For Quick Alerts
  ALLOW NOTIFICATIONS  
  For Daily Alerts

  'ಕ್ರೇಜಿ' ಹುಡುಗನ ಲವ್ ಕಹಾನಿಗೆ ವಿಮರ್ಶಕರ ಪ್ರತಿಕ್ರಿಯೆ ಏನು.?

  By Suneetha
  |

  ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸಬರ ಹವಾ ಹೆಚ್ಚಾಗಿದೆ.ಹೊಸಬರಿಗೆ ಒಂಥರಾ ಪರ್ವ ಕಾಲ ಅಂತಾನೇ ಹೇಳಬಹುದು. ಈಗಾಗಲೇ ಹಲವಾರು ಹೊಸ ಪ್ರತಿಭೆಗಳು, ಸಿನಿಮಾಗಳಲ್ಲಿ ಮಿಂಚುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿದ್ದಾರೆ.

  ಇದೀಗ ಇದಕ್ಕೆಲ್ಲಾ ಹೊಸ ಸೇರ್ಪಡೆ ಮಹೇಶ್ ಬಾಬು ನಿರ್ದೇಶನದ 'ಕ್ರೇಜಿ ಬಾಯ್'. ಇಲ್ಲಿ ನಿರ್ದೇಶಕರು ಹಳಬರಾದರೂ, ಚಿತ್ರದ ನಟ-ನಟಿ ಮಾತ್ರ ಕನ್ನಡ ಚಿತ್ರರಂಗಕ್ಕೆ ಹೊಸಬರು. ಸ್ಟಾರ್ ನಟರಿಗೆ ನಿರ್ದೇಶನ ಮಾಡಿರುವ ಮಹೇಶ್ ಬಾಬು ಅವರು ಸದಾ ಹೊಸ ಪ್ರತಿಭೆಗಳಿಗೆ ಮಣೆ ಹಾಕುತ್ತಾರೆ.[ಸಂದರ್ಶನ: 'ಕ್ರೇಜಿ ಬಾಯ್' ದಿಲೀಪ್ ಗೆ ದರ್ಶನ್ ಸ್ಫೂರ್ತಿಯಂತೆ.!]

  ಅಂದಹಾಗೆ ಅದೇ ಹಳೇ ರಾಗ ಅದೇ ಹಾಡು ಎನ್ನುವಂತೆ, ಮತ್ತದೇ ಲವ್ವಿ-ಡವ್ವಿ, ಮನೆಯಲ್ಲಿ ರಂಪ-ರಾದ್ಧಾಂತ ಕಥೆಯನ್ನು 'ಕ್ರೇಜಿ ಬಾಯ್' ಅಂತಿದ್ದಾರೆ ಖ್ಯಾತ ವಿಮರ್ಶಕರು. 'ಕ್ರೇಜಿ ಬಾಯ್' ನಿನ್ನೆ (ಆಗಸ್ಟ್ 19) ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಂಡಿದೆ.

  ನವ ನಟ ದಿಲೀಪ್ ಪ್ರಕಾಶ್ ಮತ್ತು ನಟಿ ಅಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಕ್ರೇಜಿ ಬಾಯ್' ಚಿತ್ರಕ್ಕೆ ಕನ್ನಡದ ಖ್ಯಾತ ವಿಮರ್ಶಕರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಮರ್ಶಕರ ವಿಮರ್ಶೆಯ ಕಲೆಕ್ಷನ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  'ಈತ ಕಲರ್ ಫುಲ್ ಕ್ರೇಜಿ ಬಾಯ್'- ವಿಜಯ ಕರ್ನಾಟಕ

  'ಈತ ಕಲರ್ ಫುಲ್ ಕ್ರೇಜಿ ಬಾಯ್'- ವಿಜಯ ಕರ್ನಾಟಕ

  ತಮ್ಮದು ಕಾಲೇಜು ಹುಡುಗ ಹುಡುಗಿಯರಿಗಾಗಿ ಮಾಡಿದ ಸಿನಿಮಾ ಎಂದು ನಂಬಿಸುತ್ತಲೇ, ಬಹುತೇಕವಾಗಿ ಮಚ್ಚು-ಲಾಂಗ್‌ಗಳ ಕತೆಯನ್ನೇ ಹೇಳಿದ್ದನ್ನು ನೋಡಿದ್ದೇವೆ. 'ಕ್ರೇಜಿ ಬಾಯ್' ಸಿನಿಮಾ ಹಾಗಿಲ್ಲ. ಪಕ್ಕಾ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಚಿತ್ರ ಮಾಡಿದ್ದಾರೆ ನಿರ್ದೇಶಕ ಮಹೇಶ್ ಬಾಬು. ಕಾಲೇಜಿನಲ್ಲಿ ನಡೆಯುವ ಕತೆ ಹೇಳುತ್ತಲೇ, ಪೋಷಕರ ಹೃದಯವನ್ನೂ ಗೆಲ್ಲುವಲ್ಲಿ ನಿರ್ದೇಶಕರು ಯಶಸ್ವಿ ಆಗುತ್ತಾರೆ. ಹೀಗಾಗಿ 'ಕ್ರೇಜಿ ಬಾಯ್' ಎಲ್ಲರ ಎದೆಯಲ್ಲೂ ಕಮಾಲ್ ಮಾಡುತ್ತಾನೆ. ಕಲರ್ ಕಲರ್ ಚಿತ್ತಾರ ಬಿಡಿಸುತ್ತಲೇ, ಕಾಲೇಜು ದಿನಗಳನ್ನು ನೆನಪಿಸುತ್ತಾನೆ. ಯುವ ಪ್ರೇಮಿಗಳ ಕನಸಲ್ಲಿ ಕವನ ಗೀಚುತ್ತಾನೆ. ಲವರ್ಸ್ ಅಂದರೆ ಹೀಗೆಯೇ ಇರಬೇಕು ಎನ್ನುವ ಮುದ್ರೆ ಒತ್ತುತ್ತಾನೆ. ಹೀಗಾಗಿ ಸಿನಿಮಾ ಇಷ್ಟವಾಗುತ್ತದೆ. -ಶರಣು ಹುಲ್ಲೂರು. ರೇಟಿಂಗ್: 3/5.[ಚೊಚ್ಚಲ ಪ್ರತಿಭೆಗಳಿಗೆ ಬೆನ್ನುಲುಬಾದ ಮಹೇಶ್ ಬಾಬು]

  'ಅದೇ ರಾಗ ಅದೇ ಹಾಡು' -ಪ್ರಜಾವಾಣಿ

  'ಅದೇ ರಾಗ ಅದೇ ಹಾಡು' -ಪ್ರಜಾವಾಣಿ

  ಜೋರು ಮಳೆ. ನಾಯಕ ಅರ್ಜುನ್ (ದಿಲೀಪ್) ಕೈಲಿದ್ದ ಛತ್ರಿ ಹಾರಿಹೋಗಿ ಆತ ತೊಯ್ದು ತೊಪ್ಪೆಯಾಗುತ್ತಾನೆ. ಆದರೆ ಛತ್ರಿಯೇ ಇಲ್ಲದೆ ಎದುರಿನಿಂದ ಬರುವ ನಾಯಕಿ ನಂದಿನಿಯ ಬಟ್ಟೆಯೂ ಒದ್ದೆಯಾಗುವುದಿಲ್ಲ. ಮೇಕಪ್ ಕೆಡುವುದಿಲ್ಲ. ಆವರೆಗೆ ಯಾರೂ ಆಗಿರದ ಅರ್ಜುನ್ ಅರ್ಧ ಕುಡಿದು ಇಟ್ಟಿದ್ದ ಕಾಫಿಯನ್ನು ಗೊತ್ತಿಲ್ಲದೇ ನಂದಿನಿ ಕುಡಿಯುತ್ತಾಳೆ. ಪ್ರಮಾದಕ್ಕೆ ನಂದಿನಿ ಕ್ಷಮೆ ಕೇಳಿದರೆ, ಪಕ್ಕದ ಟೇಬಲ್ಲಿನಲ್ಲಿದ್ದ ಒಬ್ಬ ‘ನೀವಿಬ್ಬರೂ ಪ್ರೇಮಿಗಳು. ಇದೆಲ್ಲ ಮಾಮೂಲಿ' ಎಂದು ಇಲ್ಲದ ಆಸೆ ಹುಟ್ಟಿಸುತ್ತಾನೆ. ತಂಗಿಯ ಮದುವೆಯನ್ನು ಶ್ರೀಮಂತ ಹುಡುಗನ ಜೊತೆ ಮಾಡಿಸಬೇಕು ಎಂದುಕೊಂಡ ನಂದಿನಿ ಅಣ್ಣ ರವಿ (ರವಿಶಂಕರ್). ಆಕೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆಂದು ಗೊತ್ತಿದ್ದೂ ಅವರನ್ನು ನಯವಾಗಿ ಬೇರೆ ಮಾಡುವ ಹುನ್ನಾರ ಅವನದು. ಇವೆಲ್ಲ ಹಳೇ ಸಿನಿಮಾಗಳಲ್ಲಿ ಸಾಕಷ್ಟು ಬಾರಿ ನೋಡಿಬಿಟ್ಟ ದೃಶ್ಯಗಳು. ‘ಕ್ರೇಜಿ ಬಾಯ್'ನಲ್ಲೂ ಇರುವುದು ಇಂಥ ಹಳೆಯ ದೃಶ್ಯಗಳೇ. -ಗಣೇಶ ವೈದ್ಯ.

  'ಚೆಂದದ ಹುಡುಗ ಸುಂದರ ಕತೆ ಬಂಧುರ ಪ್ರೇಮ' -ಉದಯವಾಣಿ

  'ಚೆಂದದ ಹುಡುಗ ಸುಂದರ ಕತೆ ಬಂಧುರ ಪ್ರೇಮ' -ಉದಯವಾಣಿ

  'ಕ್ರೇಜಿಬಾಯ್' ಚಿತ್ರ ಪಕ್ಕಾ ಯೂತ್ ಫುಲ್ ಎಂಟರ್ ಟೈನರ್. ಕಾಲೇಜ್ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಈ ಸಿನಿಮಾದಲ್ಲಿ ಏನಿದೆ ಎಂದರೆ ಎಲ್ಲವೂ ಇದೆ ಎನ್ನಬಹುದು. ನಾಯಕ ದಿಲೀಪ್ ಪ್ರಕಾಶ್ ಗೆ ಹೀರೋ ಆಗಿ ಇದು ಮೊದಲ ಸಿನಿಮಾ. ಹೊಸ ಹುಡುಗನ ಲಾಂಚ್ ಗೆ ಏನು ಬೇಕೋ ಆ ಎಲ್ಲಾ ಅಂಶಗಳನ್ನು ಈ ಸಿನಿಮಾದಲ್ಲಿ ಅಳವಡಿಸಲಾಗಿದೆ. ಹಾಗಾಗಿ ಲವ್, ಸೆಂಟಿಮೆಂಟ್, ಜಬರ್ದಸ್ತ್ ಆಕ್ಷನ್, ಕಾಮಿಡಿ ಎಲ್ಲವೂ ಜೋರಾಗಿ ಇದೆ. ಅಜೇಯ್ ಕುಮಾರ್ ಅವರು ಇಂದಿನ ಟ್ರೆಂಡ್ ಗೆ ತಕ್ಕಂತೆ ಕಥೆ-ಚಿತ್ರಕಥೆ ಮಾಡಿದ್ದಾರೆ. ಅದನ್ನು ನಿರ್ದೇಶಕ ಮಹೇಶ್ ಬಾಬು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವಾಗಿ ಕಟ್ಟಿಕೊಟ್ಟಿದ್ದಾರೆ.-ರವಿಪ್ರಕಾಶ್ ರೈ.

  ಹೊಸ ಕಲಾವಿದರ ಹಳೇ ಡ್ರಾಮ -ವಿಜಯವಾಣಿ

  ಹೊಸ ಕಲಾವಿದರ ಹಳೇ ಡ್ರಾಮ -ವಿಜಯವಾಣಿ

  ಯಾವುದೋ ಹಳೇ ನಾಟಕವನ್ನು ಹೊಸ ಕಲಾವಿದರು ಪ್ರದರ್ಶಿಸಿದರೆ ಅಲ್ಲಿ ಹೊಸ ಕಥೆಯನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಹೊಸ ಪ್ರತಿಭೆಗಳು ಹೇಗೆ ನಟಿಸಿರಬಹುದು, ತಾಂತ್ರಿಕ ಗುಣಮಟ್ಟ ಹೇಗಿರಬಹುದು, ಪ್ರಯೋಗವೇನಾದರೂ ಮಾಡಿರಬಹುದೇ ಎಂಬುದಷ್ಟೇ ಮುಖ್ಯವಾಗುತ್ತದೆ. ಈಗಾಗಲೇ ಬಂದುಹೋಗಿರುವ ಹತ್ತಾರು ಸಿನಿಮಾಗಳ ಮಿಶ್ರಣದಂತಿರುವ ಕ್ರೇಜಿಬಾಯ್ ಚಿತ್ರವನ್ನೂ ಹಾಗೆಯೇ ನೋಡಬೇಕಾಗುತ್ತದೆ. ಚೊಚ್ಚಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟಿರುವ ನಾಯಕ ದಿಲೀಪ್ ಮತ್ತು ನಾಯಕಿ ಆಶಿಕಾ ಉತ್ತಮವಾಗಿಯೇ ನಟಿಸಿದ್ದಾರೆ. ಆದರೆ ಚಿತ್ರದ ಕಥೆಯಲ್ಲಿ ತಾಜಾತನದ ಕೊರತೆ ಕಾಣುತ್ತದೆ.

  'ಕಾರಿಡಾರಿನಲ್ಲಿ ಕಾಡುವ ಕ್ರೇಜಿ ಜೋಡಿ' -ಕನ್ನಡ ಪ್ರಭ

  'ಕಾರಿಡಾರಿನಲ್ಲಿ ಕಾಡುವ ಕ್ರೇಜಿ ಜೋಡಿ' -ಕನ್ನಡ ಪ್ರಭ

  ಚಿತ್ರರಂಗಕ್ಕೆ ಹೊಸಬರನ್ನು ಪರಿಚಯಿಸುವಾಗ ಎಂತ ಕತೆಗಳನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎಂಬುದು ಕೆಲವು ನಿರ್ದೇಶಕರಿಗೆ ಸುಲಭಕ್ಕೆ ಗೊತ್ತಾಗಿರುವ ಕಮರ್ಷಿಯಲ್ ಫಾರ್ಮುಲಾ. ಅಂಥ ಗಾಂಧಿನಗರದ ನಿಯಮವನ್ನು ಚಾಚೂ ತಪ್ಪದೆ ಪಾಲಿಸಿ, ಏಕಕಾಲಕ್ಕೆ ನಾಯಕ ಮತ್ತು ನಾಯಕಿಗೆ ಒಳ್ಳೆಯ ಪ್ಲಾಟ್ ಫಾರಂ ಹಾಕಿ ಕೊಟ್ಟಿದ್ದಾರೆ ನಿರ್ದೇಶಕ ಮಹೇಶ್ ಬಾಬು. ತೀರಾ ಆಹಾ...ಓಹೋ ಎನ್ನುವಂತಹ ಕಥೆಗಳನ್ನು ತೆಗೆದುಕೊಂಡರೆ ರಿಸ್ಕ್ ತೆಗೆದುಕೊಳ್ಳುವ ಜಾಯಮಾನಕ್ಕೆ ಸೇರದ ಮಹೇಶ್ ಬಾಬು, ಅತ್ತ ಹಳೆಯದು ಅಲ್ಲದ ಇತ್ತ ಹೊಸತೂ ಅಲ್ಲದ ತೀರಾ ಸರಳ ಕತೆಯೊಂದನ್ನು 'ಕ್ರೇಜಿ ಬಾಯ್' ಮೂಲಕ ಕಟ್ಟಿಕೊಟ್ಟಿದ್ದಾರೆ. -ಆರ್ ಕೇಶವಮೂರ್ತಿ.

  English summary
  Kannada movie 'Crazy Boy' Critics Review. Kannada Actor Dilip Prakash, Actress Ashika Ranganath starrer 'Crazy Boy' has received mixed response from the critics. Here is the collection of reviews by Top News Papers of Karnataka. The movie is directed by Mahesh Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X