Don't Miss!
- Sports
ICC ODI Rankings: ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತ
- Automobiles
ಮಾರುತಿಯಿಂದ 2023 ರಲ್ಲಿ 5 ಹೊಸ ಎಸ್ಯುವಿಗಳ ಬಿಡುಗಡೆ... ಶೀಘ್ರದಲ್ಲೇ 3 ಕಾರುಗಳು ಮಾರುಕಟ್ಟೆಗೆ
- News
Breaking: ಹುಲಿ ಸಂರಕ್ಷಿತ ಪ್ರದೇಶದಲ್ಲಿಯೇ ತುರ್ತು ನೆಲಕ್ಕಿಳಿದ ರವಿಶಂಕರ್ ಗುರೂಜಿ ಹೆಲಿಕಾಪ್ಟರ್
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Finance
Budget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Pathaan Review in Kannada : 4 ವರ್ಷಗಳ ಬಳಿಕ ಮತ್ತೆ ಹೀರೊ ಆದ ಶಾರುಖ್: ಜಾನ್.. ದೀಪಿಕಾ.. ಸಲ್ಮಾನ್ ಸೂಪರ್!
ಬಾಲಿವುಡ್ ಕಿಂಗ್ ಖಾನ್ ಮತ್ತೆ ಸಿನಿಮಾಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ,ಜಾನ್ ಅಬ್ರಾಹಂ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಇಂದು (ಜನವರಿ 25) ವಿಶ್ವದಾದ್ಯಂತ ರಿಲೀಸ್ ಆಗಿದೆ. ಇದು ಶಾರುಖ್ ಖಾನ್ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡುತ್ತಿದೆ.
58 ವರ್ಷದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ 4 ವರ್ಷಗಳ ಬಳಿಕ ಡ್ಯಾಶಿಂಗ್ ಎಂಟ್ರಿ ಕೊಟ್ಟಿದ್ದಾರೆ. ಅಭಿಮಾನಿಗಳು 'ಪಠಾಣ್' ಸಿನಿಮಾ ರಿಲೀಸ್ ಅನ್ನು ಹಬ್ಬದಂತೆಯೇ ಸಂಭ್ರಮಿಸುತ್ತಿದ್ದಾರೆ.
Pathaan Movie Release Live: ಹೊರಬಿತ್ತು 'ಪಠಾಣ್' ಟ್ವಿಟ್ಟರ್ ವಿಮರ್ಶೆ, ಹೇಗಿದೆಯಂತೆ ಸಿನಿಮಾ?
ವಿಶ್ವದ ಹಲವೆಡೆ 'ಪಠಾಣ್' ಸಿನಿಮಾ ಬೆಳಗ್ಗೆ 6 ಗಂಟೆಯಿಂದಲೇ ವಿಶೇಷ ಪ್ರದರ್ಶನ ಕಾಣುತ್ತಿದೆ. ಸಿದ್ದಾರ್ಥ್ ಆನಂದ್ ಹಾಗೂ ಶಾರುಖ್ ಖಾನ್ ಕಾಂಬಿನೇಷನ್‌ನಲ್ಲಿ 'ಪಠಾಣ್' ಪ್ರೇಕ್ಷಕರನ್ನು ಸೆಳೆಯುತ್ತಿದ್ಯಾ? ಸ್ಪೈ ಸಿನಿಮಾ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದ್ಯಾ? ಸಲ್ಮಾನ್ ಖಾನ್ ಸ್ಪೆಷಲ್ ಎಂಟ್ರಿ ಹೇಗಿದೆ? ಇದೆಲ್ಲದಕ್ಕೂ ಉತ್ತರ ಈ ವಿಮರ್ಶೆಯಲ್ಲಿದೆ.

'ಪಠಾಣ್' ಸಿನಿಮಾದ ಥೀಮ್ ಏನು?
'ಪಠಾಣ್' ಸಿನಿಮಾ ಮೇಲೆ ಬಾಲಿವುಡ್ ಮಂದಿ ಅಷ್ಟೇ ಅಲ್ಲ. ಇಡೀ ವಿಶ್ವವೇ ಎದುರು ನೋಡುತ್ತಿತ್ತು. ನಾಲ್ಕು ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡುತ್ತಿರುವ ಕಿಂಗ್ ಖಾನ್ ಎಂಟ್ರಿ ಹೇಗಿರುತ್ತೆ ಎಂದು ಎದುರು ನೋಡುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ಅಂದ್ಹಾಗೆ 'ಪಠಾಣ್' ಸಿನಿಮಾ ಪಕ್ಕಾ ಮಸಾಲಾ ಎಂಟರ್‌ಟೈನರ್ ಸಿನಿಮಾ. ದುಬಾರಿ ಆಕ್ಷನ್ ಸೀಕ್ವೆನ್ಸ್, ಹೀರೊ ವಿಲನ್ ನಡುವಿನ ಘರ್ಷಣೆ, ರೊಮ್ಯಾನ್ಸ್ ಈ ಸಿನಿಮಾದ ಹೈಲೈಟ್. ಈ ಸಿನಿಮಾ ಬಾಲಿವುಡ್ ಪ್ರೇಕ್ಷಕರನ್ನು ಮತ್ತೆ ಥಿಯೇಟರ್‌ನತ್ತ ಕರೆತರುವಲ್ಲಿ ಯಶಸ್ವಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ.

'ಪಠಾಣ್' ಕಥೆಯೇನು?
ಮಾಜಿ ಸೈನಿಕ (ಶಾರುಖ್ ಖಾನ್) ಸ್ಪೈ ಆಗಿ ಬದಲಾಗಿದ್ದಾನೆ. ಆತನ ಅಂಡರ್‌ಕವರ್ ಹೆಸರು 'ಪಠಾಣ್'. ಈತನ ಎದುರಾಳಿಯಾಗಿ ಜಿಮ್ (ಜಾನ್ ಅಬ್ರಾಹಂ). ಮಾಜಿ RAW ಎಜೆಂಟ್ ಆಗಿರೋ ಜಿಮ್ ತನ್ನದೇ ದೇಶದ ವಿರುದ್ಧ ತಿರುಗಿಬಿದ್ದಿರುತ್ತಾನೆ. ಆರ್ಟಿಕಲ್ 370ಯನ್ನು ತೆಗೆದು ಹಾಕಿದ ಬಳಿಕ ಈತನನ್ನು ಪಾಕಿಸ್ತಾನಿ ಅಧಿಕಾರಿ ಸಂಪರ್ಕಿಸುತ್ತಾನೆ. ಇದರ ಜೊತೆನೇ ಐಎಸ್‌ಐ ಎಜೆಂಟ್ ಆಗಿ ರುಬೈ (ದೀಪಿಕಾ ಪಡುಕೋಣೆ) ಕಾಣಿಸಿಕೊಂಡಿದ್ದಾರೆ. ಇಲ್ಲಿಂದ ಈ ಮೂವರ ನಡುವೆ ಒಂದು ಗೇಮ್ ನಡೆಯುತ್ತೆ. ಮುಂದೇನಾಗುತ್ತೆ ಅನ್ನೋದು ಸಿನಿಮಾದ ಕಥೆ.

'ಪಠಾಣ್' ನಿರ್ದೇಶನ ಹೇಗಿದೆ?
ಸ್ಪೈ ಥ್ರಿಲ್ಲರ್ ಸಿನಿಮಾಗಳನ್ನು ನಿರ್ದೇಶನ ಮಾಡುವುದರಲ್ಲಿ ಬಾಲಿವುಡ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಎಕ್ಸ್‌ಪರ್ಟ್. ಈ ಸಿನಿಮಾವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಕ್ಕಾಪಟ್ಟೆ ಆಕ್ಷನ್, ಚೇಸಿಂಗ್ ಸೀನ್, ಡೆತ್ ಮತ್ತು ಡೇಂಜರ್ ಸ್ಟಂಟ್‌ಗಳು, ಕಾರು, ಬೈಕ್, ಹೆಲಿಕಾಪ್ಟರ್‌ಗಳ ಕ್ಲ್ಯಾಶ್ ಈ ಸಿನಿಮಾದಲ್ಲಿ ಎದ್ದು ಕಾಣುತ್ತೆ. ಈ ಎಲ್ಲಾ ಸೀನ್‌ಗಳು ಕೂಡ ಶಿಳ್ಳೆ ಹೊಡೆಯುವಂತಿವೆ.

ಶಾರುಖ್ ಖಾನ್ ಎಂಟ್ರಿ ಹೇಗಿದೆ?
ಸಿನಿಮಾದಲ್ಲಿ ಶಾರುಖ್ ಖಾನ್ ಎಂಟ್ರಿ ಮೊಟ್ಟ ಮೊದಲ ದೃಶ್ಯದಿಂದ ಗಮನ ಸೆಳೆಯುತ್ತೆ. 58 ವರ್ಷದ ನಟ ಫಿಟ್ನೆಸ್, ಸಿಕ್ಸ್ ಪ್ಯಾಕ್ ಬಾಡಿ, ಪವರ್‌ಫುಲ್ ಕಣ್ಣುಗಳು ಪ್ರೇಕ್ಷಕರಿಗೆ ಕಿಕ್ ಕೊಡುತ್ತವೆ. ಶಾರುಖ್ ಖಾನ್ ಜೊತೆ ಸಿನಿಪ್ರಿಯರಿಗೆ ಕಿಕ್ ಕೊಡುವ ಮತ್ತೊಬ್ಬ ನಟ ಜಾನ್ ಅಬ್ರಾಹಂ. ಜಿಮ್ ಪಾತ್ರದಲ್ಲಿ ಮಸಲ್‌ಮ್ಯಾನ್ ಜಾನ್ ಅಬ್ರಾಹಂ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಶಾರುಖ್ ಖಾನ್ ಪಾತ್ರಕ್ಕೆ ಸೈಡು ಹೊಡೆಯುವಂತೆ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ತುಂಬಾನೇ ಸುಂದರವಾಗಿ ಕಾಣಿಸುತ್ತಾರೆ. ಶಾರುಖ್ ಹಾಗೂ ದೀಪಿಕಾ ಕೆಮಿಸ್ಟ್ರಿ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಸಲ್ಮಾನ್ ಖಾನ್ ಹೈಲೈಟ್
'ಪಠಾಣ್' ಸಿನಿಮಾದ ಮತ್ತೊಂದು ಹೈಲೈಟ್ ಸಲ್ಮಾನ್ ಖಾನ್. ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟರೂ ಸಲ್ಮಾನ್ ಖಾನ್ ಖದರ್‌ಗೆ ಶಿಳ್ಳೆಗಳು ಬೀಳುತ್ತವೆ. ವೈಆರ್‌ಎಫ್ ಸ್ಪೈ ಥ್ರಿಲ್ಲರ್ ಯುನಿವರ್ಸಿಟಿಯಲ್ಲಿ ಶಾರುಖ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಸಿನಿಮಾಗೆ ಹೊಸ ಇಮೇಜ್ ಕೊಟ್ಟಿದೆ. ಕೊನೆಯದಾಗಿ 'ಪಠಾಣ್' ಸಿನಿಮಾ ಪಕ್ಕಾ ಮಾಸ್ ಮಸಾಲಾ ಎಂಟರ್‌ಟೈನರ್ ಸಿನಿಮಾ.