For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕ ದಿನಪತ್ರಿಕೆಗಳಲ್ಲಿ ಕಂಡಂತೆ 'ಪಡ್ಡೆಹುಲಿ' ಚಿತ್ರದ ವಿಮರ್ಶೆ

  |

  ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ಅಭಿನಯದ ಚೊಚ್ಚಲ ಸಿನಿಮಾ ಪಡ್ಡೆಹುಲಿ ರಾಜ್ಯಾದ್ಯಂತ ಈ ವಾರ ಬಿಡುಗಡೆಯಾಗಿದೆ. ರಾಕ್ ಸ್ಟಾರ್ ಹುಡುಗನ ಕಥೆ ಹೊಂದಿರುವ ಈ ಚಿತ್ರಕ್ಕೆ ಮೊದಲ ದಿನ ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ಸಿಕ್ಕಿದೆ.

  ಮೊದಲ ಸಿನಿಮಾದಲ್ಲೇ ಅಭಿನಯ, ಡ್ಯಾನ್ಸ್, ಫೈಟ್ ಎಲ್ಲದರಲ್ಲೂ ಗಮನ ಸೆಳೆದಿರುವ ಶ್ರೇಯಸ್ ಯಂಗ್ ಟೈಗರ್ ಆಗಿ ಮಿಂಚಿದ್ದಾರೆ. ಒಬ್ಬ ಕಮರ್ಷಿಯಲ್ ಹೀರೋ ಆಗಿ ಎಂಟ್ರಿಯಾಗಿರುವ ಯುವನಟನಿಗೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದ್ಯಾ?

  ಪಡ್ಡೆಹುಲಿ ವಿಮರ್ಶೆ: ಸೋತು ಗೆದ್ದ ರಾಕ್ ಸ್ಟಾರ್

  'ಪಡ್ಡೆಹುಲಿ' ಸಿನಿಮಾ ನೋಡಿದ ಕನ್ನಡ ಸಿನಿ ಪತ್ರಕರ್ತರು ಏನು ಹೇಳಿದ್ದಾರೆ. ಸಿನಿಮಾದಲ್ಲಿ ವಿಮರ್ಶಕರಿಗೆ ಏನು ಇಷ್ಟ ಆಯ್ತು? ಏನು ಇಷ್ಟ ಆಗಿಲ್ಲ ಎಂಬುದನ್ನ ತಮ್ಮ ಪತ್ರಿಕೆಗಳಲ್ಲಿ ಪ್ರಕಟ ಮಾಡಿದ್ದಾರೆ. ಹಾಗಿದ್ರೆ, ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ 'ಪಡ್ಡೆಹುಲಿ' ಬಗ್ಗೆ ಬಂದಿರುವ ವಿಮರ್ಶೆಯಲ್ಲಿ ಏನಿದೆ? ಮುಂದೆ ಓದಿ.....

  ಪಡ್ಡೆಹುಲಿ ಮೇಲೆ Rap ಸಿಂಗರೊಬ್ಬನ ಸವಾರಿ

  ಪಡ್ಡೆಹುಲಿ ಮೇಲೆ Rap ಸಿಂಗರೊಬ್ಬನ ಸವಾರಿ

  'ಹಾಡು, ನೃತ್ಯಗಳಾಚೆ ಸಿನಿಮಾ ಸಾಗುತ್ತಿರುವ ಈ ಹೊತ್ತಿನಲ್ಲಿ ಹತ್ತಕ್ಕೂ ಹೆಚ್ಚು ಗೀತೆಗಳನ್ನು ಬಳಸಿಕೊಂಡು ‘ಪಡ್ಡೆಹುಲಿ' ಸಿನಿಮಾ ಮಾಡಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ. ಜಾಗತಿಕ ಸಿನಿಮಾಗಳಿಗೆ ಮಣೆ ಹಾಕುತ್ತಿರುವ ಸಂದರ್ಭದಲ್ಲಿ, ಹಾಡುಗಳ ಮೂಲಕ ಕಥೆ ಸಾಗಿಸುವುದು ಸವಾಲಿನ ಕೆಲಸ. ಈ ಸವಾಲನ್ನು ನಿರ್ದೇಶಕರು ಜಾಣ್ಮೆಯಿಂದ ದಾಟಿಸಿದ್ದಾರೆ. ಹಾಗಾಗಿ ಪಡ್ಡೆಹುಲಿ ಮಾಸ್‌ ಪ್ರೇಕ್ಷಕರಿಗೆ ಇಷ್ಟವಾಗುತ್ತಲೇ, ಸಂಗೀತ ಇಷ್ಟ ಪಡುವ ಪ್ರೇಮಿಗಳನ್ನೂ ಆವರಿಸಿಕೊಳ್ಳುತ್ತದೆ. ಜತೆಗೆ ಕುಟುಂಬದ ಎಲ್ಲ ವಯೋಮಾನದ ಸದಸ್ಯರಿಗೂ ಏಕಕಾಲಕ್ಕೆ ತಲುಪುತ್ತದೆ' - ವಿಜಯ ಕರ್ನಾಟಕ

  ಮಧ್ಯಮ ವರ್ಗದ ಹುಡುಗನ ಕಲರ್‌ ಫುಲ್ ಕನಸು

  ಮಧ್ಯಮ ವರ್ಗದ ಹುಡುಗನ ಕಲರ್‌ ಫುಲ್ ಕನಸು

  'ವಿಭಿನ್ನ ಶೈಲಿಯ ಹಾಡುಗಳು, ಜೋಶ್ ‌ ತುಂಬಿರುವ ಡ್ಯಾನ್ಸ್‌, ಮಾಸ್‌ ಪ್ರಿಯರಿಗೆ ಇಷ್ಟವಾಗುವ ಫೈಟ್ ‌, ಯಂಗ್ ‌ಸ್ಟಾರ್ಗೆ ಬೇಕಾದ ಲವ್‌ಸ್ಟೋರಿ, ಫ್ಯಾಮಿಲಿ ಆಡಿಯನ್ಸ್ ‌ಗೆ ಬೇಕಾದ ಒಂದು ಸಂದೇಶ ... ಈ ಎಲ್ಲಾ ಅಂಶಗಳನ್ನು ಒಂದೇ ತಟ್ಟೆಯಲ್ಲಿಟ್ಟು "ಪಡ್ಡೆಹುಲಿ'ಯಲ್ಲಿ ಕೊಡಲಾಗಿದೆ. ಹಾಗಾಗಿ, ಇದು ಪಕ್ಕಾ ಫ್ಯಾಮಿಲಿ ಎಂಟರ್‌ ಟೈನರ್ ‌ ಎನ್ನಲು ಅಡ್ಡಿಯಿಲ್ಲ. ನಾಯಕ ಶ್ರೇಯಸ್ ‌ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಕಮರ್ಷಿಯಲ್ ‌ ಹೀರೋ ಆಗಿ ನೆಲೆಕಾಣುವ ಎಲ್ಲಾ ಲಕ್ಷಣಗಳನ್ನು ತೋರಿದ್ದಾರೆ. ಡ್ಯಾನ್ಸ್‌, ಫೈಟ್ ‌ನಲ್ಲಿ ಶ್ರೇಯಸ್ ‌ ಎನರ್ಜಿ ಮೆಚ್ಚುವಂಥದ್ದೇ. ನಟನೆಯಲ್ಲೂ ಶ್ರೇಯಸ್ ‌ ಹಿಂದೆ ಬಿದ್ದಿಲ್ಲ. ನಾಯಕಿ ನಿಶ್ವಿಕಾ ನಾಯ್ಡು ಕೂಡಾ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ' - ಉದಯವಾಣಿ

  ಪಡ್ಡೆಹುಲಿಯ ಮೆದುವಾದ ಗರ್ಜನೆ

  ಪಡ್ಡೆಹುಲಿಯ ಮೆದುವಾದ ಗರ್ಜನೆ

  'ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅವರನ್ನು ಲಾಂಚ್ ಮಾಡುವ ಸಲುವಾಗಿಯೇ ‘ಪಡ್ಡೆಹುಲಿ' ಮಾಡಿರುವುದರಿಂದ ತುಸು ಬಿಲ್ಡಪ್​ಗಳು, ಪಂಚಿಂಗ್ ಡೈಲಾಗ್​ಗಳು ಯಥೇಚ್ಛವಾಗಿ ಸಿನಿಮಾದೊಳಗೆ ನುಸುಳಿವೆ. ಕಾಲೇಜು ವಿದ್ಯಾರ್ಥಿಯಾದ ಸಂಪತ್​ಗೆ ಸಂಗೀತ ಎಂದರೆ ಅಚ್ಚುಮೆಚ್ಚು. ರಾಕ್ ಸ್ಟಾರ್ ಆಗಬೇಕೆಂಬುದು ಅವನ ಗುರಿ. ಜತೆಗೆ ಸಹಪಾಠಿ ಸಂಗೀತಾ (ನಿಶ್ವಿಕಾ) ಮೇಲೂ ಪ್ರೀತಿ. ಮೊದಲರ್ಧ ಕಾಲೇಜಿನಲ್ಲೇ ಕಥೆ ಸಾಗುತ್ತದೆ. ಒಂದಷ್ಟು ರ್ಯಾಗಿಂಗ್ ಸೀನ್, ತರಲೆ-ತಮಾಷೆ, ‘ಕಿರಿಕ್ ಪಾರ್ಟಿ' ರಕ್ಷಿತ್ ಶೆಟ್ಟಿ ಅವರ ಗೆಸ್ಟ್ ಅಪಿಯರೆನ್ಸ್.. ಇವಿಷ್ಟಕ್ಕೆ ಮೊದರ್ಧ ಸೀಮಿತ. ಗುರಿ ಸಾಧನೆಗಾಗಿ ನಾಯಕನ ಓಡಾಟ, ಒದ್ದಾಟ. ಅಂತಿಮವಾಗಿ ದಕ್ಕಿಸಿಕೊಳ್ಳುವ ಯಶಸ್ಸಿಗಾಗಿ ಕೆಲ ತ್ಯಾಗಗಳು. ಇದು ದ್ವಿತೀಯಾರ್ಧದ ಹೂರಣ' - ವಿಜಯವಾಣಿ

  Padde huli Movie review

  Padde huli Movie review

  'Paddehuli may not be a dream debut but it is a good launchpad that does not take the audience for a ride. It is engaging, has one of the best music albums attached to it, got some decent performances and most importantly, does not disappoint. Paddehuli is a platter on offer. In parts, it is a rom-com, a campus story, a coming-of-age film and also a family drama. More than all these, it is a musical. The story is straightforward and easily predictable' - Bangalore mirror

  English summary
  Kannada producer K Manju son shreyas starrer padde huli movie has released yesterday (april 19th) all over karnataka. the movie directed by gurudesh pande. here is the critics review of Padde huli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X