For Quick Alerts
ALLOW NOTIFICATIONS  
For Daily Alerts

ಶರಣ್ 'ರಾಜ ರಾಜೇಂದ್ರ'ನ ಬಗ್ಗೆ ಯಾರು ಏನೆಂದರು?

By Rajendra
|

'ವಿಕ್ಟರಿ' ಚಿತ್ರದ ಮೂಲಕ ಗೆಲುವಿನ ಕುದುರೆ ಏರಿದ ನಟ ಶರಣ್ ಅವರ ಚಿತ್ರಗಳನ್ನು ಕಾತುರದಿಂದ ನಿರೀಕ್ಷಿಸುವ ಪ್ರೇಕ್ಷಕರ ಸಂಖ್ಯೆಯೇನು ಕಡಿಮೆಯಿಲ್ಲ. ಶರಣ್ ಸಹ ಈಗ ಸ್ಟಾರ್ ನಟರ ಸಾಲಿಗೆ ಸೇರಿದ್ದಾರೆ. ಈಗವರು ಸ್ಯಾಂಡಲ್ ವುಡ್ ನ ಮೋಸ್ಟ್ ಸೇಲಬಲ್ ಸ್ಟಾರ್.

ಅಧ್ಯಕ್ಷ ಚಿತ್ರದ ಬಳಿಕ ತನ್ನ ವಿಭಿನ್ನ ಪ್ರಚಾರ ಮೂಲಕ ಗಮನಸೆಳೆದ ಚಿತ್ರ 'ರಾಜ ರಾಜೇಂದ್ರ'. ಶರಣ್ ಚಿತ್ರಗಳೆಂದರೆ ಪ್ರೇಕ್ಷಕರು ನಿರೀಕ್ಷಿಸುವುದು ಹದಿನಾರಣೆ ಮನರಂಜನೆಯನ್ನು. ಈ ಬಾರಿಯೂ ಶರಣ್ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿ ಮಾಡಿಲ್ಲ ಎನ್ನುತ್ತವೆ ಚಿತ್ರ ವಿಮರ್ಶೆಗಳು. [ಕನ್ನಡ ಚಿತ್ರರಂಗದ ಮಿನಿ 'ವಜ್ರಮುನಿ' ಯಾರು ಹೇಳಿ..?]

ಶರಣ್ ಅವರ 39ನೇ ಹುಟ್ಟುಹಬ್ಬದಂದೇ ಚಿತ್ರ ಬಿಡುಗಡೆಯಾಗಿರುವುದು ಅವರ ಅಭಿಮಾನಿಗಳ ಪಾಲಿಗೆ ಡಬಲ್ ಧಮಾಕಾ. ಉದಯ್ ಮೆಹ್ತಾ ನಿರ್ಮಿಸಿರುವ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಪಿ. ಕುಮಾರ್. ಬನ್ನಿ ಯಾರು ಏನೆಂದರು ರಾಜ ರಾಜೇಂದ್ರನ ಬಗ್ಗೆ ನೋಡೋಣ.

ಹೊಟ್ಟೆತುಂಬ ನಗಬಹುದು: ಉದಯವಾಣಿ

ಹೊಟ್ಟೆತುಂಬ ನಗಬಹುದು: ಉದಯವಾಣಿ

ಇಲ್ಲಿ ಶರಣ್ ಅಭಿನಯದ ಬಗ್ಗೆ ಮಾತಾಡುವಂತಿಲ್ಲ. ಎಂದಿನ ಉತ್ಸಾಹ ಇಲ್ಲೂ ಮುಂದುವರೆದಿದೆ. ಎರಡು ಶೇಡ್ ನಲ್ಲೂ 'ರಾಜ'ನಂತೆಯೇ ಮೆರೆದಿದ್ದಾರೆ. ಕಾಮಿಡಿ ಟ್ರಾಕ್ ಬಿಟ್ಟು ಅತ್ತಿತ್ತ ಕದಲಿಲ್ಲ. ಇನ್ನು ಇಶಿತಾ ದತ್ತ, ವಿಮಲಾ ರಾಮನ್ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಾಮಕೃಷ್ಣ ಸಿನಿಮಾದ ಜೀವಾಳ ಎಂಬಂತೆ ನಟಿಸಿದ್ದಾರೆ. ರವಿಶಂಕರ್ ಮತ್ತದೇ ಖದರ್ ನಲ್ಲಿ ಮಿಂಚಿದ್ದಾರೆ.

ರಾಜನ ಕೊರಳಲ್ಲಿ ಬಾಟಲಿ ಮಣಿ: ವಿಜಯ ಕರ್ನಾಟಕ

ರಾಜನ ಕೊರಳಲ್ಲಿ ಬಾಟಲಿ ಮಣಿ: ವಿಜಯ ಕರ್ನಾಟಕ

ರಾಜ ರಾಜೇಂದ್ರ ಚಿತ್ರದಲ್ಲಿ ಶರಣ್, 'ನಾನು ಕಾಮಿಡಿ ಪೀಸ್ ನಿಜ. ಜನರು ನನ್ನನ್ನೂ ನಾಯಕನನ್ನಾಗಿ ಮಾಡಿದ್ದಾರೆ' ಎಂದು ವಿಲನ್ ಮುಂದೆ ಅಬ್ಬರಿಸುತ್ತಾರೆ. ಹೌದು, ಶರಣ್ ಅವರನ್ನು ಕನ್ನಡ ಚಿತ್ರ ಪ್ರೇಮಿಗಳು ನಾಯಕನನ್ನಾಗಿ ಮಾಡಿದ್ದಾರೆ. ಆದರೆ, ನಿರ್ದೇಶಕರು ಮಾತ್ರ ಅವರನ್ನು ರಾಜನನ್ನಾಗಿ ಪರಿವರ್ತಿಸಿ, ಅಭಿಮಾನಿಗಳಿಂದ ದೂರ ಮಾಡುವ ಹುನ್ನಾರು ನಡೆಸಿದ್ದಾರೆ. ಇಂಥದ್ದೊಂದು ಅನುಮಾನ 'ಜೈಲಲಿತಾ' ಸಿನಿಮಾದಿಂದ ಶುರುವಾಗಿತ್ತು 'ರಾಜ ರಾಜೇಂದ್ರ' ಚಿತ್ರದಿಂದ ಅದು ಖಚಿತವಾಗಿದೆ.

ಕಿಲಾಡಿ ದೆವ್ವದ ರಸಪ್ರಸಂಗಗಳು: ಪ್ರಜಾವಾಣಿ

ಕಿಲಾಡಿ ದೆವ್ವದ ರಸಪ್ರಸಂಗಗಳು: ಪ್ರಜಾವಾಣಿ

ಕಥೆ ಅಸಾಧಾರಣ ಎಂಬಂತೇನೂ ಇಲ್ಲ. ಭರಪೂರ ಹಾಸ್ಯ ನೀಡುವ ಶರಣ್‌, ಎರಡು ಛಾಯೆಗಳಲ್ಲಿ ಲೀಲಾ­ಜಾಲ­ವಾಗಿ ಅಭಿನಯಿಸಿ ಸಿನಿಮಾವನ್ನು ಮುಂದಕ್ಕೆ ಹೊತ್ತೊಯ್ಯುವ ಪೂರ್ಣ ಹೊಣೆ ಹೊತ್ತಿದ್ದಾರೆ. ತಮ್ಮ ವಿಶಿಷ್ಟ ಮ್ಯಾನರಿಸಂ­ನಿಂದ ಸಾಕಷ್ಟು ನಗಿಸುವ ಅವರು, ಸ್ವಾತಂತ್ರ್ಯಪೂರ್ವದ ರಾಜ ರಾಜೇಂದ್ರನ ಪಾತ್ರದಲ್ಲೂ ಅಷ್ಟೇ ಸಮರ್ಥ ಅಭಿನಯ ನೀಡಿ­ದ್ದಾರೆ.ಗ್ಲಾಮರ್‌ ಹಾಗೂ ನಟನೆಯಲ್ಲಿ ನಾಯಕಿ ಇಶಿತಾ ದತ್ತಾ ಹಿಂದೆ ಬಿದ್ದಿಲ್ಲ. ಉಳಿದ ಪಾತ್ರಗಳಿಗೆ ರಾಮ­ಕೃಷ್ಣ, ತಬಲಾ ನಾಣಿ, ಸಾಧುಕೋಕಿಲಾ, ರವಿಶಂಕರ್, ಸುಚೇಂದ್ರ ಪ್ರಸಾದ್ ಜೀವ ತುಂಬಿದ್ದಾರೆ. ಹಾಡುಗಳು ಸಂಗೀತ­ಕ್ಕಿಂತ (ಅರ್ಜುನ್‌ ಜನ್ಯ) ಸಿರಿವಂತಿಕೆ­ಯಿಂದಲೇ ಹೆಚ್ಚು ಗಮನಸೆಳೆಯುತ್ತವೆ.

ಶರಣ್ ರಾಜ ಭಾರ: ವಿಜಯವಾಣಿ

ಶರಣ್ ರಾಜ ಭಾರ: ವಿಜಯವಾಣಿ

ರಾಜರಾಜೇಂದ್ರ ರಾಜವಂಶದ ಕಥೆ. ರಾಜನಿಲ್ಲದ ಕಥೆಯೂ ಹೌದು. ಕಥೆಯಲ್ಲಿ ಫ್ರೆಶ್ ನೆಸ್ ಇಲ್ಲ ಎನ್ನುವುದಕ್ಕಿಂತ, ಕನ್ನಡದಲ್ಲೇ ಬಂದುಹೋರಿಉವ ಅದೆಷ್ಟೋ ಹಳಸಲು ವಿಷಯ. ಇನ್ನೂ ಸಿಂಪಲ್ ಆಗಿ ಹೇಳುವುದಾದರೆ, ಶರಣ್-ಕುಮಾರ್ ಜೋಡಿ ಈ ಹಿಂದೆ ನೀಡಿದ್ದ ಜೈಲಲಿತ ಸಿನಿಮಾವನ್ನೇ ಥಟ್ ಅಂತ ನೆನಪಿಸುತ್ತದೆ. ನಾಯಕ ಅಲ್ಲಿ ಹೆಣ್ಣಿನ ವೇಷ ತೊಟ್ಟರೆ, ಇಲ್ಲಿ ರಾಜಪೋಷಾಕು. ಚಿತ್ರದಲ್ಲಿ ಒಂದಷ್ಟು ಜಬರದಸ್ತ್ ಆಟವಾಡಲಾಗಿದೆ ಎನ್ನುವುದೇನೋ ನಿಜ; ದ್ವಿತೀಯಾರ್ಧದಲ್ಲಿ ಅದು ಹಾಸ್ಯ ಚಿತ್ರಗಳ ಲಾಜಿಕ್ ಅನ್ನೂ ಮೀರಿ, ವಾಹನ ನಿಯಂತ್ರಣ ಕಳೆದುಕೊಂಡಾ ಚಾಲಕನಂತಾಗಿದೆ ನಿರ್ದೇಶಕ ಕುಮಾರ್ ಸ್ಥಿತಿ.

ಹಿಸ್ ಹೈನೆಸ್ಸ್ ರಾಜ ರಾಜೇಂದ್ರ: ಕನ್ನಡಪ್ರಭ

ಹಿಸ್ ಹೈನೆಸ್ಸ್ ರಾಜ ರಾಜೇಂದ್ರ: ಕನ್ನಡಪ್ರಭ

'ಹಿಸ್ ಹೈನೆಸ್ಸ್ ಅಬ್ದುಲ್ಲ' 1990ರ ಮೋಹನ್ ಲಾಲ್ ಅಭಿನಯದ ಸಂಗೀತಮಯ ಸಿನೆಮಾ. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡು ಹಲವಾರು ಪ್ರಶಸ್ತಿಗಳನ್ನು ಪಡೆದ, ವಿಮರ್ಶಕರ ಮೆಚ್ಚುಗೆ ಪಡೆದ ಸಿನೆಮಾ ಇದು. ಇದರ ಕಥೆಯನ್ನೇ ಸಂಪೂರ್ಣ ನಕಲು ಮಾಡದೆ ಅತಿ ಕೆಟ್ಟ ರೀತಿಯಲ್ಲಿ ಕನ್ನಡಕ್ಕೆ ಅಳವಡಿಸಿಕೊಂಡಿದ್ದಾರೆ ನಿರ್ದೇಶಕ ಪಿ ಕುಮಾರ್. ಹಾಸ್ಯ ಎಂದಾಕ್ಷಣ ಎಲ್ಲ ತರ್ಕವನ್ನು-ಎಲ್ಲ ಸಾಮಾನ್ಯ ಲೋಕ ಜ್ಞಾನವನ್ನು ತ್ಯಜಿಸಿಬಿಡಬೇಕೆಂದೇನಿಲ್ಲ. ಆದರೆ ರಾಜರಾಜೇಂದ್ರ ಸಿನೆಮಾದಲ್ಲಿ ಆ ಲೋಕಜ್ಞಾನವನ್ನು ಕಡೆಗಣಿಸಿದ್ದಾರೆ.

English summary
Kannada movie 'Raja Rajendra' Critics review. The movie receives good response from media, unanimously praised by all the critics for its neat screenplay and direction with adequate performances by the lead characters.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more