For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಮಾರ್ನಿಂಗ್ 'ನಶೆ' ಮಧ್ಯಾಹ್ನಕ್ಕೆ ಇಳಿಯುತ್ತೆ

  By ಜೇಮ್ಸ್ ಮಾರ್ಟಿನ್
  |

  ನಶಾ-ಪೂನಂ ಪಾಂಡೆ ಬಿಟ್ಟರೆ ಈ ಚಿತ್ರದಲ್ಲಿ ಏನು ಇಲ್ಲ, ಪ್ರೇಕ್ಷಕರಿಗೆ ಆಕೆ ಅಲ್ದೆ ಮತ್ತೇನು ಬೇಕಾಗಿಲ್ಲ. ಆದರೆ, 2003ರಲ್ಲಿ ಜಿಸ್ಮ್ ಚಿತ್ರ ನಿರ್ದೇಶಕ ಅಮಿತ್ ಸಕ್ಸೇನಾ ಇಂಥದೇ ಚಿತ್ರ ನೀಡಿದ್ದರು. ಅದರ ಕಥೆ ಏನಾಯಿತು? ಏನು ಮಾಡೋಕೆ ಆಗೋಲ್ಲ ಬಿಡಿ.

  ಒಂದು ಫ್ಲಾಶ್ ಬ್ಯಾಕ್ ಗೆ ಹೋಗೋಣವೇ.. ಶಾಲಾ-ಕಾಲೇಜು ಹುಡುಗರು ಕ್ಲಾಸಿಗೆ ಬಂಕ್ ಮಾಡಿ ಶುಕ್ರವಾರ ತಪ್ಪದೇ ಮಾರ್ನಿಂಗ್ ಶೋ (ಪೋಸ್ಟರ್ ನೋಡಿ ಏನೋ ಇರುತ್ತೆ ಎಂಬ ಕಲ್ಪನೆಯಲ್ಲಿ!) ಹೋಗಿ ಬಂದಿರುವುದು ದೇಶದ ಎಲ್ಲಾ ಹದಿಹರೆಯದವರ ಅಘೋಷಿತ ಹಾಬಿ ಅಲ್ಲವೇ. ಪೂನಂ ಪಾಂಡೆ ಅವರ ನಶಾ ಕೂಡಾ ಮಾರ್ನಿಂಗ್ ಕೊಡೊ 'ನಶೆ' ಮಧ್ಯಾಹ್ನದ ಬಿಸಿಲಿಯಲ್ಲಿ ಸರ್ರನೆ ಇಳಿದು ಬಿಡುತ್ತದೆ.

  ಜಿಸ್ಮ್ ನಲ್ಲಿ ಬಿಪಾಶ ಬಸು ಏರಿಸಿದ ನಶೆಗೂ ಪೂನಂ ಪಾಂಡೆ ಏರಿಸಲು ಹೊರಟಿರುವ ನಶಾ ಗೂ ಅಜಗಜಾಂತರ ಇದೆ. ಬಟ್ಟೆ ಬಿಚ್ಚುವುದಷ್ಟೆ ನಟನೆ ಎಂದು ಪೂನಂ ತಿಳಿದಿದ್ದರೆ ಸ್ಸಾರಿ.. ಅದಕ್ಕೆ ಅವರಿಗಾಗಿ ಇನ್ನೊಂದು ಟ್ವಿಟ್ಟರ್ ಅಥವಾ ಫೇಸ್ ಬುಕ್ ಖಾತೆ ಮಾಡಿಕೊಡಿ ಪ್ಲೀಸ್..

  ಅಂದ ಹಾಗೆ, ಕಥೆ ಏನು?: 18 ರ ಹರೆಯ ಹುಡುಗ 25ರ ಹರೆಯದ ಹುಡುಗಿ(ಪೂನಂ?) ಮೇಲೆ ಮೋಹ ಉಂಟಾಗುತ್ತದೆ. ಪ್ರೇಮ ಕಾಮವಾಗಿ ಬದಲಾಗಿ ಆತ ಕಲ್ಪನೆಯಲ್ಲೇ ಆಕೆಯೊಂದಿಗೆ ಸುಖದ ಹೊಳೆಯಲ್ಲಿ ಈಜುತ್ತಿರುತ್ತಾನೆ. ಈಜುತ್ತಲೇ ಇರುತ್ತಾನೆ. ಈ ಚಿತ್ರದಲ್ಲಿ ಹೇಳಲು ಹೊರಟಿರುವುದು ಇಷ್ಟೆ. ಆಸೆ ಎಂಬ ಮಾಯಾ ಜಗತ್ತಲ್ಲಿ ರೊಮ್ಯಾನ್ಸ್ ತಾತ್ಕಾಲಿಕ, ಪ್ರೀತಿ ಒಂಟಿ, ಚಟ ನಿರಂತರ ಅವಿರತ ಅಬಾಧಿತ ಕ್ರಿಯೆ. ಪೂನಂ ಚಿತ್ರದಲ್ಲಿ ಇನ್ನೇನು ವಿಶೇಷ ಕಾಣಬಹುದು ಮುಂದೆ ಓದಿ...

  ನಟನೆಯಲ್ಲಿ ದೊಡ್ಡ ಗಾತ್ರದ ಎರಡು ಸೊನ್ನೆ

  ನಟನೆಯಲ್ಲಿ ದೊಡ್ಡ ಗಾತ್ರದ ಎರಡು ಸೊನ್ನೆ

  ಕ್ಷಣಾರ್ಧದಲ್ಲೇ ಬಟ್ಟೆ ಕಳಚಿ ನಿಲ್ಲುವ ಪೂನಂ ಪಾಂಡೆ ಅವರಿಗೆ ನಟನೆ ವಿಷಯದಲ್ಲಿ ಕ್ರಾಶ್ ಕೋರ್ಸ್ ಸಾಲದು, ಪೂರ್ಣ ತಯಾರಿಯೇ ಬೇಕು. ಅಂಗಾಂಗ ಪ್ರದರ್ಶನದಿಂದ ನಶೆ ಏರಿಸುವುದಲ್ಲ, ಭಾವಾಭಿನಯ ಮುಖ್ಯ ಎಂಬುದು ಆಕೆಗೆ ತಿಳಿದರೆ ಒಳ್ಳೆಯದು. 18ರ ಯುವಕ ಶಿವಂ ಅಭಿನಯವಷ್ಟೇ ಚಿತ್ರವನ್ನು ಕಾಪಾಡಬೇಕು

  ಪೂನಂ ಹೇಳಿದ್ದೇನು

  ಪೂನಂ ಹೇಳಿದ್ದೇನು

  ಜಿಸ್ಮಂ ಚಿತ್ರ ಖ್ಯಾತಿಯ ಅಮಿತ್ ಸಕ್ಸೇನಾ ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ಖುಷಿಕೊಟ್ಟಿದೆ. ಚಿತ್ರದಲ್ಲಿ ನನಗೆ ಪ್ರಧಾನ ಪಾತ್ರವಿರಬೇಕು. ಸುಮ್ಮನೆ ಹೀಗೆ ಬಂದು ಹಾಗೆ ಹೋಗೋ ಪಾತ್ರವಾದರೆ ಏನು ಚೆಂದ.

  ನನ್ನ ಅಭಿಮಾನಿಗಳಿಗೂ ಇದರಿಂದ ನಿರಾಶೆಯಾಗುತ್ತದೆ. ಹಾಗಾಗಿ ಪೂರ್ಣ ಪ್ರಮಾಣದ ನಾಯಕಿ ಪಾತ್ರಕ್ಕಾಗಿ ಇಷ್ಟು ದಿನ ಕಾಯುತ್ತಿದ್ದೆ ಎಂದು ಪೂನಂ ಹೇಳಿಕೊಂಡಿದ್ದಳು. Addiction ಎಂಬುದು ಚಿತ್ರದ ಅಡಿಬರಹ.

  ನಶೆಯಲ್ಲಿ ಪೂನಮ್

  ನಶೆಯಲ್ಲಿ ಪೂನಮ್

  ಪೂನಂ ಅವರಿಗೆ ಸುಮಾರು 400,540ಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿ ಸನ್ನಿ ಲಿಯೋನ್ ಮೀರಿಸಿದ್ದ ಪೂನಂ ಅವರು ತಮ್ಮ ಟ್ವಿಟ್ಟರ್ ಖಾತೆ ಮೂಲಕ ನಶಾ ಚಿತ್ರದ ಪ್ರಚಾರದಲ್ಲಿ ತೊಡಗಿದ್ದರು. ಪೂನಮ್ ಅವರು ತೇರಾ ನಶಾ ಹಾಡು, ಟ್ರೇಲರ್ ಗಳನ್ನು ಟ್ವೀಟ್ ಮಾಡಿದ್ದಾರೆ. ಈ ಹಾಡು ಪಡ್ಡೆಗಳಿಗೆ ಕಿಚ್ಚು ಹಚ್ಚಿತ್ತು.

  ತಾಂತ್ರಿಕತೆ, ನಿರ್ದೇಶನ

  ತಾಂತ್ರಿಕತೆ, ನಿರ್ದೇಶನ

  ಪ್ರತಿಭಾವಂತ ಅಮಿತ್ ಸಕ್ಸೇನಾ ಈ ಚಿತ್ರವನ್ನು ಅಭಿಮಾನಿಗಳು ಮರೆತು ಬಿಡುವುದು ಒಳ್ಳೆಯದು. ನಶಾ ಚಿತ್ರದ ಸಂಗೀತ, ಕೆಮರಾ ವರ್ಕ್ ಎಲ್ಲವೂ ಓಕೆ ಆದರೆ, ಮುಖ್ಯವಾಗಿ ನಟನೆ ಇಲ್ಲದ ಬೊಂಬೆ ಇಟ್ಟುಕೊಂಡು ಚಿತ್ರ ಗೆಲ್ಲಿಸುವುದು ಕಷ್ಟ ಕಷ್ಟ.

  ಪೂನಂ 'ಸ್ಟಾರ್'

  ಪೂನಂ 'ಸ್ಟಾರ್'

  ಬಿಟ್ಟಿ ಪ್ರಚಾರ ಪ್ರಿಯೆ ಪೂನಂ ಪೋರ್ನ್ ಸ್ಟಾರ್ ಸೀದಾ ಚಿತ್ರ ನಟಿ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಪೂನಂ ಅಂಗಾಂಗ ಈವರೆಗೂ ನೋಡದವರು ದುಡ್ಡು ತೆತ್ತು ನಶೆ ಚಿತ್ರ ನೋಡಬಹುದು. ಮಿಕ್ಕವರು ಆಕೆಯ ಟ್ವಿಟ್ಟರ್, ಫೇಸ್ ಬುಕ್, ವೆಬ್ ಸೈಟ್ ತಡಕಾಡಬಹುದು. ಪೂನಂ ಇಲ್ಲದಿದ್ದರೆ ಮಿಕ್ಕ 'ಸ್ಟಾರ್' ಗಳಿಗೇನು ಕಮ್ಮಿಯಿಲ್ಲ.

  ವಾದ ವಿವಾದ

  ವಾದ ವಿವಾದ

  ಪೂನಂ ಸಿನಿಮಾ ರಂಗಕ್ಕೆ ಕಾಲಿಡುವ ಮೊದಲೆ ಆಗಾಗ ಬಟ್ಟೆ ಬಿಚ್ಚುತ್ತೇನೆ ಎಂದು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದ್ದಲ್ಲದೆ, ನಶಾ ಚಿತ್ರಕ್ಕೆ ಸುಮ್ಮನೆ ಪ್ರಚಾರ ಸಿಕ್ಕಿತು. ಪೂನಂ-ವೀಣಾ ಮಲಿಕ್ ಕಿತ್ತಾಟ, ಪೂನಂ ಅರೆ ಬರೆ ಬೆತ್ತಲೆ ಚಿತ್ರದ ಪೋಸ್ಟರ್ ಗಳನ್ನು ದೇಶದೆಲ್ಲೆಡೆ ಹರಿದು ಹಾಕಿದ ಒಂದು ಗುಂಪು ಚಿತ್ರ ಬಿಡುಗಡೆಗೆ ಅಡ್ಡಿ ಪಡಿಸುವ ಬೆದರಿಕೆ ಹಾಕಿತ್ತು. ಆದರೆ, ಇದರಿಂದ ಚಿತ್ರಕ್ಕೆ ಯಾವುದೇ ಮೈಲೇಜ್ ಸಿಗಲಿಲ್ಲ. ಸಿಕ್ಕಿದ್ದರೂ ಚಿತ್ರದ ಓಟಕ್ಕೆ ಏನೂ ಸಾಲುತ್ತಿರಲಿಲ್ಲ.

  English summary
  As much expected, Ms Pandey's Nasha is releasing amidst a lot of controversies due to the film's bold posters. Nasha revolves around the story of an 18 year old boy who falls hopelessly in love with a 25 year old woman. I don't see anything worth mentioning in Nasha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X