»   » ರಂಗಿತರಂಗ ಚಿತ್ರ: ಹೊಸಬರ ವಿಭಿನ್ನ ಪ್ರಯತ್ನ ಜಸ್ಟ್ ಸೂಪರ್

ರಂಗಿತರಂಗ ಚಿತ್ರ: ಹೊಸಬರ ವಿಭಿನ್ನ ಪ್ರಯತ್ನ ಜಸ್ಟ್ ಸೂಪರ್

By: ಬಾಲರಾಜ್ ತಂತ್ರಿ
Subscribe to Filmibeat Kannada

ಚಿತ್ರವೊಂದು ಗೆಲ್ಲಬೇಕಾದರೆ ಅದಕ್ಕೆ ಲೀಡಿಂಗ್ ಸ್ಟಾರ್ ಕಾಸ್ಟ್ ಇರಬೇಕೆಂದಿಲ್ಲ. ಹೊಸಬರ ಪ್ರಯತ್ನದ ಚಿತ್ರಗಳಿಗೆ ಮಾಧ್ಯಮಗಳಿಂದ ಉತ್ತಮ ಪ್ರಶಂಸೆ ಜೊತೆಗೆ ಮೌತ್ ಪಬ್ಲಿಸಿಟ್ ಸಿಕ್ಕರೆ ಚಿತ್ರ ಗೆಲ್ಲೋದು ಗ್ಯಾರಂಟಿ.

ಇದಕ್ಕೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆ, ಹೊಸಬರ ಚಿತ್ರ ಎನ್ನುವುದು ಒಂದು ಕಡೆಯಾದರೆ, ವಿಭಿನ್ನ ಪ್ರಯತ್ನದ 'ರಂಗಿತರಂಗ' ಚಿತ್ರ. ಹೋದ ಶುಕ್ರವಾರ ಬಿಡುಗಡೆಯಾದ ಈ ಚಿತ್ರಕ್ಕೆ ಈಗಾಗಲೇ ಕನ್ನಡದ ಪ್ರೇಕ್ಷಕ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಮೆಚ್ಚುಗೆ ಸೂಚಿಸಿದ್ದಾನೆ.

ಸಸ್ಪೆನ್ಸ್, ಥ್ರಿಲ್ಲರ್ ಜೊತೆ ಅಲ್ಲಲ್ಲಿ ತಿಳಿಹಾಸ್ಯದ ಮೂಲಕ ಸಾಗುವ ರಂಗಿತರಂಗ ಚಿತ್ರ ಪ್ರೇಕ್ಷಕನನ್ನು ಸೀಟಿನಂಚಿನಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿದೆ.

ಚಿತ್ರದಲ್ಲಿ ಕೆಲವೊಂದು ಮೈನಸ್ ಪಾಯಿಂಟ್ ಗಳಿದ್ದರೂ ಅದನ್ನೆಲ್ಲಾ ಮೀರಿ ಚಿತ್ರ ಹೊಸತನವನ್ನು ನೀಡುವಲ್ಲಿ ಯಶಸ್ವಿಯಾಗಿದೆ. (ರಂಗಿತರಂಗ ಚಿತ್ರ ವಿಮರ್ಶೆ)

ಹಾರರ್ ಸಿನಿಮಾವೊಂದಕ್ಕೆ ಪ್ರೇಮಕಥೆಯ ಜೊತೆಗೆ ಗುಡ್ಡದ ಭೂತ, ಅಕ್ರಮ ಮರಳು ಸಾಗಾಣಿಕೆ, ಭೂತಕೋಲದ ಟಚ್ ನೀಡಿ ನಿರ್ದೇಶಕ ಅನೂಪ್ ಭಂಡಾರಿ ಪ್ರೇಕ್ಷಕರ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದಾರೆ.

ಮೊದಲ ಸನ್ನಿವೇಶದಿಂದಲೇ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗುವ ಚಿತ್ರ, ಮಧ್ಯಂತರದ ವೇಳೆಗೆ ಪ್ರೇಕ್ಷಕರನ್ನು ದಂಗುಬಡಿಸಿ, ಮುಂದೇನಾಗುತ್ತೆ ಎಂದು ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗುತ್ತೆ.

ಫೋಟೋಗ್ರಾಫಿ, ಬಿಜಿಎಂ ಚಿತ್ರದ ಹೀರೋ

ಚಿತ್ರದ ಪ್ಲಸ್ ಪಾಯಿಂಟ್ ಸಿನಿಮಾಟೋಗ್ರಾಫರ್ ಲ್ಯಾನ್ಸ್ ಕಪ್ಲಾನ್ ಅವರ ಕ್ಯಾಮರಾ ಕೈಚಳಕ. ಹಾರರ್ ಸನ್ನಿವೇಶದಲ್ಲಿ ಮತ್ತು ಹಳ್ಳಿಯ ಸುಂದರ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದು ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಅಜನೀಶ್ ಲೋಕನಾಥ್ ಅವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚಿತ್ರಕ್ಕೆ ಇನ್ನಷ್ಟು ತೂಕ ತಂದಿದೆ.

ಸಾಯಿಕುಮಾರ್ ಸೂಪರ್

ಇಡೀ ಚಿತ್ರದಲ್ಲಿನ stand out performance ಅಂದರೆ ಸಾಯಿಕುಮಾರ್ ಅವರದ್ದು. ಪೋಸ್ಟ್ ಮಾಸ್ಟರ್ ರೋಲಿನಲ್ಲಿ ಕಾಣಿಸಿಕೊಳ್ಳುವ ಸಾಯಿಕುಮಾರ್ ಒಟ್ಟಾರೆ ಅಭಿನಯ ಅದಕ್ಕಿಂತ ಹೆಚ್ಚಾಗಿ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿನ ನಟನೆ ಮತ್ತು ಕುಣಿತ ಅವರ ವೃತ್ತಿ ಜೀವನದ ಪರಾಕಾಷ್ಠೆಯ ಅಭಿನಯದಯೆಂದರೆ ತಪ್ಪಾಗಲಾರದು.

ರಫೀಕ್ ಪಾತ್ರಧಾರಿ

ಚಿತ್ರದಲ್ಲಿ ರಫೀಕ್ ಪಾತ್ರಧಾರಿ ಕಾರ್ತಿಕ್ ಅವರ ಅಭಿನಯವೂ ಸೂಪರ್. ತುಳು ಮಿಶ್ರಿತ ಕನ್ನಡದ ಅವರ ಸಂಭಾಷಣೆ, ಹಾವಭಾವ ಪ್ರೇಕ್ಷಕರಿಗೆ ಸಖತ್ ಮಜಾ ನೀಡುತ್ತೆ. ಇವರ ಸೀರಿಯಸ್ ಮಿಶ್ರಿತ ಹಾಸ್ಯದ ಟೈಮಿಂಗ್ಸಿಗೆ ಪ್ರೇಕ್ಷಕ ಚಪ್ಪಾಳೆ, ಶಿಳ್ಳೆ ಮೂಲಕ ಅಭಿನಂದಿಸುತ್ತಾನೆ.

ನಾಯಕ, ನಾಯಕಿ

ನಾಯಕ ನಿರೂಪ್ ಭಂಡಾರಿ, ನಾಯಕಿಯರಾದ ರಾಧಿಕಾ ಚೇತನ್, ಆವಂತಿಕಾ ಶೆಟ್ಟಿ ಮತ್ತು ಇತರ ಸಹಕಲಾವಿದರು ತಮ್ಮ ತಮ್ಮ ಪಾತ್ರಗಳನ್ನು ನೀಟಾಗಿ ನಿಭಾಯಿಸಿದ್ದಾರೆ. ನಾಯಕ ನಿರೂಪ್ ಭಂಡಾರಿ ಹಾರರ್ ಟಚ್ ವಿರುವ ಚಿತ್ರವಾದರೂ ಪ್ರಬುದ್ದವಾಗಿ ನಟಿಸಿದ್ದಾರೆ.

ಉತ್ತರಾರ್ಧ ಮೈನಸ್ ಪಾಯಿಂಟ್

ಚಿತ್ರದ ಮೈನಸ್ ಪಾಯಿಂಟ್ ಎಂದರೆ ಉತ್ತರಾರ್ಧದಲ್ಲಿ ಸಾಗುವ ಚಿತ್ರಕಥೆ. ನಿರ್ದೇಶಕ ಅನೂಪ್ ಇಂಟರ್ವಲ್ ನಂತರ ಉಪಕಥೆಯನ್ನು ಹೇರಿ ಜೊತೆಗೆ ಸುಖಾಸುಮ್ಮನೆ ಎರಡು ಹಾಡನ್ನು ತೂರಿಸಿದ್ದು ಚಿತ್ರ ಸಾಗುವ ಸ್ಪೀಡಿಗೆ ಬ್ರೇಕ್ ನೀಡಿದೆ.

ಯಶ್ ಭೇಟಿಯಾಗಿದ್ದ ಚಿತ್ರತಂಡ

ಚಿತ್ರ ಬಿಡುಗಡೆಗೆ ತೊಂದರೆಯಾದಾಗ ಚಿತ್ರತಂಡ ಯಶ್ ಅವರನ್ನು ಭೇಟಿಯಾಗಿತ್ತು. ಯಶ್, ಜಯಣ್ಣ ಅವರನ್ನು ಸಂಪರ್ಕಿಸಿ ಚಿತ್ರದ ಡಿಸ್ಟ್ರಿಬ್ಯೂಷನ್ ತೆಗೆದುಕೊಳ್ಳುವಂತೆ ಮನವಿ ಮಾಡುತ್ತಾರೆ. ನಾನು ಈ ಚಿತ್ರವನ್ನು ಇನ್ನೂ ನೋಡಿಲ್ಲ, ಯಶ್ ಅವರ ಮೇಲೆ ವಿಶ್ವಾಸ ಇಟ್ಟು ಚಿತ್ರದ ಡಿಸ್ಟ್ರಿಬ್ಯೂಷನ್ ತೆಗೆದುಕೊಳ್ಳುತ್ತೇನೆ ಎಂದಿದ್ದರು ಜಯಣ್ಣ. ಚಿತ್ರ, ಯಶ್ ಮತ್ತು ಜಯಣ್ಣ ಅವರ ನಂಬಿಕೆಗೆ ಏನೂ ಮೋಸ ಮಾಡಿಲ್ಲ.

ಒಟ್ಟಿನಲ್ಲಿ ಚಿತ್ರ

ಚಿತ್ರದ ಎಂದ ಮೇಲೆ ಕೆಲವೊಂದು ಲೋಪದೋಷ ಇದ್ದದ್ದೇ. ಹೊಸಬರ ವಿಭಿನ್ನ ಮತ್ತು ಕುತೂಹಲ ನಿರೂಪಣೆಯ ಚಿತ್ರ ರಂಗಿತರಂಗ, ಅದಕ್ಕಿಂತ ಹೆಚ್ಚಾಗಿ ಸ್ವಮೇಕ್ ಚಿತ್ರ. ಸಾಧ್ಯವಾದರೆ ಚಿತ್ರನೋಡಿ, ಚಿತ್ರತಂಡದ ಬೆನ್ನುತಟ್ಟಿ, ಪ್ರೋತ್ಸಾಹಿಸಿ.

English summary
New comers Rangi Taranga movie: A nicely presented film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada