For Quick Alerts
ALLOW NOTIFICATIONS  
For Daily Alerts

  ಗಡ್ಡ ವಿಜಿ ನಿರ್ದೇಶನದ 'ದ್ಯಾವ್ರೇ' ಚಿತ್ರ ವಿಮರ್ಶೆ

  By ಸಂದೇಶ್
  |

  ಪವನ್ ಕುಮಾರ್ ಅವರ ಪ್ರಯೋಗಾತ್ಮಕ 'ಲೂಸಿಯಾ' ಚಿತ್ರದ ಬಳಿಕ ಯೋಗರಾಜ್ ಭಟ್ ಅವರ ಮತ್ತೊಬ್ಬ ಶಿಷ್ಯ ಗಡ್ಡ ವಿಜಿ ನಿರ್ದೇಶನದ ಚಿತ್ರವಿದು. ಇದೂ ಒಂದು ಪ್ರಯೋಗಾತ್ಮಕ ಚಿತ್ರವೇ ಆದಕಾರಣ ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಆ ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಗಡ್ಡ ವಿಜಿ ಗೆದ್ದಿದ್ದಾರೆ.

  'ದ್ಯಾವ್ರೇ' ಚಿತ್ರದಲ್ಲಿ ಸಾಕಷ್ಟು ನುರಿತ ಕಲಾವಿದರಿದ್ದಾರೆ. ಮೂರು ವರ್ಷಗಳ ಬಳಿಕ ಚಿತ್ರದ ನಾಯಕಿ ಸೋನು ಗೌಡ ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಿರುವುದು, ಜೊತೆಗೆ ಯೋಗರಾಜ್ ಭಟ್ ಅಭಿನಯ ಚಿತ್ರರಸಿಕರ ಕುತೂಹಲವನ್ನು ಇಮ್ಮಡಿಸಿತ್ತು.

  'ಲೂಸಿಯಾ' ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ಶ್ರುತಿ ಹರಿಹರನ್ ಜೋಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಲ್ಲೂ ಅವರಿಬ್ಬರ ಪಾತ್ರ ಗಮನಾರ್ಹವಾಗಿದೆ. ಚಿತ್ರದಲ್ಲಿ ಸಾಕಷ್ಟು ಜೂನಿಯರ್ ಕಲಾವಿದರೂ ಇದ್ದಾರೆ. ಇಷ್ಟಕ್ಕೂ ಕಥೆ ಏನೆಂದರೆ...

  Rating:
  3.5/5

  ಚಿತ್ರ: ದ್ಯಾವ್ರೇ
  ನಿರ್ಮಾಪಕರು: ಜಯಣ್ಣ-ಭೋಗೇಂದ್ರ
  ನಿರ್ದೇಶನ: ಗಡ್ಡ ವಿಜಿ
  ಸಂಗೀತ: ವೀರ್ ಸಮರ್ಥ್
  ಪಾತ್ರವರ್ಗ: ಯೋಗರಾಜ್ ಭಟ್, ಸತೀಶ್ ನೀನಾಸಂ, ಶ್ರುತಿ ಹರಿಹರನ್, ಸೋನು ಗೌಡ, ಚೇತನ್, ರಾಜೇಶ್, ಅರಸು ಮಹರಾಜ್.

  ಜೈಲು ಸೂಪರಿಂಟೆಂಡೆಂಟ್ ಆಗಿ ಭಟ್ರು

  ಯೋಗರಾಜ್ ಭಟ್ ಅವರ ನಿರೂಪಣೆಯೊಂದಿಗೆ 'ದ್ಯಾವ್ರೇ' ಕಥೆ ಆರಂಭವಾಗುತ್ತದೆ. ಕ್ರಿಮಿನಲ್ ಗಳ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಪತ್ರಕರ್ತೆ (ಸೋನು ಗೌಡ) ಪಂಪಾಪುರ ಕಾರಾಗೃಹಕ್ಕೆ ಭೇಟಿ ನೀಡುತ್ತಾರೆ. ಖೈದಿಗಳ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ಜೈಲು ಸೂಪರಿಂಟೆಂಡೆಂಟ್ ಭೀಮ್ ಸೇನ್ ಆಗಿ ಯೋಗರಾಜ್ ಭಟ್ ಕಾಣಿಸುತ್ತಾರೆ.

  ಜೈಲಿನ ಹಿನ್ನೆಲೆಯಲ್ಲಿ ಸಾಗುವ ಕಥೆ

  ಖೈದಿಗಳ ಪಾಲಿಗೆ ಅವರು ಒಂಥರಾ ದೇವರಿದ್ದಂತೆ. ಅವರು ಅಪರಾಧಗಳನ್ನು ಮಾಡಿಬಂದವರಾದರೂ ಅವರನ್ನು ಮಾನವೀಯತೆಯಿಂದ ನೋಡುತ್ತಿರುತ್ತಾರೆ. ತುಂಬ ಹಳೆಯದಾದ ಜೈಲಿನ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. ಧೋ ಎಂದು ಮಳೆ ಬಂದರೆ ಜೈಲು ಬಿದ್ದುಹೋಗುವ ಸ್ಥಿತಿಯಲ್ಲಿರುತ್ತದೆ.

  ಜೈಲಿನಿಂದ ತಪ್ಪಿಸಿಕೊಳ್ಳಲು ಖೈದಿಗಳ ನಿರೀಕ್ಷೆ

  ಬಹಳಷ್ಟು ಖೈದಿಗಳು ಆ ರೀತಿಯ ಮಳೆಗಾಗಿ ನಿರೀಕ್ಷಿಸುತ್ತಿರುತ್ತಾರೆ. ಧೋ ಎಂದು ಸುರಿವ ಮಳೆಗೆ ಜೈಲಿನ ಗೋಡೆಗಳು ಬಿದ್ದು ತಾವು ಅಲ್ಲಿಂದ ಕಂಬಿಕೀಳಬೇಕು ಎಂಬ ಲೆಕ್ಕಾಚಾರ ಅವರದು.

  ಅಪರಾಧಿಗಳ ಕೊನೆಯ ತಾಣ ಜೈಲು

  ಅಪರಾಧಿಗಳ ಕೊನೆಯ ತಾಣ ಜೈಲು ಎಂಬುದನ್ನು ದ್ಯಾವ್ರೇ ಚಿತ್ರ ತಿಳಿಸುವ ಪ್ರಯತ್ನ ಮಾಡುತ್ತದೆ. ಇಲ್ಲಿ ಬಿಟ್ರೆ ಇನ್ನೆಲ್ಲೂ ನಿಮಗೆ ಸಂತೋಷ ಸಿಗಲ್ಲ ಎಂಬುದನ್ನೂ ಜೈಲರ್ ಅವರಿಗೆ ಮನವರಿಕೆ ಮಾಡಿಕೊಟ್ಟಿರುತ್ತಾನೆ.

  ಐದು ಪಾತ್ರಗಳೇ ಇಲ್ಲಿ ಮುಖ್ಯ

  ಐದು ಪ್ರಮುಖ ಪಾತ್ರಗಳ ಸುತ್ತ ದ್ಯಾವ್ರೇ ಚಿತ್ರ ಸುತ್ತುತ್ತದೆ. ಒಬ್ಬ ಬುಡಕಟ್ಟು ಮನುಷ್ಯ, ಕಳ್ಳ, ಭಾವಿ ರಾಜಕಾರಣಿ, ಹಳ್ಳಿ ಹುಡುಗ ಹಾಗೂ ಮುದುಕ. ಇವರೆಲ್ಲಾ 30 ವರ್ಷಗಳ ಜೈಲು ಶಿಕ್ಷೆಯಾಗಿರುತ್ತದೆ.

  ಎಲ್ಲಾ ಪಾತ್ರಗಳಲ್ಲೂ ಧಂ ಇದೆ

  ಚಿತ್ರದಲ್ಲಿನ ಎಲ್ಲಾ ಪಾತ್ರಗಳು ಗಮನಸೆಳೆಯುತ್ತವೆ. ಅವರನ್ನು ಬೆಳ್ಳಿಪರದೆ ಮೇಲೆ ನೋಡುವುದೇ ಒಂದು ಆನಂದ.

  ಜೈಲರ್ ಪಾತ್ರ ಗಮನಾರ್ಹ

  ಜೈಲರ್ ಪಾತ್ರದಲ್ಲಿ ಯೋಗರಾಜ್ ಭಟ್ ಉತ್ತಮ ಅಭಿನಯ ನೀಡಿದ್ದಾರೆ. ಚಿತ್ರ ದ್ವಿತೀಯಾರ್ಧಕ್ಕೆ ಹೊರಳುತ್ತಿದ್ದಂತೆ ಅವರ ಪಾತ್ರ ಇನ್ನಷ್ಟು ಸತ್ಯಭರಿತವಾಗುತ್ತದೆ. ಒಟ್ಟಾರೆಯಾಗಿ ಭಟ್ರದ ಪಾತ್ರದ ಬಗ್ಗೆ ಕೆಮ್ಮುವಂಗಿಲ್ಲ.

  ಬುಡಕಟ್ಟು ಜನಾಂಗದ ಹುಡುಗನಾಗಿ ನೀನಾಸಂ ಸತೀಶ್

  ಬುಡಕಟ್ಟು ಜನಾಂಗದ ಹುಡುಗನಾಗಿ ನೀನಾಸಂ ಸತೀಶ್ ಕಾಣಿಸುತ್ತಾರೆ. ಸಮಾಜದಿಂದ ದೂರ ಉಳಿದಷ್ಟು ಜನ ಸಂತೋಷದಿಂದಿರುತ್ತಾರೆ ಎಂದು ಎಲ್ಲರಿಗೂ ಹೇಳುತ್ತಿರುತ್ತಾನೆ.

  ವೀರ್ ಸಮರ್ಥ್ ಸಂಗೀತ ಹೇಗಿದೆ?

  ಚಿತ್ರದ ಇನ್ನೊಂದು ಹೈಲೈಟ್ ಎಂದರೆ ಸಂಗೀತ. 'ನೆರಳು ಹೇಳಿದ ಮಾತು' ಹಾಡು ಚೆನ್ನಾಗಿದೆ. ದ್ಯಾವ್ರೇ ಚಿತ್ರದ ಒಟ್ಟಾರೆ ಸಂದೇಶವನ್ನು ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸಿದೆ.

  ಗಡ್ಡ ವಿಜಿ ನಿರ್ದೇಶನದ ಬಗ್ಗೆ ಕೆಮ್ಮಂಗಿಲ್ಲ

  ಗಡ್ಡ ವಿಜಿ ಅವರ ಚೊಚ್ಚಲ ನಿರ್ದೇಶನದ ಚಿತ್ರವಾದರೂ ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದಾರೆ.

  ಖಂಡಿತ ನಿರಾಸೆಪಡಿಸಲ್ಲ ದ್ಯಾವ್ರೇ

  ಚಿತ್ರದ ದ್ವಿತೀಯಾರ್ಧ ಕೊಂಚ ನಿಧಾನಗತಿಯಲ್ಲಿ ಸಾಗುತ್ತದೆ. ಇದೊಂದೇ ಚಿತ್ರದ ಕೊರತೆ. ಉಳಿದಂತೆ ಖಂಡಿತ ನೋಡುವಂತಹ ಚಿತ್ರವಿದು. ಕಲಾಚಿತ್ರಗಳನ್ನು ಬಯಸುವವರು, ಹೊಸತನಕ್ಕೆ ಹಾತೊರೆಯುವವರಿಗೆ ಖಂಡಿತ ನಿರಾಸೆಪಡಿಸಲ್ಲ.

  English summary
  Kannada movie Dyaavre Review. Slow pace in the second half is the only drawback in the movie. Story and the screenplay keep you busy. It is a must watch movie for the entertainment and art movie lovers.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more