twitter
    For Quick Alerts
    ALLOW NOTIFICATIONS  
    For Daily Alerts

    ದಿ ಟೆರರಿಸ್ಟ್ ವಿಮರ್ಶೆ: 'ಟೆರರಿಸಂ' ವಿರುದ್ಧ ಶಾಂತಿಯುತ ಯುದ್ಧ

    |

    'ಒಬ್ಬ ಟೆರರಿಸ್ಟ್ ಮನಸ್ಸು ಪಟ್ಟರೇ ಸಾವಿರಾರು ಸಾಮಾನ್ಯರನ್ನ ಕೊಲ್ಲಬಹುದು. ಒಬ್ಬ ಸಾಮಾನ್ಯ ತಿರುಗಿಬಿದ್ದರೇ ಅದೇ ಟೆರರಿಸ್ಟ್ ನ ಕೊಲ್ಲಬಹುದು' ಇದು ಟೆರರಿಸ್ಟ್ ಚಿತ್ರದ ಅಂತಿಮ ಸಂದೇಶ. ಟೆರರಿಸಂ' ವಿರುದ್ಧ ರಕ್ತಪಾತವಿಲ್ಲದೇ ನಡೆಯುವ ಶಾಂತಿಯುತ ಯುದ್ಧ ಇದು. ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಮನರಂಜನೆಯಿಂದ ಕೂಡಿರುವ ಈ ಚಿತ್ರವನ್ನ ಬಹಳ ಚೆನ್ನಾಗಿ ಪ್ರೆಸೆಂಟ್ ಮಾಡುವಲ್ಲಿ ನಿರ್ದೇಶಕ ಪಿಸಿ ಶೇಖರ್ ಯಶಸ್ಸು ಕಂಡಿದ್ದಾರೆ.

    ಚಿತ್ರ: ದಿ ಟೆರರಿಸ್ಟ್
    ನಿರ್ದೇಶಕ: ಪಿಸಿ ಶೇಖರ್
    ಕಲಾವಿದರು: ರಾಗಿಣಿ ದ್ವಿವೇದಿ, ಮನು, ಕೃಷ್ಣ ಹೆಬ್ಬಾಲೆ, ಗಿರೀಶ್ ಶಿವಣ್ಣ, ಶ್ರೀಕಾಂತ್, ಬಾಲಾಜಿ ಮನೋಹರ್ ಮತ್ತು ಇತರರು
    ಬಿಡುಗಡೆ: 2018 ಅಕ್ಟೋಬರ್ 18

    Rating:
    4.0/5

    ಕುತೂಹಲಕಾರಿ ನಿರೂಪಣೆ

    ಕುತೂಹಲಕಾರಿ ನಿರೂಪಣೆ

    ಕಥೆ ಚೆನ್ನಾಗಿದೆ, ಚಿತ್ರಕಥೆ ಚೆನ್ನಾಗಿದೆ, ಹಾಡು ಚೆನ್ನಾಗಿದೆ, ಹಿನ್ನೆಲೆ ಸಂಗೀತ ಚೆನ್ನಾಗಿದೆ, ಛಾಯಾಗ್ರಹಣ ಚೆನ್ನಾಗಿದೆ ಎನ್ನುವುದು ಸಾಮಾನ್ಯ. ಆದ್ರೆ, ಇದೆಲ್ಲವನ್ನ ಬಳಸಿಕೊಂಡು ಇಂಟ್ರೆಸ್ಟಿಂಗ್ ಆಗಿ ನಿರೂಪಣೆ ಮಾಡುವುದು ಸವಾಲಿನ ಕೆಲಸ. ಇದನ್ನ 'ಟೆರರಿಸ್ಟ' ಸಿನಿಮಾ ಬಹಳ ಚೆನ್ನಾಗಿ ಮಾಡಿದೆ. ಚಿತ್ರದ ಆರಂಭದಿಂದ ಕೊನೆಯವರೆಗೂ ಥ್ರಿಲ್ಲಿಂಗ್ ಉಳಿಸಿಕೊಂಡು ಪ್ರೇಕ್ಷಕರನ್ನ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.

    ಕಂಪ್ಲೀಟ್ 'ಟೆರರಿಸ್ಟ್' ಕಥೆ

    ಕಂಪ್ಲೀಟ್ 'ಟೆರರಿಸ್ಟ್' ಕಥೆ

    ಶೀರ್ಷಿಕೆ ಹೇಳುವಂತೆ ಇದು ಸಂಪೂರ್ಣವಾಗಿ ಟೆರರಿಸ್ಟ್ ಕಥೆ. ಮುಂಬೈ ಮತ್ತು ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರೇರಣೆಯಾಗಿ ತೆಗೆದುಕೊಂಡಿದ್ದಾರೆ ಹೊರತು ಅಲ್ಲಿನ ಕಥೆ ಬಳಸಿಕೊಂಡಿಲ್ಲ. ಟೆರರಿಸ್ಟ್ ಪ್ರಕ್ರಿಯೆಗಳು ಹೇಗೆ ಆಗುತ್ತೆ, ಅಮಾಯಕರನ್ನ ಹೇಗೆ ಬಲಿಪಶು ಮಾಡ್ತಾರೆ, ವಿದ್ಯಾವಂತರನ್ನ ಹೇಗೆ ಈ ಜಾಲಕ್ಕೆ ಸಿಲುಕಿಸಲಾಗುತ್ತೆ, ಅದನ್ನ ಭೇದಿಸಲು ಪೊಲೀಸರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನ ತುಂಬಾ ಇಂಟ್ರೆಸ್ಟಿಂಗ್ ಆಗಿ ತೋರಿಸಲಾಗಿದೆ. ಸಾಂಗ್ಸ್, ಡುಯೇಟ್, ಫೈಟ್, ಕಾಮಿಡಿ ಇದ್ಯಾವುದು ಚಿತ್ರಕ್ಕೆ ಅಡ್ಡಿಯಾಗಿಲ್ಲ. ಯಾಕಂದ್ರೆ, ಇದ್ಯಾವುದು ಈ ಕಥೆಗೆ ಬೇಕಾಗಿಲ್ಲ. ಅದನ್ನ ನಿರ್ದೇಶಕರು ಅರಿತು ಸಿನಿಮಾ ಮಾಡಿದ್ದಾರೆ.

    ರಾಗಿಣಿ 'ದಿ ಬೆಸ್ಟ್' ಎನ್ನಬಹುದು

    ರಾಗಿಣಿ 'ದಿ ಬೆಸ್ಟ್' ಎನ್ನಬಹುದು

    ರಾಗಿಣಿ ದ್ವಿವೇದಿ ಇದುವರೆಗೂ ಹಲವು ಮಹಿಳಾ ಪ್ರಧಾನ ಸಿನಿಮಾಗಳನ್ನ ಮಾಡಿದ್ದಾರೆ. ಆದ್ರೆ, ಈ ಚಿತ್ರ ರಾಗಿಣಿ ಕರಿಯರ್ ನಲ್ಲಿ 'ದಿ ಬೆಸ್ಟ್' ಎನ್ನಬಹುದು. ರಾಗಿಣಿಯನ್ನ ಇಷ್ಟು ದಿನ ಇಷ್ಟಪಟ್ಟ ರೀತಿಗಿಂತ ಇಲ್ಲಿ ವಿಭಿನ್ನವಾಗಿ ಗಮನ ಸೆಳೆಯುತ್ತಾರೆ. ಗ್ಲಾಮರ್, ಹಾಟ್ ಇದೆಲ್ಲವನ್ನ ಬಿಟ್ಟು ಒಂದು ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ಮುಸ್ಲಿಂ ಮನೆತನದ ಹುಡುಗಿ ಪಾತ್ರ ನಿರ್ವಹಿಸಿದ್ದು, ಅದಕ್ಕೆ ತಕ್ಕ ವೇಷಭೂಷಣ, ಲುಕ್, ಮ್ಯಾನರಿಸಂ ಎಲ್ಲವೂ ಮುಸ್ಲಿಂ ಹುಡುಗಿಯೇ ಎನ್ನುವಷ್ಟು ಇಷ್ಟವಾಗ್ತಾರೆ. ಇಡೀ ಸಿನಿಮಾಗೆ ರಾಗಿಣಿನೇ ಪಿಲ್ಲರ್.

    ಪಿಸಿ ಶೇಖರ್ ಮತ್ತೊಂದು ಯಶಸ್ಸಿನ ಚಿತ್ರ

    ಪಿಸಿ ಶೇಖರ್ ಮತ್ತೊಂದು ಯಶಸ್ಸಿನ ಚಿತ್ರ

    ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನ ಮಾಡಿರುವ ನಿರ್ದೇಶಕ ಪಿಸಿ ಶೇಖರ್ ಟೆರರಿಸ್ಟ್ ಚಿತ್ರದಲ್ಲೂ ಕಮಾಲ್ ಮಾಡಿದ್ದಾರೆ. ಬಹಳ ಅಚ್ಚುಕಟ್ಟಾಗಿ ಕಥೆ ಮಾಡಿ, ಅದಕ್ಕೆ ಸೂಕ್ತ ಪಾತ್ರಗಳನ್ನ ಆಯ್ಕೆ ಮಾಡಿ, ಒಂದು ಸಾಕ್ಷ್ಯಚಿತ್ರವೆಂಬತೆ ನೀಟಾಗಿ ನಿರೂಪಣೆ ಮಾಡಿದ್ದಾರೆ. ಈ ಸಿನಿಮಾ ನೋಡ್ತಿದ್ರೆ, ನಮ್ಮ ಸುತ್ತಮುತ್ತಲೂ ಈ ರೀತಿ ಆಗ್ತಿದ್ಯಾ ಎಂಬ ಅನುಮಾನ ಬರುವಷ್ಟು ನೈಜವಾಗಿ ಸಿನಿಮಾ ಚಿತ್ರೀಕರಿಸಿದ್ದಾರೆ. ಟೆಕ್ನಿಕಲಿ ಕೂಡ ಸಿನಿಮಾ ಆಕರ್ಷಣೆ ಮಾಡುತ್ತೆ. ಪ್ರದೀಪ್ ವರ್ಮಾ ಹಿನ್ನೆಲೆ ಸಂಗೀತ, ವೈದಿ ಅವರ ಕ್ಯಾಮರಾ ವರ್ಕ್ ಪಿಸಿ ಶೇಖರ್ ಗೆ ಉತ್ತಮ ಸಾಥ್ ನೀಡಿದೆ.

    ಒಂದೊಳ್ಳೆ ಮೆಸೆಜ್ ಇದೆ

    ಒಂದೊಳ್ಳೆ ಮೆಸೆಜ್ ಇದೆ

    ಒಬ್ಬ ಟೆರರಿಸ್ಟ್ ಮನಸ್ಸು ಪಟ್ಟರೇ ಸಾವಿರಾರು ಸಾಮಾನ್ಯರನ್ನ ಕೊಲ್ಲಬಹುದು. ಒಬ್ಬ ಸಾಮಾನ್ಯ ತಿರುಗಿಬಿದ್ದರೇ ಅದೇ ಟೆರರಿಸ್ಟ್ ನ ಕೊಲ್ಲಬಹುದು. 'ಟೆರರಿಸಂ' ವಿರುದ್ಧ ರಕ್ತಪಾತವಿಲ್ಲದೇ ನಡೆಯುವ ಶಾಂತಿಯುತ ಯುದ್ಧ ಇದು. ಯಾರು ಧರ್ಮವನ್ನ ರಕ್ಷಿಸುತ್ತಾರೋ ಅವರನ್ನ ಧರ್ಮ ರಕ್ಷಿಸುತ್ತೆ. ಎಲ್ಲ ಧರ್ಮದಲ್ಲಿಯೂ ಇದೇ ಹೇಳಿರುವುದು ಎಂಬ ಸಂದೇಶವನ್ನ ಈ ಸಿನಿಮಾ ಮೂಲಕ ಹೇಳಿದ್ದಾರೆ. ಇಲ್ಲಿ ಮುಸ್ಲಿಂ ಸಮುದಾಯದ ಪಾತ್ರಗಳೇ ಹೆಚ್ಚು ಬಂದಿದ್ದರೂ, ಯಾವುದೇ ರೀತಿಯ ವಿವಾದಕ್ಕೆ ಜಾಗಮಾಡಿಕೊಟ್ಟಿಲ್ಲ.

    ಇನ್ನುಳಿದಂತೆ 'ಟೆರರಿಸ್ಟ್' ಹೇಗಿದೆ

    ಇನ್ನುಳಿದಂತೆ 'ಟೆರರಿಸ್ಟ್' ಹೇಗಿದೆ

    ಇನ್ನುಳಿದಂತೆ ಪಕ್ಕಾ ಕಮರ್ಷಿಯಲ್ ಮನರಂಜನೆ ಸಿನಿಮಾ. ಫ್ಯಾಮಿಲಿ, ತಂಗಿ, ತಮ್ಮನ ಸೆಂಟಿಮೆಂಟ್ ಇದೆ. ಮುಗ್ದ ಪ್ರೇಮಕಥೆಯೂ ಗಮನ ಸೆಳೆಯುತ್ತೆ. ಜೊತೆಗೆ ಮಿಲಿಟರಿ ಆಪರೇಷನ್ ಕೂಡ ಬರುತ್ತೆ. ರಾಗಿಣಿ ಜೊತೆ ಮನು ಹೆಗಡೆ, ಕೃಷ್ಣ ಹೆಬ್ಬಾಲೆ, ಗಿರೀಶ್ ಶಿವಣ್ಣ, ಶ್ರೀಕಾಂತ್, ಬಾಲಾಜಿ ಮನೋಹರ್, ಕೀರ್ತಿ ಭಾನು, ಪದ್ಮ ಶಿವಮೊಗ್ಗ, ಸಮೀಕ್ಷಾ, ರವಿ ಭಟ್, ಶಶಿಕಾಂತ್ ಘಟ್ಟಿ ಸೇರಿದಂತೆ ಹಲವರು ಅಭಿನಯಿಸಿದ್ದು, ಎಲ್ಲರೂ ಗಮನಾರ್ಹ ಅಭಿನಯ ನೀಡಿದ್ದಾರೆ. ಕೊನೆಯದಾಗಿ ಹೇಳುವುದಾದರೇ ದಿ ಟೆರರಿಸ್ಟ್ ಒಳ್ಳೆಯ ಸಿನಿಮಾ, ನೋಡಲು ಯೋಗ್ಯವಾದ ಸಿನಿಮಾ.

    English summary
    Kannada actress ragini dwivedi starrer the terrorist movie has released today. the movie get positive respons from viewers.
    Thursday, October 18, 2018, 16:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X