twitter
    For Quick Alerts
    ALLOW NOTIFICATIONS  
    For Daily Alerts

    Kiss Review: 72 ದಿನಗಳ 'ಕ್ಯೂಟ್' ಲವ್ ಸ್ಟೋರಿ

    |

    'ಅಂಬಾರಿ', 'ಅದ್ಧೂರಿ', 'ರಾಟೆ' ಸಿನಿಮಾಗಳಲ್ಲಿ ಪ್ರೇಮ ಕಥೆ ಹೇಳಿದ್ದ, ನಿರ್ದೇಶಕ ಎಪಿ ಅರ್ಜುನ್ ಮತ್ತೆ ಲವ್ ಸ್ಟೋರಿ ಮೂಲಕ ಬಂದಿದ್ದಾರೆ. 'ಕಿಸ್' ಒಂದು ಕ್ಯೂಟ್ ಲವ್ ಸ್ಟೋರಿಯಾಗಿದೆ. ಇದು ಇಂದಿನ ಯುವ ಜನತೆಗೆ ಇಷ್ಟ ಆಗುವ ಒಂದು ಡಿಸೆಂಟ್ ಕಮರ್ಷಿಯಲ್ ಸಿನಿಮಾ.

    Rating:
    3.5/5
    Star Cast: ವಿರಾಟ್, ಶ್ರೀಲೀಲಾ
    Director: ಎಪಿ ಅರ್ಜುನ್

    72 ದಿನಗಳ ಪ್ರೀತಿಯ ಕರಾರು

    72 ದಿನಗಳ ಪ್ರೀತಿಯ ಕರಾರು

    ನಾಯಕ, ನಾಯಕಿ ನಡುವೆ ಹೀಗೊಂದು ಕರಾರು ಆಗುತ್ತದೆ. 72 ದಿನಗಳ ಕಾಲ ನಂದಿನಿ (ಶ್ರೀ ಲೀಲಾ), ಅರ್ಜುನ್ (ವಿರಾಟ್)ಗೆ ಸೇವಕಿಯಾಗಿ ಕೆಲಸ ಮಾಡಿಕೊಂಡು ಇರಬೇಕಾಗುತ್ತದೆ. ಈ ಕಾಲವಧಿಯಲ್ಲಿ ಇವರಿಬ್ಬರ ನಡುವೆ ಪ್ರೇಮಕಥೆ ಶುರು ಆಗುತ್ತದೆ. ಸಿನಿಮಾದ ಕೊನೆಯವರೆಗೆ ಒನ್ ವೇ ಆಗಿರುವ ಲವ್ ಸ್ಟೋರಿ ಕಡೆ ಘಳಿಗೆಯಲ್ಲಿ ಏನಾಗುತ್ತದೆ ಎನ್ನುವುದು ಚಿತ್ರದ ಸ್ಟೋರಿ ಲೈನ್

    'ಕಿಸ್' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗಾನ'ಕಿಸ್' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗಾನ

    ಸ್ಟೈಲಿಷ್ ಹುಡುಗ ವಿರಾಟ್

    ಸ್ಟೈಲಿಷ್ ಹುಡುಗ ವಿರಾಟ್

    ಆಟಗಾರ ವಿರಾಟ್ ಕೊಯ್ಲಿಯ ರೀತಿ ಸಿನಿಮಾದ ನಾಯಕ ವಿರಾಟ್ ಮೊದಲ ಚಿತ್ರದಲ್ಲಿಯೇ ಸಿಕ್ಸ್ ಬಾರಿಸಿದ್ದಾರೆ. ವಿರಾಟ್ Attitude, ಸ್ಟೈಲ್ ಎಲ್ಲವೂ ತುಂಬ ಚೆನ್ನಾಗಿದೆ. ಅದ್ಬುತವಾಗಿ ಡ್ಯಾನ್ಸ್ ಮಾಡಿದ್ದಾರೆ. ವಿರಾಟ್ ಫೈಟ್ಸ್ ನಲ್ಲಿ ಹಿಂದೆ ಬಿದ್ದಿಲ್ಲ, ನಟನೆಯಲ್ಲಿಯೂ ಕಡಿಮೆ ಇಲ್ಲ.

    ಶ್ರೀ ಲೀಲಾ ಕ್ಯೂಟ್ ಅಂಡ್ ಸ್ವೀಟ್

    ಶ್ರೀ ಲೀಲಾ ಕ್ಯೂಟ್ ಅಂಡ್ ಸ್ವೀಟ್

    ಶ್ರೀಲೀಲಾ ರನ್ನು ತೆರೆ ಮೇಲೆ ನೋಡುವುದೇ ಚೆಂದ. ಆಕೆ ಸಖತ್ ಕ್ಯೂಟ್ ಅಂಡ್ ಸ್ವೀಟ್ ಆಗಿ ಕಾಣುತ್ತಾರೆ. ಅಂದದ ಜೊತೆಗೆ ನಟನೆ ಕೂಡ ಅವರಿಗೆ ಪ್ಲಸ್ ಆಗಿದೆ. ವಿರಾಟ್ ಗೆ ಶ್ರೀಲೀಲಾ ತಕ್ಕ ಜೋಡಿ ಎನಿಸುತ್ತದೆ. ಇಬ್ಬರ ಕಾಸ್ಟೂಮ್ ಡಿಸೈನ್ ಸ್ಟೈಲಿಷ್ ಆಗಿದೆ.

    'ಗೀತಾ', 'ಕಿಸ್' ಸೇರಿ ಈ ಶುಕ್ರವಾರ 5 ಕನ್ನಡ ಚಿತ್ರಗಳ ಬಿಡುಗಡೆ'ಗೀತಾ', 'ಕಿಸ್' ಸೇರಿ ಈ ಶುಕ್ರವಾರ 5 ಕನ್ನಡ ಚಿತ್ರಗಳ ಬಿಡುಗಡೆ

    ಶಕ್ತಿ ತುಂಬಿದೆ ಹರಿಕೃಷ್ಣ ಸಂಗೀತ

    ಶಕ್ತಿ ತುಂಬಿದೆ ಹರಿಕೃಷ್ಣ ಸಂಗೀತ

    ಎಪಿ ಅರ್ಜುನ್ ಮತ್ತು ಹರಿಕೃಷ್ಣ ಕಾಂಬಿನೇಶನ್ ಮತ್ತೆ ಗೆದ್ದಿದೆ. ಸಿನಿಮಾದ ಎಲ್ಲ ಹಾಡುಗಳು ಚೆನ್ನಾಗಿದೆ. ಹಿನ್ನಲೆ ಸಂಗೀತ ಸಿನಿಮಾಗೆ ಶಕ್ತಿ ತುಂಬಿದೆ. 'ನೀನೆ ಮೊದಲು ನೀನೆ ಕೊನೆ..' ತುಂಬ ಒಳ್ಳೆಯ ಹಾಡು. ಹರಿಕೃಷ್ಣ ಮ್ಯೂಸಿಕ್ ನಲ್ಲಿ ಸ್ವಲ್ಪ ಎಡವಟ್ಟು ಮಾಡಿದ್ದರೂ, ಸಿನಿಮಾಗೆ ದೊಡ್ಡ ನಷ್ಟ ಆಗುತ್ತಿತ್ತು.

    ಮೇಕಿಂಗ್ ಸಖತ್ ಸ್ಟೈಲಿಷ್

    ಮೇಕಿಂಗ್ ಸಖತ್ ಸ್ಟೈಲಿಷ್

    ಸಿನಿಮಾದ ಹಾಡುಗಳು, ದೃಶ್ಯಗಳು ಎಲ್ಲವೂ ತೆರೆ ಮೇಲೆ ತುಂಬ ಚೆನ್ನಾಗಿ ಕಾಣುತ್ತದೆ. ಅರ್ಜುನ್ ಶೆಟ್ಟಿ ಕ್ಯಾಮರಾ ವರ್ಕ್, ದೀಪು ಎಡಿಟಿಂಗ್ ನಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಇಡೀ ಸಿನಿಮಾ ಶ್ರೀಮಂತಿಕೆಯಿಂದ ಕೂಡಿದೆ. ದೃಶ್ಯಗಳ ಸೌಂದರ್ಯಕ್ಕೆ ನಿರ್ದೇಶಕರು, ನಿರ್ಮಾಪಕರು ಯಾವುದೇ ಕೊರತೆ ಮಾಡಿಲ್ಲ.

    ಕಿಸ್ ಕೊಡೋಕೆ ಹುಡುಗ ರೆಡಿ, ಆದ್ರೆ ಹುಡುಗಿನೇ ಸಿಕ್ಕಿಲ್ಲಾ.!ಕಿಸ್ ಕೊಡೋಕೆ ಹುಡುಗ ರೆಡಿ, ಆದ್ರೆ ಹುಡುಗಿನೇ ಸಿಕ್ಕಿಲ್ಲಾ.!

    ಕಥೆಯಲ್ಲಿ ಇನ್ನಷ್ಟು ಬಿಗಿ ಬೇಕಿತ್ತು

    ಕಥೆಯಲ್ಲಿ ಇನ್ನಷ್ಟು ಬಿಗಿ ಬೇಕಿತ್ತು

    ಸಿನಿಮಾದ ಪ್ರಾರಂಭ, ನಾಯಕ, ನಾಯಕಿಯ ಪರಿಚಯದ ದೃಶ್ಯಗಳೆಲ್ಲ ಮುಗಿದು, ಚೆನ್ನಾಗಿ ಟೆಕ್ ಆಫ್ ಆಗುತ್ತದೆ. ಆದರೆ, ತದನಂತರ ಕೆಲವು ಕಡೆ ಬೋರ್ ಆಗುತ್ತದೆ. ಹೆಚ್ಚು ತಿರುವುಗಳು ಇಲ್ಲದೆ ಇರುವ ಕಾರಣ ಮುಂದಿನ ದೃಶ್ಯವನ್ನು ಸುಲಭವಾಗಿ ಹೇಳಬಹುದು. ಸಿನಿಮಾದ ಅವಧಿ ಕೂಡ ಕೊಂಚ ಇಳಿಸಬಹುದಿತ್ತು.

    ಇನ್ನಷ್ಟು ಭಾವನಾತ್ಮಕ ದೃಶ್ಯಗಳ ಅಗತ್ಯ

    ಇನ್ನಷ್ಟು ಭಾವನಾತ್ಮಕ ದೃಶ್ಯಗಳ ಅಗತ್ಯ

    ಬಂಗೀ ಜಿಗಿತ (bungee jumping) ದೃಶ್ಯ, ಹಾಗೂ ಕ್ಲೈಮ್ಯಾಕ್ಸ್ ದೃಶ್ಯಗಳು ಭಾವನಾತ್ಮಕವಾಗಿ ಹತ್ತಿರ ಆಗುತ್ತವೆ. ಈ ರೀತಿಯ ಇನ್ನಷ್ಟು ದೃಶ್ಯಗಳು ಇದಿದ್ದರೆ, ಈ ಪ್ರೇಮಕಥೆಗೆ ಇನ್ನಷ್ಟು ಜೀವ ಬರುತ್ತಿತ್ತು. ಕೆಲವು ಕೊರತೆಗಳು ಇದ್ದರೂ, ಸಿನಿಮಾ ಮನರಂಜನೆಯಲ್ಲಿ ಹಿಂದೆ ಬೀಳುವುದಿಲ್ಲ.

    ಇದು ಸ್ಫೂರ್ತಿಯ ಕಥೆಯೇ

    ಇದು ಸ್ಫೂರ್ತಿಯ ಕಥೆಯೇ

    '100 days with mr arrogant' ಎನ್ನುವ ಕೋರಿಯನ್ ಸಿನಿಮಾ ಕೂಡ ಇದೇ ಶೈಲಿಯ ಕಥೆ ಹೊಂದಿದೆ. ಹೀಗಾಗಿ, ಈ ಚಿತ್ರದ ಸ್ಫೂರ್ತಿ ಪಡೆದು ನಿರ್ದೇಶಕರು 'ಕಿಸ್' ಸಿನಿಮಾ ಮಾಡಿರಬಹುದು. ಎ ಪಿ ಅರ್ಜುನ್ ಮತ್ತೆ ತಮ್ಮ ಶೈಲಿಯ ಸಿನಿಮಾವನ್ನು ತುಂಬ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. 'ಕಿಸ್' ಪಕ್ಕಾ ಯುತ್ ಫುಲ್ ಲವ್ ಸ್ಟೋರಿ.

    English summary
    Kiss Movie Review in Kannada: Rating: 3.
    Friday, September 27, 2019, 17:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X