twitter
    For Quick Alerts
    ALLOW NOTIFICATIONS  
    For Daily Alerts

    'ಕೆ.ಜಿ.ಎಫ್' ಫಸ್ಟ್ ಹಾಫ್ ವಿಮರ್ಶೆ: ಇಂಟರ್ವೆಲ್ ವರೆಗೂ ಚಿಂದಿ ಗುರು.!

    |

    Recommended Video

    KGF Kannada Movie : ಕೆಜಿಎಫ್ ಫಸ್ಟ್ ಹಾಫ್ ವಿಮರ್ಶೆ | FILMIBEAT KANNADA

    ''ಪವರ್ ಇದ್ದರೆ ಕಾಸು'', ''ಪವರ್ ಫುಲ್ ಪೀಪಲ್ ಕಮ್ ಫ್ರಮ್ ಪವರ್ ಫುಲ್ ಪ್ಲೇಸಸ್'', ''ಗಾಯಗೊಂಡಿರುವ ಸಿಂಹದ ಉಸಿರು, ಘರ್ಜನೆಗಿಂತ ಭಯಂಕರವಾಗಿರುತ್ತದೆ'', ''ಗ್ಯಾಂಗ್ ಕಟ್ಟಿಕೊಂಡು ಬರೋನು ಗ್ಯಾಂಗ್ ಸ್ಟರ್. ಒಬ್ಬನೇ ಬರೋನು ಮಾನ್ ಸ್ಟರ್'', 'ಇಫ್ ಯು ಆರ್ ಬ್ಯಾಡ್.. ಐ ಆಮ್ ಯುವರ್ ಡ್ಯಾಡ್'' - ಇಂತಹ ಹತ್ತು ಹಲವು ಒನ್ ಲೈನರ್ಸ್, ಪಂಚಿಂಗ್ ಡೈಲಾಗ್ಸ್ 'ಕೆ.ಜಿ.ಎಫ್' ಚಿತ್ರದಲ್ಲಿ ಹೇರಳವಾಗಿದೆ.

    ಮಾಸ್ ಅಭಿಮಾನಿಗಳು ಸಂಭ್ರಮ, ಸಡಗರ ಪಡಲು ಏನೇನು ಬೇಕೋ, ಅದೆಲ್ಲವೂ 'ಕೆ.ಜಿ.ಎಫ್' ಚಿತ್ರದಲ್ಲಿ ಪರ್ಫೆಕ್ಟ್ ಆಗಿದೆ. ಇನ್ನೂ ಕ್ಲಾಸ್ ಪ್ರೇಕ್ಷಕರು ಬಯಸುವಂತೆ ಗಟ್ಟಿಯಾದ ಚಿತ್ರಕಥೆ, ತಾಯಿ ಸೆಂಟಿಮೆಂಟ್, ತಲೆದೂಗುವ ಹಾಡುಗಳು 'ಕೆ.ಜಿ.ಎಫ್' ಚಿತ್ರದಲ್ಲಿದೆ.

    'ಕೆ.ಜಿ.ಎಫ್' ಚಿತ್ರವನ್ನ ನೋಡಿದ್ಮೇಲೆ, ಎರಡು ವರ್ಷಗಳಿಂದ ಕಾದಿದ್ದಕ್ಕೂ ಸಾರ್ಥಕ ಎಂಬ ಭಾವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಮನದಲ್ಲಿ ಮೂಡುವುದು ಖಂಡಿತ.

    'ಕೆ.ಜಿ.ಎಫ್' ಚಿತ್ರದ ಸಂಪೂರ್ಣ ವಿಮರ್ಶೆ ಓದುವ ಮುನ್ನ, ಫಸ್ಟ್ ಹಾಫ್ ಅರ್ಥಾತ್ ಮೊದಲಾರ್ಧ ಹೇಗಿದೆ ಅಂತ ನಾವು ಹೇಳ್ತೀವಿ ಕೇಳಿ...

    ಅಮ್ಮನಿಗೆ ಮಾತು ಕೊಟ್ಟು ಬದುಕು ಕಟ್ಟಿಕೊಳ್ಳುವ ಮಗ...

    ಅಮ್ಮನಿಗೆ ಮಾತು ಕೊಟ್ಟು ಬದುಕು ಕಟ್ಟಿಕೊಳ್ಳುವ ಮಗ...

    ಶೀರ್ಷಿಕೆಗೆ ತಕ್ಕ ಹಾಗೆ, 'ಕೆ.ಜಿ.ಎಫ್' ಚಿತ್ರದ ಕಥೆ 'ಹುಟ್ಟು'ವುದು ಕೆಜಿಎಫ್ (ಕೋಲಾರ ಗೋಲ್ಡ್ ಫೀಲ್ಡ್)ನಲ್ಲಿ. ''ಪ್ರಬಲವಾಗಿ ಬೆಳೆದು, ದೊಡ್ಡ ಶ್ರೀಮಂತನಾಗಿ ಸಾಯುವೆ'' ಎಂದು ತಾಯಿಗೆ ಮಾತು ಕೊಡುವ ಮಗ, ಮುಂದೆ ಹೇಗೆ ಬದುಕು ಕಟ್ಟಿಕೊಳ್ಳುತ್ತಾನೆ ಎಂಬುದರ ಸುತ್ತ 'ಕೆ.ಜಿ.ಎಫ್' ಚಿತ್ರದ ಫಸ್ಟ್ ಹಾಫ್ ಸಾಗುತ್ತದೆ.

    ಫಸ್ಟ್ ಶೋ ಮುಗೀತು, ಫಸ್ಟ್ ರಿವ್ಯೂ ಹೊರಬಿತ್ತು: ರಾಕಿ ಭಾಯ್ ಗೆ ಪ್ರೇಕ್ಷಕರ ಸಲಾಂ.!ಫಸ್ಟ್ ಶೋ ಮುಗೀತು, ಫಸ್ಟ್ ರಿವ್ಯೂ ಹೊರಬಿತ್ತು: ರಾಕಿ ಭಾಯ್ ಗೆ ಪ್ರೇಕ್ಷಕರ ಸಲಾಂ.!

    ನರೇಶನ್ ಸ್ಟೈಲ್ ಬೊಂಬಾಟ್

    ನರೇಶನ್ ಸ್ಟೈಲ್ ಬೊಂಬಾಟ್

    ಕೆ.ಜಿ.ಎಫ್ ನಲ್ಲಿ ಹುಟ್ಟಿದ ರಾಕಿ, 'ರಾಕಿ ಭಾಯ್' ಆಗಿ ಬೆಳೆದ ರೀತಿಯನ್ನ ಹಂತ ಹಂತವಾಗಿ ಅನಂತ್ ನಾಗ್ ಅನಾವರಣಗೊಳಿಸಿರುವ ರೀತಿ ಚೆನ್ನಾಗಿದೆ. 'ಕೆ.ಜಿ.ಎಫ್' ಚಿತ್ರದ ನರೇಶನ್ ಸ್ಟೈಲ್ ಸೂಪರ್ ಆಗಿದೆ. ಹೀಗಾಗಿ, ಪ್ರೇಕ್ಷಕರಿಗೆ ಮೊದಲಾರ್ಧದಲ್ಲಿ ಎಲ್ಲೂ ಬೋರ್ ಆಗಲ್ಲ.

    ಅಬ್ಬರದಿಂದ ತೆರೆಗೆ ಬಂತು ಕೆ.ಜಿ.ಎಫ್: ಯಶ್ ಚಿತ್ರಕ್ಕೆ ಭರ್ಜರಿ ಓಪನಿಂಗ್.!ಅಬ್ಬರದಿಂದ ತೆರೆಗೆ ಬಂತು ಕೆ.ಜಿ.ಎಫ್: ಯಶ್ ಚಿತ್ರಕ್ಕೆ ಭರ್ಜರಿ ಓಪನಿಂಗ್.!

    ಫುಲ್ ಸ್ಪೀಡ್

    ಫುಲ್ ಸ್ಪೀಡ್

    ಎಂಬತ್ತರ ದಶಕದಲ್ಲಿ ನಡೆದ ಘಟನೆಯ ಸುತ್ತ ಸಾಗುವ 'ಕೆ.ಜಿ.ಎಫ್' ಕಥೆ ಫುಲ್ ಸ್ಪೀಡ್ ಆಗಿದೆ. ಮಾಸ್ ಅಭಿಮಾನಿಗಳು ಶಿಳ್ಳೆ ಹೊಡೆಯುವ ಪಂಚಿಂಗ್ ಡೈಲಾಗ್ಸ್ ಇರುವುದರಿಂದ ಪ್ರೇಕ್ಷಕರ ಗಮನ ಅತ್ತಿತ್ತ ಕದಲುವುದಿಲ್ಲ.

    ಮೂರು ಹಾಡುಗಳು

    ಮೂರು ಹಾಡುಗಳು

    ರಾಕಿ ಭಾಯ್ ಎಂಟ್ರಿಗೆ ಒಂದು ಸಾಂಗು, ತಮನ್ನಾ ಜೊತೆಗೆ ಒಂದು ಸಾಂಗು ಸೇರಿದಂತೆ ಒಟ್ಟು ಮೂರು ಹಾಡುಗಳು ಫಸ್ಟ್ ಹಾಫ್ ನಲ್ಲಿದೆ. ಸಾಂಗು ಮತ್ತು ಫೈಟ್ಸ್ ಬಗ್ಗೆ ಕೆಮ್ಮಂಗಿಲ್ಲ. ಆಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡಿರುವ ಯಶ್ ನಟನೆ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ಫಸ್ಟ್ ಹಾಫ್ ನಲ್ಲಿ ಹೀರೋಯಿನ್ ಗೆ ಹೆಚ್ಚು ಕೆಲಸ ಇಲ್ಲ.

    ಇಂಟರ್ವೆಲ್ ನಲ್ಲಿ ಟ್ವಿಸ್ಟ್.!

    ಇಂಟರ್ವೆಲ್ ನಲ್ಲಿ ಟ್ವಿಸ್ಟ್.!

    ಮೊದಲಾರ್ಧದಲ್ಲಿ ರಾಕ್ ಭಾಯ್ ನ ಮುಂಬೈ ಮತ್ತು ಬೆಂಗಳೂರು ಅಧ್ಯಾಯ ಕಣ್ತುಂಬಿಕೊಂಡ ಪ್ರೇಕ್ಷಕರಿಗೆ ದ್ವಿತೀಯಾರ್ಧದಲ್ಲಿ 'ಕೆ.ಜಿ.ಎಫ್' ಪರಿಚಯವಾಗುತ್ತದೆ. 'ಕೆ.ಜಿ.ಎಫ್'ಗೆ ರಾಕಿ ಭಾಯ್ ಎಂಟ್ರಿಕೊಟ್ಮೇಲೆ, ಏನಾಗಬಹುದು... ಸಂಪೂರ್ಣ ವಿಮರ್ಶೆಗಾಗಿ ಫಿಲ್ಮಿಬೀಟ್ ಕನ್ನಡ ಓದುತ್ತಿರಿ..

    English summary
    Rocking Star Yash starrer Kannada Movie KGF gets good opening all over Karnataka. Read KGF First half review here.
    Friday, December 21, 2018, 9:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X