For Quick Alerts
ALLOW NOTIFICATIONS  
For Daily Alerts

  'ಇದೊಳ್ಳೆ ರಾಮಾಯಣ' ಅಂತ ತಲೆ ಚಚ್ಚಿಕೊಂಡ್ರಾ ವಿಮರ್ಶಕರು?

  By Harshitha
  |

  ಈಗಾಗಲೇ ತಮಿಳಿಗೆ ರೀಮೇಕ್ ಆಗಿ ಭರ್ಜರಿ ಯಶಸ್ಸು ಕಂಡಿರುವ ಮಲೆಯಾಳಂನ 'ಶಟರ್' ಚಿತ್ರವನ್ನ ಕನ್ನಡ ಹಾಗೂ ತೆಲುಗಿಗೆ 'ಇದೊಳ್ಳೆ ರಾಮಾಯಣ' ಮೂಲಕ ತೆರೆಗೆ ತಂದಿದ್ದಾರೆ ನಟ, ನಿರ್ಮಾಪಕ, ನಿರ್ದೇಶಕ ಪ್ರಕಾಶ್ ರೈ.

  ಸದಭಿರುಚಿಯ ಚಿತ್ರಗಳನ್ನ ನೀಡುವುದರಲ್ಲಿ ಪ್ರಕಾಶ್ ರೈ ನಿಸ್ಸೀಮ. ಕ್ಲಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಚಿತ್ರವಾಗಿರುವ 'ಇದೊಳ್ಳೆ ರಾಮಾಯಣ' ನೋಡಿದ ವಿಮರ್ಶಕರ ಅಭಿಪ್ರಾಯವೇನು?

  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಇದೊಳ್ಳೆ ರಾಮಾಯಣ' ಚಿತ್ರದ ವಿಮರ್ಶೆ ಇಲ್ಲಿದೆ ನೋಡಿ....

  ಇದು ಕ್ಲಾಸಿಕಲ್ ರಾಮಾಯಣ : ವಿಜಯ ಕರ್ನಾಟಕ

  ಪ್ರಕಾಶ್‌ ರೈ ನಿರ್ದೇಶನ ಮತ್ತು ಅಭಿನಯವಿರುವ ಚಿತ್ರ ‘ಇದೊಳ್ಳೆ ರಾಮಾಯಣ' ಮಲಯಾಳಂ ಜನಪ್ರಿಯ ‘ಶಟರ್' ಚಿತ್ರದ ರಿಮೇಕ್. ಈಗಾಗಲೇ ತಮಿಳಿಗೂ ರಿಮೇಕ್ ಆಗಿದೆ. ಅದನ್ನೇ ಕನ್ನಡ, ತೆಲುಗು ಭಾಷೆಗಳಿಗೆ ರಿಮೇಕ್ ಮಾಡಿದ್ದಾರೆ ಪ್ರಕಾಶ್‌ ರೈ. ಈ ಅಂಶ ಇಲ್ಲಿ ಮುಖ್ಯವಲ್ಲ. ಇಡೀ ಚಿತ್ರ ಹೇಗೆ ಬಂದಿದೆ ಎನ್ನುವುದೇ ವಿಷಯ. ಒಂದು ಸಾಲಿನಲ್ಲಿ ಹೇಳಬೇಕಾದರೆ, ಈ ಸಿನಿಮಾ ಕ್ಲಾಸ್‌ - ಪದ್ಮ ಶಿವಮೊಗ್ಗ

  ಭುಜಂಗಯ್ಯನ ಹೊಸ ಅವತಾರ! - ಪ್ರಜಾವಾಣಿ

  ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾವುದೋ ಉದ್ವೇಗಕ್ಕೆ ಒಳಗಾಗಿಯೋ- ಸಮಾಜ ಒಪ್ಪಿತವಲ್ಲದ ಕೆಲಸವನ್ನು ಮಾಡಲು ಹೋಗಿ ಅಚಾನಕ್ಕಾಗಿ ಸಿಕ್ಕಿಕೊಂಡು ಬಿಡುತ್ತೇವೆ. ತಾನು ಇದನ್ನೆಲ್ಲ ಮಾಡಬಾರದಿತ್ತು ಎಂದುಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈ ಮೀರುವ ಸಂದರ್ಭ ಬಂದಿರುತ್ತದೆ. ಈ ವಿಚಾರ ನಾಲ್ಕು ಜನರ ಮುಂದೆ ಬಹಿರಂಗವಾದರೆ ಮರ್ಯಾದೆಗೆ ಕುತ್ತು ಎಂದು ಹೇಗಾದರೂ ಬಚಾವಾಗುವ ಯತ್ನದಲ್ಲಿ ಮನುಷ್ಯ ಏನೆಲ್ಲ ಅನುಭವಗಳನ್ನು ಹಾದುಹೋಗುತ್ತಾನೆ ಎಂಬುದನ್ನು ತೋರಿಸುವ ಪ್ರಯತ್ನವೇ ‘ಇದೊಳ್ಳೆ ರಾಮಾಯಣ'. ಮನೆಯವರನ್ನೆಲ್ಲ ಮಾತಿನಲ್ಲಿ ಬೆದರಿಸಿ, ಊರಲ್ಲೆಲ್ಲ ನೋಟುಗಳ ಮೂಲಕ ಗೌರವ ‘ಸಂಪಾದಿಸುವ' ವ್ಯಕ್ತಿ, ತನ್ನ ಸುತ್ತಲಿನ ಜಗತ್ತು ತನ್ನನ್ನು ಹೇಗೆ ನೋಡುತ್ತಿದೆ, ತನ್ನ ಬೆನ್ನ ಹಿಂದೆ ತನ್ನ ಕುರಿತು ತನ್ನ ಆಪ್ತ ವಲಯದಲ್ಲೇ ಇರುವವರಿಂದ ಏನೆಲ್ಲ ಮಾತುಗಳು ಹರಿಯುತ್ತಿರುತ್ತವೆ ಎಂದು ತಿಳಿದಾಗ ಅದನ್ನು ಎದುರಿಸುವ ನೈತಿಕತೆ ಇಲ್ಲದೆ ಹೇಗೆ ಅಸಹಾಯಕನಾಗುತ್ತಾನೆ ಎಂಬುದಕ್ಕೆ ಚಿತ್ರದ ನಾಯಕ ಭುಜಂಗಯ್ಯ (ಪ್ರಕಾಶ್ ರೈ) ಉದಾಹರಣೆ - ಗಣೇಶ್ ವೈದ್ಯ

  ನಮ್ಮೊಳಗಿನ ರಾವಣನ ಆತ್ಮಚರಿತ್ರೆ - ಉದಯವಾಣಿ

  ಪ್ರಕಾಶ್ ರೈ ನಿರ್ದೇಶಿಸಿರುವ 'ಇದೊಳ್ಳೆ ರಾಮಾಯಣ' ಹಲವು ಕಾರಣಕ್ಕೆ ಆಪ್ತವಾಗುತ್ತಾ ಹೋಗುವ ಒಂದು ಜರ್ನಿ. ಊರಲ್ಲಿ ಒಳ್ಳೆಯವನಾಗುವುದಕ್ಕೆ ಹೋಗುತ್ತಲೇ, ಮನೆಯಲ್ಲಿ ಎಲ್ಲರನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಲು ನೋಡುವ ಭುಜಂಗಯ್ಯ, ತನ್ನ ಕಾಮ, ಕ್ರೋಧ, ಲೋಭ, ಮೋಹ, ಮದಗಳನ್ನು ನಿಯಂತ್ರಣಕ್ಕೆ ತಂದುಕೊಳ್ಳಲಾಗದೇ ಒದ್ದಾಡುತ್ತಾನೆ, ಒಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಳ್ಳುತ್ತಾನೆ. ಅದರಿಂದ ಹೊರಬರುವುದು ಮತ್ತು ತನ್ನನ್ನು ತಾನೇ ಈ ಎಲ್ಲಾ ಮನೋವಿಕಾರಗಳಿಂದ ಹೊರಕರೆತರುವುದು - ವಿಕಾಸ್ ನೇಗಿಲೋಣಿ

  Idolle Ramayana Review - Times of India

  When Prakash Raj takes on the responsibility of directing a remake, he ensures there's something unique for the viewers who have seen the original too. Idolle Ramayana, the Kannada remake of the Malayalam film Shutter, too delivers the same. This film soaks in the essence of Joy Mathew's original, but gives it an interesting spin with his own little tempering to give it a new flavour - Sunayana Suresh

  English summary
  Kannada Actor Prakash Rai directorial 'Idolle Ramayana' has received positive response from the critics. Here is the collection of 'Idolle Ramayana' reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more