twitter
    For Quick Alerts
    ALLOW NOTIFICATIONS  
    For Daily Alerts

    Thallumaala movie review: ಹೀಗೂ ಕತೆ ಹೇಳಬಹುದು!

    |

    ಮಲಯಾಳಂ ಸಿನಿಮಾ 'ತಲ್ಲುಮಾಲ' ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದು ಆಗಸ್ಟ್ 12 ರಂದು. ಆದರೆ ಕೇರಳದ ಹೊರಗೆ ಮಲಯಾಳಂ ಸಿನಿಮಾಗಳನ್ನು ಬಹುತೇಕ ಒಟಿಟಿಯಲ್ಲಿ ನೋಡುವುದೇ ಹೆಚ್ಚು! ಟೊವಿನೋ ಥಾಮಸ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ತಲ್ಲುಮಾಲ' ಸಿನಿಮಾ ಸೆಪ್ಟೆಂಬರ್ 11 ರಂದು ಒಟಿಟಿಗೆ ಬಂದಿದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಈ ಸಿನಿಮಾ ನೀಡುವ ಅನುಭವ ಭಿನ್ನ.

    ಸಾಮಾನ್ಯವಾಗಿ ಸಿನಿಮಾದಲ್ಲಿ ಅದರ ಕತೆ, ನಟರು, ಹಾಡುಗಳು ಮುನ್ನೆಲೆಯಲ್ಲಿ ನಿಲ್ಲುತ್ತವೆ ಆದರೆ 'ತಲ್ಲುಮಾಲ'ನಲ್ಲಿ ಕತೆ ಹೇಳಿರುವ ವಿಧಾನ, ಎಡಿಟಿಂಗ್ ನಾಯಕನ ಸ್ಥಾನದಲ್ಲಿದೆ. ಉಳಿದಿದ್ದೆಲ್ಲ ಅದರ ಹಿಂದೆ. ಸಿನಿಮಾ ಮುಗಿದ ಮೇಲೆ ಪ್ರೇಕ್ಷಕನಿಗೆ ನೆನಪುಳಿಯುವುದು ಕತೆ ಹೇಳಲು ಬಳಸಿದ ತಂತ್ರ, ನಿರೂಪಣಾ ರೀತಿ ಮತ್ತು ಅದ್ಭುತ ಫೈಟ್‌ಗಳು.

    'ತಲ್ಲುಮಾಲ' ಎಂದರೆ ಸರಣಿ ಜಗಳ ಅಥವಾ ಗಲಾಟೆ. ನಾಯಕ ಹಾಗೂ ಅವನ ಮೂವರು ಗೆಳೆಯರು ಮಾಡುವ ಗಲಾಟೆಗಳ ಕತೆಯೇ ಈ ಸಿನಿಮಾ. 'ತಲ್ಲುಮಾಲ'ದ ಉದ್ದಕ್ಕೂ ಗಲಾಟೆ, ಫೈಟ್‌ಗಳಿವೆ. ಆ ಗಲಾಟೆ ಹೇಗಾಯಿತು? ಅದಕ್ಕೆ ಕಾರಣವೇನು? ಆ ಗಲಾಟೆ ಇನ್ನೊಂದು ಗಲಾಟೆಗೆ ಲೀಡ್ ಹೇಗಾಯ್ತು? ಈ ಬಿಂದುಗಳನ್ನು ಮುಟ್ಟುತ್ತಾ ಹೋಗುತ್ತಾನೆ ನಿರ್ದೇಶಕ ಅಷ್ಟೆ, ನಡುವಲ್ಲಿ ನಾಯಕಿ, ನಾಯಕನ ಕುಟುಂಬ ಬಂದು ಹೋಗುತ್ತಾರೆ. ಆದರೆ 'ಇಷ್ಟೆ' ಎನ್ನಬಹುದಾದ ಕತೆಯನ್ನು ನಿರ್ದೇಶಕ ಖಾಲಿದ್ ರೆಹಮಾನ್ ಹೇಳಿರುವ ರೀತಿ ಸಂಪೂರ್ಣ ಭಿನ್ನ, ಎಂಗೇಜಿಂಗ್ ಹಾಗೂ ಎಂಟರ್ಟೈನಿಂಗ್.

    ಪುರುಷ ಅಹಂಕಾರದ ವಿಷಯ ಆಧರಿಸಿದ ಸಿನಿಮಾ

    ಪುರುಷ ಅಹಂಕಾರದ ವಿಷಯ ಆಧರಿಸಿದ ಸಿನಿಮಾ

    ಮಲಯಾಳಂ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ'ನಂತೆಯೇ ಈ ಸಿನಿಮಾ ಸಹ ಪುರುಷ ಅಹಂಕಾರದ ವಿಷಯವನ್ನೇ ಆಧರಿಸಿದೆ. ಸಿನಿಮಾದಲ್ಲಿನ ಬಹುತೇಕ ಎಲ್ಲ ಮುಖ್ಯ ಪಾತ್ರಗಳು ಬಹಳ ಸಿಟ್ಟಿನಲ್ಲಿರುತ್ತವೆ, ಒಬ್ಬರ ಮೇಲೊಬ್ಬರು ಜಗಳ ಮಾಡಲು ಗಲಾಟೆ ಮಾಡಲು ಕಾಯುತ್ತಿರುತ್ತವೆ ಕೇಳಲು ವಿಚಿತ್ರ ಎನಿಸಬಹುದು ಆದರೆ ನೋಡಲು ಎಂಟರ್ಟೈನಿಂಗ್ ಆಗಿದೆ ಈ ಜಗಳಗಳು. ಅಂದಹಾಗೆ ಈ ಸಿನಿಮಾವನ್ನು ಹಾಲಿವುಡ್‌ನ 'ಫೈಟ್ ಕ್ಲಬ್' ಸಿನಿಮಾದಿಂದ ಸ್ಪೂರ್ತಿ ಪಡೆದು ಮಾಡಲಾಗಿದೆ. ಹಾಗೆಂದು 'ಫೈಟ್ ಕ್ಲಬ್' ರೀಮೇಕ್ ಅಥವಾ ಅದೇ ರೀತಿಯ ಸಿನಿಮಾ ಇದಲ್ಲ.

    ಫೈಟ್‌ಗಳು ಸಿನಿಮಾದ ಜೀವಾಳ

    ಫೈಟ್‌ಗಳು ಸಿನಿಮಾದ ಜೀವಾಳ

    ಸಿನಿಮಾದ ತುಂಬ ಫೈಟ್‌ಗಳೇ ತುಂಬಿವೆ ಆದರೆ ಅದನ್ನು ತೋರಿಸಿರುವ ರೀತಿ ಭಿನ್ನವಾಗಿದೆ. ಥಿಯೇಟರ್ ಫೈಟ್ ಅಂತೂ ಅದ್ಭುತ. ಜೊತೆಗೆ ಮದುವೆ ಫೈಟ್ ಸಹ. ಸೀಮಿತ ಬಜೆಟ್‌ನಲ್ಲಿ ಸಹ ರಿಚ್ ಫೀಲ್ ನೀಡುವ ಸಿನಿಮಾ ಮಾಡಿದ್ದಾರೆ ನಿರ್ದೇಶಕ. ಜೆಂಜಿ ಫೀಲ್, ನ್ಯೂ ಮಿಲೇನಿಯಲ್ ಫೀಲ್ ನೀಡುತ್ತದೆ ಈ ಸಿನಿಮಾ. ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ರೀತಿ, ಹಿನ್ನೆಲೆ ಸಂಗೀತ, ದೃಶ್ಯ ಸಂಯೋಜನೆ, ಕ್ಯಾಮೆರಾದ ಬಳಕೆ, ಗ್ರಾಫಿಕ್ಸ್, ಅನಿಮೇಷನ್ ಎಲ್ಲದರಲ್ಲೂ ಭಿನ್ನತೆ ಪ್ರದರ್ಶಿಸಿದ್ದಾರೆ ನಿರ್ದೇಶಕ ಖಾಲಿದ್ ರೆಹಮಾನ್. ಇದರಿಂದಾಗಿ ಇಡೀ ಸಿನಿಮಾಕ್ಕೆ ಒಂದು 'ಸ್ಟೈಲ್' ಧಕ್ಕಿದೆ.

    ಸಿನಿಮಾ ಸಖತ್ ಸ್ಟೈಲಿಶ್ ಆಗಿದೆ

    ಸಿನಿಮಾ ಸಖತ್ ಸ್ಟೈಲಿಶ್ ಆಗಿದೆ

    ಸಿನಿಮಾವನ್ನು ಸ್ಟೈಲಿಷ್ ಆಗಿ ಮಾಡಲು, ಗ್ರ್ಯಾಂಡ್ ಆಗಿ ಕಾಣುವಂತೆ ಮಾಡಲು ಕೋಟ್ಯಂತರ ರುಪಾಯಿ ಹಣವನ್ನು ಸುರಿಯಾಗುತ್ತಿದೆ. 'ರಾಧೆ-ಶ್ಯಾಮ್' ಇದಕ್ಕೆ ಅತ್ಯುತ್ತಮ ಉದಾಹರಣೆ. ಆದರೆ ಸೀಮಿತ ಬಜೆಟ್‌ನಲ್ಲಿಯೇ ಸಿನಿಮಾವನ್ನು ಸಖತ್ ಸ್ಟೈಲಿಶ್ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಖಾಲಿದ್ ರೆಹಮಾನ್. ಚಿತ್ರಕತೆ ಹಾಗೂ ಸ್ಟೋರಿ ಬೋರ್ಡ್‌ ಮೇಲೆ ಅವರು ಹಾಕಿರುವ ಶ್ರಮ ಸಿನಿಮಾದ ಪ್ರತಿ ದೃಶ್ಯದಲ್ಲೂ ಕಾಣುತ್ತದೆ.

    ಸಿನಿಮಾದ ಎಡಿಟಿಂಗ್ ಪರ್ಫೆಕ್ಟ್ ಎನ್ನುವಷ್ಟು ಚೆನ್ನಾಗಿದೆ

    ಸಿನಿಮಾದ ಎಡಿಟಿಂಗ್ ಪರ್ಫೆಕ್ಟ್ ಎನ್ನುವಷ್ಟು ಚೆನ್ನಾಗಿದೆ

    ಸಿನಿಮಾದ ಎಡಿಟಿಂಗ್ ಪರ್ಫೆಕ್ಟ್ ಎನ್ನುವಷ್ಟು ಚೆನ್ನಾಗಿದೆ. ಸಿನಿಮಾದ ಜೋಶ್‌ಫುಲ್ ನಿರೂಪಣೆಗೆ ಎಡಿಟಿಂಗ್‌ ಮೂಲ ಕಾರಣ. ಜೊತೆಗೆ ಕ್ಯಾಮೆರಾ ಕೆಲಸ. ಫೈಟ್ ದೃಶ್ಯಗಳಲ್ಲಿ ಕ್ಯಾಮೆರಾವನ್ನು ಬಳಸಿರುವ ರೀತಿ ಒಮ್ಮೊಮ್ಮೆ ಆಶ್ಚರ್ಯ ಮೂಡಿಸುತ್ತದೆ. ಹಿನ್ನೆಲೆ ಸಂಗೀತವೂ ಭಿನ್ನವಾಗಿದೆ. ಯೂತ್‌ಫುಲ್ ಆಗಿದೆ. ಹಾಡುಗಳಿಗೂ ಭಿನ್ನತೆಯ ಟಚ್ ನೀಡಲಾಗಿದೆ. ಆದರೆ ಒಂದೆರಡು ಹಾಡುಗಳಿಗೆ ಕತ್ತರಿ ಹಾಕಿದ್ದಿದ್ದರೆ ಸಿನಿಮಾದ ತೀವ್ರತೆ ಇನ್ನಷ್ಟು ಹೆಚ್ಚಾಗುತ್ತಿತ್ತೇನೊ. ಸಿನಿಮಾದ ತುಂಬ ಜಗಳ-ಹೊಡೆದಾಟವೇ ಇದೆ. ಆದರೆ ರಿಪೀಟೆಡ್ ಎನ್ನಿಸದ ರೀತಿಯಲ್ಲಿ ಆಕ್ಷನ್ ಅನ್ನು ಕಂಪೋಸ್ ಮಾಡಲಾಗಿದೆ.

    ಯಾರ ನಟನೆ ಹೇಗಿದೆ?

    ಯಾರ ನಟನೆ ಹೇಗಿದೆ?

    ಸಿನಿಮಾದ ನಾಯಕ ಟೊವಿನೋ ಥಾಮಸ್ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂರೂ ಶೇಡ್‌ನಲ್ಲಿ ಚೆನ್ನಾಗಿ ಮಿಂಚಿದ್ದಾರೆ. ಸಿನಿಮಾದ ನಾಯಕಿ ಕಲ್ಯಾಣಿ ಪ್ರಿಯದರ್ಶಿನಿ ಮುದ್ದಾಗಿ ಕಾಣುತ್ತಾರೆ ನಟನೆಯೂ ಚೆಂದವೇ. ಫೈಟ್‌ಗಳೇ ತುಂಬಿರುವ ಪುರುಷರ ಅಹಂಕಾರ ಬಗೆಗಿನ ಚಿತ್ರದಲ್ಲಿಯೂ ಅವರ ಪಾತ್ರಕ್ಕೆ ತುಸು ಸ್ಪೇಸ್ ನೀಡಿದ್ದಾರೆ ನಿರ್ದೇಶಕ, ಆ ಅವಕಾಶವನ್ನು ನಟಿ ಬಳಸಿಕೊಂಡಿದ್ದಾರೆ. ಟೊವಿನೋ ಥಾಮಸ್ ಗೆಳೆಯರ ಪಾತ್ರದಲ್ಲಿ ನಟಿಸುವವರ ನಟನೆ ಚೆನ್ನಾಗಿದೆ. ಆಕ್ಷನ್ ದೃಶ್ಯಗಳಲ್ಲಿ ಅವರಿಗೂ ಒಳ್ಳೆಯ ಹಿರೋಯಿಕ್, ಸ್ಲೋ ಮೋಶನ್ ದೃಶ್ಯಗಳನ್ನು ನೀಡಲಾಗಿದೆ. ಸಿನಿಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ಶೈನ್ ಟಾಮ್ ಚಾಕೋ ನಟನೆ ಸೂಪರ್.

    ಸಿನಿಮಾದ ನೆಗೆಟಿವ್ ಅಂಶಗಳೇನು?

    ಸಿನಿಮಾದ ನೆಗೆಟಿವ್ ಅಂಶಗಳೇನು?

    ಸಿನಿಮಾದಲ್ಲಿ ನೆಗೆಟಿವ್ ಅಂಶಗಳೇ ಇಲ್ಲ ಎಂದೇನೂ ಇಲ್ಲ. ಕತೆ ಹೇಳಲು ಗೊಂದಲಮಯ ನಿರೂಪಣಾ ತಂತ್ರ ಬಳಸಲಾಗಿದೆ. ಇದು ಕೆಲವರಿಗೆ ಹಿಡಿಸಿದೇ ಹೋಗಬಹುದು. ಸಿನಿಮಾದಲ್ಲಿನ ಅತಿಯಾದ ಜೆನ್‌ಜೀ ತನ ತುಸು ಹಳೆಯ ತಲೆಮಾರಿನವರಿಗೆ ಹಿಡಿಸಲಿಕ್ಕಿಲ್ಲ. ಮತ್ತು ಜಗಳ ಗಲಾಟೆಯೇ ತುಂಬಿದ ಸಿನಿಮಾ ಹೆಚ್ಚು ಜನರಿಗೆ ಇಷ್ಟವಾಗದೇ ಹೋಗಬಹುದು. ಸಿನಿಮಾದ ಕೆಲವು ದೃಶ್ಯಗಳಿಗೆ ಲಿಂಕ್ ಎಲ್ಲಿಯದೆಂದು ತಿಳಿಯುವುದಿಲ್ಲ. ಅಲ್ಲಲ್ಲಿ ಮಿಸ್ಸಿಂಗ್ ಎನಿಸುತ್ತದೆ. ಒಟ್ಟಾರೆ ಇದೊಂದು ಬಹಳ ಭಿನ್ನ ಅನುಭವ ಕೊಡುವ ಸಿನಿಮಾ. ಈ ರೀತಿಯ ಭಿನ್ನ ನಿರೂಪಣೆಯ ಸಿನಿಮಾ ಭಾರತದಲ್ಲಿ ಬಂದಿಲ್ಲವೆಂದೇ ಹೇಳಬೇಕು. ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡದಲ್ಲೂ ವೀಕ್ಷಿಸಬಹುದಾಗಿದೆ.

    English summary
    Tovino Thomos, Kalyani Priyadarshini starrer Malayalam movie Thallumaala movie review in Kannada.
    Friday, September 16, 2022, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X