»   » ವಿಮರ್ಶೆ : 'ಕಾಲೇಜ್ ಕುಮಾರ'ನಿಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್

ವಿಮರ್ಶೆ : 'ಕಾಲೇಜ್ ಕುಮಾರ'ನಿಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್

Posted By:
Subscribe to Filmibeat Kannada

'ಕಾಲೇಜ್ ಕುಮಾರ' ಟೈಟಲ್ ನಿಂದಲೇ ಪ್ರೇಕ್ಷಕರ ಗಮನವನ್ನ ಸೆಳೆದಿದ್ದ ಸಿನಿಮಾ. 'ಓಂ' ಚಿತ್ರದ ಹಾಡಿನ ಎಳೆಯನ್ನ ಟೈಟಲ್ ಮಾಡಿಕೊಂಡಿದ್ದ ನಿರ್ದೇಶಕ ಹರಿ ಸಂತು ಆಕ್ಷನ್ ಕಟ್ ಹೇಳಿರುವ ಯೂಥ್ ಫುಲ್ ಕಥೆ ಇರುವ ಚಿತ್ರ ಇದು. ಫೋಟೋ ಶೂಟ್, ಹಾಡುಗಳು ಮತ್ತು ಟ್ರೇಲರ್ ನಿಂದಲೇ ಸುದ್ದಿ ಮಾಡಿದ್ದ 'ಕಾಲೇಜ್ ಕುಮಾರ' ಚಿತ್ರ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ.

Rating:
4.0/5

ಚಿತ್ರ: ಕಾಲೇಜ್ ಕುಮಾರ
ನಿರ್ದೇಶನ: ಹರಿ ಸಂತೋಷ್
ಸಂಗೀತ: ಅರ್ಜುನ್ ಜನ್ಯ
ಸಂಕಲನ: ಕೆ.ಎಂ.ಪ್ರಕಾಶ್
ಛಾಯಾಗ್ರಹಣ: ಎ.ಅಳಗನ್
ತಾರಾಗಣ: ವಿಕ್ಕಿ, ಸಂಯುಕ್ತ, ಶೃತಿ, ರವಿಶಂಕರ್, ಸಾಧು ಕೋಕಿಲ, ಸುಂದರ್ ರಾಜ್, ಪ್ರಕಾಶ್ ಬೆಳವಾಡಿ ಮತ್ತು ಇತರರು.

'ಕಾಲೇಜ್ ಕುಮಾರ' ಚಿತ್ರದ ಕಥಾಹಂದರ:

'ಕಾಲೇಜ್ ಕುಮಾರ' ಈಗಿನ ಜನರೇಷನ್ ಮಕ್ಕಳ ಸಿಂಪಲ್ ಕತೆ. ಅಪ್ಪ ಅಮ್ಮನ ಆಸೆಯನ್ನ ಪೂರೈಸದ ಮಗ, ತಂದೆಗೆ ಸವಾಲು ಹಾಕಿ ದುಡಿಮೆಯತ್ತ ಮುಖ ಮಾಡುತ್ತಾನೆ. ಆಸೆ, ಕನಸುಗಳನ್ನ ಬೇರೆ ಯಾರೂ ಪೂರ್ತಿ ಮಾಡಲು ಸಾಧ್ಯವಿಲ್ಲ. ನಮ್ಮ ಕನಸನ್ನ ನಾವೇ ಗೆಲ್ಲಬೇಕು ಎನ್ನುವ ಸತ್ಯ ತಿಳಿದ ನಂತರ ಜೀವನಕ್ಕಾಗಿ ಏನು ಮಾಡ್ತಾನೆ.? ಅಪ್ಪ-ಅಮ್ಮನ ಆಸೆಯನ್ನ ಯಾವ ರೀತಿಯಲ್ಲಿ ಪೂರೈಸುತ್ತಾನೆ ಎನ್ನುವ ಸಿಂಪಲ್ ಕತೆಯೇ ಕಾಲೇಜ್ ಕುಮಾರ.

ಇಷ್ಟವಾಗ್ತಾರೆ ವಿಕ್ಕಿ-ಸಂಯುಕ್ತ

ಚಿತ್ರದ ನಾಯಕನಾಗಿ 'ಕೆಂಡಸಂಪಿಗೆ' ವಿಕ್ಕಿ ನೋಡುಗರಿಗೆ ಇಷ್ಟವಾಗುತ್ತಾರೆ. ಸಿನಿಮಾದ ಸೆಕೆಂಡ್ ಹಾಫ್ ನಲ್ಲಿ ವಿಕ್ಕಿ ಅಭಿನಯ ಅದ್ಭುತವಾಗಿದೆ. ಕಮರ್ಷಿಯಲ್ ಪಾತ್ರಕ್ಕೂ ವಿಕ್ಕಿ ಸೂಟ್ ಆಗ್ತಾರೆ ಅನ್ನೋದು ತೆರೆ ಮೇಲೆ ಕಾಣುತ್ತೆ. ಕಿರಿಕ್ ಪಾರ್ಟಿ ನಂತ್ರ ಕಾಲೇಜ್ ಕುಮಾರ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸಂಯುಕ್ತ ಹೆಗ್ಡೆ ಅಭಿನಯ ಚೆನ್ನಾಗಿದೆ. ಅಭಿನಯಕ್ಕೆ ಅಷ್ಟೇನೂ ಜಾಗವಿಲ್ಲದೇ ಇದ್ದರೂ ಕೊಟ್ಟ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಅಭಿನಯದ ಮೂಲಕ ಕಣ್ಣಂಚಲ್ಲಿ ನೀರು ತರಿಸುವ ರವಿಶಂಕರ್

ಕಾಲೇಜ್ ಕುಮಾರ ಸಿನಿಮಾಗೆ ವಿಕ್ಕಿ ಹೆಸರಿಗಷ್ಟೇ ನಾಯಕ, ಚಿತ್ರದಲ್ಲಿ ನಿಜವಾದ ನಾಯಕ ನಟ ರವಿಶಂಕರ್, ಅಪ್ಪನ ಪಾತ್ರದಲ್ಲಿ ಅಭಿನಯಿಸಿರುವ ರವಿಶಂಕರ್ ಪಾತ್ರ ನೋಡುಗರನ್ನ ಭಾವುಕರನ್ನಾಗಿಸುತ್ತೆ. ಸೆಂಟಿಮೆಂಟ್ ಸೀನ್ ಗಳಲ್ಲಿ ರವಿಶಂಕರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಎರಡು ಶೇಡ್ ನಲ್ಲಿ ಆರ್ಮುಗಂ ತೆರೆ ಮೇಲೆ ಅಭಿನಯದ ಮೂಲಕ ಅಬ್ಬರಿಸಿದ್ದಾರೆ. ಇನ್ನೂ ನಟಿ ಶ್ರುತಿ ತಮ್ಮ ಪಾತ್ರವನ್ನ ಎಂದಿನಂತೆ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಕ್ಯಾಮೆರಾ ಮತ್ತು ಮ್ಯೂಸಿಕ್

ಕಾಲೇಜ್ ಕುಮಾರ ಸಿನಿಮಾದಲ್ಲಿ ಕ್ಯಾಮೆರಾ ವರ್ಕ್ ಗಿಂತಲೂ ಲೈಟಿಂಗ್ ಚಿತ್ರಕ್ಕೆ ಬೇರೆಯದ್ದೇ ಫೀಲ್ ಕೊಟ್ಟಿದೆ. ಮನೆಯ ಒಳಗಿನ ದೃಶ್ಯಗಳನ್ನ ಚಿತ್ರೀಕರಿಸುವಾಗ ಲೈಟಿಂಗ್ ಸೆಟ್ಟಿಂಗ್ ಸಖತ್ತಾಗಿದೆ. ಚಿತ್ರದ ಎರಡು ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಹಿನ್ನಲೆ ಸಂಗೀತ ಅಷ್ಟೇನೂ ಖುಷಿ ನೀಡೋದಿಲ್ಲ.

ಸಂಭಾಷಣೆಯೇ ಪ್ಲಸ್ ಪಾಯಿಂಟ್

ಸಿಂಪಲ್ ಆಗಿರುವ ಕಥೆಯನ್ನ ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರ ಮುಂದಿಟ್ಟಿರುವ ನಿರ್ದೇಶಕ ಸಂತೋಷ್ ಕಾಲೇಜ್ ಕುಮಾರ ಸಿನಿಮಾಗೆ ನಾಲ್ಕು ನಿರ್ದೇಶಕರಿಂದ ಸಂಭಾಷಣೆ ಬರೆಸಿದ್ದಾರೆ. ರಾಮ ರಾಮ ರೇ ಚಿತ್ರದ ಸತ್ಯ ಪ್ರಕಾಶ್, ಭರ್ಜರಿ ಚಿತ್ರ ಖ್ಯಾತಿಯ ಚೇತನ್ ಕುಮಾರ್, ಕಡ್ಡಿಪುಡಿ ಸಿನಿಮಾ ಸಂಭಾಷಣೆಕಾರ ಮಂಜು ಮಾಸ್ತಿ ಹಾಗೂ ನಿರ್ದೇಶಕ ಹರಿ ಸಂತೋಷ್ ಚಿತ್ರಕ್ಕೆ ಡೈಲಾಗ್ ಬರೆದಿರೋದು ವಿಶೇಷ

ಯುವ ಮನಸ್ಸುಗಳಿಗೆ ನೆಚ್ಚಿನ ಕುಮಾರ

ಕಾಲೇಜ್ ಕುಮಾರ ಹೆಸರೇ ಹೇಳುವಂತೆ ಈಗಿನ ಜನರೇಷನ್ ಗೆ ಹೇಳಿ ಮಾಡಿಸಿದ ಸಿನಿಮಾ. ಕಾಲೇಜ್ ಲೈಫ್, ಲವ್, ಸೆಂಟಿಮೆಂಟ್ ಜೊತೆಗೆ ಜೀವನದ ಒಂದಿಷ್ಟು ಜವಾಬ್ದಾರಿಗಳನ್ನ ಸಿನಿಮೀಯ ಶೈಲಿಯಲ್ಲಿ ಯುವ ಮನಸ್ಸುಗಳಿಗೆ ಮುಟ್ಟಿಸುವಂತ ಪ್ರಯತ್ನ. ಹೊಸ ರೀತಿಯ ಈ ಪ್ರಯತ್ನವನ್ನ ವೀಕೆಂಡ್ ನಲ್ಲಿ ತೆರೆ ಮೇಲೆ ನೋಡೋದಕ್ಕೆ ಕೊಟ್ಟ ಕಾಸಿಗೆ ಮೋಸವಿಲ್ಲ.

English summary
Read Kannada Movie 'College Kumar' review. ಅಲೆಮಾರಿ ಸಿನಿಮಾ ಖ್ಯಾತಿಯ ಸಂತೋಷ್ ನಿರ್ದೇಶನದ ಕಾಲೇಜ್ ಕುಮಾರ ಚಿತ್ರದ ವಿಮರ್ಶೆ ಇಲ್ಲಿದೆ.
Please Wait while comments are loading...