»   » 'ವಿರಾಟ್' ವೀರಾವೇಷಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

'ವಿರಾಟ್' ವೀರಾವೇಷಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

Posted By:
Subscribe to Filmibeat Kannada

ಅಬ್ಬರದ ಡೈಲಾಗ್ಸ್, ಹೊಡಿ-ಬಡಿ ಅನ್ನೋ ಕಾಮನ್ ರೂಲ್ಸ್, ಊಟಕ್ಕೆ ನೆಂಚಿಕೊಳ್ಳಲು ಉಪ್ಪಿನಕಾಯಿಯಂತೆ, ಗ್ಲಾಮರ್ ತುಂಬಲು ಒಂದಲ್ಲಾ ಮೂವರು ನಾಯಕಿಯರು. ಒಟ್ನಲ್ಲಿ ಲವ್ವಿ-ಡವ್ವಿ ಜೊತೆಗೆ ಒಂದಷ್ಟು ಆರ್ಭಟಿಸುವ ಫೈಟ್ ಗಳು. ಇವು 'ವಿರಾಟ್' ದರ್ಶನದ ಪ್ರಮುಖ ಹೈಲೈಟ್ಸ್.

ನಿರ್ದೇಶಕ ಹೆಚ್ ವಾಸು ಆಕ್ಷನ್-ಕಟ್ ಹೇಳಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ವಿರಾಟ್' ನಿನ್ನೆ (ಜನವರಿ 29) ಅದ್ಧೂರಿಯಾಗಿ ಇಡೀ ಕರ್ನಾಟಕದಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.['ವಿರಾಟ್' ವಿಮರ್ಶೆ; ಕಡ್ಡಾಯವಾಗಿ ದರ್ಶನ್ ಅಭಿಮಾನಿಗಳಿಗೆ ಮಾತ್ರ]


ಕತ್ತಲಲ್ಲಿ ಬೆಳೆಯುತ್ತಿರುವ ಕರ್ನಾಟಕಕ್ಕೆ ಬೆಳಕು ತೋರಲು ಪ್ರಯತ್ನಿಸುವ ಒಬ್ಬ ಶ್ರೀಮಂತ ಉದ್ಯಮಿ ಮತ್ತು ಆತನ ಒಳ್ಳೆ ಆಲೋಚನೆಗೆ ಅಡ್ಡಗಾಲು ಹಾಕಲು ಪ್ರಯತ್ನಿಸುವ ವಿಲನ್ ಗಳ ಸುತ್ತ ಸುತ್ತುವ ಕಥೆಯೇ ದರ್ಶನ್ ಅವರ 'ವಿರಾಟ್'.


ನಿರ್ಮಾಪಕ ಸಿ.ಕಲ್ಯಾಣ್ ಬಂಡವಾಳ ಹಾಕಿರುವ ನಟ ದರ್ಶನ್, ನಟಿ ಇಶಾ ಚಾವ್ಲಾ, ನಟಿ ವಿದಿಶಾ ಶ್ರೀವಾತ್ಸವ್, ನಟಿ ಚೈತ್ರ ಚಂದ್ರನಾಥ್ ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ವಿರಾಟ್' ಚಿತ್ರಕ್ಕೆ ಖ್ಯಾತ ವಿಮರ್ಶಕರು ವಿಭಿನ್ನ ರೇಟಿಂಗ್ ನೀಡಿದ್ದಾರೆ.[ದರ್ಶನ್ 'ವಿರಾಟ್' ದರ್ಶನ ಹೇಗಿದೆ? ಟ್ವಿಟ್ಟರ್ ನಲ್ಲಿ ವಿಮರ್ಶೆ]


'ವಿರಾಟ್' ಬಗ್ಗೆ ವಿಮರ್ಶಕರು ವ್ಯಕ್ತಪಡಿಸಿರುವ ವಿಭಿನ್ನ ಅಭಿಪ್ರಾಯಗಳನ್ನು ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....


ಲೋಡ್ ಶೆಡ್ಡಿಂಗ್ ಸಂಕಷ್ಟದಲ್ಲಿ 'ವಿರಾಟ್' - ವಿಜಯ ಕರ್ನಾಟಕ

ಈ ಹೊತ್ತಿನ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ವಿದ್ಯುತ್ ಪ್ರಾಬ್ಲಂ ಕೂಡ ಒಂದು. ಇದೇ ಕತೆಯನ್ನೇ ಕೇಂದ್ರವಾಗಿಟ್ಟುಕೊಂಡು ವಿರಾಟ್ ಚಿತ್ರ ಮಾಡಿದ್ದಾರೆ ನಿರ್ದೇಶಕ ಎಚ್.ವಾಸು. ಇಂದಿನ ವಿದ್ಯುತ್ ಸಮಸ್ಯೆಗೆ ಈ ಚಿತ್ರವು ಪರಿಹಾರ ಸೂಚಿಸಬಲ್ಲದು ಎಂದೇ ಹೇಳಲಾಗಿತ್ತು. ಆದರೆ ಚಿತ್ರ ನೋಡಿದ ನಂತರ ಚಿತ್ರದ ಕತೆಯ ದಿಕ್ಕೇ ದಿಕ್ಕಾಪಾಲಾಗಿದೆ. ನಾಡಿನ ಕರೆಂಟ್ ಪ್ರಾಬ್ಲಂ ಬಗ್ಗೆ ಮಾತನಾಡುವುದಿರಲಿ, ಚಿತ್ರಕ್ಕೆ ಬೇಕಿರುವ ಕರೆಂಟ್-ಕತೆಯೇ ಇಲ್ಲಿ ಲೋಡ್‌ಶೆಡ್ಡಿಂಗ್‌ನಿಂದ ನರಳಿದೆ. ಎಚ್.ಮಹೇಶ್


'ವಿರಾಟ್' ಫಜೀತಿ! - ವಿಜಯವಾಣಿ

ವಿದ್ಯುತ್ ಸ್ಥಾವರ ಸ್ಥಾಪನೆಯಂತಹ ಸಾಮಾಜಿಕ ಕಾಳಜಿಯುಳ್ಳ ವಿಷಯವಿಟ್ಟುಕೊಂಡು ಜಾಸ್ತಿ ಪ್ರೀತಿ ಮೇಲೆ ಆಟ-ಚೆಲ್ಲಾಟವಾಡಿದ್ದಾನೆ ವಿರಾಟ್. ಏಷ್ಯದಲ್ಲೇ ಮೊಟ್ಟಮೊದಲು ಕರೆಂಟ್ ಕಂಡ ರಾಜ್ಯವೆಂಬ ಹೆಗ್ಗಳಿಕೆಯುಳ್ಳ ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲೂ ಸ್ವಾವಲಂಬಿಯಾಗಿ, 24 ತಾಸು ಕರೆಂಟ್ ಕೊಡಬೇಕೆಂಬ ಕಾನ್ಸೆಪ್ಟ್​ನೊಂದಿಗೆ ಸರ್ಕಾರದ ಒಪ್ಪಿಗೆ ಮೇರೆಗೆ ಘಟಕ ಸ್ಥಾಪನೆಗೆ ಮುಂದಾಗುತ್ತಾನೆ ವಿರಾಟ್ ಪ್ರಸಾದ್. ಈ ಗುತ್ತಿಗೆ ಪಡೆಯುವಲ್ಲಿ ವಿಫಲನಾದ ಉದ್ಯಮಿ ಸಿಂಗ್, ಅದಕ್ಕೆ ಅಡ್ಡಿಯಾಗುತ್ತಾನೆ. ಖಳನನ್ನು ಮೆಟ್ಟಿನಿಂತು ನಾಯಕ ಸ್ಥಾವರ ನಿರ್ವಿುಸುತ್ತಾನೆ. ಇದು ಕಥೆ.


ಹಾಡು, ಸಾಹಸ ದೃಶ್ಯಗಳ ನಡುವೆ ಕತೆ- ಪ್ರಜಾವಾಣಿ

ಇಲ್ಲಿಯವರೆಗೆ ಹೊಡಿ-ಬಡಿ ಸಿನಿಮಾಗಳಲ್ಲಿ ತೋರಿಸಿದ್ದನ್ನೇ ಮತ್ತೊಂದು ರೀತಿಯಲ್ಲಿ ತೋರಿಸಿದೆ. ನಾಯಕ ಶ್ರೀಮಂತ. ಅವನು, ಖಳನಾಯಕನೊಂದಿಗೆ ನಡೆಸುವ ಘರ್ಷಣೆ ವಿರಾಟನ ಜೀವಾಳ. ರಾಜ್ಯದ ವಿದ್ಯುತ್‌ ಬರವನ್ನು ನೀಗಿಸುವ ನಿಟ್ಟಿನಲ್ಲಿ ನಾಯಕ ನಿರ್ಮಿಸುವ ಕಲ್ಲಿದ್ದಲು ವಿದ್ಯುತ್‌ ಸ್ಥಾವರಕ್ಕೆ ಈ ಖಳ ಹಸ್ತಕ್ಷೇಪ ಮಾಡುತ್ತಲೇ ಬರುತ್ತಾನೆ. ಈ ಸ್ಥಾವರದ ಸ್ಥಾಪನೆಯ ಕತೆ ನೆಪಮಾತ್ರಕ್ಕೆ! ಇಲ್ಲಿ ಖಳನೊಂದಿಗೆ ಕಿಡಿ ಹುಟ್ಟಿಸುವ ಮಾತುಗಳು, ನಾಯಕ ಎಲ್ಲಿಯೂ ಸೋಲದ ಅಬ್ಬರದ ಸಾಹಸ ದೃಶ್ಯಗಳು, ಹಾಡುಗಳ ನಡುವೆ ಈ ಕತೆ ಸಿಕ್ಕಿಕೊಂಡಿದೆ. ಇವುಗಳ ನಡುವೆ ಬಿಡುವಾದಾಗ ನಾಯಕ ದರ್ಶನ್‌ ನಟಿಸುತ್ತಾರೆ. ನಾಯಕನನ್ನು ಪ್ರೀತಿಸಲು ಒಂದಲ್ಲ ಮೂವರು ನಾಯಕಿಯರು ಇಲ್ಲಿದ್ದಾರೆ. ನಾಯಕನಿಗೆ ಯಾರು ಹಿತವರು ಈ ಮೂವರೊಳಗೆ ಎಂಬುದು ಕೊನೆಯಲ್ಲಿ ಗೊತ್ತಾಗುತ್ತದೆ. -ಸಂದೀಪ್ ನಾಯಕ.


'ಆರ್ಭಟ, ಹಾರಾಟ ಹೋರಾಟ, ವಿರಾಟ'- ಉದಯವಾಣಿ

'ಯಶಸ್ಸು ಸಿಗೋದು ಹೋರಾಟದಿಂದ, ಗೆಲುವು ಸಿಗೋದು ಅವಕಾಶದಿಂದ,. ಅಂಥಾ ಅವಕಾಶವನ್ನು ಮಿಸ್ ಮಾಡ್ಕೋಬೇಡಿ.'-ಹೀಗೆ 'ವಿರಾಟ್' ಚಿತ್ರದಲ್ಲಿ ನಾಯಕ ಹೇಳುವ ಈ ಮೀನಿಂಗ್ ಫುಲ್ ಡೈಲಾಗ್ ಗೆ ಶಿಳ್ಳೆ ಚಪ್ಪಾಳೆಗಳೇನೋ ಬೀಳುತ್ತವೆ. ಆದರೆ ಡೈಲಾಗ್ ನಲ್ಲಿರೋ ಫೋರ್ಸ್ ಚಿತ್ರದಲ್ಲಿಲ್ಲ ಅನ್ನೋದೇ ಬೇಸರ. ಅಂಥದ್ದೊಂದು ಯಾವುದೇ ಹೋರಾಟದ ಛಾಯೆ ಕೂಡ ಕಾಣಸಿಗಲ್ಲ. ಹೀಗಿದ್ದ ಮೇಲೆ ಗೆಲುವಿನ ಅವಕಾಶದ ಮಾತೆಲ್ಲಿ? ಇಂಥದ್ದೊಂದು ಪ್ರಶ್ನೆ 'ವಿರಾಟ' ದರ್ಶನವನ್ನು ನೋಡಿದ ಮೇಲೆ ಬರದೇ ಇರದು. ವಿರಾಟನ ರೂಪ ತುಂಬಾ ತಡವಾಗಿ ಕಂಡರೂ ಇಲ್ಲಿ ಅಬ್ಬರಕ್ಕೇನೂ ಕೊರತೆ ಇಲ್ಲ. ಮಾತಿಗೊಂದು ಭರ್ಜರಿ ಫೈಟ್, ಸ್ಟೈಲ್ ಗೊಂದು ಕಲರ್ ಫುಲ್ ಸಾಂಗು ಬಂದು ಹೋಗುವುದರಿಂದ 'ವಿರಾಟ' ಅಷ್ಟೇನೂ 'ವಿರೂಪ' ಅನಿಸೋದಿಲ್ಲ! ದರ್ಶನ್ ಅವರ ಅಭಿಮಾನಿಗಳನ್ನು ಮನಸ್ಸಿನಲ್ಲಿಟ್ಟುಕೊಂಡೆ ನಿರ್ದೇಶಕರು ಇಲ್ಲಿ ಹೊಡೆದಾಟಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. - ವಿಜಯ್ ಭರಮಸಾಗರ.


'ಅಭಿಮಾನಿಗಳಿಗೆ ಮೃಷ್ಟಾನ್ನ, ಉಳಿದವರಿಗೆ....ಕನ್ನಡಪ್ರಭ

ನಟ ದರ್ಶನ್ ಸಿನಿಮಾ ಹೇಗಿರುತ್ತದೆ? ಎನ್ನುವ ಪ್ರಶ್ನೆಗೆ ಚಿತ್ರ ನೋಡಿಯೇ ಉತ್ತರಿಸುವ ಅಗತ್ಯವಿಲ್ಲ. ಯಾಕೆಂದರೆ ದರ್ಶನ್ ಚಿತ್ರದಲ್ಲಿ ಏನಿರಬೇಕು ಎಂದು ಬಯಸುತ್ತೇವೋ ಅದೆಲ್ಲವೂ ಇರುತ್ತದೆ ಎನ್ನುವ ಮಾತನ್ನು ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಲಿ. ಅದೇ ಫೈಟ್, ಅದೇ ಹಾಡುಗಳು, ಗ್ಲಾಮರ್ ನಾಯಕಿಯರು, ಅದ್ಧೂರಿ ಮೇಕಿಂಗ್, ಐಟಂ ಸಾಂಗ್, ಪಂಚ್ ಡೈಲಾಗ್ ಗಳನ್ನು ದರ್ಶನ್ ಇಮೇಜ್ ಮತ್ತು ಅವರ ಅಭಿಮಾನಿಗಳ ರುಚಿಗೆ ತಕ್ಕಂತೆ ಬೆರೆಸಿ ಆಗಾಗ ನಿರ್ದೇಶಕರು ಕೊಡುತ್ತಲೇ ಬಂದಿದ್ದಾರೆ. ಅದೇ ಸಾಲಿಗೆ ಸೇರುವ ಚಿತ್ರ, 'ವಿರಾಟ್'. ನಿರ್ದೇಶಕ ಹೆಚ್ ವಾಸು, ಇಡೀ ಚಿತ್ರವನ್ನು ನಾಯಕನ ಮೂಗಿನ ನೇರಕ್ಕೆ ಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಡೈಲಾಗ್ ಮಾಸ್ ಫೈಟ್ ಗಳು, ಗ್ಲಾಮರ್ ಗೆ ಮೂವರು ನಾಯಕಿಯರು, ಜತೆಗೆ ವಿದ್ಯುತ್ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಬಂದಿರುವ ಈ ಸಿನಿಮಾ, ಅಭಿಮಾನಿಗಳಿಗೆ ಮಾತ್ರ ಮೃಷ್ಟಾನ್ನ. - ಆರ್ ಕೇಶವಮೂರ್ತಿ.


Entertainment at all cost- Bangaloremirrir.com

The film tries to entertain at all cost. There is double bonus in everything. Apart from the three leading ladies, there are also three comedy characters played by Sahdu Kokila, Bullet Prakash and Chidanand. Sadhu and Bullet get a song for themselves too. For every statement Ravishankar makes, Darshan gives him back three. But unless you are a fan wishing to see Darshan glorified in every scene, you may find the proceedings too tardy. The film has so much packed into it that it is an overdose. - By Shyam Prasad S.


English summary
Kannada Movie 'Viraat' Critics Review. actor Darshan, Actress Isha Chawla, Actress Chaitra Chandranath, Actress Vidisha Shrivastav Starrer 'Viraat' has received mixed response from the critics. here is the collection of reviews by Top News Papers of Karnataka. The movie is directed by H Vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada