»   » ವಿಮರ್ಶೆಗಳ ಸಂಗ್ರಹ: ನಿರೀಕ್ಷೆ ಹುಸಿಗೊಳಿಸಿದ ಕ್ರಿಶ್ 3

ವಿಮರ್ಶೆಗಳ ಸಂಗ್ರಹ: ನಿರೀಕ್ಷೆ ಹುಸಿಗೊಳಿಸಿದ ಕ್ರಿಶ್ 3

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹೃತಿಕ್ ರೋಷನ್, ಪ್ರಿಯಾಂಕಾ ಛೋಪ್ರಾ ಹಾಗೂ ಕಂಗನಾ ರಾನೌತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕ್ರಿಶ್ 3 ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬೆಳ್ಳಿತೆರೆಗೆ ಅಲಂಕರಿಸಿದೆ.ಸಾವಿರಾರು ಕೋಟಿ ಗಳಿಕೆ ನಿರೀಕ್ಷೆಯಲ್ಲಿ ಕ್ರಿಶ್ 3 ಚಿತ್ರ ಮಕ್ಕಳಿಗೆ ಬಹು ಮೆಚ್ಚುಗೆಯಾಗುವುದರಲ್ಲಿ ಯಾವುದೇ ಆನುಮಾನವಿಲ್ಲ ಆದರೆ, ವಿಮರ್ಶಕರ ಪೂರ್ಣ ಮೆಚ್ಚುಗೆ ಪಡೆಯುವಲ್ಲಿ ವಿಫಲವಾಗಿದೆ.

ದುಷೃ ಶಿಕ್ಷಣ ಶಿಷ್ಟ ರಕ್ಷಣ ಥೀಮ್ ಹೊಂದಿರುವ ಮುಸುಕುಧಾರಿ ಮಹಾವೀರ ಮಹಾ ದುಷ್ಟ ಕಾಲ್ ನಿಂದ ಭೂಮಿಯನ್ನು ರಕ್ಷಿಸುವ ಸಿಂಪಲ್ ಕಥೆಯನ್ನು ಈ ಚಿತ್ರ ಹೊಂದಿದ್ದು, ಮಿಕ್ಕಂತೆ ಗ್ರಾಫಿಕ್ಸ್, ಸಾಹಸಮಯ ದೃಶ್ಯಗಳು ಕಣ್ಮನ ಸೆಳೆಯುತ್ತವೆ.

ನವೆಂಬರ್ 1ರಂದು ಬೆಳ್ಳಿತೆರೆಗೆ ಬಿಡುಗಡೆಗೊಂಡ ವೈಜ್ಞಾನಿಕ ಕಥಾ ವಸ್ತುವನ್ನು ಒಳಗೊಂಡ ಕ್ರಿಶ್ 3, ಈ ಮೊದಲಿನ ಕೊಯಿ ಮಿಲ್ ಗಯಾ ಮತ್ತು ಕ್ರಿಶ್ ಚಿತ್ರಗಳ 3ನೇ ಕಂತಿನ ರೂಪವಾಗಿದೆ.

ರಾಕೇಶ್ ರೋಷನ್ ನಿರ್ಮಾಣ, ನಿರ್ದೇಶನದ ಈ ಚಿತ್ರದಲ್ಲಿ ಹೃತಿಕ್ ರೋಶನ್, ವಿವೇಕ್ ಒಬೆರಾಯ್, ಪ್ರಿಯಾಂಕಾ ಚೋಪ್ರಾ ಮತ್ತು ಕಂಗನಾ ರಾನೌತ್ ಪ್ರಧಾನ ಭೂಮಿಕೆಯಲ್ಲಿದ್ದಾರೆ.

ಕ್ರಿಶ್ 3 ಚಿತ್ರದ ಪೋಸ್ಟರ್ ಗಳು, ಟ್ರೇಲರ್ ಅಭಿಮಾನಿಗಳಿಗೆ ಹುಚ್ಚೆಬ್ಬಿಸಿತ್ತು. ಮಕ್ಕಳಿಗೆ ಕ್ರೇಜ್ ಹುಟ್ಟಿಸಲು ಬೆಂಗಳೂರಿನಲ್ಲಿ ಕ್ರಿಶ್ 3 ಗೇಮ್ಸ್ ಅನ್ನು ಹೃತಿಕ್ ಬಿಡುಗಡೆ ಮಾಡಿದ್ದರು.

ಹಾಲಿವುಡ್ ಎಕ್ಸ್ ಮೆನ್ ಚಿತ್ರವನ್ನು ಹೋಲುವ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಿಸುವುದರ ಬಗ್ಗೆ ವಿಶ್ವಾಸವಿದ್ದರೂ ಜನರಿಗೆ ಅದರಲ್ಲೂ ಮಕ್ಕಳಿಗೆ ಮೆಚ್ಚುಗೆ ಆಗುವಂತೆ ನಿರ್ಮಿಸಲಾಗಿದೆ ಎಂದು ರಾಕೇಶ್ ರೋಷನ್ ಹೇಳಿದ್ದಾರೆ. ಆದರೆ, ಬಹುತೇಕ ವಿಮರ್ಶಕರು ಇದು ಆವರೇಜ್ ಚಿತ್ರ ಎಂದಿದ್ದಾರೆ. ವಿಮರ್ಶಕರ ವಿಮರ್ಶೆಗಳ ಸಾರಾ ಸಂಗ್ರಹ ಇಲ್ಲಿದೆ...

ಬಾಲಿವುಡ್ ಹಂಗಾಮ ವಿಮರ್ಶೆ

4.5/5 : ಕ್ರಿಶ್ 3 ಒಟ್ಟಾರೆಯಾಗಿ ನೋಡಬಲ್ಲ ಚಿತ್ರ ಎನಿಸಿದರೂ ಅಲ್ಲಲ್ಲಿ ಹಲವು ದೋಷಗಳು ಕಂಡು ಬರುತ್ತದೆ. ಆದರೆ, ಲಾಜಿಕ್ ಮರೆತು ಭಾರತೀಯ ಸೂಪರ್ ಹೀರೋ ಚಿತ್ರವನ್ನು ಕುಟುಂಬ ಸಮೇತ ನೋಡಬಹುದು. ರಾಕೇಶ್ ರೋಷನ್ ಶ್ರಮ ಸಾರ್ಥಕ

ರೀಡಿಫ್ (ಐದಕ್ಕೆ 3 ಸ್ಟಾರ್ )

E.T-ಸೂಪರ್ ಮ್ಯಾನ್-ಎಕ್ಸ್ ಮೆನ್ ಜತೆ ಹೊಸ ಸೆಟ್ ಹೊಸ ಶಬ್ದ ವಿನ್ಯಾಸ ಹಾಗೂ ಚಿತ್ರಕಥೆ ಸೇರಿಸಿದರೆ ಹಾಲಿವುಡ್ ಮಾದರಿ ಕುತೂಹಲಭರಿತ ಊಹಾತ್ಮಕ ಚಿತ್ರ ತಯಾರಿ. ಹೃತಿಕ್-ರೋಷನ್ ಕುಟುಂಬದ ಶ್ರಮಕ್ಕೆ ಫುಲ್ ಮಾರ್ಕ್ಸ್

ಡಿಎನ್ ಎ(3.5 ಸ್ಟಾರ್)

ಡ್ರಾಮಾ, ಥ್ರಿಲ್, ಸಸ್ಪೆನ್ಸ್ ಮನರಂಜನೆ ಸಮ್ಮಿಶ್ರಗೊಂಡಿರುವ ಕ್ರಿಶ್ 3 ಎಲ್ಲರ ಮನ ತಣಿಸಬಲ್ಲ ಚಿತ್ರವಾಗಿದೆ. ಹಿನ್ನೆಲೆ ಸಂಗೀತ ಕೆಲವು ಕಡೆ ಕೈ ಕೊಟ್ಟಿದೆ ಅಷ್ಟೆ.

ಎನ್ ಡಿಟಿವಿ (2.5 ಸ್ಟಾರ್ )

ಇಲ್ಲಿ ಎಲ್ಲವನ್ನು ಬೇಕೆಂತಲೆ ತುರುಕಿದ ಹಾಗೆ ಕಾಣುತ್ತದೆ. ಸೂಪರ್ ಮ್ಯಾನ್ ಚಿತ್ರ ಎಂದ ಮೇಲೆ ಇದೇ ರೀತಿ ಇರಬೇಕು ಎಂದು ಪೂರ್ವಗ್ರಹ ಉಳ್ಳವರಿಗೆ ತಕ್ಕಂತೆ ಚಿತ್ರ ಇದೆ ಹೊಸದೇನೂ ಇಲ್ಲ

ಟೈಮ್ಸ್ ಆಫ್ ಇಂಡಿಯಾ (4.5 ಸ್ಟಾರ್ )

ರಾಕೇಶ್ ರೋಷನ್ ಹಾಗೂ ಹೃತಿಕ್ ರೋಷನ್ ಅವರ ಜೋಡಿ ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ಅದ್ಭುತವನ್ನು ಸೃಷ್ಟಿಸಿದೆ. ಭಾರತೀಯ ಚಿತ್ರರಂಗದಲ್ಲಿ VFX ತಂತ್ರಜ್ಞಾನವನ್ನು ರೋಷನ್ ಅವರ ಚಿತ್ರದಲ್ಲಿ ಉತ್ತಮವಾಗಿ ಬಳಸಿಕೊಂಡಿದ್ದಾರೆ.

Koimoi (2 ಸ್ಟಾರ್)

ಒಂದು ಹಂತದಲ್ಲಿ ಈ ಚಿತ್ರದಲ್ಲಿ ಇಲ್ಲಿ ಎಲ್ಲವೂ ನಕಲು ಎಂಬ ಭಾವನೆ ಬರಲು ಶುರುವಾಗುತ್ತದೆ. ಚಿತ್ರದ ಪಾತ್ರಗಳು, ಕಥೆ ಸಾರಾಂಶ ಎಲ್ಲವೂ ಹಿಂದೆ ಎಲ್ಲೂ ನೋಡಿದ ಅನುಭವ ನೀಡುತ್ತದೆ. ಹೈಪ್ ಗೆ ತಕ್ಕಂತೆ ಚಿತ್ರ ತೆರೆಯ ಮೇಲೆ ಮೂಡಿಸುವಲ್ಲಿ ರಾಕೇಶ್ ವಿಫಲರಾಗಿದ್ದಾರೆ.

ಇಂಡಿಯಾ ಟುಡೇ(3 ಸ್ಟಾರ್)

ಕ್ರಿಶ್ 3 ನಿರೀಕ್ಷೆ ಸುಳ್ಳು ಮಾಡಿದೆ. ಹಾಲಿವುಡ್ ನಲ್ಲಿ ಡಾರ್ಕ್ ನೈಟ್ ಐರಾನ್ ಮ್ಯಾನ್ ಸರಣಿಯ ಮುಂದುವರೆದ ಭಾಗಗಳಲ್ಲಿ ಮೂಲ ಪಾತ್ರಗಳ ಪೋಷಣೆ ಜತೆಗೆ ಹೊಸತನ ಕಾಣಬಹುದಾಗಿದೆ. ಅದೇ ಥೀಮ್ ಹೊಂದಿರುವ ಕ್ರಿಶ್ ಸರಣಿ ವಿಭಿನ್ನವಾಗಿ ನಿಲ್ಲದೆ ಮತ್ತದೇ ಕಥೆ ಹೊಸ ಪಾತ್ರಧಾರಿಗಳ ಮೂಲಕ ಮಾಡಿಸಿದ್ದಂತೆ ಇದೆ

ಒನ್ ಇಂಡಿಯಾ (2.5 ಸ್ಟಾರ್ )

ವಿವೇಕ್ ಒಬೆರಾಯ್, ಕಂಗನಾ ರಾನೌತ್, ಹೃತಿಕ್ ರೋಷನ್ ಅಭಿಮಾನಿಗಳು ಒಮ್ಮೆ ನೋಡಿ ಮರೆಯಬಹುದಾದ ಚಿತ್ರ. ಮಕ್ಕಳಿಗೆ ಇಷ್ಟವಾಗಬಹುದಾದರೂ ರಾಕೇಶ್ ರೋಷನ್ ಅವರ ಮ್ಯಾಜಿಕ್ ಟಚ್ ಮಿಸ್ ಆಗಿದೆ.

English summary
Hrithik Roshan's much-awaited movie Krrish 3 hits the theatres today. A third in the franchise that began with 2003 movie Koi... Mil Gaya, Krrish 3 will take forward the story of the superhero Krrish, played by Hrithik.
Please Wait while comments are loading...