»   » ವಿಮರ್ಶಕರು 'ಸಿದ್ದಾರ್ಥ'ನನ್ನ ಮೆಚ್ಚಿದ್ದಾರಾ? ಇಲ್ಲಿ ಓದಿ..

ವಿಮರ್ಶಕರು 'ಸಿದ್ದಾರ್ಥ'ನನ್ನ ಮೆಚ್ಚಿದ್ದಾರಾ? ಇಲ್ಲಿ ಓದಿ..

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಸಿದ್ದಾರ್ಥ' ಬಿಡುಗಡೆಯಾಗುವುದಕ್ಕೂ ಮುನ್ನ 'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ಸಂದರ್ಶನದಲ್ಲಿ ವಿನಯ್ ರಾಜ್ ಕುಮಾರ್ ಒಂದು ಮಾತು ಹೇಳಿದ್ದರು - ''ಕನ್ನಡ ಜನ ನನ್ನನ್ನ ಸ್ವೀಕರಿಸಿದರೆ, ನನ್ನ ಕನಸು ನನಸಾದ ಹಾಗೆ'' ಅಂತ.

  ಇದೇ ಸಂದರ್ಭದಲ್ಲಿ, ''ಸಿನಿಮಾ ನೋಡುತ್ತಿರುವ ಪ್ರತಿಯೊಬ್ಬರಿಗೂ ನಾನೇ 'ಸಿದ್ದಾರ್ಥ' ಅಂತ ಅನಿಸಬೇಕು. ವಿನಯ್ ಗೆ ಬಿಲ್ಡಪ್ ಕೊಟ್ಟಿಲ್ಲ. ಇದು ಸಿಂಪಲ್ ಸಿನಿಮಾ. ನನ್ನ ಮಗನಿಗೆ ಇಷ್ಟು ಸಾಕು'' ಅಂತ ಸಂದರ್ಶನದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಮಗೆ ತಿಳಿಸಿದ್ದರು.


  ಬಿಡುಗಡೆಗೂ ಮುನ್ನ ಇದ್ದ ಕಾತರ, ಕಳವಳ ಇದೀಗ ರಾಘಣ್ಣ ಮತ್ತು ವಿನಯ್ ಗೆ ಕಳೆದಿದೆ. 'ಸಿದ್ದಾರ್ಥ' ಚಿತ್ರ ರಿಲೀಸ್ ಆಗಿದೆ. ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರಂತೂ 'ಸಿದ್ದಾರ್ಥ'ನಿಗೆ ಜೈ ಕಾರ ಹಾಕಿದ್ದಾರೆ. ಆದರೆ, ವಿಮರ್ಶಕರು 'ಸಿದ್ದಾರ್ಥ'ನನ್ನ ಮೆಚ್ಚಿದ್ದಾರಾ..? ['ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ]


  ''ಕನ್ನಡ ಪ್ರೇಕ್ಷಕರು ನನ್ನನ್ನ ಸ್ವೀಕರಿಸಬೇಕು'' ಅನ್ನುವ ವಿನಯ್ ಹಂಬಲ ಈಡೇರಿದ್ಯಾ.? ರಾಘಣ್ಣನ ನಿರ್ಧಾರ ಸಿನಿ ವಿಮರ್ಶಕರಿಗೆ ತೃಪ್ತಿ ನೀಡಿದ್ಯಾ..? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 'ಸಿದ್ದಾರ್ಥ' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ಪತ್ರಿಕೆಗಳು ನೀಡಿರುವ ವಿಮರ್ಶೆ ಇಲ್ಲಿದೆ. ಮುಂದೆ ಓದಿ.....


  ಭರವಸೆಯ ಪಸೆ - ಪ್ರಜಾವಾಣಿ

  ಡಾ.ರಾಜ್ ಕುಮಾರ್ ಕುಟುಂಬದ ಮೂರನೇ ಪೀಳಿಗೆ ನಟ ವಿನಯ್ ರಾಜ್ ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ 'ಸಿದ್ದಾರ್ಥ' ಗಮನ ಸೆಳೆಯುವುದು ಸರಳ ಕಥೆ ಮತ್ತು ನಿರೂಪಣೆಯಿಂದ. ಯುವ ಮನಸ್ಸಿನ ಕನವರಿಕೆಗಳನ್ನು ಬಿಂಬಿಸುವ ಚಿತ್ರ, ವಾಸ್ತವಕ್ಕೂ ಹತ್ತಿರ. ಯುವ ಜನರ ಗೆಳೆತನ, ಸಂಭ್ರಮ, ಪ್ರೀತಿ ಸಂಪಾದಿಸಲು ನಡೆಸುವ ಸಾಹಸ, ಉತ್ಕಟ ಪ್ರೇಮ, ಅನುಮಾನ, ಪೊಸೆಸಿವ್ ನೆಸ್..ಹೀಗೆ ಹಲವು ಭಾವದ ಆಯಾಮಗಳನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ ನಿರ್ದೇಶಕ ಪ್ರಕಾಶ್ ಜಯರಾಮ್.


  'ಗಿವ್ ಮೀ ಎ ಬ್ರೇಕ್!' ಎಂಬ ಅಡಿ ಶೀರ್ಷಿಕೆ ಹೊಸ ನಾಯಕ ಪ್ರೇಕ್ಷಕನಲ್ಲಿ ಮಾಡುವ ಕೋರಿಕೆಯೂ ಹೌದು, ಕಥನಕ್ಕೆ ತಿರುವು ನೀಡುವ ಪ್ರಮುಖ ಘಟ್ಟವೂ ಹೌದು. ಆ ಕೋರಿಕೆಯನ್ನು ಒಪ್ಪಿಕೊಳ್ಳುವಂತಹ ಚಿತ್ರವಾಗಿ 'ಸಿದ್ದಾರ್ಥ ಮೂಡಿಬಂದಿದೆ. ವಿನಯ್ ರಾಜ್ ಕುಮಾರ್ ಹೊಸ ಪೀಳಿಗೆಯ ನಾಯಕನಟರಾಗಿ ಭರವಸೆ ಮೂಡಿಸಿದ್ದಾರೆ. ಅಪೂರ್ವ ಅರೋರಾ ಅಭಿನಯ ನಗು ಎರಡರಲ್ಲಿಯೂ ಇಷ್ಟವಾಗುತ್ತಾರೆ. (ಇನ್ನಷ್ಟು ಇಲ್ಲಿ ಓದಿ)
  - ಅಮಿತ್.ಎಂ.ಎಸ್


  ಹೊಸ ತಲೆಮಾರಿನ ಲವಲವಿಕೆಯ ಪ್ರೇಮಕಥೆ - ಉದಯವಾಣಿ

  "ಸಿದ್ಧಾರ್ಥ' ಚಿತ್ರವನ್ನು ಒಂದೇ ಲೈನ್‌ನಲ್ಲಿ ಹೇಳಬೇಕಾದರೆ ಯೂತ್ ಎಂಟರ್‌ಟೈನರ್. ಇಂದಿನ ಯೂತ್ಸ್ಗೆ ಏನು ಬೇಕೋ ಅದನ್ನು ಕೊಡಲು ನಿರ್ದೇಶಕ ಪ್ರಕಾಶ್‌ ಜಯರಾಮ್‌ ಪ್ರಯತ್ನಿಸಿದ್ದಾರೆ ಮತ್ತು ಆ ಪ್ರಯತ್ನ ಇಷ್ಟವಾಗುತ್ತದೆ ಕೂಡಾ. ಇಲ್ಲಿ ಏನಿದೆ ಎಂದರೆ ಪ್ರೀತಿಯಿದೆ, ಸ್ನೇಹವಿದೆ, ತಂದೆ-ಮಕ್ಕಳ ಬಾಂಧವ್ಯವಿದೆ, ಗುರಿ ಮುಟ್ಟೋ ಛಲವಿದೆ, ಫುಲ್ ಪ್ಯಾಕ್ ಆಕ್ಷನ್ ಎಂಟರ್‌ಟೈನ್ಮೆಂಟ್ ಇದೆ, ವೇಗವಾಗಿ ಸಾಗುವ ನಿರೂಪಣೆಯಿದೆ. ಒಂದು ಸಿನಿಮಾದಲ್ಲಿ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸುವುದು ಕೂಡಾ ತಪ್ಪಾದಿತು.


  ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ವಿನಯ್ ರಾಜ್‌ಕುಮಾರ್‌ ಸಿದ್ಧಾರ್ಥನಾಗಿ ಇಷ್ಟವಾಗುತ್ತಾರೆ. ನೇರವಂತಿಕೆಯ ಲವರ್‌ ಬಾಯ್‌ ಆಗಿ, ಹೊಡೆದಾಟಕ್ಕೆ ಹಿಂದೇಟು ಹಾಕದ ಆಕ್ಷನ್ ಸಿದ್ಧುವಾಗಿ ವಿನಯ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಅಪೂರ್ವ "ಖುಷಿ ಖುಷಿ'ಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್‌ ಇಲ್ಲಿ ಫ್ರೆಂಡ್ಲಿ ಡ್ಯಾಡ್. ಉಳಿದಂತೆ ಆಶೀಶ್ ವಿದ್ಯಾರ್ಥಿ, ಅಶ್ವಿನಿ, ನಯನಾ, ಅಲೋಕ್ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಡುಗಳು ಚಿತ್ರಕ್ಕೆ ಪೂರಕ. ಅದನ್ನು ಛಾಯಾಗ್ರಾಹಕ ಕೃಷ್ಣಕುಮಾರ್‌ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕಾದರೆ, "ಸಿದ್ಧಾರ್ಥ' ಒಂದು ಫುಲ್ ಪ್ಯಾಕ್ಡ್ ಎಂಟರ್‌ಟೈನ್ಮೆಂಟ್ ಸಿನಿಮಾ. (ಇನ್ನಷ್ಟು ಇಲ್ಲಿ ಓದಿ)


  - ರವಿಪ್ರಕಾಶ್ ರೈ


  ಅಣ್ಣಾವ್ರ ಬ್ಯಾನರ್ ನ ಚೆಂದದ ಚಿತ್ರ - ವಿಜಯ ಕರ್ನಾಟಕ

  ಡಾ.ರಾಜ್ ಕುಮಾರ್ ಬ್ಯಾನರ್ ಸಿನಿಮಾಗಳೆಂದರೆ ಒಳ್ಳೆಯ ಸಿನಿಮಾಗಳು ಎಂದರ್ಥ. ಇಡೀ ಕುಟುಂಬ ಮುಜುಗರವಿಲ್ಲದೆ ನೋಡಬಹುದು. 'ಸಿದ್ದಾರ್ಥ' ಚಿತ್ರ ನೋಡಿದ ನಂತರವಂತೂ ಆ ಮಾತು ಸತ್ಯವೆನಿಸುತ್ತದೆ. ಅಣ್ಣಾವ್ರ ಮೊಮ್ಮಗ ಸಿನಿಮಾದಲ್ಲಿ ಹೇಗೆ ಕಾಣಬಹುದು? ಹೇಗೆ ನಟಿಸಿರಬಹುದೆಂಬ ಪ್ರಶ್ನೆಗೆ ನಿರ್ದೇಶಕ ಪ್ರಕಾಶ್, ಹೀರೋ ವಿನಯ್ ದಿಟ್ಟ ಉತ್ತರ ಕೊಟ್ಟಿದ್ದಾರೆ. ವಯಸ್ಸಿಗೆ ತಕ್ಕ ಕತೆ, ರಾಜ್ ಬ್ಯಾನರ್ ಹೆಸರು ಇರುವುದರಿಂದ ಭರವಸೆ ನಾಯನ ನಟನಾಗಿ ಹೊರ ಹೊಮ್ಮಿದ್ದಾರೆ ವಿನಯ್. ಡೈಲಾಗ್ ಡೆಲಿವರಿಯಲ್ಲಿ ಇನ್ನಷ್ಟು ಸ್ಪಷ್ಟತೆ ಬೇಕಿತ್ತು. ಅಪೂರ್ವ ಅರೋರಾ ಮುದ್ದಾಗಿ ಕಾಣಿಸುತ್ತಾರೆ. ಹರಿಕೃಷ್ಣ ಸಂಯೋಜಿಸಿರುವ ಹಾಡುಗಳು ಇಷ್ಟವಾಗುತ್ತವೆ. ಒಟ್ಟಿನಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳಿಗೆ 'ಸಿದ್ದಾರ್ಥ' ಸಿನಿಮಾ ನಿರಾಸೆ ಮಾಡುವುದಿಲ್ಲ.
  - ಎಚ್.ಮಹೇಶ್


  ಸ್ನೇಹ+ಪ್ರೀತಿ+ಖುಷಿ=ಸಿದ್ದಾರ್ಥ - ವಿಜಯವಾಣಿ

  ಪ್ರೇಕ್ಷಕ ಮೈಮುರಿಯದಂತೆ ನೋಡಿಸಿಕೊಂಡು ಹೋಗುವ ಗುಣ 'ಸಿದ್ದಾರ್ಥ' ಚಿತ್ರಕ್ಕಿದೆ. ಇದಕ್ಕೆ ಪೂರಕವಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ ವಿನಯ್. ಕೆಲ ಸಣ್ಣಪುಟ್ಟ ತಪ್ಪು ತಿದ್ದಿಕೊಂಡರೆ, ವಿನಯ್ ಭವಿಷ್ಯದ ತಾರೆ ಆಗುವುದರಲ್ಲಿ ಸಂದೇಹ ಬೇಡ. ನೃತ್ಯ-ಸಾಹಸ ಎರಡಕ್ಕೂ ಸೈ ಎನಿಸುವ ಅವರು, ತುಸು ಗಂಭೀರವಾಗಿಯೇ ಹಾಸ್ಯಪ್ರಜ್ಞೆ ಮೆರೆದಿದ್ದಾರೆ. ಅಪೂರ್ವ 'ಖುಷಿ'ಯಾಗಿಯೇ ನಟಿಸಿದ್ದಾರೆ.


  ವಂಶದ ಕುಡಿಯೊಂದು ಹುಟ್ಟಿದಾಗ, ಅದನ್ನು ಕಣ್ತುಂಬ ನೋಡಿದವರು 'ಥೇಟ್ ತಾತನಂತೆಯೇ ಇದ್ದಾನೆ', 'ಅಪ್ಪನಂತೆಯೇ ಇದ್ದಾನೆ', 'ದೊಡ್ಡಪ್ಪ-ಚಿಕ್ಕಪ್ಪನನ್ನು ಹೋಲುತ್ತಾನೆ' ಎಂಬಿತ್ಯಾದಿಯಾಗಿ ಸಮೀಕರಿಸುವುದು ಸಹಜ. ಈ ಸಮೀಕರಣಗಳನ್ನು ಮೀರಿ ಆ ಮಗು ತನ್ನತನ ಉಳಿಸಿಕೊಂಡಿರುತ್ತದೆ. 'ಸಿದ್ದಾರ್ಥ'ನನ್ನು ನೋಡುತ್ತ ಹತ್ತು ಹಲವು ಚಿತ್ರಗಳ ನೆನಪಾಗಬಹುದು. ಬಟ್, 'ಸಿದ್ದಾರ್ಥ'ನನ್ನು 'ಸಿದ್ದಾರ್ಥ'ನಾಗಷ್ಟೇ ನೋಡಿದಾಗ ಮಾತ್ರ ತಾಜಾನುಭವ!


  - ರಾಜಶೇಖರಮೂರ್ತಿ


  ಪ್ರಸಿದ್ಧನಾಗಲು ಸಿದ್ಧನಾಗಬೇಕು ಸಿದ್ದಾರ್ಥ - ಕನ್ನಡಪ್ರಭ

  ಸಿದ್ಧಾರ್ಥನಾಗಿರುವ ವಿನಯ್ ರಾಜಕುಮಾರ್ ಅವರಿಗೆ ಕಾಲೇಜು ಹುಡುಗನ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಕೊರತೆ ಎದ್ದು ಕಾಣುತ್ತದೆ. ಈ ಹಿಂದೆ ತಮ್ಮ ಕುಟುಂಬದ ಸದಸ್ಯರು ತಮ್ಮ ಮೊದಲನೇ ಸಿನೆಮಾದಲ್ಲೇ ನೀಡಿದ್ದ ಉತ್ತಮ ನಟನೆಯ ಗಂಧಗಾಳಿಯೂ ವಿನಯ್ ರಾಜ್ ಕುಮಾರ್ ಅವರನ್ನು ಸೋಕದೆ ಇರುವುದು ಸೋಜಿಗ!


  ನಾಯಕ ನಟಿಯಾಗಿ ಅಪೂರ್ವಾ ಅರೋರಾ ಅವರ ನಟನೆ ಸುಮಾರು ಎನ್ನಬಹುದು! ಬುದ್ಧನಾದ ಸಿದ್ಧಾರ್ಥನಾಗಲೀ ಅಥವಾ ಹರ್ಮನ್ ಹೆಸ್ ನ ಕಾದಂಬರಿಯಾಗಲಿ ಅಥವಾ ನಟರಾಗಿ ವರನಟ ರಾಜಕುಮಾರ್ ಆಗಲಿ ಜನಮಾನಸದ ನಡುವೆ ಕ್ಲಾಸಿಕ್ ಆಗಿ, ಅಜರಾಮರರಾಗಿ ಉಳಿದಿದ್ದು ಅವರ ಪರಿಶ್ರಮ ಮತ್ತು ಸಿದ್ದತೆಯಿಂದಲೆ! ಇವರಿಂದ ಈ ಸಿದ್ಧಾರ್ಥ ಕಲಿಯುವುದು ಬಹಳಷ್ಟಿದೆ. ಈ ಸಿದ್ಧಾರ್ಥ ಮುಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರೋದ್ಯಮದ ಬುದ್ಧನಾಗಲಿ ಎಂದು ಆಶಿಸೋಣ! (ಇನ್ನಷ್ಟು ಇಲ್ಲಿ ಓದಿ)
  -ಗುರುಪ್ರಸಾದ್


  'ಸಿದ್ದಾರ್ಥ' ವಿಮರ್ಶೆ: ಟೈಮ್ಸ್ ಆಫ್ ಇಂಡಿಯಾ

  Why Sidhartha is of special interest is because it marks the Sandalwood debut of Vinay Rajkumar, grandson of thespian Rajkumar. And the lad is anything but disappointing. Love being the central theme, the film traces the journey of a young couple who parts ways because of a trivial spat.


  Full marks to Vinay Rajkumar for pulling off the role of the lover boy with elan. Apoorva Arora is impressive when it comes to dialogue delivery and expressions. A V Krishnakumar's cinematography's is brilliant, especially shots captured in foreign locales. Harikrishna's tunes are catchy. Dialogues by Raghu Samarth are good. (ಇನ್ನಷ್ಟು ಇಲ್ಲಿ ಓದಿ)


  - ಜಿ.ಎಸ್.ಕುಮಾರ್


  'ಸಿದ್ದಾರ್ಥ' ವಿಮರ್ಶೆ: ಬ್ಯಾಂಗಲೋರ್ ಮಿರರ್

  Siddhartha is not just another film; it's is the high-profile debut of a new generation from the illustrious Rajkumar family. Vinay jumps into the expected career path. However, despite all the hype built around the film, it seems like a soft launch. There is no exaggeration of heroism that one would associate in the debut of a star-son. Siddhartha is a romantic comedy that combines drama and characters of a new-age family.


  It may not be a dream role for Vinay, but there is enough scope for the greenhorn to showcase all the skills an Indian film demands vis-a-vis dancing and fighting. He does a decent job in both but his acting has some teething troubles. (ಇನ್ನಷ್ಟು ಇಲ್ಲಿ ಓದಿ)


  - ಶ್ಯಾಮ್ ಪ್ರಸಾದ್


  English summary
  Dr.Rajkumar's grand son Vinay Rajkumar starrer Kannada movie 'Siddhartha' has has received good response from the critics. Here is the collection of reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more