For Quick Alerts
  ALLOW NOTIFICATIONS  
  For Daily Alerts

  ನಾ ನೋಡಿದ ಹೊಸ ತಂತ್ರಜ್ಞಾನದ 'ಓಂ' ಚಿತ್ರ: ಸೆನ್ಸಾರ್ ಉಲ್ಲಂಘನೆ

  By ಬಾಲರಾಜ್ ತಂತ್ರಿ
  |

  ಕನ್ನಡದ ಆಲ್ ಟೈಂ ಬ್ಲಾಕ್ ಬಸ್ಟರ್ ಚಿತ್ರಗಳಲ್ಲೊಂದಾದ 'ಓಂ' ಚಿತ್ರ ಡಿಜಲೀಕರಣಗೊಂಡು ಮತ್ತೆ ತೆರೆಗೆ ಬಂದಿದೆ. ಖೈದಿ, ಕಸ್ತೂರಿನಿವಾಸ ಚಿತ್ರದಂತೆ ಕನ್ನಡ ಸಿನಿರಸಿಕರು ಓಂ ಚಿತ್ರವನ್ನು ಹೃತ್ಪೂರ್ವಕವಾಗಿ ಬರಮಾಡಿಕೊಂಡಿದ್ದಾರೆ.

  ಮೇ 1995ರಲ್ಲಿ ಬಿಡುಗಡೆಯಾಗಿದ್ದ ಮೂಲ ಈ ಚಿತ್ರ recreated with 5.1 digital and DI ಟೆಕ್ನಾಲಜಿಯ ಮೂಲಕ ಮತ್ತೆ ರೀ-ರಿಲೀಸ್ ಆಗಿದೆ. ರಾಜ್ಯಾದ್ಯಂತ 175ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಶಿವಣ್ಣ, ಪ್ರೇಮಾ ಪ್ರಮುಖ ಭೂಮಿಕೆಯಲ್ಲಿರುವ ಓಂ ಚಿತ್ರವನ್ನು ರಿಯಲ್ ಸ್ಟಾರ್ ಉಪೇಂದ್ರ ಕಥೆ, ಚಿತ್ರಕಥೆ, ಡೈಲಾಗ್ ಹೆಣೆದು ನಿರ್ದೇಶಿಸಿದ್ದರು.

  ಹುಟ್ಟತ್ತಲೇ ಯಾರೂ ಕ್ರಿಮಿನಲ್ ಗಳಾಗುವುದಿಲ್ಲ, ಪರಿಸ್ಥಿತಿಯ ಒತ್ತಡ ಅವರನ್ನು ಕ್ರಿಮಿನಲ್ ಗಳಾಗುವಂತೆ ಮಾಡುತ್ತದೆ ಎನ್ನುವ ಸಂದೇಶವಿರುವ ಈ ಚಿತ್ರದಲ್ಲಿ ಬೆಂಗಳೂರು ಭೂಗತ ಲೋಕದ ರಿಯಲ್ ಡಾನ್ ಗಳು ನಟಿಸಿರುವುದು ವಿಶೇಷ.

  ರಾಜ್ ಕುಮಾರ್ ಹೋಂ ಬ್ಯಾನರಿನಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಬಿ ಸಿ ಗೌರೀಶಂಕರ್ ಕ್ಯಾಮರಾ ಹಿಡಿದಿದ್ದರೆ, ಹಂಸಲೇಖ ಸಂಗೀತ ನೀಡಿದ್ದಾರೆ. ಡಾ. ರಾಜ್ ಈ ಚಿತ್ರದ ಎರಡು ಹಾಡನ್ನು ಹಾಡಿರುವುದು ಚಿತ್ರದ ಮತ್ತೊಂದು ಪ್ರಮುಖಾಂಶ. (ಅಣ್ಣಾವ್ರ ಲುಕ್ ನಲ್ಲಿ ಪುನೀತ್)

  ಓಂ ಸಿನಿಮಾ ಈಗ ಸಣ್ಣ ವಿವಾದದಲ್ಲಿ ಸಿಲುಕಿದೆ. ಧೂಮಪಾನ, ಮದ್ಯಪಾನದ ದೃಶ್ಯಗಳು ಬಂದಾಗ ಜಾಗೃತಿ ಸಂದೇಶವನ್ನು ತೆರೆಯ ಮೇಲೆ ಕಡ್ದಾಯವಾಗಿ ಪ್ರದರ್ಶಿಸಬೇಕಾಗಿರುವುದು ಸೆನ್ಸಾರ್ ನಿಯಮ. ಆದರೆ, ಓಂ ಚಿತ್ರದಲ್ಲಿ ಇದರ ಸ್ಪಷ್ಟ ಉಲ್ಲಂಘನೆಯಾಗಿದೆ.

  ಚಿತ್ರದಲ್ಲಿ ಸಿಗರೇಟು ಹಚ್ಚುವ ಸ್ಲೋಮೋಷನ್ ಸೀನ್ ನೊಂದಿಗೆ ಶಿವಣ್ಣನ ಇಂಟ್ರಡಕ್ಷನ್ ಆಗುತ್ತದೆ. ಅಲ್ಲಿಂದ ಚಿತ್ರದ ಕ್ಲೈಮ್ಯಾಕ್ಸ್ ವರೆಗೆ ಎಷ್ಟೋ ಧೂಮಪಾನದ ದೃಶ್ಯಗಳು ಬಂದರೂ ಜಾಗೃತಿ ಸಂದೇಶದ ಸಾಲುಗಳು ಮಿಸ್ ಆಗಿದೆ. [ಓಂ ಚಿತ್ರದ ಟ್ರೈಲರ್]

  ಸೆನ್ಸಾರ್ ನಿಯಮದನ್ವಯ ಹಳೆಯ ಚಿತ್ರಗಳು ಮರುಬಿಡುಗಡೆಯಾದಾಗಲೂ ಇದನ್ನು ಪ್ರದರ್ಶಿಸುವುದು ಕಡ್ಡಾಯ. ಸೆನ್ಸಾರ್ ಮಂಡಳಿ ಈ ವಿಚಾರದಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

  ಚಿತ್ರದ ಪ್ರಮುಖ ಹೈಲೆಟ್ಸ್ ಮತ್ತು ಜನರ ಪ್ರತಿಕ್ರಿಯೆ ಚಿತ್ರದ ಬಗ್ಗೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

  ಚಿತ್ರದ ಒನ್ ಲೈನ್ ಕಥಾಸಾರಾಂಶ

  ಚಿತ್ರದ ಒನ್ ಲೈನ್ ಕಥಾಸಾರಾಂಶ

  ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವ ಮುಗ್ಧ ಶಿವರಾಜ್ ಕುಮಾರ್ (ಸತ್ಯಮೂರ್ತಿ ಶಾಸ್ತ್ರಿ ಆಲಿಯಾಸ್ ಸತ್ಯ) ಬದಲಾದ ಪರಿಸ್ಥಿತಿಯಲ್ಲಿ ಡಾನ್ ಆಗಿ ಭೂಗತಲೋಕವನ್ನು ಹೇಗೆ ತನ್ನ ಸುಪರ್ದಿಗೆ ತೆಗೆದುಕೊಂಡ? ಮತ್ತೆ ಇದರಿಂದ ಹೊರಬಂದು ಹೇಗೆ ನೆಮ್ಮದಿಯ ಬದುಕಿಗೆ ಜಾರಿದ? ಇದರ ಹಿಂದೆ ಈತನ ಪ್ರೇಯಸಿ ಪ್ರೇಮಾ (ಮಧು) ಪಾತ್ರವೇನು ಎನ್ನುವುದೇ ಚಿತ್ರದ ಕಥಾಸಾರಾಂಶ.

  ರಿಯಲ್ ಡಾನ್ ಗಳು

  ರಿಯಲ್ ಡಾನ್ ಗಳು

  ಬೆಕ್ಕಿನಕಣ್ಣು ರಾಜೇಂದ್ರ, ತನ್ವೀರ್, ಕೊರಂಗು, ಜೇಡ್ರಳ್ಳಿ ಮುಂತಾದ ರಿಯಲ್ ಡಾನ್ ಗಳು ಚಿತ್ರದಲ್ಲಿ ನಟಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ ನಡೆಯುವ ಆಯಿಲ್ ಮಿಕ್ಸಿಂಗ್ ದಂಧೆ ಮತ್ತು ರೌಡಿಗಳ ಅಡ್ಡಾವನ್ನು ಚಿತ್ರೀಕರಿಸಿದ ಶೈಲಿಗೆ ಉಪೇಂದ್ರ ಬೆನ್ನು ತಟ್ಟಲೇ ಬೇಕು.

  ಚಿತ್ರದ ಕೆಲವೊಂದು ಡೈಲಾಗುಗಳು

  ಚಿತ್ರದ ಕೆಲವೊಂದು ಡೈಲಾಗುಗಳು

  ಬ್ರಾಹ್ಮಣ ಅಲ್ವಾ ನೀವು, ಅದು ಲಾಂಗ್ ಹಿಡಿಯೋಕೆ ಮುಂಚೆ, ಲಾಂಗ್ ಹಿಡಿದ ಮೇಲಲ್ಲ
  ಮೂಗು ಮುಚ್ಚಿಕೊಂಡು ಸಂಧ್ಯಾವಂದನೆ ಮಾಡುವವರು ರೌಡಿಯಾದರೆ ಇನ್ನೇನು ಆಗುತ್ತೆ
  ಪುಳ್ಚಾರ್ ಗಳೆಲ್ಲಾ ಲಾಂಗ್ ಹಿಡಿದರೆ ದೇಶದ ಗತಿಯೇನು?

  ಶಿವಣ್ಣ ಅಭಿನಯ

  ಶಿವಣ್ಣ ಅಭಿನಯ

  ಮುಗ್ಧ ಸತ್ಯ ಶಾಸ್ತ್ರಿ ಮತ್ತು ಡಾನ್ ಸತ್ಯ ಈ ಎರಡು ಶೇಡಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯ, ಬಾಡಿ ಲಾಂಗ್ವೇಜ್ ಫಂಟಾಸ್ಟಿಕ್. ಚಿತ್ರ ಶುರುವಾಗಿ ಹದಿನೈದು ನಿಮಿಷದ ನಂತರ ಎಂಟ್ರಿ ಕೊಡುವ ಶಿವಣ್ಣ , ಕ್ಲೈಮ್ಯಾಕ್ಸ್ ವರೆಗಿನ ಎರಡು ಶೇಡಿನಲ್ಲಿನ ಇವರ ನಟನೆಗೆ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಯ ಮಹಾಪೂರವೇ ಹರಿದು ಬರುತ್ತದೆ.

  ಕೋಮಾ..ಕೋಮಾ

  ಕೋಮಾ..ಕೋಮಾ

  ಚಿತ್ರದ ಕೋಮಾ ಕೋಮಾ ಹಾಡಿಗೆ ಇಡೀ ಚಿತ್ರಮಂದಿರ ಧ್ವನಿಗೂಡಿಸುತ್ತಿದ್ದರೆ, ಮೆಹಬೂಬ ಹಾಡಿಗೆ ಅರ್ದದಷ್ಟು ಜನ ಪರದೆಯ ಮುಂದೆ ಕುಣಿದಾಡುತ್ತಿರುವುದು ಚಿತ್ರಮಂದಿರದಲ್ಲಿ ಕಂಡುಬರುತ್ತಿತ್ತು. ಕೆಲವೊಮ್ಮೆ ಚಿತ್ರದ ಸಂಭಾಷಣೆಯೇ ಕೇಳಿಸದಂತೆ ಶಿವಣ್ಣ ಮತ್ತು ಉಪೇಂದ್ರ ಹೆಸರಿನಲ್ಲಿ ಜೈಕಾರ ಮೊಳಗುತ್ತಿತ್ತು.

  ಉಪೇಂದ್ರ ನಿರ್ದೇಶಕನಾಗಿದ್ದರನೇ ಚೆಂದ

  ಉಪೇಂದ್ರ ನಿರ್ದೇಶಕನಾಗಿದ್ದರನೇ ಚೆಂದ

  ಉಪೇಂದ್ರ ಒಬ್ಬ ಕ್ರಿಯೆಟೀವ್ ನಿರ್ದೇಶಕ. ಅವರು ನಟನೆಗೆ ಬರದೇ ನಿರ್ದೇಶಕನಾಗಿಯೇ ಮುಂದುವರಿದಿದ್ದರೆ ಕನ್ನಡ ಚಿತ್ರರಂಗ ಎಲ್ಲೋ ಇರುತ್ತಿತ್ತು ಎನ್ನುವ ಮಾತು ಸಿನಿಮಾ ನೋಡಿ ಹೊರಬಂದ ಹೆಚ್ಚಿನ ಸಿನಿಪ್ರೇಮಿಗಳ ಮಾತು.

  ಇತರ ಕಲಾವಿದರು

  ಇತರ ಕಲಾವಿದರು

  ನಾಯಕಿಯಾಗಿ ಪ್ರೇಮಾ, ಪತ್ರಕರ್ತೆಯಾಗಿ ಶ್ರೀಶಾಂತಿ, ಕೋಟೆ ಪ್ರಭಾಕರ್, ಹೊನ್ನವಳ್ಳಿ ಕೃಷ್ಣ, ವಿ ಮನೋಹರ್, ಸಾಧು ಕೋಕಿಲ, ಅರವಿಂದ್, ಹರೀಶ್ ಮುಂತಾದವರ ನಟನೆ ಚೆನ್ನಾಗಿದೆ. ಚಿತ್ರದ ಹಿನ್ನಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದರೆ, ಫೋಟೋಗ್ರಾಫಿ ಅದ್ಭುತವಾಗಿ ಮೂಡಿಬಂದಿದೆ.

  ಆದರೆ ನೀವೂ ನೋಡಿ

  ಆದರೆ ನೀವೂ ನೋಡಿ

  ಮುಗ್ದನೊಬ್ಬ ಹೇಗೆ ರೌಡಿಯಾಗುತ್ತಾನೆ ಮತ್ತು ತನ್ನ ಪ್ರೇಯಸಿಯ ಮಾತಿಗೆ ಬೆಲೆಕೊಟ್ಟು ಹೇಗೆ ಸಾಮಾನ್ಯನಾಗಿ ಬದುಕಲಾರಂಭಿಸುತ್ತಾನೆ ಎನ್ನುವ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನೋಡಿಲ್ಲಾಂದ್ರೆ, ಒಮ್ಮೆ ಸಾಧ್ಯವಾದರೆ ನೋಡಿ. It's worth watching.

  English summary
  Kannada Movie review of Shivaraj Kumar starer, Upendra directorial OM. Movie re-released on March 12 across state in around 175+ theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X