಟರ್ ಆಗುವ ಆಸೆ. ಆದ್ರೆ, ಅಪ್ಪನಿಗೆ ಅಪ್ಪನಿಗೆ ಅದು ಇಷ್ಟವಿಲ್ಲ. ಒಂದು ಸ್ಟಿಂಗ್ ಆಪರೇಷನ್ ಮಾಡುವಾಗ ನಾಯಕನಿಗೆ ನಾಯಕಿ ಅಧಿತಿ (ಲತಾ ಹೆಗಡೆ) ಸಿಗ್ತಾಳೆ. ಒಂದೇ ನಿಮಿಷದಲ್ಲಿ ಹೀರೋಗೆ ಲವ್ ಆಗಿ ಡ್ಯುಯೆಟ್ ಕೂಡ ಆಗೋಗುತ್ತೆ. ಹೀಗೆ ಸಾಗುತ್ತಿದ್ದ ಕಥೆಗೆ ಇದ್ದಕ್ಕಿದ್ದ ಹಾಗೆ ತಿರುವು ಸಿಗುತ್ತದೆ. ನಾಯಕ ಆಕಾಶ್ (ಚೇತನ್) 'ನಕಲಿ ಸರ್ಟಿಫಿಕೇಟ್' ಮಾಡಿದ ಆರೋಪದಲ್ಲಿ ಬಂಧನವಾಗ್ತಾನೆ. ಈ ಜಾಲದಲ್ಲಿ ಸಿಕ್ಕಿಬಿದ್ದು ಅನೇಕ ಅಮಾಯಕ ಹುಡುಗರು ಜೈಲು ಸೇರಿರುತ್ತಾರೆ. ನಂತರ ನಾಯಕ 'ನಕಲಿ ಸರ್ಟಿಫಿಕೇಟ್' ಜಾಲದ ವಿರುದ್ಧ ಸಮರ ಸಾರುತ್ತಾನೆ. ಕೊನೆಗೆ ಆ ದುಷ್ಟರನ್ನು ನಾಯಕ ಬಲೆಗೆ ಹಾಕುತ್ತಾನಾ? ಎನ್ನುವುದು ಚಿತ್ರದ ಕಥೆ.

  ನಕಲಿ ಸರ್ಟಿಫಿಕೇಟ್ ಸುತ್ತ

  'ಅತಿರಥ' ಇಡೀ ಸಿನಿಮಾದ ಕಥೆ 'ನಕಲಿ ಸರ್ಟಿಫಿಕೇಟ್' ಎನ್ನುವ ಅಂಶದ ಮೇಲೆ ನಿಂತಿದೆ. 'ನಕಲಿ ಮಾರ್ಕ್ಸ್ ಕಾರ್ಡ್' ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯವನ್ನು ಚಿತ್ರದಲ್ಲಿ ಹೇಳಲಾಗಿದೆ. ಜೊತೆಗೆ ಸಮಾಜದಲ್ಲಿ ಸುದ್ದಿ ವಾಹಿನಿಗಳ ಪಾತ್ರವನ್ನು ಚಿತ್ರದಲ್ಲಿ ತೋರಿಸಲಾಗಿದೆ.

  ಕಲಾವಿದರ ನಟನೆ

  ಚಿತ್ರದ ನಾಯಕ ಚೇತನ್ ಮತ್ತು ನಾಯಕಿ ಲತಾ ಹೆಗಡೆ ಇಬ್ಬರು ಚಿತ್ರದಲ್ಲಿ ರಿಪೋರ್ಟರ್ ಪಾತ್ರವನ್ನು ಮಾಡಿದ್ದಾರೆ. ಎಂದಿನಂತೆ ಚೇತನ್ ತಮ್ಮ ನಟನೆಯ ಮೂಲಕ ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ಆನ್ ಸ್ಕ್ರೀನ್ ನಲ್ಲಿ ಚೆನ್ನಾಗಿ ಕಾಣುವ ಲತಾ ಹೆಗಡೆ ಮೊದಲ ಸಿನಿಮಾದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಸಾಧು ಕೋಕಿಲ, ಅವಿನಾಶ್, ಖಳ ನಾಯಕ ಕಬೀರ್ ಸಿಂಗ್, ಅಚ್ಯುತ್ ಕುಮಾರ್ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ.

  ನಿರ್ದೇಶನ ಹೇಗಿದೆ?

  'ನಕಲಿ ಸರ್ಟಿಫಿಕೇಟ್' ಎನ್ನುವ ಕಥೆಯ ಅಂಶ ಚೆನ್ನಾಗಿದೆ. ಆದ್ರೆ, ನಿರ್ದೇಶಕರು ತಮ್ಮ ಕಥೆಯನ್ನು ಇನ್ನೂ ಒಳ್ಳೆಯ ಚಿತ್ರಕಥೆಯ ಮೂಲಕ ಇನ್ನಷ್ಟು ಇಷ್ಟವಾಗುವ ರೀತಿಯಲ್ಲಿ ಹೇಳಬಹುದಾಗಿತ್ತು. ಅದು ಬಿಟ್ಟರೆ ನಿರ್ದೇಶಕ ಮಹೇಶ್ ಬಾಬು ಸಿನಿಮಾ ಮೇಕಿಂಗ್ ತುಂಬ ರಿಚ್ ಆಗಿದೆ.

  ಸಾಹಿತ್ಯವನ್ನು ನುಂಗಿದ ಸಂಗೀತ

  ಸಾಧು ಕೋಕಿಲ ಪುತ್ರ ಸುರಾಗ್ ಮ್ಯೂಸಿಕ್ ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದರೆ ಸಿನಿಮಾ ಹಾಡುಗಳು ಮನಸಿಗೆ ಹಿಡಿಸುವುದಿಲ್ಲ. ಒಂದು ಹಾಡು ಬಿಟ್ಟರೆ ಬಾಕಿ ಹಾಡುಗಳಲ್ಲಿ ಸಾಹಿತ್ಯವನ್ನು ಅಬ್ಬರದ ಮ್ಯೂಸಿಕ್ ನುಂಗು ಹಾಕಿದೆ.

  ಪ್ಲಸ್ ಮತ್ತು ಮೈನಸ್

  'ಅತಿರಥ' ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಚೇತನ್. ಅವರ ಅಭಿನಯ, ಆಕ್ಷನ್, ಡ್ಯಾನ್ಸ್ ಎಲ್ಲವೂ ಚಿತ್ರ ನೋಡುಗರ ಮೆಚ್ಚುಗೆ ಗಳಿಸುತ್ತದೆ. ಇನ್ನು ಸಿನಿಮಾದ ಮೈನಸ್ ಪಾಯಿಂಟ್ ಅಂದರೆ ಚಿತ್ರಕಥೆಯಲ್ಲಿ ಗಟ್ಟಿತನ ಇಲ್ಲ.

  ಒಮ್ಮೆ ನೋಡಬಹುದು

  'ಅತಿರಥ' ಸಿನಿಮಾವನ್ನು ಒಮ್ಮೆ ನೋಡಬಹುದು. ಟಿಕೆಟ್ ಕೊಟ್ಟು ಹೋದವರು ಮನರಂಜನೆಯ ಜೊತೆಗೆ ಪ್ರೇಕ್ಷಕರು, ಅತಿರಥ ಮೂಲಕ ಒಂದು ಸಂದೇಶವನ್ನು ಚಿತ್ರಮಂದಿರದಿಂದ ತರಬಹುದು.

  English summary
  Athiratha,by Mahesh Babu, is the remake of the Tamil drama Kanithan. The story of Athiratha revolves around an aspiring journalist who helps the innocent and talented young students get a fair chance by uncovering the huge racket of question paper leaks and fake certification prevalent in the country.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more