twitter
    For Quick Alerts
    ALLOW NOTIFICATIONS  
    For Daily Alerts

    'ಮಹಾಕಾಳಿ' ಮಾಲಾಶ್ರೀ ಘರ್ಜನೆ ಬಗ್ಗೆ ವಿಮರ್ಶಕರು ಏನಂತಾರೆ?

    By Harshitha
    |

    ಆಕ್ಷನ್ ಕ್ವೀನ್ ಮಾಲಾಶ್ರೀ ಅಭಿನಯದ 'ಮಹಾಕಾಳಿ' ಸಿನಿಮಾ ಈ ವಾರ ಅದ್ದೂರಿಯಾಗಿ ತೆರೆಗೆ ಬಂದಿದೆ. ಬೆಳ್ಳಿ ಪರದೆ ಮೇಲೆ 'ಸ್ಯಾಂಡಲ್ ವುಡ್ ನ ಹೆಣ್ ಚಿರತೆ' ಮತ್ತೊಮ್ಮೆ ಘರ್ಜಿಸಿದ್ದಾರೆ. 'ಮಹಾಕಾಳಿ'ಯಾಗಿ ದುಷ್ಟ ಸಂಹಾರ ಮಾಡಿದ್ದಾರೆ.

    ಸೆಂಟಿಮೆಂಟ್ ಸಿನಿಮಾಗಳಿಗೆ ಫೇಮಸ್ ಆಗಿದ್ದ ನಿರ್ದೇಶಕ ಎಸ್.ಮಹೇಂದರ್, 'ಮಹಾಕಾಳಿ' ಮೂಲಕ ಮೊದಲ ಬಾರಿ ಆಕ್ಷನ್ ಚಿತ್ರಕ್ಕೆ ಕೈಹಾಕಿದ್ದಾರೆ. ಹಲವು ಅಡ್ಡಿ-ಆತಂಕಗಳ ನಡುವೆ 'ಮಹಾಕಾಳಿ' ಪ್ರೇಕ್ಷಕರೆದುರಿಗೆ ಪ್ರತ್ಯಕ್ಷವಾಗಿದ್ದಾಳೆ. [ಕಾರಣವಿಲ್ಲದೇ ಕಣ್ಣೀರಿಟ್ಟ 'ಮಹಾಕಾಳಿ' ಮಾಲಾಶ್ರೀ]

    ಮಾಲಾಶ್ರೀ ಫ್ಯಾನ್ಸ್ ಗೆ 'ಮಹಾಕಾಳಿ' ಮನರಂಜನೆ ನೀಡಿದೆ. ಆದ್ರೆ, ಸಿನಿ ವಿಮರ್ಶಕರು 'ಮಹಾಕಾಳಿ' ಬಗ್ಗೆ ಏನು ಹೇಳ್ತಾರೆ? ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಬೇಕೆಂದ್ರೆ, 'ಮಹಾಕಾಳಿ' ಚಿತ್ರದ ಬಗ್ಗೆ ಕರ್ನಾಟಕ ಜನಪ್ರಿಯ ಪತ್ರಿಕೆಗಳು ನೀಡಿರುವ ವಿಮರ್ಶೆಗಳ ಸಂಗ್ರಹ ಇಲ್ಲಿದೆ. ಮುಂದೆ ಓದಿ....

    ಮಾಲಾಶ್ರೀ ಕಾಳಿ, ಮಹೇಂದರ್ ಖಾಲಿ! - ಉದಯವಾಣಿ

    ಮಾಲಾಶ್ರೀ ಕಾಳಿ, ಮಹೇಂದರ್ ಖಾಲಿ! - ಉದಯವಾಣಿ

    ಮಾಲಾಶ್ರೀ ಅವರ ಹಿಂದಿನ ಚಿತ್ರಗಳಿಗೂ "ಮಹಾಕಾಳಿಗೂ' ಅಂತಹ ವ್ಯತ್ಯಾಸವೇನೂ ಇಲ್ಲ. ಹಿಂದಿನ ಚಿತ್ರಗಳಲ್ಲೂ ಅವರೊಂದು ದೇವಿಯ ರೂಪ ತಾಳಿ ದುಷ್ಟರ ಸಂಹಾರ ಮಾಡುತ್ತಿದ್ದರು. ಇಲ್ಲೂ ಸಹ "ಮಹಾಕಾಳಿ'ಯಾಗಿ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಇನ್ನು ಹಿಂದಿನ ಚಿತ್ರಗಳಲ್ಲಿ ಮಾಲಾಶ್ರೀ ಪೊಲೀಸ್‌ ಇನ್‌ಸ್ಪೆಕ್ಟರ್ ಆಗಿಯೋ ಅಥವಾ ಸರ್ಕಾರಿ ಅಧಿಕಾರಿಯಾಗಿಯೋ ಜನರ ಹಿತ ಕಾಯುತ್ತಿದ್ದರು. ಇಲ್ಲಿ ಅವರು ಕರ್ನಾಟಕ ಮಹಿಳಾ ರಕ್ಷಣಾ ವೇದಿಕೆಯೆಂಬ ಸಂಘ ಕಟ್ಟಿ ಅಬಲೆಯರನ್ನು ಕಾಪಾಡುವ ಕೆಲಸ ಮಾಡಿದ್ದಾರೆ. ಎಂದಿನಂತೆ ಇಡೀ ಚಿತ್ರ ಮಾಲಾಶ್ರೀ ಅವರ ಹೆಗಲ ಮೇಲಿದೆ. ಇಂತಹ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಅನುಭವ ಅವರಿಗಿರುವುದರಿಂದ ಮಾಲಾಶ್ರೀ ಸಲೀಸಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಮಾಲಾಶ್ರೀ ಅವರ ಹಿಂದಿನ ಚಿತ್ರಗಳನ್ನು ನೋಡದವರು ಈ ಚಿತ್ರವನ್ನು ನೋಡಲಡ್ಡಿಯಿಲ್ಲ. (ಇನ್ನಷ್ಟು ಇಲ್ಲಿ ಓದಿ) - ಚೇತನ್ ನಾಡಿಗೇರ್

    ಕನ್ನಡ ಪ್ರೇಕ್ಷಕರಿಗೆ ಕಾಳಿ ಭಾಗ್ಯ - ಕನ್ನಡಪ್ರಭ

    ಕನ್ನಡ ಪ್ರೇಕ್ಷಕರಿಗೆ ಕಾಳಿ ಭಾಗ್ಯ - ಕನ್ನಡಪ್ರಭ

    ಮಾಲಾಶ್ರೀ ಅವರ ಹಳೆಯ ಆಕ್ಷನ್ ಸಿನಿಮಾ ನೋಡೋದಕ್ಕೂ 'ಮಹಾಕಾಳಿ' ನೋಡೋದಕ್ಕೂ ದೊಡ್ಡ ವ್ಯತ್ಯಾಸ ಕಾಣುವುದಿಲ್ಲ. ಆದ್ರೆ ರಾಮು ಬ್ಯಾನರ್ ಅಲ್ಲದ್ದರಿಂದ ಇಲ್ಲಿ ರಿಚ್ ನೆಸ್ ಕಡಿಮೆಯೇ. ಮಾಲಾಶ್ರೀ ಪಾತ್ರಕ್ಕೆ ದೇವಿ ಅನ್ನೋ ಹೆಸರಿಟ್ಟಿರೋ ಕಾರಣಕ್ಕೋ ಏನೋ ಇಲ್ಲಿ 'ನಂಜುಂಡಿ ಕಲ್ಯಾಣ'ದ ರೆಫರೆನ್ಸ್ ಕೂಡ ಬರುತ್ತದೆ. ಆದರೆ ಆಗುಂಬೆಯ ಮಳೆಯಂತೆ ಹೊಡೆದಾಟದ ಮಳೆಯೇ ಸುರಿದರೂ 'ನಂಜುಂಡಿ ಕಲ್ಯಾಣ'ದ ಆ ಗೊಂಬೆ ಮಾತ್ರ ಇಲ್ಲಿ ಕಾಣಿಸುವುದಿಲ್ಲ. ಹೆಣ್ಣಿನ ಮೇಲಿನ ದೌರ್ಜನ್ಯದ ಬಗ್ಗೆ ಸಾಫ್ಟ್ ಕಾರ್ನರ್ ಇರುವವರಿಗೂ ಕಾರ್ನರ್ ಸೀಟಲ್ಲಿ ಕುಳಿತು ಸಿನಿಮಾ ನೋಡುವುದು ಕಷ್ಟ. ಹಾಗಾಗಿ ಹೆಣ್ಣಿನ ಮೇಲಿನ ದೌರ್ಜನ್ಯದ ಹೆಸರಲ್ಲಿ ಪ್ರೇಕ್ಷಕನ ಮೇಲೆ ದೌರ್ಜನ್ಯವೆಸಗಲಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ. (ಇನ್ನಷ್ಟು ಇಲ್ಲಿ ಓದಿ) - ಹರಿ

    ದುರ್ಗಿಯ ಇನ್ನೊಂದು ಅವತಾರ - ವಿಜಯ ಕರ್ನಾಟಕ

    ದುರ್ಗಿಯ ಇನ್ನೊಂದು ಅವತಾರ - ವಿಜಯ ಕರ್ನಾಟಕ

    ನಾಲ್ಕೈದು ಫೈಟ್ಸ್, ಡೈಲಾಗ್ಸ್, ದುಷ್ಟರನ್ನು ಕಂಡಾಗ ಕಣ್ಣಲ್ಲಿ ಬೆಂಕಿ, ಒಂದಿಷ್ಟು ಸಂದೇಶ ಮತ್ತು ವ್ಯವಸ್ಥೆಯ ಬಗ್ಗೆ ಆಕ್ರೋಶ. ಇವೆಲ್ಲ ಮಾಲಾಶ್ರೀ ನಟಿಸಿದ ಹೆಚ್ಚಿನ ಸಿನಿಮಾಗಳ ಹೈಲೈಟ್ಸ್. ನಿರ್ದೇಶಕ ಮಹೇಂದರ್ 'ಮಹಾಕಾಳಿ'ಯನ್ನೂ ಇಂತಹದ್ದೇ ವಸ್ತು, ವಿಷಯದಿಂದ ನಿರ್ಮಿಸಿದ್ದಾರೆ. ಚಿತ್ರವು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅನ್ಯಾಯಗಳ ವಿರುದ್ಧ ಮಾತನಾಡುತ್ತದೆ. ಅಶ್ಲೀಲ, ಡಬಲ್ ಮೀನಿಂಗ್ ಕಾಮಿಡಿಯನ್ನೂ ಚಿತ್ರಕ್ಕೆ ತುರುಕಲಾಗಿದೆ. ಒಂದೆರಡೂ ಐಟಂ ಡ್ಯಾನ್ಸ್ ಗಳೂ ಇವೆ. ಹೀಗಾಗಿ ಚಿತ್ರವು ಒಂದು ಸ್ಪಷ್ಟ ಹಾದಿಯನ್ನು ಮರೆತು ಗೊಜಲು ಗೊಜಲಾಗಿ ಸಾಗಿದಂತೆ ಭಾಸವಾಗುತ್ತದೆ. (ಇನ್ನಷ್ಟು ಇಲ್ಲಿ ಓದಿ) - ಪ್ರವೀಣ್ ಚಂದ್ರ

    ರಕ್ಷಣೆಗೆ ಬದ್ಧ ಹೊಡೆದಾಟಕ್ಕೆ ಸಿದ್ಧ! - ವಿಜಯವಾಣಿ

    ರಕ್ಷಣೆಗೆ ಬದ್ಧ ಹೊಡೆದಾಟಕ್ಕೆ ಸಿದ್ಧ! - ವಿಜಯವಾಣಿ

    ಮಾಲಾಶ್ರೀ ಅಭಿನಯದ ಮಾಮೂಲಿ ಚಿತ್ರಗಳಂತೆಯೇ ಇದೆ 'ಮಹಾಕಾಳಿ'. 'ದುರ್ಗಿ', 'ಚಾಮುಂಡಿ', 'ಶಕ್ತಿ' ಅವತಾರಗಳನ್ನೆತ್ತಿ ದುಷ್ಟರನ್ನು ಸದೆಬಡಿದಿದ್ಧ ಶೈಲಿಯಲ್ಲೇ 'ಮಹಾಕಾಳಿ'ಯೂ ಖಳರನ್ನು ಕಂಡಕಂಡಲ್ಲಿ ಚೆಂಡಾಡುತ್ತಾಳೆ. ಸಣ್ಣ ಬದಲಾವಣೆಯೆಂದರೆ, ಮಾಲಾಶ್ರೀ ಅವರಿಲ್ಲಿ ಪೊಲೀಸ್ ಅಧಿಕಾರಿಣಿಯಲ್ಲ! ಮೈಮೇಲೆ ಖಾಕಿ ಇಲ್ಲದೇ ಹತ್ತು ಪ್ರದರ್ಶಿಸುವುದು 'ಮೇಡಂ'ಗೆ ಹೊಸತಲ್ಲ. ಅದೇ ಹೊಸತನವಿಲ್ಲದ ಹಳೆ ಖದರ್ ನಲ್ಲೇ ವಿಜೃಂಭಿಸಿರುವುದು 'ಮಹಾಕಾಳಿ' ಆಕರ್ಷಣೆ! - ರಾಮೂ

    ಮಾಲಾಶ್ರೀ ಸೂತ್ರದ ಸಿನಿಮಾ - ಪ್ರಜಾವಾಣಿ

    ಮಾಲಾಶ್ರೀ ಸೂತ್ರದ ಸಿನಿಮಾ - ಪ್ರಜಾವಾಣಿ

    ‘ಮಹಾಕಾಳಿ'ಯ ಚಿತ್ರಕಥೆಯ ಪ್ರಸಂಗಗಳು ನಮ್ಮ ಸಮಾಜದಲ್ಲಿ ನಿತ್ಯ ಕಾಣುವಂಥದ್ದೇ. ಹೆತ್ತತಾಯಿಯನ್ನು ವೃದ್ಧಾಶ್ರಮ ಸೇರಿಸುವ ಮಕ್ಕಳು, ಹಣಕ್ಕಾಗಿ ಭ್ರಷ್ಟರಾಗುವ ಪೊಲೀಸರು, ವಕೀಲರು. ಹೆಣ್ಣನ್ನು ಕಾಮಕ್ಕೆ ಎಂದುಕೊಳ್ಳುವ ಪುರುಷರು, ವರದಕ್ಷಿಣೆಗಾಗಿ ಸೊಸೆಯನ್ನೇ ಬಲಿಹಾಕುವ ಅತ್ತೆಯರು, ಆಸ್ತಿಗಾಗಿ ಒಡಹುಟ್ಟಿದವಳನ್ನೇ ವಂಚಿಸುವ ಅಣ್ಣ-ತಮ್ಮಂದಿರು... ಇತ್ಯಾದಿ. ಇದಕ್ಕೆ ಪೂರಕ ಎನ್ನುವಂತೆ ಒಂದು ಪ್ರೇಮಕಥೆ ಎಳೆಯೂ ತೆರೆದುಕೊಳ್ಳುತ್ತದೆ. ನಿರ್ದೇಶಕ ಮಹೇಂದರ್, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆಯ ಕಥೆಯನ್ನು ಹೇಳಿದ್ದಾರೆ. ಮಾಲಾಶ್ರೀ ಅವರ ‘ಲೇಡಿ ಟೈಗರ್' ಹೊಡಿ-ಬಡಿ ಸಿನಿಮಾಗಳನ್ನು ನೋಡಿದವರಿಗೆ ‘ಮಹಾಕಾಳಿ' ಹೊಸತು ಎನಿಸುವ ಭಾವನೆ ಮೂಡುವುದಿಲ್ಲ. (ಇನ್ನಷ್ಟು ಇಲ್ಲಿ ಓದಿ) - ಡಿ.ಎಂ.ಕುರ್ಕೆ ಪ್ರಶಾಂತ

    ಮಹಾಕಾಳಿ ವಿಮರ್ಶೆ - ಬೆಂಗಳೂರು ಮಿರರ್

    ಮಹಾಕಾಳಿ ವಿಮರ್ಶೆ - ಬೆಂಗಳೂರು ಮಿರರ್

    Director S Mahendar has changed his name to SS Mahendar. And that is the end of the change you can expect in his new flick. Mahakali has a series of incidents lined up for a story. When it is about protecting women in India, it is not difficult to imagine what these incidents are about. From dowry menace to acid attacks, Mahakali Malashree tackles them all. She is not a police officer for a change, but that does not stop her from indulging in social work. Her all-woman protection organisation does what the police cannot. The film suffers from predictability. (ಇನ್ನಷ್ಟು ಇಲ್ಲಿ ಓದಿ) - ಶ್ಯಾಮ್ ಪ್ರಸಾದ್.ಎಸ್

    English summary
    Kannada Actress Malashri starrer 'Mahakali' has received mixed response from the critics. Here is the collection of reviews by Top News Papers of Karnataka.
    Sunday, April 24, 2016, 17:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X