»   » ಕವಿಗಳ 'ಮದುವೆಗೆ' ವಿಮರ್ಶಕರು ಏನಂತಾರೇ?

ಕವಿಗಳ 'ಮದುವೆಗೆ' ವಿಮರ್ಶಕರು ಏನಂತಾರೇ?

By Suneetha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಚಂದನವನದಲ್ಲಿ ಗೀತೆ ರಚನೆಕಾರರಾಗಿ ಖ್ಯಾತಿ ಗಳಿಸಿದ್ದ ಕವಿರಾಜ್ ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಕರ ಪಟ್ಟ ಹೊತ್ತುಕೊಂಡು ಮದುವೆ ಮಾಡಿ ಮುಗಿಸಿದ್ದು, ಆಯ್ತು ಇದೀಗ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಸಂಪಾದಿಸಿದ್ದು, ಆಯ್ತು.

  ಮೊದಲ ಬಾರಿಗೆ ದೊಡ್ಡ ಬ್ಯಾನರ್ ಆದ ತೂಗುದೀಪ ಪ್ರೊಡಕ್ಷನ್ಸ್ ಅಡಿಯಲ್ಲಿ ಕೆಲಸ ಮಾಡಿರುವ ಕವಿರಾಜ್ ಅವರು ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಸಿನಿಮಾ ಒಂದನ್ನು ನೀಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

  ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಹೊಸ ಪ್ರತಿಭೆ ನಟ ಸೂರಜ್ ಗೌಡ ಮತ್ತು ಬೇಬಿ ಡಾಲ್ ಅಮೂಲ್ಯ ಅವರು ನಟಿಸಿರುವ 'ಮದುವೆಯ ಮಮತೆಯ ಕರೆಯೋಲೆ' ನಿನ್ನೆ (ಜನವರಿ 8) ಭರ್ಜರಿಯಾಗಿ ತೆರೆಕಂಡು ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.[ವಿಮರ್ಶೆ: ಕವಿರಾಜರ ಕಲ್ಪನೆಯ ಮದುವೆ ಹೇಗಿದೆ ಗೊತ್ತಾ?]

  ಸಾಮಾನ್ಯವಾಗಿರುವ ಎರಡು ಕುಟುಂಬಗಳು ಮತ್ತು ಒಂದು ಮದುವೆಯ ಸುತ್ತ ಸುತ್ತುವ ಕಥೆಯನ್ನು ತೆರೆಯ ಮೇಲೆ ಹೊತ್ತು ತಂದಿರುವ ಸಾಹಿತ್ಯ ಬರಹಗಾರ ಕಮ್ ನಿರ್ದೇಶಕ ಕವಿರಾಜ್ ಅವರ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾದ ಬಗ್ಗೆ ಖ್ಯಾತ ಕನ್ನಡ ದಿನಪತ್ರಿಕೆಯ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.[ದರ್ಶನ್ 50ನೇ ಸಿನಿಮಾ ಬಗ್ಗೆ ದಿನಕರ್ ಏನಂದ್ರು ಗೊತ್ತಾ]

  ಕನ್ನಡ ದಿನಪತ್ರಿಕೆಯ ವಿಮರ್ಶಕರು ವ್ಯಕ್ತಪಡಿಸಿರುವ ವಿಭಿನ್ನ ಅಭಿಪ್ರಾಯಗಳ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಇದು 'ಅಮೂಲ್ಯ'ವಾದ ಕರೆಯೋಲೆ - ಕನ್ನಡ ಪ್ರಭ

  ಮದುವೆ ಸಂಭ್ರಮ ಎಂದ ಮೇಲೆ ಸಣ್ಣಪುಟ್ಟ ಗೊಂದಲ, ಮನಸ್ತಾಪ ಇದ್ದೇ ಇರುತ್ತದೆ. ಒಬ್ಬರಿಗೆ ಅಡುಗೆ ಇಷ್ಟವಾಗಲ್ಲ, ಕಲ್ಯಾಣ ಮಂಟಪ ಸರಿ ಬರಲ್ಲ, ಹುಡುಗಿ ಚೆನ್ನಾಗಿದ್ದರೆ, ಹುಡುಗ ಅಷ್ಟಕಷ್ಟೆ, ಹುಡುಗ ಚೆನ್ನಾಗಿದ್ದರೆ ಹುಡುಗಿ ಅವರೇಜ್. ಎಲ್ಲವೂ ಚೆನ್ನಾಗಿದ್ದಾಗಲೂ 'ಏನೋ ಕೊರತೆ' ಅನಿಸುತ್ತದೆ. ಮದುವೆ ಮನೆಯಲ್ಲಿ ಇವೆಲ್ಲವೂ ಸಾಮಾನ್ಯ. ಮದುವೆ ಸಂಭ್ರಮವನ್ನೇ ಕೇಂದ್ರವಾಗಿಟ್ಟುಕೊಂಡು ಚಿತ್ರ ಮಾಡಲು ಹೊರಟಾಗ ಒಂದಿಷ್ಟು ತಪ್ಪುಗಳಾಗುವುದು ಸಹಜ. ಆದರೆ, ಈ ಎಲ್ಲದರ ನಡುವೆ ಸಂತೋಷ, ಸಂಭ್ರಮ ಹಾಗೂ ಸುಖಕರವಾಗಿ ಮದುವೆ ಮಾಡಿ ಮುಗಿಸುತ್ತಾರೆ ನಿರ್ದೇಶಕ ಕವಿರಾಜ್. ಅಲ್ಲಿಗೆ ಅವರೇ ಭರವಸೆ ಕೊಟ್ಟಂತೆ ಫ್ಯಾಮಿಲಿ ಪ್ರೇಕ್ಷಕರಿಗೆ ಮೋಸ ಮಾಡದೆ ನಗೆ ಬೀರುತ್ತಾರೆ. ಈ ಕಾರಣಕ್ಕೆ 'ಮದುವೆಯ ಮಮತೆಯ ಕರೆಯೋಲೆ' ಚಿತ್ರವನ್ನು ಒಮ್ಮೆ ನೋಡಲು ಅಡ್ಡಿ ಇಲ್ಲ. -ಆರ್ ಕೇಶವಮೂರ್ತಿ.[ಗೋಲ್ಡನ್ ಕ್ವೀನ್ ಮದುವೆಗೆ ನೀವೂ ಬರ್ತಿರಾ ಅಲ್ವಾ?]

  'ಮದುವೆ ಸರಳ ಕಾಮಿಡಿ ಬಹಳ' - ವಿಜಯವಾಣಿ

  ಒಂದು ಬೃಂದಾವನ, ಇನ್ನೊಂದು ಹಕ್ಕಿಗೂಡು. ಮೊದಲನೆಯದ್ದಕ್ಕೆ ಮಂಡ್ಯ ಮೂಲದ ಕೃಷ್ಣೇಗೌಡ ಯಜಮಾನ, ಎರಡನೆಯದ್ದಕ್ಕೆ ಹುಬ್ಬಳ್ಳಿಯ ಚಂದ್ರಶೇಖರ್ ಪಾಟೀಲ್ ಮುಖ್ಯಸ್ಥ. ಇವೆರಡು ಕುಟುಂಬಗಳ 25 ವರ್ಷಗಳ ಸ್ನೇಹ-ಸಂಬಂಧ ಯಕಶ್ಚಿತ್ ಒಂದು 'ಡ್ರೈವಿಂಗ್ ಲೈಸೆನ್ಸ್' ಕಾರಣಕ್ಕೆ ಮುರಿದು ಮೂಲೆ ಸೇರುತ್ತೆ. ಇದು ಗೌಡ್ರ ಮಗಳು ಮತ್ತು ಪಾಟೀಲರ ಮಗನ ಪ್ರೇಮ-ವಿವಾಹಕ್ಕೆ ‘ಬ್ರೇಕ್' ಹಾಕುತ್ತೆ. ಆಮೇಲೆ, ಈ ಕುಟುಂಬಗಳು ಮತ್ತು ಪ್ರೇಮಿಗಳು ಒಂದಾಗುತ್ತಾರಾ ಎನ್ನುವುದೇ ಕ್ಲೈಮ್ಯಾಕ್ಸ್ ಕೌತುಕ. ಇಂಥ ಹತ್ತಾರು ಚಿತ್ರ-ಕಥೆಗಳು ಈಗಾಗಲೇ ಬಂದಿದ್ದರೂ, ‘ಮದುವೆ..' ಫ್ರೆಷ್ ಎನಿಸುತ್ತದೆ. ಲವ್​ಸ್ಟೋರಿ ಎಂದರೂ ಸರಿ, ಕಾಮಿಡಿ ಎಂದರೂ ಸರಿ, ರೊಮಾಂಟಿಕ್ ಚಿತ್ರ ಎಂದರೂ ಸರಿ.. ಈ ಮೂರೂ ವರ್ಗಕ್ಕೆ ಸೇರುವಂತೆ ಚಿತ್ರವನ್ನು ನಿರೂಪಿಸಿದ್ದಾರೆ ನಿರ್ದೇಶಕರು.

  'ಫ್ಯಾಮಿಲಿ ಸಮೇತ ಮದುವೆಗೆ ಬನ್ನಿ' - ವಿಜಯಕರ್ನಾಟಕ

  ಮದುವೆ ಅನ್ನುವುದು ಮಧುರ ಸಂಬಂಧದ ಬೆಸುಗೆ ಅಂತಾರೆ. ಈ ಮದುವೆ ನಾನಾ ನಮೋನಿಯಲ್ಲಿ ನಡೆದರೂ, ಅದರ ಅಂತಿಮ ಉದ್ದೇಶ ಎರಡು ಹೃದಯಗಳನ್ನು ಬೆಸೆಯುವುದು. 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಮೂಲಕ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ನಿರ್ದೇಶಕ ಕವಿರಾಜ್. ಪ್ರೀತಿಸಿದ ಎರಡು ಹೃದಯಗಳನ್ನು ಒಂದಾಗಿಸಲು ಅನೇಕ ಚಮತ್ಕಾರಗಳಿಗೆ ಮೊರೆ ಹೋಗುತ್ತಾರೆ. ಅವುಗಳು ಸಿನಿಮಯ ರೀತಿಯಲ್ಲಿ ಇರದ ಕಾರಣ, ಚಿತ್ರವು ಕೊಂಚ ಆಮೆ ವೇಗದಲ್ಲಿ ಸಾಗಿದಂತೆ ಭಾಸವಾಗುತ್ತದೆ.- ಶರಣು ಹುಲ್ಲೂರು

  'ಕೈ ಕೊಟ್ಟ ಕವಿ ಸಮಯ' - ಪ್ರಜಾವಾಣಿ

  ಗಂಭೀರ ಸಂದರ್ಭದಲ್ಲೂ ಹಾಸ್ಯದ ಮೂಲಕ ಕಥೆ ಹೇಳುವ ಶೈಲಿ ಕಿರಿಕಿರಿ ಉಂಟು ಮಾಡುತ್ತದೆ. ಮದುವೆ ಮನೆಯಲ್ಲಿ ಗಾಬರಿ-ಗಡಿಬಿಡಿಯ ಜೊತೆಗೆ ಸಂಭ್ರಮ-ಉಲ್ಲಾಸವೂ ಇರುತ್ತದೆ. ಈ ಸಂಭ್ರಮವನ್ನು ಕವಿರಾಜ್ ತಮ್ಮ ಚಿತ್ರದಲ್ಲಿ ತುಂಬಿಸಿದ್ದಾರೆ. ‘ಹುಚ್ಚ ವೆಂಕಟ್' ಡೈಲಾಗನ್ನು ಬಳಸಿಕೊಂಡಿರುವ ಒಂದು ಸನ್ನಿವೇಶ ಸೊಗಸಾಗಿದೆ. ಹಾಗೆ ಬಂದು ಹೀಗೆ ಹೋಗುವ ಸಾಧುಕೋಕಿಲಾ ಕೂಡ ನಗಿಸಿದರೆ, ಆರಂಭದಲ್ಲಿ ನಗಿಸುವ ಚಿಕ್ಕಣ್ಣ ಮಧ್ಯಂತರದ ನಂತರ ಕಾಣೆಯಾಗಿದ್ದಾರೆ. ಅನಂತನಾಗ್, ಅಚ್ಯುತ್ ಕುಮಾರ್ ಅವರೂ ಚಿತ್ರದ ನಾಯಕರೇ. ಶರತ್ ಲೋಹಿತಾಶ್ವ ಖಳ ರಾಜಕಾರಣಿ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ನಾಯಕನಾಗಿ ಪರಿಚಿತವಾಗಿರುವ ಸೂರಜ್ ನಟನೆಯಲ್ಲಿ ಮತ್ತಷ್ಟು ಮಾಗಬೇಕು. ಅದೇ ತುಂಟ ಪ್ರೇಯಸಿಯಾಗಿ ಅಮೂಲ್ಯ ಇಷ್ಟವಾಗುತ್ತಾರೆ.- ಡಿ.ಎಂ.ಕುರ್ಕೆ ಪ್ರಶಾಂತ್.

  'ಕಲರ್ ಫುಲ್ ಕುಟುಂಬದ ಕಳಾಪೂರ್ಣ ಕಲರವ' - ಉದಯವಾಣಿ

  ಎರಡು ಕುಟುಂಬಗಳ ನಡುವೆ ನಡೆಯುವ ಪ್ರೀತಿ, ಸ್ನೇಹ, ಸಂಬಂಧ, ಸಂಘರ್ಷಗಳೇ ಈ ಸಿನಿಮಾದ ಜೀವಾಳ. ಅವುಗಳನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಕವಿರಾಜ್. ಇದು ಕವಿರಾಜ್ ನಿರ್ದೇಶನದ ಚೊಚ್ಚಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಒಂದು ನೀಟಾದ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಕವಿರಾಜ್. ನಿರೂಪಣೆಯಲ್ಲಿ ಮತ್ತಷ್ಟು ವೇಗವನ್ನು ಕಾಯ್ದುಕೊಂಡಿದ್ದರೆ 'ಫ್ಯಾಮಿಲಿ ಮ್ಯಾಟರ್' ಅನ್ನು ಬೇಗನೇ ಬಗೆಹರಿಸಬಹುದಿತ್ತು. ಇಲ್ಲಿ ಸಾಕಷ್ಟು ಘಟನೆಗಳು, ಸನ್ನಿವೇಶಗಳು ಬಂದು ಹೋಗುತ್ತವೆ. ಎಲ್ಲವೂ ನಿಮ್ಮ ಅಕ್ಕ-ಪಕ್ಕದ ಮನೆಯಲ್ಲೇ ನಡೆಯುವಂತೆ ಭಾಸವಾಗುವುದು ಈ ಸಿನಿಮಾದ ಪ್ಲಸ್ ಪಾಯಿಂಟ್. - ರವಿಪ್ರಕಾಶ್ ರೈ.

  'Good attendance expected: Bangaloremirror.com

  Lyricist Kaviraj has turned director, and his wedding invitation is worth watching for the sumptuous fare it serves. Maduveya Mamateya Kareyole is a romantic candy dripping with comedy syrup and wrapped in family delight. The first few scenes do have some jerks and you wonder if the debut director can manage sailing through the uncharted waters of film direction but Kaviraj soon enough takes the audience on a jolly good ride.

  English summary
  Kannada Movie 'Maduveya Mamatheya Kareyole' Critics Review. Actress Amoolya, Actor Sooraj Gowda Starrer 'Maduveya Mamatheya Kareyole' has received mixed response from the critics. here is the collection of reviews by Top News Papers of Karnataka. The movie is directed by debudent director Kaviraj.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more