twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: 'ರೋಸ್' ಸೀದಾಸಾದಾ ಲವ್ ಸ್ಟೋರಿ

    |

    ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವ್ ಸ್ಟೋರಿ. ಅಜಯ್ ರಾವ್ ಹಾಗೂ ಶ್ರಾವ್ಯಾ ತಮ್ಮತಮ್ಮ ಪಾತ್ರಗಳಿಗೆ ಶೇಕಡಾ ಎಪ್ಪತ್ತೈದರಷ್ಟು ನ್ಯಾಯ ಸಲ್ಲಿಸಿದ್ದಾರೆ. ಈ ಸಿಂಪಲ್ ಲವ್ ಸ್ಟೋರಿಗೆ ಸಂಭಾಷಣೆ ಸಾಧಾರಣವಾಗಿದ್ದು ಪ್ರೇಕ್ಷಕರನ್ನು ತೀರಾ ಕಾಡುವಂತೇನು ಇಲ್ಲ.

    ಸೀದಾಸಾದಾ ಕಥೆಗೆ ಅನಿರೀಕ್ಷಿತ ತಿರುವುಗಳನ್ನು ಕೊಡುವ ಮೂಲಕ ಪ್ರೇಕ್ಷಕರು ಸಹನೆಯಿಂದ ಚಿತ್ರವನ್ನು ನೋಡುವಂತೆ ಮಾಡಿದ್ದಾರೆ ನಿರ್ದೇಶಕರು. ರೊಮ್ಯಾಂಟಿಕ್ ಚಿತ್ರಗಳನ್ನು ಇಷ್ಟಪಡುವವರ ಮನಸ್ಥಿತಿಯನ್ನು ನಿರ್ದೇಶಕರು ಚೆನ್ನಾಗಿ ಅರಿತಿರುವಂತಿದೆ.

    ಚಿತ್ರದಲ್ಲಿನ ಕೆಲವೊಂದು ಸನ್ನಿವೇಶಗಳು ಕೌಟುಂಬಿಕ ಚಿತ್ರಗಳನ್ನು ಬಯಸುವ ಪ್ರೇಕ್ಷಕರಿಗೆ ಇರಿಸುಮುರಿಸು ಮಾಡಿದರೂ, ಕೊನೆಗೆ ಪ್ರೀತಿಯ ರಾಯಭಾರಿಯಾಗಿ ರೋಜ್ ಚಿತ್ರ ಇಷ್ಟವಾಗುತ್ತದೆ. ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ...

    Rating:
    2.0/5
    Star Cast: ಅಜಯ್ ರಾವ್, ಶ್ರಾವ್ಯಾ, ಚಂದ್ರಶೇಖರ್
    Director: ಸಹನಾ ಎಚ್ ಎಸ್

    ಮೊದಲರ್ಧ ನಿಧಾನ, ದ್ವಿತೀಯಾರ್ಧ ಪ್ರಧಾನ

    ಮೊದಲರ್ಧ ನಿಧಾನ, ದ್ವಿತೀಯಾರ್ಧ ಪ್ರಧಾನ

    ಚಿತ್ರದ ಮೊದಲರ್ಧ ನಿಧಾನಗತಿಯಲ್ಲಿ ಸಾಗಿದರೆ ದ್ವಿತೀಯಾರ್ಧ ಹಲವು ಅನಿರೀಕ್ಷಿತ ತಿರುವುಗಳ ಮೂಲಕ ವೇಗವನ್ನು ಪಡೆದುಕೊಳ್ಳುತ್ತದೆ. ಪಕ್ಕದ ಮನೆ ಹುಡುಗಿಯನ್ನು ಪ್ರೀತಿಸುವ ನಾಯಕ ನಟನಿಗೆ ಹುಡುಗಿ ಮನೆಯವರ ಕಡೆಯಿಂದ ವಿರೋಧ ವ್ಯಕ್ತವಾಗುತ್ತದೆ.

    ಪ್ರೀತಿಯ ರಾಯಭಾರಿ ಆಗುತ್ತಾನಾ ನಾಯಕ

    ಪ್ರೀತಿಯ ರಾಯಭಾರಿ ಆಗುತ್ತಾನಾ ನಾಯಕ

    ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ನಾಯಕ ಜೈಲು ಪಾಲಾಗುತ್ತಾನೆ. ಅಲ್ಲಿಂದ ಪರಾರಿಯಾಗಲು ಯತ್ನಿಸಿ ಕೊನೆಗೆ ತನ್ನ ಪ್ರೀತಿಯನ್ನು ಗೆಲ್ಲುತ್ತಾನಾ ಎಂಬುದೇ ಚಿತ್ರದ ಸಾರ. ಮೊದಲರ್ಧದ ಕಥೆ ಕೇವಲ ಪ್ರೀತಿ ಪ್ರೇಮ ಅದರ ಸಮಸ್ಯೆಗಳು, ಕಿರಿಕಿರಿಗಳಲ್ಲೇ ಕಳೆದುಹೋಗುತ್ತದೆ.

    ಹೃದಯ ಗೆಲ್ಲುವ ಅಜಯ್, ಶ್ರಾವ್ಯಾ

    ಹೃದಯ ಗೆಲ್ಲುವ ಅಜಯ್, ಶ್ರಾವ್ಯಾ

    ಅಜಯ್ ರಾವ್ ಹಾಗೂ ಶ್ರಾವ್ಯಾ ಅವರು ಪ್ರೇಮಿಗಳಾಗಿ ಪ್ರೇಕ್ಷಕರ ಹೃದಯ ಗೆಲ್ಲುತ್ತಾರೆ. ಅವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಯಾರೂ ಚಕಾರವೆತ್ತುವಂತಿಲ್ಲ. 'ರೋಸ್' ಚಿತ್ರವನ್ನ ಪ್ರೇಮಿಗಳು ಒಮ್ಮೆ ನೋಡಬಹುದು.

    ಚಿತ್ರದಲ್ಲಿ ಕಾಮಿಡಿಗೆ ವಿಶೇಷ ಪ್ರಾಮುಖ್ಯತೆ

    ಚಿತ್ರದಲ್ಲಿ ಕಾಮಿಡಿಗೆ ವಿಶೇಷ ಪ್ರಾಮುಖ್ಯತೆ

    ಇನ್ನು ಸಾಧುಕೋಕಿಲ ಹಾಗೂ ಬುಲೆಟ್ ಪ್ರಕಾಶ್ ಅವರ ಕಾಮಿಡಿಯೂ ವರ್ಕ್ ಔಟ್ ಆಗಿದೆ. ಮೊದಲರ್ಧದಲ್ಲಿ ವಿಶೇಷವಾಗಿ ಹೇಳಿಕೊಳ್ಳುವಂತಹದ್ದು ಏನೂ ಇಲ್ಲದಿದ್ದರೂ ದ್ವಿತೀಯಾರ್ಧದಲ್ಲಿ ಹೇಳಿಕೊಳ್ಳುವಂತಹದ್ದು ಸಾಕಷ್ಟಿದೆ.

    ಗಮನಸೆಳೆಯುವ ಸಾಯಿಕುಮಾರ್ ಪಾತ್ರ

    ಗಮನಸೆಳೆಯುವ ಸಾಯಿಕುಮಾರ್ ಪಾತ್ರ

    ಜೈಲರ್ ಪಾತ್ರದಲ್ಲಿ ಸಾಯಿ ಕುಮಾರ್ ಅವರ ಪಾತ್ರ ಚಿತ್ರಕ್ಕೆ ಇನ್ನಷ್ಟು ಮೌಲ್ಯವನ್ನು ತಂದಿದೆ. ಚಿತ್ರದಲ್ಲಿನ ಹಾಡುಗಳು ಇಂಪಾಗಿದ್ದು (ಅನೂಪ್ ಸೀಳಿನ್ ಸಂಗೀತ) ಛಾಯಾಗ್ರಹಣ ಕಣ್ಣಿಗೆ ತಂಪೆರೆಯುತ್ತದೆ. ಪ್ರೇಮಿಗಳಿಗೆ ಖಂಡಿತ ನಿರಾಸೆಪಡಿಸಲ್ಲ ರೋಸ್.

    English summary
    Kannada movie Rose review. The storyline is very simple and dialogue delivery is average. Rose is an average movie, which the audience will not remember for a long time.
    Saturday, September 29, 2018, 18:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X