For Quick Alerts
  ALLOW NOTIFICATIONS  
  For Daily Alerts

  ಭಾರತದ ಸೈಬರ್ ಕ್ರೈಮ್ ರಾಜಧಾನಿ ಜಮ್ತಾರದಲ್ಲೊಂದು ಸುತ್ತು!

  By ಭಾಸ್ಕರ ಬಂಗೇರ
  |

  ಜಾರ್ಖಂಡ್ ರಾಜ್ಯದ ಜಮ್ತಾರ ಎನ್ನುವ ಗ್ರಾಮ ಭಾರತದ ''ಸೈಬರ್ ಕ್ರೈಮ್"ಗಳ ಕೇಂದ್ರಸ್ಥಾನವಾಗಿದೆ. ಬ್ಯಾಂಕ್ ಖಾತೆಗಳ ಒಟಿಪಿ ಹಾಗು ಎಟಿಎಂ ಕಾರ್ಡ್ ಮಾಹಿತಿಯನ್ನು ನಕಲಿ ಕರೆ ಮಾಡುವ ಮೂಲಕ ಪಡೆದುಕೊಂಡು ದುಡ್ಡು ದೋಚುವ ದೊಡ್ಡ ದಂಧೆ ಈ ಗ್ರಾಮದ ಮೂಲಕ ಹೆಚ್ಚಾಗಿ ನಡೆಯುತ್ತದೆ. ಮುಖ್ಯವಾಗಿ ಆ ಗ್ರಾಮದ ಯುವಕರು ಈ ಅಪರಾಧದಲ್ಲಿ ಭಾಗಿಗಳಾಗಿರುತ್ತಾರೆ. ಇದನ್ನೆ ವಸ್ತುವಾಗಿಟ್ಟುಕೊಂಡು ನೆಟ್' ಫ್ಲಿಕ್ಸ್ "ಜಮ್ತಾರ, ಸಬ್ಕ ನಂಬರ್ ಆಯೇಗಾ" ಎನ್ನುವ ವೆಬ್ ಸೀರಿಸ್ ಅನ್ನು ತೆರೆಗೆ ತಂದಿದೆ.

  '77ನೇ ಗೋಲ್ಡನ್ ಗ್ಲೋಬ್' ಪ್ರಶಸ್ತಿ ರೇಸಿನಲ್ಲಿ ಮೇಲುಗೈ ಸಾಧಿಸಿದ ನೆಟ್ ಫ್ಲಿಕ್ಸ್ ಚಿತ್ರಗಳು'77ನೇ ಗೋಲ್ಡನ್ ಗ್ಲೋಬ್' ಪ್ರಶಸ್ತಿ ರೇಸಿನಲ್ಲಿ ಮೇಲುಗೈ ಸಾಧಿಸಿದ ನೆಟ್ ಫ್ಲಿಕ್ಸ್ ಚಿತ್ರಗಳು

  ಸರಳ ನಿರೂಪಣ ತಂತ್ರದ ಮೂಲಕ ಕಥೆ ಬೆಳೆಸುವ ನಿರ್ದೇಶಕ ಸೌಮ್ಯೇಂದ್ರ ಪಧಿ ಆಗಾಗ್ಗೆ ಮಹಾಭಾರತದ ಪಾತ್ರಗಳನ್ನು ತಂದು ಕಥೆಯನ್ನು ವಿಶ್ಲೇಷಿಸುತ್ತಾರೆ. ಹಾಗು ಆ ಆಲೋಚನಾ ದಾಟಿ ಹೊಸತನದಿಂದ ಕೂಡಿದೆ. ಕಥೆಯನ್ನು ನಿರೂಪಿಸುವ ಎರಡು ಹುಡುಗರ ಪಾತ್ರಗಳು ಹಳ್ಳಿಯಲ್ಲಿ ನಡೆಯತ್ತಿರುವ ವಿದ್ಯಾಮಾನಗಳನ್ನು ಮಹಾಭಾರತದ ಘಟನೆಗಳಿಗೆ ಹೋಲಿಸುತ್ತ ಜನರ ನಡುವೆ ಅಪನಂಬಿಕೆ ಹಾಗು ಹಿಂಸೆಯನ್ನು ಬಿತ್ತುತ್ತವೆ. ನಾವು ಈ ಇಬ್ಬರು ಹುಡುಗರನ್ನು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ಹೋಲಿಸಬಹುದು.

  ಪುಟ್ಟ ಹುಡುಗರ ಕ್ರೈಮ್ ಜಗತ್ತು

  ಪುಟ್ಟ ಹುಡುಗರ ಕ್ರೈಮ್ ಜಗತ್ತು

  ಜಮ್ತಾರದಂತಹ ಹಳ್ಳಿಯ ನಿರ್ಜನ ಪ್ರದೇಶದಲ್ಲಿಯೂ ಪೋನ್ ನೆಟ್ವರ್ಕ್ ಸಿಗುವುದು ಅಚ್ಚರಿಯ ವಿಚಾರ! ಒಂದಷ್ಟು ಎಳೆದಾಟ ಅನಿಸಿದರು ಪುಟ್ಟ ಹುಡುಗರ ಕ್ರೈಮ್ ಜಗತ್ತು ರಂಜನೀಯವಾಗಿದೆ. ಒಂದು ಗುಂಪನ್ನು ದಾಟಿ ಕಥೆ ಬೆಳೆದು ನಿಲ್ಲಬೇಕಿತ್ತು ಎನ್ನುವ ಅಸಮಾಧಾನದ ನಡುವೆ ಒಂದು ಕುಗ್ರಾಮದ ಅನಕ್ಷರಸ್ಥ ಹುಡುಗರು ವಿಧ್ಯಾವಂತರನ್ನು ಹೇಗೆ ಮೋಸ ಮಾಡುತ್ತಾರೆ ಹಾಗು ದೋಚಿದ ದುಡ್ಡು ಹೇಗೆ ಅವರ ಕೈ ಸೇರುತ್ತದೆ ಎನ್ನುವುದನ್ನೆಲ್ಲ ತಿಳಿಯಲು ನೀವು ಜಮ್ತಾರ ನೋಡಬೇಕು.

  ಗ್ಯಾಂಗ್ಸ್ ಆಫ್ ವಾಸೇಪುರ್ ಸ್ಮರಿಸುತ್ತದೆ

  ಗ್ಯಾಂಗ್ಸ್ ಆಫ್ ವಾಸೇಪುರ್ ಸ್ಮರಿಸುತ್ತದೆ

  ಇಂಗ್ಲೀಶ್ ಭಾಷೆಯನ್ನು ಕಲಿತ ಹುಡುಗಿಯರನ್ನು ಮದುವೆ ಆಗಲು ಗೆಳೆಯರೆಲ್ಲ ಓಡಾಡುವುದು, ಅವರನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದೆಲ್ಲ ಮಜವಾಗಿದೆ. ಗ್ಯಾಂಗ್ಸ್ ಆಫ್ ವಾಸೇಪುರ್ ಸಿನೆಮಾದಲ್ಲಿ ಅನುರಾಗ್ ಕಶ್ಯಪ್ ಬರವಣಿಗೆಯಲ್ಲಿ ಎದ್ದು ನಿಂತ ಪಾತ್ರಗಳಂತೆ ಅನಿಸಿದರು ಮೂಲ ರೂಪದಲ್ಲಿ ಜಮ್ತಾರ ''ವಾಸೇಪುರ್''ಗಿಂತ ಭಿನ್ನವಾಗಿದೆ.

  ಕನಸನ್ನು ಹೊತ್ತ ಹಳ್ಳಿಯ ಯುವಜನತೆ

  ಕನಸನ್ನು ಹೊತ್ತ ಹಳ್ಳಿಯ ಯುವಜನತೆ

  ಪೋಲಿಸ್ ವ್ಯವಸ್ಥೆಯ ಒಳಗಡೆ ಕೆಟ್ಟ ಅಧಿಕಾರಿ ಹಾಗು ಒಳ್ಳೆಯ ಅಧಿಕಾರಿಯ ನಡುವೆ ಶೀತಲ ಸಮರ, ಇನ್ನೊಂದು ಕಡೆ ಇವರೆನ್ನೆಲ್ಲ ನಿಯಂತ್ರಿಸುವ ರಾಜಕಾರಣಿ, ಇಂಗ್ಲೀಶ್ ಭಾಷೆ ಕಲಿತು ದೊಡ್ಡ ಕಂಪನಿಯ ಕೆಲಸದ ಕನಸನ್ನು ಹೊತ್ತ ಹಳ್ಳಿಯ ಯುವಜನತೆ, ಕೆನಡ ದೇಶಕ್ಕೆ ಅಕ್ರಮ ವಲಸೆಯನ್ನು ಏರ್ಪಾಡುಮಾಡುವ ಏಜೆಂಟ್ ಎಲ್ಲರು ಪುಟ್ಟ ಪುಟ್ಟ ಹತ್ತು ಕಂತುಗಳನ್ನು ಹೊಂದಿರುವ ಈ ವೆಬ್ ಸೀರಿಸ್ ಒಳಗಡೆ ಬಂದು ಹೋಗುತ್ತಾರೆ.

  ಮೊದಲ ಕಂತಿನಲ್ಲಿ 10 ಎಪಿಸೋಡು

  ಮೊದಲ ಕಂತಿನಲ್ಲಿ 10 ಎಪಿಸೋಡು

  ''ಸೈಬರ್ ಕ್ರೈಮ್''ಗಳ ವಿಚಾರವನ್ನಷ್ಟೇ ಉಲ್ಲೇಖಿಸದೇ ಹಿಂದುಳಿದ ಹಳ್ಳಿಯೊಂದು ತನ್ನ ಆಲೋಚನ ಮಾರ್ಗದಲ್ಲಿ ಹಳಿ ತಪ್ಪಿ ಗೊಂದಲದಲ್ಲಿರುವುದನ್ನು ಜಮ್ತಾರ ತೋರಿಸುತ್ತದೆ. ನೆಟ್ ಫ್ಲಿಕ್ಸ್ ನ ಈ ವೆಬ್ ಸರಣಿ ಮೊದಲ ಕಂತಿನಲ್ಲಿ 25 ನಿಮಿಷಗಳ 10 ಎಪಿಸೋಡುಗಳನ್ನು ಸೌಮೇಂದ್ರ ಪಧಿ ನಿರ್ದೇಶಿಸಿದ್ದಾರೆ. ಸ್ಪರ್ಶ್ ಶ್ರೀವಾಸ್ತವ್ ಸನ್ನಿ ಮೊಂಡಲ್ ಆಗಿ, ರಾಕಿಯಾಗಿ ಅಂಶುಮನ್ ಪುಷ್ಕರ್ ಅಭಿನಯಿಸಿದ್ದಾರೆ. ಗುಡಿಯಾ ಪಾತ್ರದಲ್ಲಿ ಮೊನಿಕಾ ಪನ್ವಾರ್, ಎಸ್ಪಿ ಡಾಲಿ ಸಾಹು(ಅಕ್ಷ್ ಪರ್ದಾಸಾನಿ), ಬ್ರಜೇಶ್ ಭಾನ್ ಪಾತ್ರದಲ್ಲಿ ಅಮಿತ್ ಸಿಯಾಲ್ ಮಿಂಚಿದ್ದಾರೆ.

  English summary
  Netflix series'Jamtara – Sabka Number Ayega' new web series directed by Soumendra Padhi review of series and focus on phishing scam is here by Bhaskar Bangera.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X