»   » ಸ್ಟಾರ್ ಗಳಿದ್ದೂ ಸದ್ದು ಮಾಡದ ಮುಂಬೈ ಚಿತ್ರ

ಸ್ಟಾರ್ ಗಳಿದ್ದೂ ಸದ್ದು ಮಾಡದ ಮುಂಬೈ ಚಿತ್ರ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಲ್ಲಿ ಯಶಸ್ವಿ ಚಿತ್ರಗಳ ಎರಡನೇ ಕಂತು ಬಿಡುಗಡೆ ಮಾಡಿ ದುಡ್ಡು ದೋಚುವ ಟ್ರೆಂಡ್ ಹೊಸತೇನಲ್ಲ. ಅದರೆ, ಮೊದಲ ಚಿತ್ರಕ್ಕೂ ಎರಡನೇ ಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸ ಇದ್ದರೆ, ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲಿ ಕೂರುವುದೇ ಕಷ್ಟವಾದರೆ ಏನು ಮಾಡುವುದು? ಬಹುಶಃ ಒನ್ಸ್ ಅಪನ್ ಎ ಟೈಮ್ ಇನ್ ಮುಂಬೈ ದೊಬಾರಾ(OUATIMD) ಚಿತ್ರದ ಕಥೆ ಹೀಗೆ ಆಗಿದೆ.

ವಿಮರ್ಶಕರು ಸಾರಾಸಾಗಟಾಗಿ ತಳ್ಳಿ ಹಾಕಿ ಚಿತ್ರ ನೋಡಬೇಡಿ ಮರೆತು ಬಿಡಿ ಎಂದು ಷರಾ ಬರೆದಾಗಿದೆ. ಪ್ರೇಕ್ಷಕರು ಕೈ ಹಿಡಿದರೆ ಅದು ಸ್ಟಾರ್ ಗಳ ಲಕ್ ಎನ್ನಬೇಕು.

ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ, ಇಮ್ರಾನ್ ಖಾನ್ ಪ್ರಮುಖ ಪಾತ್ರದಲ್ಲಿರುವ 2010ರಲ್ಲಿ ತೆರೆ ಕಂಡ ಯಶಸ್ವಿ ಚಿತ್ರ ಒನ್ಸ್ ಅಪನ್ ಎ ಟೈಮ್ ಇನ್ ಮುಂಬೈನ ಮುಂದುವರೆದ ಭಾಗ. ಮುಂಬೈನ ಗ್ಯಾಂಗ್ ಸ್ಟರ್ ಗಳ ಕಥೆ ಹೇಳಲು ಹೊರಟ ಮಿಲನ್ ಲೂಥ್ರಿಯಾ ಸೋತಿದ್ದೇಕೆ?

80ರ ದಶಕ ಬಾಂಬೆಯಲ್ಲಿ ಶೋಯೆಬ್ ಎಂಬ ಗ್ಯಾಂಗ್ ಸ್ಟರ್ ಗೆ ಇಡೀ ಮುಂಬೈ ರಾಜನಾಗುವ ಕನಸು ಹುಟ್ಟಿಕೊಳ್ಳುತ್ತದೆ. ಈ ಮಧ್ಯೆ ಜಾಸ್ಮಿನ್(ಸೋನಾಕ್ಷಿ ಸಿನ್ಹಾ) ಬದುಕಿನಲ್ಲಿ ಪ್ರವೇಶ ಪಡೆಯುತ್ತಾಳೆ. ಮೊದಲ ಚಿತ್ರ ನಿಂತ ರೀಲ್ ನಿಂದ ಈ ಚಿತ್ರ ಮುಂದುವರೆಯುತ್ತದೆ ಎನ್ನುವುದು ಬಿಟ್ಟರೆ ಮಿಕ್ಕಂತೆ ಬೇರೆ ಕಥೆಯೇ ಇಲ್ಲಿದೆ.

ಸೊನಾಲಿ ಬೇಂದ್ರೆ, ವಿದ್ಯಾ ಬಾಲನ್ ಎಂಟ್ರಿ ಅನಗತ್ಯ ಐಟಂ ಸಾಂಗ್ಸ್ ಎಲ್ಲವೂ ಚಿತ್ರಕ್ಕೆ ಯಾವ ರೀತಿ ಪೂರಕವಾಗಿದೆಯೋ ಮಿಲನ್ ಹೇಳಬೇಕು. ಶೋಯೆಬ್ ಪಾತ್ರದಲ್ಲಿ ಅಕ್ಷಯ್ ಮಿಂಚಿದ್ದಾರೆ. ಇಮ್ರಾನ್, ಸೋನಾಕ್ಷಿ ನಟನೆ ಸಾಧಾರಣ ಮಟ್ಟದಲ್ಲಿದೆ. ಎಲ್ಲಾ ಮಾಧ್ಯಮಗಳಲ್ಲೂ ನೆಗಟಿವ್ ಪ್ರತಿಕ್ರಿಯೆ ಬಂದಿದೆ. ವಿಮರ್ಶಕರು ನೀಡಿದ ಪ್ರತಿಕ್ರಿಯೆ ಇಲ್ಲಿದೆ ಓದಿ...

ಬಾಲಿವುಡ್ ಹಂಗಾಮ : 2 and half ಸ್ಟಾರ್

ಒಟ್ಟಾರೆ ಒನ್ಸ್ ಅಪನ್ ಎ ಟೈಮ್ ಇನ್ ಮುಂಬೈ ದೊಬಾರಾ ಚಿತ್ರ ಮಧ್ಯಂತರದ ನಂತರ ನೋಡಲಷ್ಟೇ ಚೆನ್ನಾಗಿದೆ. ಮೊದಲ ಚಿತ್ರಕ್ಕೆ ಕೊಂಚ ಹತ್ತಿರಾಗುವ ಆಸೆ ಹುಟ್ಟಿಸುತ್ತದೆ. ಆದರೆ, ಮೊದಲ ಚಿತ್ರಕ್ಕೆ ಹೋಲಿಸಿದರೆ ಎರಡನೇ ಭಾಗ ಸಂಪೂರ್ಣ ಸೋಲುತ್ತದೆ.

Koimoi (2 stars)

ಮೊದಲ ಭಾಗದ ಒಂದಿಷ್ಟು ನಕಲು ಇಲ್ಲಿ ಉಳಿದು ಕೊಂಡಿದ್ದರೆ ಚಿತ್ರ ನೋಡಲು ಸಾಧ್ಯವಿತ್ತು. ಮೂಲ ಕಥೆಗೆ ಬೇಕಾದ ಗಂಧವನ್ನೇ ಎರಡನೇ ಭಾಗ ಕಳೆದುಕೊಂಡಿದೆ.

ಜೀ ನ್ಯೂಸ್ (2 ಸ್ಟಾರ್)

ಒನ್ಸ್ ಅಪನ್ ಎ ಟೈಮ್ ಇನ್ ಮುಂಬೈ ದೊಬಾರಾ ಚಿತ್ರ ಪಕ್ಕಾ ಅಕ್ಷಯ್ ಕುಮಾರ್ ಚಿತ್ರ, ಅಕ್ಕಿ ನಟನೆ ನೋಡಬೇಕಾದರೆ ಮಾತ್ರ ಹೋಗಿ.. ರಿಪೀಟ್ ಮಾಡುತ್ತೇನೆ ಅಕ್ಷಯ್ ಗೋಸ್ಕರ ಮಾತ್ರ ಹೋಗಿ

ರಿಡೀಫ್ (2 ಸ್ಟಾರ್)

ಅಕ್ಷಯ್ ಕುಮಾರ್ ನೋಡಲು ಮಾತ್ರ ಚಿತ್ರಮಂದಿರಕ್ಕೆ ಹೋಗಿ ಬಂದರೆ ನಿಮಗೆ ಕಾಸಿಗೆ ತಕ್ಕ ಕಜ್ಜಾಯ ಸಿಗುವುದಾದರೂ ಹೇಗೆ.. ಪಕ್ಕಾ ಅಭಿಮಾನಿಗಳಿಗೂ ಬೋರ್ ಹೊಡೆಸುವ ಚಿತ್ರ

ಇಂಡಿಯನ್ ಎಕ್ಸ್ ಪ್ರೆಸ್ 1/2 ಸ್ಟಾರ್

ಹಳೆ ಕಾಲದ ಸನ್ನಿವೇಶಗಳನ್ನು ಪುನಾರವರ್ತನೆ ಮಾಡುವುದು ಸುಲಭವಲ್ಲ ನಿಜ ಆದರೆ, ಭಾರಿ ನಿರೀಕ್ಷೆ ಟುಸ್ ಆದ ಪಟಾಕಿಯಂತಾಗಿರುವ ಎರಡನೇ ಭಾಗ ನೋಡಿ ತಲೆ ಕೆಡಿಸಿಕೊಳ್ಳಬೇಡಿ. ಈ ಚಿತ್ರ ನೋಡಿ ಮೂರನೇ ಭಾಗದ ನಿರೀಕ್ಷೆ ಇಟ್ಟು ಕೊಂಡರೆ ಆತನೇ ಅದ್ಭುತ ಚಿತ್ರ ಪ್ರೇಮಿCool

ಒನ್ ಇಂಡಿಯಾ (Two and a half stars)

ಪ್ರೇಮ, ಸುಮಧುರ ಸಂಗೀತ, ಭರ್ಜರಿ ಡೈಲಾಗ್, ಸಾಹಸ ದೃಶ್ಯ, ಮುಂದುವರೆದ ಕಥಾ ಭಾಗ, ಸ್ಟಾರ್ ತಾರಾಗಣ ಎಲ್ಲವೂ ಇದೆ ಆದರೆ ಏನೋ ಮಿಸ್ ಹೊಡೆಯುತ್ತಿದೆ. ಧೈರ್ಯ ಇದ್ರೆ ಚಿತ್ರಮಂದಿರ ಹೋಗಿ ನೋಡಿಕೊಂಡು ಬನ್ನಿ

ಫಸ್ಟ್ ಪೋಸ್ಟ್ ವಿಮರ್ಶೆ

ಚಿತ್ರಕಥೆ ಸರಿ ಇದ್ದರೂ ನಿರೂಪಣೆ ಇಲ್ಲ, ಮಾತು ಮಾತಿಗೂ ಹೆವಿ ಡೈಲಾಗ್ಸ್ ಬೇಕಾಗಿರಲಿಲ್ಲ. ಸೋನಾಲಿ ಬೇಂದ್ರೆ, ವಿದ್ಯಾ ಬಾಲನ್ ಎಂಟ್ರಿ ಏಕೆ ಗೊತ್ತಾಗಲಿಲ್ಲ. ಚಿತ್ರ ಗೆದ್ದರೆ ಅದಕ್ಕಿಂತ ಪವಾಡ ಮತ್ತೊಂದಿಲ್ಲ.

English summary
Bollywood superstar Akshay Kumar's much-awaited movie Once Upon A Time In Mumbaai Dobara (OUATIMD), that released on August 15th, has failed to impress the film critics. Featuring Akshay, Sonakshi Sinha, Imran Khan in the leads, OUATIMD is a crime gangster film, directed by filmmaker Milan Luthria.
Please Wait while comments are loading...