Don't Miss!
- News
ಫೆಬ್ರವರಿ 4ರಂದು 313 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಡೀಲ್ ರಾಜಾ'ನ ಬಗ್ಗೆ ವಿಮರ್ಶಕರ ಪ್ರತಿಕ್ರಿಯೆ ಅಷ್ಟಕಷ್ಟೆ.!
'ಸೆನ್ಸೇಷನಲ್ ಸ್ಟಾರ್' ಅಂತ ಹಿಂದೊಮ್ಮೆ ಬಿರುದು ಪಡೆದುಕೊಂಡಿದ್ದ ಕೋಮಲ್ ಕುಮಾರ್ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಲೇ ಇಲ್ಲ. ಇದೇ ಸಾಲಿಗೆ ನಿರೀಕ್ಷೆ ಹುಟ್ಟಿಸಿದ್ದ 'ಡೀಲ್ ರಾಜಾ' ಚಿತ್ರ ಕೂಡ ಸೇರುವಂತಾಗಿದೆ.
ಹಾಡುಗಳ ಸಲುವಾಗಿ 'ಡೀಲ್ ರಾಜಾ' ಸ್ಯಾಂಡಲ್ ವುಡ್ ಅಂಗಳದಲ್ಲಿ ಸೌಂಡ್ ಮಾಡಿತ್ತು. ಆದ್ರೆ, ಕಳೆದ ಶುಕ್ರವಾರವಷ್ಟೇ ತೆರೆಗೆ ಅಪ್ಪಳಿಸಿದ್ದ 'ಡೀಲ್ ರಾಜಾ' ಚಿತ್ರ ವಿಮರ್ಶಕರಿಗೆ ಯಾಕೋ ಹಿಡಿಸಿಲ್ಲ.
ಅತ್ತ ಕಾಮಿಡಿಯೂ ಇಲ್ಲದ, ಇತ್ತ ಸೀರಿಯಸ್ಸೂ ಅಲ್ಲದ, ಎರಡರ ಮಧ್ಯೆ ಏನೋ ಮಿಸ್ ಆಗಿದ್ಯಲ್ಲಾ ಎಂಬಂತಿರುವ 'ಡೀಲ್ ರಾಜಾ' ಚಿತ್ರದ ಕುರಿತು ಕನ್ನಡದ ಜನಪ್ರಿಯ ಪತ್ರಿಕೆಗಳು ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

ಕುದುರದ 'ಡೀಲ್' - ಪ್ರಜಾವಾಣಿ
ಕೋಟ್ಯಂತರ ಮೌಲ್ಯದ ಆಸ್ತಿ ಲಪಟಾಯಿಸಲು ಮೂವರು ಸಂಚು ಮಾಡುತ್ತಾರೆ. ಅವರಾದರೂ ಸಾಮಾನ್ಯರೇನಲ್ಲ; ಸಚಿವ ಶಂಕರಾನಂದ, ಮಠಾಧೀಶ ಅಮಿತಾನಂದ ಸ್ವಾಮಿ ಹಾಗೂ ಜೈಲರ್ ದುರ್ಗಾ ದೇವಿ! ಇವರ ಕಾಕದೃಷ್ಟಿ ಬಿದ್ದ ಆ ಆಸ್ತಿಯ ವಾರಸುದಾರ ಡೀಲ್ ಮಾಡುತ್ತ ಕಾಲ ಕಳೆಯುತ್ತಿರುತ್ತಾನೆ. ಹೀಗೆ ಕಾಸು ಕಮಾಯಿಸುವ ಈ ಡೀಲ್ ರಾಜನ ವ್ಯಕ್ತಿತ್ವ ತುಸು ಭಿನ್ನ. ಆತನ ಡೀಲ್‌ಗಳಿಂದ ಜನಸಾಮಾನ್ಯರಿಗೆ ತೊಂದರೆಯೇನೂ ಆಗದು. ಆ ಕರಾಮತ್ತನ್ನು ‘ಡೀಲ್ ರಾಜ' ತೆರೆದಿಡುತ್ತದೆಂದು ಚಿತ್ರಮಂದಿರಕ್ಕೆ ಹೋದವರ ಆಸೆಯಂತೂ ಈಡೇರುವುದಿಲ್ಲ - ಆನಂದತೀರ್ಥ ಪ್ಯಾಟಿ

ಕಚಗುಳಿ ಇಡುವ 'ಡೀಲ್ ರಾಜ' - ವಿಜಯ ಕರ್ನಾಟಕ
ಕಾಮಿಡಿಯಂತೆ ಕಾಣುವ ಈ ಸಿನಿಮಾದ ಒಳಗೆ ಒಂದು ಸೀರಿಯಸ್ ಮಿಸ್ಸಿಂಗ್ ಲಿಂಕ್ ಇದೆ. ಕೋಮಲ್ ತಮ್ಮ ಹಳೆಯ ಸಿನಿಮಾದಂತೆ ಇಲ್ಲೂ ಹಾಸ್ಯ ನಾಯಕನಾಗಿಯೇ ಗುರುತಿಸಿಕೊಂಡಿದ್ದಾರೆ. 20 ವರ್ಷದ ಹಿಂದೆ ಮಣ್ಣಿನಲ್ಲಿ ಹೂತು ಹೋದ ಅಮೂಲ್ಯ ವಜ್ರ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಪತ್ರದ ಮೇಲೊಂದು ಡೀಲ್ ನಡೆಯುತ್ತದೆ. ಈ ಡೀಲ್‌ಗೆ ಕಥಾನಾಯಕ ಹೇಗೋ ಒಳಗಾಗುತ್ತಾನೆ. ಅದೇ ವೇಳೆಗೆ ಆತನಿಗೆ ಸನ್ಯಾಸಿಯೊಬ್ಬ 'ಜೈಲು ಸೇರಿದರೆ ಒಳ್ಳೆಯದಾಗುತ್ತದೆ. ಕೊಟ್ಯಾಧಿಪತಿ ಆಗುತ್ತಿ' ಎಂದು ಸಲಹೆ ನೀಡುತ್ತಾನೆ. ನಾಯಕ ಜೈಲು ಸೇರಿದ್ದೂ ಆಗುತ್ತದೆ. ಅಲ್ಲಿಂದ ಅಸಲಿ ಕತೆ ಶುರು. ಯಾರು ಯಾರಿಗೆ ಡೀಲ್ ಮಡುತ್ತಾರೆ, ಯಾರ ಡೀಲ್ ಕ್ಲಿಕ್ ಆಗುತ್ತದೆ ಎಂಬುದೇ ಇಡೀ ಸಿನಿಮಾ. - ಪದ್ಮಿನಿ ಜೈನ್

ಕಾಮಿಡಿ 'ಡೀಲ್ ರಾಜಾ', ಅಲ್ಲಲ್ ಮಜಾ! - ಉದಯವಾಣಿ
ಇದು ಕೋಮಲ್ ಶೈಲಿಯ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕೋಮಲ್ ಅವರ ನಗಿಸುವ ಗುಣ ಇರುವಂತಹ ಸೀರೀಸ್ ಸಿನಿಮಾಗಳ ಸಾಲಿಗೆ 'ಡೀಲ್ ರಾಜಾ' ಕೂಡ ಒಂದು. ಹಾಗಂತ ಇಲ್ಲಿ ಭರಪೂರ ನಗು ಕಾಣಿಸುವುದಿಲ್ಲ. ಆದರೆ, ಮನರಂಜನೆಗೆ ಮೋಸವೂ ಆಗೋದಿಲ್ಲ. ಕೆಲ ಡೀಲ್ ನಲ್ಲಿ ಏರಿಳಿತಗಳು ಕಾಣಿಸಿಕೊಂಡು, ನೋಡುಗನ ತಾಳ್ಮೆ ಕಟ್ಟೆ ಹೊಡೆಯುತ್ತೆ ಅಂದುಕೊಳ್ಳುತ್ತಿದ್ದಂತೆಯೇ ಹಾಡುಗಳು ಕಾಣಿಸಿಕೊಂಡು ನೋಡುಗನ ತಾಳ್ಮೆಗೆ ಸಮಾಧಾನ ಪಡಿಸುತ್ತವೆ.

ಕಾಮಿಡಿ 'ಡೀಲ್ ರಾಜಾ', ಅಲ್ಲಲ್ ಮಜಾ! - ಉದಯವಾಣಿ
ಕಥೆಯಲ್ಲಿ ಒಂದಷ್ಟು ಧಮ್ ಇದೆಯಾದರೂ, ಚಿತ್ರಕಥೆಯಲ್ಲಿ ಹೇಳಿಕೊಳ್ಳುವಂತಹ ಧಮ್ ಇಲ್ಲ. ಆ ಕಾರಣಕ್ಕೆ ರಾಜನ 'ಡೀಲ್' ಅಷ್ಟಾಗಿ ರುಚಿಸದು. ಹಾಗಂತ, ಜಾಣ ಪ್ರೇಕ್ಷಕನಿಗೆ ರಾಜನ ಮಾತು, ಖದರ್ರು, ಪವರ್ರು ಇಷ್ಟವಾಗದೇ ಇರದು. ಇಲ್ಲಿ ಗ್ರಾಮರ್ ಹುಡುಕುವಂತಿಲ್ಲ. ಗ್ಲಾಮರ್ ಬಗ್ಗೆಯೂ ಕೇಳುವಂತಿಲ್ಲ. ಎರಡು ಗಂಟೆ ಕಾಲ ಪ್ರೇಕ್ಷಕನಿಗೆ ಏನೆಲ್ಲಾ ಕೊಡಬೇಕು, ಅದನ್ನು ಇಲ್ಲಿ ಪೂರ್ಣ ಪ್ರಮಾಣದಲ್ಲಿ ಕೊಡಲಾಗದಿದ್ದರೂ, 'ಡೀಲ್ ರಾಜ'ನ ಸಣ್ಣ ಮೈಂಡ್ ಗೇಮ್ ಗಂತೂ ಒಂದಷ್ಟು ಮಾರ್ಕ್ಸ್ ಕೊಡಲಡ್ಡಿಯಿಲ್ಲ - ವಿಜಯ್ ಭರಮಸಾಗರ