ಹೊಂಬಾಳೆಯಲ್ಲಿ ಅರಳಿದ ಬಂಗಾರದ ಕೆ.ಜಿ.ಎಫ್ ಇದುವೇ ಕನ್ನಡದ ಗೋಲ್ಡ್ ಫಿಲಂ

By ನವೀನ್

Recommended Video

KGF Movie : ಕನ್ನಡದ ಗೋಲ್ಡನ್ ಫಿಲಂ ಕೆಜಿಎಫ್ ಹೇಗಿದೆ? | FILMIBEAT KANNADA

ಯಶ್ ಅವರ ಮೊಟ್ಟಮೊದಲ ಪರಿಪೂರ್ಣ ಕ್ಲಾಸಿಕ್ ಮಾಸ್ ಮೂವಿ ಈ ಕೆ.ಜಿ.ಎಫ್. ಕ್ಲಾಸಿಕ್ ಮೂವಿಗೆ ಬಂಗಾರದ ಲೇಪನ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು.

ಎಲ್ಲ ಚಿತ್ರಗಳಂತೆ ಇದೂ ಒಂದು ಚಿತ್ರ ಅಂದುಕೊಂಡರೆ ಅದು ಸಾಮಾನ್ಯ ಚಿತ್ರ. ಆದರೆ ಚಿತ್ರ ಸಾಮಾನ್ಯವಾಗಿಯೇ ಪ್ರಾರಂಭ ಕಂಡರೂ ಕಥೆ ಸಾಗುವ ರೀತಿ ಹಾಗೂ ಚಿತ್ರದ ಮೇಕಿಂಗ್ ನಿಂದ ವಿಭಿನ್ನ ಹಾಗೂ ಕಣ್ಣಿಗೆ ಮುದನೀಡಿದ ಅನುಭವವಾಗುತ್ತದೆ. ಕಣ್ಣಿಗೆ ಮುದನೀಡುವಂತೆ ಅದ್ಭುತವಾಗಿ ಕ್ಯಾಮೆರಾದಿಂದ ಸೆರೆಹಿಡಿದಿರುವ ಭುವನ್ ಗೌಡ ಚಮತ್ಕಾರ ಸೂಪರ್.

"ಪವರ್ ಫುಲ್ ಪೀಪಲ್ ಕಮ್ಸ್ ಫ್ರಮ್ ಪವರ್ ಫುಲ್ ಪ್ಲೇಸಸ್" ಹಾಗೂ "ನಿನ್ನ ಹಿಂದೆ ಸಾವಿರ ಜನ ಇದಾರೆ ಅಂದ್ರೆ ನೀನು ಬರೀ ಒಂದು ಯುದ್ಧ ಗೆಲ್ಲಬಹುದು ಆದರೆ ಅದೇ ಸಾವಿರ ಜನಕ್ಕೆ ನೀನೊಬ್ಬ ಮುಂದೆ ಇದಿಯಾ ಅಂದ್ರೆ ಪ್ರಪಂಚನೆ ಗೆಲ್ಲಬಹುದು" ಅನ್ನೋ ಸಂಭಾಷಣೆಗಳು ಎಲ್ಲರ ಬಾಯಲ್ಲಿ ಗುನುಗುತ್ತಿವೆ.

Kannada Movie KGF review by reader Naveen

ಚಿತ್ರಕಥೆಗೆ ತಕ್ಕಂತೆ ಸಾಗುವ ಹಾಡುಗಳು‌ ಅದರಲ್ಲೂ ರವಿ ಬಸ್ರೂರು ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್ಸ್. ಚಿತ್ರಕಥೆಗೆ ತಕ್ಕಂತೆ ಯಾವ ಅತೀ ಅಬ್ಬರವಿಲ್ಲದೆ ಸಾಗುತ್ತದೆ.

ಚಿತ್ರಕ್ಕೆ ಹಾಕಿದ್ದ ಅದ್ಭುತ ಸೆಟ್ ಗಳು ಯಾವ ಹಾಲಿವುಡ್‌ ಸಿನಿಮಾಗೂ ಕಮ್ಮಿ ಇರಲಿಲ್ಲ. ದ್ವಿತೀಯಾರ್ಧದಲ್ಲಿ ಕಥೆ ಸಾಗುವ ರೀತಿ ಅತ್ಯಂತ ಕುತೂಹಲಭರಿತವಾಗಿದ್ದು, ಸಂಭಾಷಣೆಗೆ ಸಿಗುವ ಶಿಳ್ಳೆ, ಚಪ್ಪಾಳೆಗಳು ರಾಕಿಂಗ್ ಸ್ಟಾರ್ ಯಶ್ ರ ಅಭಿನಯಕ್ಕೆ ಸಾಕ್ಷಿ. ಯಶ್ ಅವರ ವಿಭಿನ್ನ ರೀತಿಯ ಕೇಶವಿನ್ಯಾಸ ಹಾಗೂ ಮೈನವಿರೇಳಿಸುವ ಸಾಹಸ ದೃಶ್ಯಗಳು ಅಭಿಮಾನಿಗಳಿಗೆ ರಸದೌತಣವನ್ನು ನೀಡುವುದರಲ್ಲಿ ಅನುಮಾನವಿಲ್ಲ.

ಎಲ್ಲ ಕಲಾವಿದರ ಅಭಿನಯವು ಸಹಜ ಹಾಗೂ ಪಾತ್ರಕ್ಕೆ ತಕ್ಕಂತೆ ಇದ್ದದ್ದು ವಿಶೇಷ. ಖಳನಟರೇ ಚಿತ್ರಕ್ಕೆ ಜೀವಾಳ ಹಾಗೂ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್. ಸಾವಿರಾರು ಜನರನ್ನು ಚಿತ್ರೀಕರಣದಲ್ಲಿ ಬಳಸಿಕೊಂಡು ಅತ್ಯುತ್ತಮವಾಗಿ ಕ್ಯಾಮರದಲ್ಲಿ ಸೆರೆಹಿಡಿದಿರುವುದು ಎದ್ದು ಕಾಣುತ್ತದೆ.

ಮೊದಲಾರ್ಧದಲ್ಲಿ ಚಿತ್ರಕ್ಕೆ ಇನ್ನಷ್ಟು ಕಥೆಗೆ ಒತ್ತು ನೀಡಬಹುದಿತ್ತು ಅನ್ನುವುದು ನನ್ನ ಅಭಿಪ್ರಾಯ. ಒಟ್ಟಾರೆ ಕೆ.ಜಿ.ಎಫ್ ಚಾಪ್ಟರ್ 1 ಚಿತ್ರವು ಕನ್ನಡ ಚಿತ್ರರಂಗದ ಮಟ್ಟಿಗೆ ಉತ್ತಮ ಪ್ರಯತ್ನ ಹಾಗೂ ಹೆಮ್ಮೆಯ ಚಿತ್ರ. ಚಾಪ್ಟರ್ 2 ಕ್ಕಾಗಿ ಕಾಯುವಂತೆ ಮಾಡಿರುವ ಚಿತ್ರದ ಅದ್ಭುತ ಕ್ಲೈಮಕ್ಸ್ ಹಾಗೂ ಮೇಕಿಂಗ್ ಚಂದನವನಕ್ಕೆ ಉತ್ಸಾಹವನ್ನೇ ತಂದಿದೆ.

ಕೆ.ಜಿ.ಎಫ್. ಭಾರತೀಯ ಚಿತ್ರರಂಗದಲ್ಲೇ ಸೈ ಎನಿಸಿಕೊಂಡಿರುವ ಸಿನಮಾ. ಏಕ ಕಾಲಕ್ಕೆ ಕನ್ನಡ ಭಾಷೆ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲಿ ತೆರೆಕಂಡು ಎಲ್ಲ ವರ್ಗದ, ಭಾಷೆಯ ಜನರನ್ನು ತನ್ನತ್ತ ಸೆಳೆದಿದೆ - ನವೀನ್

More from Filmibeat

English summary
Rocking Star Yash starrer Kannada Movie KGF review by Oneindia Kannada/Filmibeat Kannada Reader Naveen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X