twitter
    For Quick Alerts
    ALLOW NOTIFICATIONS  
    For Daily Alerts

    ರಾಗಿಣಿ ಎಂಎಂಎಸ್ ಸನ್ನಿ 'ಹಾರರ್' ಕಾಮಿಡಿ

    By ಜೇಮ್ಸ್ ಮಾರ್ಟಿನ್
    |

    ಸನ್ನಿ ಲಿಯೋನ್ ಎಂಬ ಮಾಜಿ ನೀಲಿ ತಾರೆ ಹಾಕಿಕೊಂಡು ರಾಗಿಣಿ ಎಂಎಂಎಸ್ ಚಿತ್ರ ಮಾಡಿದ್ದ ಭೂಷಣ್ ಪಟೇಲ್ ಮತ್ತೊಮ್ಮೆ ಈ ಚಿತ್ರದಲ್ಲಿ ಗೆದ್ದಿದ್ದಾರೆ ಆದರೆ, ಹಾರರ್ ಅಂಶಕ್ಕಿಂತ ಸನ್ನಿ ಮೈಮಾಟವೇ ಮತ್ತೊಮ್ಮೆ ಚಿತ್ರದಲ್ಲಿ ಎದ್ದು ಕಾಣುತ್ತದೆ. ಹಾರರ್ ಜತೆ ಮಿಶ್ರಿತವಾಗಿರುವ ಮಾದಕ ಕಥಾ ಹಂದರ ಕಳೆದ ಚಿತ್ರದ ಕೊನೆ ದೃಶ್ಯದಿಂದ ಮುಂದುವರೆಯುತ್ತದೆ. ಚಿತ್ರದ ಕಥೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ.

    ಈ ಚಿತ್ರದಲ್ಲಿ ನಾಯಕಿ ಸನ್ನಿ ಲಿಯೋನ್ ಮುಖ್ಯಭೂಮಿಕೆಯಲ್ಲಿ ಹಾಕಿಕೊಂಡು ಭೂತ ಬಂಗಲೆಯೊಂದರಲ್ಲಿ ಚಿತ್ರ ನಿರ್ದೇಶಿಸಲು ನಾಯಕ ಪ್ರವೀಣ್ ಹೊರಡುತ್ತಾನೆ. ದೆವ್ವದ ಮನೆ ಗೊತ್ತ್ತಿಲ್ಲದೆ ತೊಂದರೆಗೆ ಸಿಲುಕುವ ಚಿತ್ರ ತಂಡ ಎಲ್ಲವನ್ನು ಕೇಳಿದರೆ ಕನ್ನಡ ಚಿತ್ರ ಶ್..! ಚಿತ್ರ ನೆನಪಿಗೆ ಬರುತ್ತದೆ. ಆದರೆ, ರಾಗಿಣಿ ಎಂಎಂಎಸ್ ಚಿತ್ರದ ಮೊದಲಾರ್ಧದಲ್ಲಿ ಯಾವುದೇ ಬೆದರುವಂಥ ದೃಶ್ಯಗಳು ಕಂಡು ಬರುವುದಿಲ್ಲ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

    Rating:
    3.0/5

    ದ್ವಿತೀಯಾರ್ಧದಲ್ಲಿ ಚಿತ್ರದ ಹಣೆಬರಹವೇನು? ಸಿನಿರಸಿಕರಿಗೆ ಬೆವರು ಹರಿಸುತ್ತಾ? ಅಥವಾ ರೋಮಾಂಚನಗೊಳಿಸುತ್ತಾ? ಬೆಚ್ಚಿ ಬೀಳುಸುತ್ತಾ? ಮುಂದೆ ಓದಿ...

    ರಾಗಿಣಿ ಎಂಎಂಎಸ್ ಆರಂಭದಲ್ಲಿ ಹೊಸತೇನು ಇಲ್ಲ

    ರಾಗಿಣಿ ಎಂಎಂಎಸ್ ಆರಂಭದಲ್ಲಿ ಹೊಸತೇನು ಇಲ್ಲ

    2004ರಲ್ಲಿ ತೆರೆ ಕಂಡ ರಾಮ್ ಗೋಪಾಲ್ ವರ್ಮಾ ಅವರ 'ಭೂತ್' ಚಿತ್ರದ ಟ್ರಿಕ್ ಗಳನ್ನು ಮತ್ತೊಮ್ಮೆ ಈ ಚಿತ್ರದ ಆರಂಭದ ದೃಶ್ಯಗಳಲ್ಲಿ ಕಾಣಬಹುದು.

    ಹಾರರ್ ಚಿತ್ರಗಳಿಗೆ ಹೊಸ ಭಾಷ್ಯ

    ಹಾರರ್ ಚಿತ್ರಗಳಿಗೆ ಹೊಸ ಭಾಷ್ಯ

    ಹಾರರ್ ಚಿತ್ರಗಳಿಗೆ ಹೊಸ ಭಾಷ್ಯ ಬರೆಯಲು ಸೆಕ್ಸ್ + ಹಾರರ್+ ಕಾಮಿಡಿ ರೀಮಿಕ್ಸ್ ಮಾಡಿ ಈ ಚಿತ್ರವನ್ನು ಪ್ರೇಕ್ಷಕರಿಗೆ ಉಣಬಡಿಸಲಾಗಿದೆ.

    ದ್ವಿತೀಯಾರ್ಧದಲ್ಲಿ ಮತ್ತೆ ಸನ್ನಿ ಕಾಡುತ್ತಾಳೆ

    ದ್ವಿತೀಯಾರ್ಧದಲ್ಲಿ ಮತ್ತೆ ಸನ್ನಿ ಕಾಡುತ್ತಾಳೆ

    ದ್ವಿತೀಯಾರ್ಧದಲ್ಲಿ ಮತ್ತೆ ಸನ್ನಿ ಕಾಡುತ್ತಾಳೆ. ನುಲಿಯುತ್ತಾಳೆ, ಹಿನ್ನೆಲೆ ದನಿ ಜತೆ ತುಂಡು ಬಟ್ಟೆಯಲ್ಲಿ ಸೆಳೆಯುತ್ತಾಳೆ. ಜಿಸ್ಮ್ 2 ನಂತರ ಸನ್ನಿ ಅಭಿನಯದಲ್ಲಿ ಭಾರಿ ಬದಲಾವಣೆ ನಿರೀಕ್ಷಿಸಿದವರಿಗೆ ಅಲ್ಪ ಪ್ರಮಾಣದ ತೃಪ್ತಿ ಸಿಗುತ್ತದೆ.

    ಊಂ...ಆಹ್..ಔಚ್ ಗೇನೂ ಕೊರತೆ ಇಲ್ಲ

    ಊಂ...ಆಹ್..ಔಚ್ ಗೇನೂ ಕೊರತೆ ಇಲ್ಲ

    ಇನ್ನು ಮೈಮಾಟ ಪ್ರದರ್ಶನ, ಊಂ...ಆಹ್..ಔಚ್ ಗೇನೂ ಕೊರತೆ ಇಲ್ಲ.ಆದರೆ, ಆಂಗಿಕ ಅಭಿನಯವೆಲ್ಲ ನಟನೆ ಎನ್ನಲು ಬರುವುದಿಲ್ಲ. ಭಾವನೆಗಳನ್ನು ವ್ಯಕ್ತಪಡಿಸುವುದು ಬೇರೆ ಹಿನ್ನೆಲೆ ದನಿಯಲ್ಲಿ ಮೈ ಮುರಿದು ಚೀರುವುದು ಬೇರೆ.

    ಪೋಷಕ ಪಾತ್ರಗಳೇ ಪ್ರಧಾನ

    ಪೋಷಕ ಪಾತ್ರಗಳೇ ಪ್ರಧಾನ

    ಸಂಧ್ಯಾ ಮೃದಲ್, ದಿವ್ಯಾ ದತ್ತ ಪಾತ್ರಕ್ಕೆ ತಕ್ಕ ಪೋಷಣೆ ಒದಗಿಸಿದರೂ ಸಂಧ್ಯಾ ಕೆಲವೊಮ್ಮೆ ಅತಿರೇಕ ಮುಟ್ಟಿದಂತೆ ಅನಿಸುತ್ತದೆ.

    ಏಕ್ತಾ ಕಪೂರ್ ಪ್ರಚಾರ ಚಿತ್ರಕ್ಕೆ ಸಹಕಾರಿ

    ಏಕ್ತಾ ಕಪೂರ್ ಪ್ರಚಾರ ಚಿತ್ರಕ್ಕೆ ಸಹಕಾರಿ

    ಏಕ್ತಾ ಕಪೂರ್ ಸಹ ಪೋಷಣೆ ಇರುವುದರಿಂದ ಚಿತ್ರಕ್ಕೆ ವಿವಿಧ ರೀತಿಯ ಸಂಗೀತ ಅನುಭವ ಪ್ರೇಕ್ಷಕರಿಗೆ ಸಿಗುತ್ತದೆ. ಬಾಬ್ಬಿ ಡಾಲ್, ಚಾರ್ ಬೊಟಲ್ ವೋಡ್ಕಾ ಸೂಪರ್ ಹಿಟ್ ಗೀತೆಗಳಾಗಿವೆ. ಚಿತ್ರಕ್ಕಾಗಿ ಏಕ್ತಾ ಕಪೂರ್ ಮಾಡಿದ ಭರ್ಜರಿ ಪ್ರಚಾರ ಕಾರ್ಯ ವರ್ಕ್ ಔಟ್ ಆಗುವ ನಿರೀಕ್ಷೆಯಿದೆ. ಮೊದಲ ವಾರವಂತೂ ಚಿತ್ರ ತುಂಬಿದ ಗೃಹ ಕಾಣಬಹುದು.

    ಒಟ್ಟಾರೆ ಚಿತ್ರಕ್ಕೆ ಎಷ್ಟು ಅಂಕ ನೀಡಬಹುದು?

    ಒಟ್ಟಾರೆ ಚಿತ್ರಕ್ಕೆ ಎಷ್ಟು ಅಂಕ ನೀಡಬಹುದು?

    ಮೊದಲ ಚಿತ್ರಕ್ಕಿಂತ ಚಿತ್ರಕಥೆ ವಿಸ್ತರಣೆಗೆ ಒಂದು ಅಂಕ, ಸಂಗೀತಕ್ಕೆ ಇನ್ನೊಂದು ಪಡ್ಡೆಗಳ ಮನ ತಣಿಸುವ ಕಾಮಿನಿ ಮತ್ತೊಂದು ಎಂದು ಐದಕ್ಕೆ ಮೂರು ಅಂಕ ನೀಡಬಹುದು.

    ಸನ್ನಿ ನಟನೆ ಬೇಡವೆನಿಸಿದರೂ...

    ಸನ್ನಿ ನಟನೆ ಬೇಡವೆನಿಸಿದರೂ...

    ಚಿತ್ರಮಂದಿರಕ್ಕೆ ಹೋಗುವುದು ಬಿಡುವುದು ನಿಮಗೆ ಬಿಟ್ಟಿದ್ದು, ಹಾಂ ಅಂದ ಹಾಗೆ ಸನ್ನಿ ನಟನೆ ಬೇಡವೆನಿಸಿದರೂ ಮೈಮಾಟ, ನರ್ತನಕ್ಕೆ ಮನ ಸೋಲದೆ ಇರಲು ಸಾಧ್ಯವಾಗುವುದಿಲ್ಲ ಒಮ್ಮೆ ಪ್ರಯತ್ನಿಸಿ...

    English summary
    Ragini MMS 2, filled with a lot of scary and erotic moments, features one of the best performances of Sunny Leone. It doesn't have a major story to tell while the entire focus of the makers are fixed on making scary and erotics scenes that can make an appeal on the audience.
    Friday, March 21, 2014, 23:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X