India
  For Quick Alerts
  ALLOW NOTIFICATIONS  
  For Daily Alerts

  ಸಂತು 'ಡವ್'ಗೆ ವಿಮರ್ಶಕರು ಕ್ಲೀನ್ ಬೌಲ್ಡ್ ಆದ್ರಾ?

  By Harshitha
  |

  ವರ್ಷಗಳಿಂದ ಡಬ್ಬಾದಲ್ಲೇ ಅವಿತುಕುಳಿತಿದ್ದ 'ಡವ್'ಗೆ ಬಿಡುಗಡೆ ಭಾಗ್ಯ ದೊರಕಿದೆ. ಸ್ಯಾಂಡಲ್ ವುಡ್ ಅಂಗಳದಲ್ಲಿ 'ಡವ್' ಹಾರಾಟ ಶುರುವಾಗಿದೆ. ಬೆಳ್ಳಿಪರದೆ ಮೇಲೆ 'ಡವ್' ಮಿನುಗಲಾರಂಭಿಸಿದೆ.

  ನಿರ್ಮಾಪಕ ಸಾ.ರಾ.ಗೋವಿಂದು ಪುತ್ರ ಅನೂಪ್ ಸಾ.ರಾ.ಗೋವಿಂದು ನಟಿಸಿರುವ ಚೊಚ್ಚಲ ಚಿತ್ರ 'ಡವ್'. 'ಅಲೆಮಾರಿ' ಸಂತು ನಿರ್ದೇಶನದ 'ಡವ್' ಚಿತ್ರ ಯುವಕರಿಂದ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿದೆ.

  ಹರೆಯದ ಯುವಕರ ಪ್ರೀತಿ-ಪ್ರೇಮದ ಕಥೆಗೆ ಹೊಸ ಟ್ವಿಸ್ಟ್ ಕೊಟ್ಟು 'ಡವ್' ರೆಡಿಮಾಡಿರುವ 'ಅಲೆಮಾರಿ' ಸಂತು ಈ ಬಾರಿ ವಿಮರ್ಶಕರ ಮೆಚ್ಚಿಸುವಲ್ಲಿ ಯಶಸ್ವಿಯಾದ್ರಾ? 'ಡವ್' ಪದಕ್ಕೆ ಸಿನಿಮಾದಲ್ಲಿರುವ ಅರ್ಥವೇನು? ಅನೂಪ್ ನಟನೆ ಬಗ್ಗೆ ವಿಮರ್ಶಕರು ಏನ್ ಹೇಳ್ತಾರೆ?

  ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. 'ಡವ್' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

  ಕೊಲ್ಲುವ-ಕೊಚ್ಚುವ 'ಮನರಂಜನೆ' - ಪ್ರಜಾವಾಣಿ

  ಕೊಲ್ಲುವ-ಕೊಚ್ಚುವ 'ಮನರಂಜನೆ' - ಪ್ರಜಾವಾಣಿ

  'ಡವ್' ಎಂದರೆ ಇಂಗ್ಲಿಷ್‌ನಲ್ಲಿ ಪಾರಿವಾಳ ಎನ್ನುವ ಅರ್ಥವಿದೆ. ಆದರೆ, ಪಡ್ಡೆಹುಡುಗರ ಪರಿಭಾಷೆಯಲ್ಲಿ ತುಸು ಕಠೋರವಾಗಿ ಕೇಳಿಸುವ ಈ ಶಬ್ದಕ್ಕೆ ‘ಪ್ರೇಯಸಿ' ಎಂಬ ಅರ್ಥವೂ ಇದೆ. ಸಂತು ನಿರ್ದೇಶನದ ‘ಡವ್' ಸಿನಿಮಾ, ಎರಡನೇ ಅರ್ಥದ ವಸ್ತುವನ್ನು ತಳಹದಿಯಾಗಿ ಇರಿಸಿಕೊಂಡು ಕೊಲ್ಲುವ - ಕೊಚ್ಚುವ ‘ಮನರಂಜನೆ'ಯನ್ನು ಬೆರೆಸಿರುವ ಚಿತ್ರ. ಈ ಎರಡೂ ಅಂಶಗಳು ಪರಸ್ಪರ ಬೆಸೆದುಕೊಂಡಿರುವ ಕಾರಣಕ್ಕೆ ‘ಡವ್' ಶೀರ್ಷಿಕೆ ಅರ್ಥವತ್ತಾಗಿಯೂ ಅನರ್ಥಕಾರಿಯಾಗಿಯೂ ಕಾಣಿಸುತ್ತದೆ. ಒಂದು ನವಿರು ಪ್ರೀತಿಯ, ಮತ್ತೊಂದು ಪ್ರೀತಿಯನ್ನು ಮೀರಿದ ನೈಜ ಅಮಾನವೀಯ ಘಟನೆಯ ಕಥೆಗಳನ್ನು ಪ್ರತ್ಯೇಕವಾಗಿ ಹೆಣೆದಿರುವ ಸಂತು, ಅವುಗಳ ಬಿಂದುವನ್ನು ಜೋಡಿಸುವ ಪ್ರಯತ್ನ ಮಾಡಿದ್ದಾರೆ. ಅಪರಾಧ ಸನ್ನಿವೇಶಗಳನ್ನು ನಿರೂಪಿಸುವಲ್ಲಿ ಕಾಣುವ ಕಸುಬುದಾರಿಕೆ, ಪ್ರೀತಿಯ ಆಯಾಮವನ್ನು ಚಿತ್ರಿಸುವಲ್ಲಿ ಇಲ್ಲ. ಈ ಕಥೆಗಳು ಒಟ್ಟಿಗೆ ಸಾಗುವುದರಿಂದ ಒಂದು ದೃಶ್ಯ ಗಟ್ಟಿಯಾಗಿ ಮತ್ತೊಂದು ದೃಶ್ಯ ಸಡಿಲವಾಗಿ ಕಾಣಿಸುತ್ತದೆ. ಸಂತು ನಿರ್ದೇಶನದ ಮೊದಲ ಚಿತ್ರ ‘ಅಲೆಮಾರಿ'ಯಲ್ಲಿಯೂ ಇಂತಹದೇ ಪ್ರೀತಿ-ಅಪರಾಧ ಬೆಸೆದ ವಸ್ತುವಿತ್ತು. - ಅಮಿತ್.ಎಂ.ಎಸ್

  ಡವ್; ಪರಿಶುದ್ಧ ಪ್ರೇಮಕತೆಗೆ ರಿಂಗ್ ರೋಡ್ ಶುಭಂ! - ಉದಯವಾಣಿ

  ಡವ್; ಪರಿಶುದ್ಧ ಪ್ರೇಮಕತೆಗೆ ರಿಂಗ್ ರೋಡ್ ಶುಭಂ! - ಉದಯವಾಣಿ

  ಆರಾಮಾಗಿರುತ್ತಾನೆ ಅವನು. ಜಿಮ್‌ನಲ್ಲಿ ಬೆವರಿಳಿಸುತ್ತಾ, ಮನೆಯಲ್ಲಿ ದೋಸೆ ಮೆಲ್ಲುತ್ತಾ, ಕಾಲೇಜಿನಲ್ಲಿ ಹುಡುಗರೊಂದಿಗೆ ಹಾಡುತ್ತಾ, ಅಪ್ಪನನ್ನೇ ಮಗ ಎಂದು ಕರೆಯುತ್ತಾ, ಅಪ್ಪನಿಂದ ಅಪ್ಪಾಜಿ ಎಂದು ಕರೆಸಿಕೊಳ್ಳುತ್ತಾ ... ಹೀಗೆ ಆರಾಮಾಗಿ ಇದ್ದ ಅವನ ಕಣ್ಣಿಗೆ ಅವಳು ಬೀಳುತ್ತಾಳೆ. ಮೊದಲ ನೋಟದಲ್ಲೇ ಅವನ ಮನಸ್ಸು ಸೇರುತ್ತಾಳೆ. ಹಾಗೆ ಮನಸ್ಸು ಕೆಡಿಸಿದವಳು, ಅವನನ್ನು ಕೋರ್ಟಿಗೂ ಎಳೆಯುತ್ತಾಳೆ. ಹೀಗೆ ಜಗಳದಿಂದ ಶುರುವಾಗವ ಅವರಿಬ್ಬರ ಸ್ನೇಹ, ಕೊನೆಗೆ ಪ್ರೀತಿಗೆ ತಿರುಗುತ್ತದೆ. ಇನ್ನೇನು ಅವರಿಬ್ಬರೂ ಆರಾಮಾಗಿ ಇರಬೇಕು ಎನ್ನುವಷ್ಟರಲ್ಲಿ ದಢಾರ್ ... ಡವ್ ಎಂದರೆ ಎರಡು ಅರ್ಥಗಳಿವೆ. ಪಾರಿವಾಳಕ್ಕೆ ಇಂಗ್ಲೀಷ್‌ನಲ್ಲಿ ಡವ್ ಎನ್ನಲಾಗುತ್ತದೆ. ಇತ್ತೀಚೆಗೆ ಆ ಪದಕ್ಕೆ ಇನ್ನೊಂದು ಹೆಸರೂ ಇದೆ. ನಖರಾಗೆ ಡವ್ ಎಂದು ಕರೆಯುವವರೂ ಇದ್ದಾರೆ. ಡವ್ ಗೆ ಹೇಗೆ ಎರಡು ಅರ್ಥವಿದೆಯೋ, ಅದೇ ರೀತಿ ಎರಡು ಆಂಗಲ್ನಲ್ಲಿ ಪ್ರೀತಿಯನ್ನು ತೋರಿಸುವುದಕ್ಕೆ ಪ್ರಯತ್ನಿಸಿದ್ದಾರೆ ಸಂತು. ನಿಷ್ಕಲ್ಮಷ ಪ್ರೀತಿಯನ್ನು ಅನೂಪ್‌ ಮತ್ತು ಅದಿತಿ (ಅನೂಪ್‌ ಮತ್ತು ಅದಿತಿ) ಪ್ರತಿನಿಧಿಸಿದರೆ, ಕಲ್ಮಷ ಪ್ರೀತಿಯನ್ನು ಕುಮಾರ ಮತ್ತು ಸೋನ (ರಾಕೇಶ್ ಅಡಿಗ ಮತ್ತು ಮದಾಲಸಾ ಶರ್ಮ) ಪ್ರತಿನಿಧಿಸುತ್ತಾರೆ. ಆ ಕಲ್ಮಷ ಪ್ರೀತಿಯಿಂದಾಗಿ ಹೇಗೆ ನಿಷ್ಕಲ್ಮಷವಾಗಿ ಪ್ರೀತಿಸುವವರು ಸಹ ಸಿಕ್ಕಿ ಬೀಳುತ್ತಾರೆ ಮತ್ತು ಏನೆಲ್ಲಾ ಅನುಭವಿಸುತ್ತಾರೆ ಎಂಬುದನ್ನು ಚಿತ್ರದ ಮೂಲಕ ಹೇಳುವುದಕ್ಕೆ ಪ್ರಯತ್ನಿಸಿದ್ದಾರೆ. - ಚೇತನ್ ನಾಡಿಗೇರ್

  ರಿಂಗ್ ರೋಡ್ ನಲ್ಲಿ ಡವ್ - ವಿಜಯ ಕರ್ನಾಟಕ

  ರಿಂಗ್ ರೋಡ್ ನಲ್ಲಿ ಡವ್ - ವಿಜಯ ಕರ್ನಾಟಕ

  ಸಿನಿಮಾ ಕಥೆಗಳು ನಾಚುವಂತೆ ಬೆಂಗಳೂರಿನ ರಿಂಗ್ ರೋಡ್‌ನಲ್ಲಿ ಅಮಾಯಕ ಟೆಕ್ಕಿಯೊಬ್ಬರು ಕೊಲೆಯಾಗಿದ್ದರು. ತನ್ನ ಪ್ರಿಯಕರನಿಗಾಗಿ ಭಾವಿ ಪತಿಯನ್ನೇ ಕೊಲ್ಲಿಸಿದ ಆ ಘಟನೆ ದೊಡ್ಡ ಸುದ್ದಿಯಾಗಿತ್ತು. ಇದೇ ಘಟನೆಯ ತುಣುಕಿನೊಂದಿಗೆ 'ಡವ್' ಚಿತ್ರ ಮಾಡಿದ್ದಾರೆ ನಿರ್ದೇಶಕ ಸಂತು. ಅದರೆ ಅವರು ಎಲ್ಲೂ ಇದು ಸತ್ಯ ಘಟನೆ ಆಧರಿತ ಎಂದು ಹೇಳಲು ಹೋಗಿಲ್ಲ. ಚಿತ್ರದಲ್ಲಿ ಎರಡು ಪ್ರೇಮಕಥೆಯಿದೆ. ಒಂದು ನಿಜಪ್ರೇಮ. ಇನ್ನೊಂದು ಹಸಿಬಿಸಿ ಮೋಹ. ಹಸಿಬಿಸಿಗೆ ಸೆನ್ಸಾರ್‌ನವರು 13 ಕಡೆ ಕತ್ತರಿ ಹಾಕದೆ ಇದ್ದಿದ್ದರೆ ಅದು 'ಮರ್ಡರ್' ಸಿನಿಮಾವಾಗುತ್ತಿತ್ತು. ಇವೆರಡು ಕಥೆಗಳು ಇಂಟರ್ ವೆಲ್ ತನಕ ಬೇರೆಬೇರೆಯಾಗಿಯೇ ಸಾಗುತ್ತವೆ. ಆ ಒಂದು ಆಕಸ್ಮಿಕ ಘಟನೆಯಲ್ಲಿ ಅಮಾಯಕ ನಾಯಕನೂ ರಿಂಗ್ ರೋಡ್ ಕೇಸ್ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಕೆಜಿಎಫ್ ಗ್ಯಾಂಗ್, ಜೈಲಿನ ಹೊಡೆದಾಟ, ಸಿಸಿಬಿ ಪೊಲೀಸರ ಸಾಹಸ ಪ್ರೇಮಕಥೆಗೆ ಜೊತೆಯಾಗಿದೆ. ಸೌಂದರ್ಯದ ಹಿಂದಿನ ತಣ್ಣನೆಯ ಕ್ರೌರ್ಯ ಬೆಚ್ಚಿಬೀಳಿಸುತ್ತದೆ. ಹಸಿಬಿಸಿ ದೃಶ್ಯಗಳು ಢಾಳಾಗಿರುವುದರಿಂದ ಫ್ಯಾಮಿಲಿ ಸಮೇತ ನೋಡುವುದು ಕಷ್ಟ. - ಪ್ರವೀಣ್ ಚಂದ್ರ

  Movie Review ; Dove - Bangalore Mirror

  Movie Review ; Dove - Bangalore Mirror

  Dove is by far director Santhu's best film. Film maker and activist Sa Ra Govindu's son Anup makes a credible debut. Though there are rough edges to the lead actor's personality, the film has loads of fresh moments and incidents to make for a good launchpad. The film has different stories running on the same timeline. In one, Anup romances Aditi in a poor-boy-smitten-by-rich-girl narrative. Yet, it is not the usual melodrama and the supporting characters do not do what they normally do in films. It is a light-hearted journey that looks almost too good to be true. The second track is of a high society girl smitten by a lowlife boy. This impossible match is also made believable as the director takes recourse to lust rather than love. The second track is inspired by a real-life incident that was widely reported a few years ago. - Shyam Prasad S

  English summary
  Producer Sa.Ra.Govindu's son Annup debut movie Dove has received mixed response from the critics. Here is the collection of reviews by Top News Papers of Karnataka.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X