twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ; 'ಜೆಸ್ಸಿ' ಸುಂದರ, ಅಷ್ಟೇ ಭಯಾನಕ ಪ್ರೇಮ ಕಾವ್ಯ!

    |

    'ನೀ ಬಂದೆ....ಮಳೆ ಬಂತು....' ಹಾಡನ್ನ ಕೇಳಿ....'ಜೆಸ್ಸಿ' ಚಿತ್ರದ ಟ್ರೈಲರ್ ನೋಡಿ....ಇದೊಂದು ಸುಂದರ ಪ್ರೇಮ ಕಾವ್ಯ ಇರಬಹುದು ಅಂತ ಭಾವಿಸಿ ನೀವೇನಾದರೂ ಚಿತ್ರಮಂದಿರಕ್ಕೆ ಕಾಲಿಟ್ಟರೆ ನಿಮಗೆ 'ಶಾಕ್' ಗ್ಯಾರೆಂಟಿ.

    'ಶಿವಲಿಂಗ' ಚಿತ್ರದಲ್ಲಿ ನಿಮಗೆ ಹೇಗೆ ಭಯಾನಕ ಸರ್ ಪ್ರೈಸ್ ಸಿಕ್ಕಿತ್ತೋ, 'ಜೆಸ್ಸಿ' ಚಿತ್ರ ನೋಡುವಾಗಲೂ ನಿಮ್ಮೆಲ್ಲರ ಎದೆ ನಡುಗುವುದು ಖಂಡಿತ.

    ಪವನ್ ಒಡೆಯರ್ ನಿರ್ದೇಶನದ ಧನಂಜಯ್, ಪಾರುಲ್ ಯಾದವ್ ಹಾಗೂ ರಘು ಮುಖರ್ಜಿ ಅಭಿನಯಿಸಿರುವ 'ಜೆಸ್ಸಿ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

    Rating:
    4.0/5
    Star Cast: ಧನಂಜಯ, ಪಾರುಲ್ ಯಾದವ್, ರಘು ಮುಖರ್ಜೀ
    Director: ಪವನ್ ಒಡೆಯರ್

    'ಜೆಸ್ಸಿ' ಚಿತ್ರಕಥೆ ಏನು?

    'ಜೆಸ್ಸಿ' ಚಿತ್ರಕಥೆ ಏನು?

    'ಮಾಲ್ಗುಡಿ' ಎಂಬ ಊರಲ್ಲಿ ನಂದಿನಿ (ಪಾರುಲ್ ಯಾದವ್) ಎಂಬ ಸುರಸುಂದರಿ. ವೃತ್ತಿಯಲ್ಲಿ ಡಾಕ್ಟರ್. ಅಪ್ಪ-ಅಮ್ಮನಿಗೆ ಈಕೆ ಒಬ್ಬಳೇ ಮಗಳು. ಈಕೆಯ ಹಿಂದೆ ನೂರಾರು ಹುಡುಗರು. ಯಾವ ಹುಡುಗನ ಪ್ರೀತಿಗೂ ಮನ ಸೋಲದ ನಂದಿನಿ ಜೆಸ್ಸಿ (ಧನಂಜಯ್) ಗೆ ಕ್ಲೀನ್ ಬೌಲ್ಡ್ ಆಗುತ್ತಾಳೆ.

    ಉಪೇಂದ್ರ ಸ್ಟೈಲ್ ನಲ್ಲಿ ಪ್ರೀತಿಸುವ ಜೆಸ್ಸಿ

    ಉಪೇಂದ್ರ ಸ್ಟೈಲ್ ನಲ್ಲಿ ಪ್ರೀತಿಸುವ ಜೆಸ್ಸಿ

    ಮುಟ್ಟದೆ, ತಟ್ಟದೆ, ತಬ್ಬಿಕೊಳ್ಳದೆ ಪರಸ್ಪರ ಡಿಸ್ಟೆನ್ಸ್ ಮೇನ್ಟೇನ್ ಮಾಡುವ ಡೈಲಾಗ್ ಹೊಡೆದು 'ಉಪೇಂದ್ರ' ಸಿನಿಮಾ ನೆನಪಿಸುವ ಶೈಲಿಯಲ್ಲಿ ಜೆಸ್ಸಿ, ನಂದಿನಿಯನ್ನ ಪ್ರೀತಿಸುತ್ತಾನೆ.

    ನಂತರವೇ ಸೂಪರ್ ಟ್ವಿಸ್ಟ್.!

    ನಂತರವೇ ಸೂಪರ್ ಟ್ವಿಸ್ಟ್.!

    ಪ್ರೀತಿ-ಗೀತಿ-ಇತ್ಯಾದಿ ಅಂತ ನಂದಿನಿ ಬಿಜಿಯಾಗಿರುವಾಗಲೇ, ಆಕೆಗೆ ಮದುವೆ ಫಿಕ್ಸ್ ಆಗುತ್ತೆ. ತಮ್ಮ ಪ್ರೀತಿ-ಪ್ರಣಯವನ್ನ ಜೆಸ್ಸಿ ಅಮ್ಮನಿಗೆ (ಸುಮಲತಾ) ತಿಳಿಸಬೇಕು ಅಂತ ನಂದಿನಿ ನಿರ್ಧರಿಸಿ, ಜೆಸ್ಸಿ ಮನೆಗೆ ಹೋಗ್ತಾಳೆ. ಅಲ್ಲಿಂದ್ಲೇ ಅಸಲಿ 'ಜೆಸ್ಸಿ' ಸಿನಿಮಾ ಶುರುವಾಗುವುದು..! ಆ ಸಸ್ಪೆನ್ಸ್ ಕಥೆಯನ್ನ ನಾವು ಹೇಳಲ್ಲ, ನೀವು ಥಿಯೇಟರ್ ನಲ್ಲೇ ನೋಡಿ....

    ಧನಂಜಯ್ ನಟನೆ ಹೇಗಿದೆ?

    ಧನಂಜಯ್ ನಟನೆ ಹೇಗಿದೆ?

    'ಡೈರೆಕ್ಟರ್ಸ್ ಸ್ಪೆಷಲ್' ಹುಡುಗ ಧನಂಜಯ್ ಆಕ್ಟಿಂಗ್ ಓಕೆ. ಅವರು ಬಾಯಿ ತೆಗೆದು ಸ್ಪಷ್ಟವಾಗಿ ಮಾತನಾಡಿದರೆ ಇನ್ನೂ ಉತ್ತಮ.

    ಪಾರುಲ್ ಯಾದವ್ ಸೂಪರ್ ಬಿಡಿ

    ಪಾರುಲ್ ಯಾದವ್ ಸೂಪರ್ ಬಿಡಿ

    ಎಂತಹ ಪಾತ್ರ ಕೊಟ್ಟರೂ ನಟಿ ಪಾರುಲ್ ಯಾದವ್ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಅನ್ನೋದಕ್ಕೆ 'ಜೆಸ್ಸಿ' ಸಿನಿಮಾ ಮತ್ತೊಂದು ಉದಾಹರಣೆ ಅಷ್ಟೆ. ಒಮ್ಮೊಮ್ಮೆ ಮುಗ್ಧೆಯಾಗಿ, ಮತ್ತೊಮ್ಮೆ ಅಸಹಾಯಕಳಾಗಿ ಪಾರುಲ್ ನಟನೆ ಚೆನ್ನಾಗಿದೆ.

    ಗಮನ ಸೆಳೆಯುವ ರಘು ಮುಖರ್ಜಿ

    ಗಮನ ಸೆಳೆಯುವ ರಘು ಮುಖರ್ಜಿ

    ಜವಾಬ್ದಾರಿಯುತ ಪತಿಯ ಪಾತ್ರದಲ್ಲಿ ರಘು ಮುಖರ್ಜಿ ಕೊಡ ಉತ್ತಮ ಪರ್ಫಾಮೆನ್ಸ್ ನೀಡಿದ್ದಾರೆ.

    ಉಳಿದವರು....

    ಉಳಿದವರು....

    ಉಳಿದಂತೆ ಅವಿನಾಶ್, ಸಾಧು ಕೋಕಿಲ, ಚಿಕ್ಕಣ್ಣ, ರಾಮಕೃಷ್ಣ, ಗೌತಮಿ ನಟನೆ ಚೆನ್ನಾಗಿದೆ.

    'ಜೆಸ್ಸಿ'ಯಲ್ಲಿ ಮಸ್ತ್ ಕಾಮಿಡಿ

    'ಜೆಸ್ಸಿ'ಯಲ್ಲಿ ಮಸ್ತ್ ಕಾಮಿಡಿ

    ಫಸ್ಟ್ ಹಾಫ್ ನಲ್ಲಿ ಚಿಕ್ಕಣ್ಣ, ಸೆಕೆಂಡ್ ಹಾಫ್ ನಲ್ಲಿ ಸಾಧು ಕೋಕಿಲ ನೀಡುವ ಕಾಮಿಡಿ ಇಂಜೆಕ್ಷನ್ ಮಸ್ತ್ ಆಗಿದೆ. ಪವನ್ ಒಡೆಯರ್ ಬರೆದಿರುವ ಸಂಭಾಷಣೆ ಕೂಡ ಕಚಗುಳಿ ಇಡುತ್ತದೆ.

    ಲವಲವಿಕೆಯಿಂದ ಸಾಗುವ ಚಿತ್ರಕಥೆ

    ಲವಲವಿಕೆಯಿಂದ ಸಾಗುವ ಚಿತ್ರಕಥೆ

    ನಿರ್ದೇಶಕ ಪವನ್ ಒಡೆಯರ್ ರಚಿಸಿರುವ ಚಿತ್ರಕಥೆಯಲ್ಲಿ ಫ್ರೆಶ್ನೆಸ್ ಇದೆ. ಸಂಭಾಷಣೆಯಲ್ಲಿ ತಾಜಾತನ ಇದೆ. ಭಯಾನಕ ಚಿತ್ರಕಥೆ ಆದರೂ, ಅದನ್ನ ಲವಲವಿಕೆಯಿಂದಲೇ ಹೆಣೆದಿರುವ ಪವನ್ ಒಡೆಯರ್ ಜಾಣ್ಮೆ ಮೆಚ್ಚಲೇಬೇಕು.

    ಚಿತ್ರಕಥೆಯಲ್ಲಿ ಹೊಸತನ!

    ಚಿತ್ರಕಥೆಯಲ್ಲಿ ಹೊಸತನ!

    ಪ್ರೇಮ ಕಾವ್ಯಕ್ಕೆ ಹಾರರ್ ಫೀಲ್ ಕೊಟ್ಟಿರುವ ಪವನ್ ಒಡೆಯರ್ ರವರ ಕಥೆಯಲ್ಲಿ ಹೊಸತನ ಇದೆ. ಸ್ಯಾಂಡಲ್ ವುಡ್ ಮಟ್ಟಿಗೆ ಇದು ವಿನೂತನ ಅನ್ನೋದರಲ್ಲಿ ಎರಡು ಮಾತಿಲ್ಲ.

    ಟೆಕ್ನಿಕಲಿ ಸಿನಿಮಾ ಹೇಗಿದೆ?

    ಟೆಕ್ನಿಕಲಿ ಸಿನಿಮಾ ಹೇಗಿದೆ?

    ಅರುಲ್ ಸೋಮಸುಂದರನ್ ರವರ ಛಾಯಾಗ್ರಹಣ ಫಸ್ಟ್ ಹಾಫ್ ನಲ್ಲಿ ಮುದ ನೀಡಿದ್ರೆ, ಸೆಕೆಂಡ್ ಹಾಫ್ ನಲ್ಲಿ ಎದೆ ನಡುಗಿಸುತ್ತದೆ. ಸುರೇಶ್ ಆರ್ಮುಗಂ ರವರ ಸಂಕಲನ ಶಾರ್ಪ್ ಆಗಿದೆ. ಅನೂಪ್ ಸೀಳಿನ್ ಸಂಗೀತ ಮಧುರ. ಚಿತ್ರಮಂದಿರದಿಂದ ಹೊರಬಂದ ಮೇಲೂ 'ನೀ ಬಂದೆ...ಮಳೆ ಬಂತು' ಹಾಡು ಗುನುಗುವಂತಿದೆ.

    ಮೈನಸ್ ಪಾಯಿಂಟ್ ಏನು?

    ಮೈನಸ್ ಪಾಯಿಂಟ್ ಏನು?

    Interval ನಲ್ಲಿ ಸಿಗುವ ಟ್ವಿಸ್ಟ್, ಸೆಕೆಂಡ್ ಹಾಫ್ ನಲ್ಲಿ ಅಲ್ಲಲ್ಲಿ ಸ್ವಲ್ಪ ವೀಕ್ ಆದಂತೆ ಭಾಸವಾಗುತ್ತೆ. ಇನ್ನೂ ಕ್ಲೈಮ್ಯಾಕ್ಸ್ ಕೂಡ ಕೊಂಚ ಪೇಲವ.

    ಫೈನಲ್ ಸ್ಟೇಟ್ ಮೆಂಟ್

    ಫೈನಲ್ ಸ್ಟೇಟ್ ಮೆಂಟ್

    ಸ್ಯಾಂಡಲ್ ವುಡ್ ಮಟ್ಟಿಗೆ 'ಜೆಸ್ಸಿ' ಒಂದು ಹೊಸ ಪ್ರಯತ್ನ. ಒಂದೇ ತರಹದ ಸಿನಿಮಾ ನೋಡಿ ನೋಡಿ ಬೇಸರಗೊಂಡಿರುವವರಿಗೆ 'ಜೆಸ್ಸಿ' ಹೊಸ ಫೀಲ್ ಕೊಡುವುದರಲ್ಲಿ ಡೌಟೇ ಬೇಡ. 'ಜೆಸ್ಸಿ' ಚಿತ್ರವನ್ನ ಆರಾಮಾಗಿ ನೋಡಬಹುದು.

    English summary
    Kannada Actor Dhananjay, Raghu Mukherjee and Kannada Actress Parul Yadav starrer Pawan Wadeyar directorial 'Jessie' movie has hit the screens today (March 25th). Review of the movie is here.
    Saturday, September 29, 2018, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X