For Quick Alerts
  ALLOW NOTIFICATIONS  
  For Daily Alerts

  'ಕೆ.ಜಿ.ಎಫ್' ಚಿತ್ರ ನೋಡಿದ ವಿಮರ್ಶಕರು ಮಾಡಿರುವ ಕಾಮೆಂಟ್ಸ್ ಏನು.?

  |

  'ಕೆ.ಜಿ.ಎಫ್' ಚಿತ್ರ ದೇಶದಾದ್ಯಂತ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. 'ಕೆ.ಜಿ.ಎಫ್' ಚಿತ್ರವನ್ನ ನೋಡಿ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಎರಡು ವರ್ಷ ಕಾದಿದ್ದಕ್ಕೂ ಸಾರ್ಥಕ ಎಂಬ ಮನೋಭಾವ ಯಶ್ ಅಭಿಮಾನಿಗಳಲ್ಲಿ ಮೂಡಿದೆ.

  ಮೇಕಿಂಗ್ ವಿಚಾರದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ರವರನ್ನ ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ''ಕೆ.ಜಿ.ಎಫ್' ಕನ್ನಡದ ಹೆಮ್ಮೆಯ ಗೋಲ್ಡ್ ಚಿತ್ರ'' ಎಂದು ಫ್ಯಾನ್ಸ್ ಎದೆ ತಟ್ಟಿ ಹೇಳಿಕೊಳ್ಳುತ್ತಿದ್ದಾರೆ. ಯಶ್ ಅಭಿನಯಕ್ಕೆ ಎಲ್ಲರೂ ಸಲಾಂ ಹೊಡೆಯುತ್ತಿದ್ದಾರೆ.

  ಪ್ರೇಕ್ಷಕರು ಮೆಚ್ಚಿರುವ 'ಕೆ.ಜಿ.ಎಫ್' ಚಿತ್ರ ವಿಮರ್ಶಕರ ಪಾಲಿಗೆ ಹೇಗಿದೆ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಕೆ.ಜಿ.ಎಫ್' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

  ರಾಕಿಂಗ್ ಸ್ಟಾರ್ ಮತ್ತು ಮೇಕಿಂಗ್ ಸ್ಟಾರ್ ಜುಗಲ್ಬಂದಿ: ಪ್ರಜಾವಾಣಿ

  ರಾಕಿಂಗ್ ಸ್ಟಾರ್ ಮತ್ತು ಮೇಕಿಂಗ್ ಸ್ಟಾರ್ ಜುಗಲ್ಬಂದಿ: ಪ್ರಜಾವಾಣಿ

  ಮೊದಲರ್ಧದಲ್ಲಿ ಮುಂಬೈ ಅಲ್ಲಿನ ಬೀದಿಗಳು, ರಾಖಿಯ ವೈಖರಿಯಲ್ಲಿ ಕಳೆದು ಹೋಗುತ್ತದೆ. ದ್ವಿತೀರಾರ್ಧದಲ್ಲಿ ಕಥೆ ಕೆಜಿಎಫ್ ಗಣಿಯೊಳಗೆ ಹೊಕ್ಕುತ್ತದೆ. ಅಲ್ಲಿಯವರೆಗೆ ರಾಕಿಂಗ್ ಸ್ಟಾರ್ ಯಶ್ ವಿಜೃಂಭಣೆಯ ಮೇಲಿದ್ದ ಫೋಕಸ್ ನಿಧಾನವಾಗಿ ಕಥನ ನಡೆಯುವ ಕ್ಯಾನ್ವಾಸ್ ಮೇಲೆ ಸರಿಯುತ್ತದೆ. ಅಲ್ಲಿ ಮೇಕಿಂಗೇ ಸ್ಟಾರ್. ಈ ಪಲ್ಲಟದಲ್ಲಿಯೇ 'ಕೆಜಿಎಫ್' ಕನ್ನಡದ ಮಾಮೂಲಿ ನಾಯಕ ಪ್ರಧಾನ ಚಿತ್ರಗಳ ಮಾಮೂಲಿ ಜಾಡಿನಿಂದ ಮೇಲಕ್ಕೇರುವುದು - ಪದ್ಮನಾಭ ಭಟ್

  ರೇಟಿಂಗ್ ನಲ್ಲಿ ಬಾಹುಬಲಿ, ಜೀರೋ, ಮಾರಿ ಚಿತ್ರಗಳನ್ನ ಹಿಂದಿಕ್ಕಿದ ಕೆಜಿಎಫ್.!

  ನೀಲ್ ಕುಲುಮೆಯಲ್ಲಿ ಕಾದ ಕಪ್ಪು ಕೆಂಡ: ವಿಜಯ ಕರ್ನಾಟಕ

  ನೀಲ್ ಕುಲುಮೆಯಲ್ಲಿ ಕಾದ ಕಪ್ಪು ಕೆಂಡ: ವಿಜಯ ಕರ್ನಾಟಕ

  ಭಾರೀ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಗಿದ್ದ ಕೆಜಿಎಫ್ ಮೇಕಿಂಗ್, ಸ್ಕ್ರೀನ್ ಪ್ಲೇ, ಸಿನಿಮಾಟೋಗ್ರಫಿ, ಸಂಭಾಷಣೆ ಎಲ್ಲ ವಿಚಾರದಲ್ಲಿಯೂ ಕನ್ನಡದ ಮಟ್ಟಿಗೆ ಹೊಸ ರೀತಿಯ ಸಿನಿಮಾ. ಆದರೆ ಕಥೆಯ ವಿಚಾರದಲ್ಲಿ ಹಳೆ ಸರಕು. ನೀನು ಹೇಗೆ ಹುಟ್ಟಿದೆ ಅನ್ನೋದು ಮುಖ್ಯ ಅಲ್ಲ, ಸಾಯಬೇಕಾದ್ರೆ ದೊಡ್ಡ ಶ್ರೀಮಂತನಾಗಿ ಸಾಯಬೇಕು ಅದು ಹೇಗಾದ್ರೂ ಆಗಿರಲಿ. ಹೀಗೆ ಹೇಳುವ ತಾಯಿಯ ಮಾತನ್ನು ನಿಜ ಮಾಡಲು ಹೊರಡುವ ಹುಡುಗನ ಕಥೆ ಈ ಕೆಜಿಎಫ್ - ಹರೀಶ್ ಬಸವರಾಜ್

  ಕೆಜಿಎಫ್ 'ಕನ್ನಡದ ಗೋಲ್ಡನ್ ಫಿಲಂ' ಎನ್ನುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು.!

  ಜೀತದ ಜೀವಗಳಿಗೆ ಬಂಗಾರದ ಚೌಕಟ್ಟು: ಕನ್ನಡ ಪ್ರಭ

  ಜೀತದ ಜೀವಗಳಿಗೆ ಬಂಗಾರದ ಚೌಕಟ್ಟು: ಕನ್ನಡ ಪ್ರಭ

  ಸಂಪತ್ತು, ದುಡಿಮೆ, ಗುಲಾಮತನ, ಭಯ, ಸಾವು ಒಟ್ಟಿಗಿದ್ದರೆ ಏನಾಗುತ್ತದೆ ಎಂಬುದನ್ನು ಹೇಳುವುದಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಜೀತದಾಳುಗಳು ಬೇಕಿತ್ತು. ಚಿತ್ರದ ನಾಯಕನಿಗೆ ಶ್ರೀಮಂತನಾಗುವ ಗುರಿಯ ದಾರಿ ಬೇಕಿತ್ತು. ನಿರ್ದೇಶಕರು ಕೆಜಿಎಫ್ ಗೆ ಬರುತ್ತಾರೆ. ಅದೇ ಕೆಜಿಎಫ್ ನ ಬಂಗಾರದ ಸಂಪತ್ತು ನಾಯಕನ ಗುರಿಯ ಕಣ್ಣು ಕುಕ್ಕುತ್ತದೆ. ಈಗ ಸಂಪತ್ತು ಮತ್ತು ಜೀತಗಾರಿಕೆ ಎರಡೂ ಒಂದೇ ಕಡೆ ಇದೆ. ನಿರ್ದೇಶಕನ ಈ ಅಗತ್ಯ, ನಾಯಕನ ಈ ಗುರಿ ಜತೆಯಾಗಿ ಯಶಸ್ಸು ಕಾಣುವ ಹೊತ್ತಿಗೆ ಸಿನಿಮಾ ಮುಕ್ತಾಯಗೊಳ್ಳುತ್ತದೆ. ಆದರೆ, ಬಂಗಾರದಂತಹ ಕತೆ ಇಲ್ಲದಿದ್ದರೂ ಚಿನ್ನದಂತಹ ತಾಂತ್ರಿಕತೆಯ ಸೊಗಡು ಇದೆ. ಗೋಲ್ಡ್ ನಂತೆ ಪಳಪಳನೆ ಹೊಳೆಯುವ ಅದ್ಧೂರಿ ಮೇಕಿಂಗ್ ಇದೆ. ಈ ಕಾರಣಕ್ಕೆ ಇದು ಅಜ್ಞಾತ ಜೀವಗಳಿಗೆಅಂದವಾಗಿ ರೂಪಿಸಿರುವ ತಾಂತ್ರಿಕ ಚೌಕಟ್ಟು - ಆರ್.ಕೇಶವಮೂರ್ತಿ

  ಕೆಜಿಎಫ್ ಬರಿಗಣ್ಣಿಗೆ ಕಾಣುವ, ಕಿವಿಗಳಿಗೆ ಮಾತ್ರ ಕೇಳಿಸುವ ಸಿನಿಮಾ ಅಲ್ಲ

  KGF Chapter 1 review: Fool's gold

  KGF Chapter 1 review: Fool's gold

  Audience will be lost in the world of the gold fields of 70s. Neel proves again that he is master of craft. There are sequences where three scenes run simultaneously. The director has used VFX and the effort to go on location is evident. As far as the colour scheme is concerned, Neel and Gowda have used black and brown for a raw feel. The climax is spectacular with the support of brilliant cast. The sets and locations are spot on. Beyond that there is nothing in the film that we have not seen before. It lacks soul, a believable story and a rounded protagonist - Muralidhara Khajane.

  'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ

  KGF Review: Times of India

  KGF Review: Times of India

  Prashanth Neel's KGF, which stars Yash in the lead, has become arguably the most spoken about Kannada film nationally. The expectations have been enormous. Does the team deliver? Yes, they do. The film has a fast-paced first half, which does seem a little long, but the second half and the climax sets up the right premise for the second part of the film - Sunayana Suresh

  ವಿಮರ್ಶೆ-2: 'ಕೆಜಿಎಫ್' ಇಷ್ಟವಾಗೋದು ಈ ಎರಡೇ ಕಾರಣಕ್ಕೆ.!

  KGF Review: Bangalore Mirror

  KGF Review: Bangalore Mirror

  Big money can make big cinema, but not necessarily great cinema. KGF is a disappointment not only because it came with unusually high expectations but also because it lacks a soul. Visual wonderment and a stunning background score does not compensate for the absence of a plot with a soul - Shyam Prasad S

  English summary
  Rocking Star Yash starrer Kannada Movie KGF has received good response from the critics. Here is the collection of KGF reviews from Top news papers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X