For Quick Alerts
  ALLOW NOTIFICATIONS  
  For Daily Alerts

  ರನ್ ಆ್ಯಂಟನಿ ಕುರಿತು ಪತ್ರಿಕೆಯಲ್ಲಿ ಬಂದ ವಿಮರ್ಶೆಗಳು

  By ರಮೇಶ್ ಬಿ
  |

  ವಿನಯ್ ರಾಜ್ ಕುಮಾರ್ ಪ್ರಮುಖ ಭೂಮಿಕೆಯಲ್ಲಿರುವ 'ರನ್ ಆ್ಯಂಟನಿ' ಹೇಗಿದೆ? ಫಸ್ಟ್ ಡೇ ಫಸ್ಟ್ ಶೋ ನೋಡಿಕೊಂಡು ಬಂದ ವಿನಯ್ ಕಟ್ಟಾ ಅಭಿಮಾನಿಗಳು ಸೂಪರ್, ಡಿಫರಂಟಾಗಿದೆ, ಹಂಡ್ರೆಡ್ ಡೇಸ್ ಗ್ಯಾರಂಟಿ, ಕ್ಲೈಮ್ಯಾಕ್ಸ್ ಸೂಪರಾಗಿದೆ ಎಂದೆಲ್ಲ ಹೊಗಳಿ ಅಟ್ಟಕ್ಕೇರಿಸುತ್ತಿದ್ದಾರೆ.

  ಆದರೆ, ಚಿತ್ರವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಿ, ಎಲ್ಲ ವಿಭಾಗಗಳನ್ನು ಅಳೆದು ತೂಗಿ, ತಮಗೆ ತೋಚಿದಂತೆ ವಿಮರ್ಶಾತ್ಮಕವಾಗಿ ಬರೆಯುವ ವಿಮರ್ಶಕರು ಏನನ್ನುತ್ತಾರೆ? ಪತ್ರಿಕೆಗಳಲ್ಲಿ, ಇಂಟರ್ನೆಟ್ಟಿನಲ್ಲಿ ವಿಮರ್ಶೆಯನ್ನು ನೋಡಿ ಚಿತ್ರಕ್ಕೆ ಹೋಗುವವರೂ ಇರುತ್ತಾರೆ, ಚಿತ್ರವಿಮರ್ಶೆ ಹೇಗೆ ಬರಲಿ ನಾವು ಚಿತ್ರ ನೋಡೇ ನೋಡ್ತೀವಿ ಅನ್ನುವಂಥ ಪ್ರೇಕ್ಷಕರೂ ಇರುತ್ತಾರೆ.

  Run Anthony Review by Kannada movie critics


  ಆದರೆ, ಪ್ರೇಕ್ಷಕರಿಗೆ ಒಂದು ವಿನಂತಿ ಏನೆಂದರೆ, ವಿಮರ್ಶಕರ ವಿಮರ್ಶೆಯನ್ನೇ ನಿಜ ಅಂದುಕೊಂಡು ಚಿತ್ರ ನೋಡುವುದೋ ಬಿಡುವುದೋ ಎಂದು ನಿರ್ಧರಿಸಬಾರದು. ವಿಮರ್ಶಕರ ವಿಮರ್ಶೆ ಇಡೀ ಸಮಾಜದ ಅಭಿಪ್ರಾಯವಲ್ಲ. ಹೀಗಾಗಿ, ಕನ್ನಡ ಚಿತ್ರಪ್ರೇಮಗಳು ದುಡ್ಡುಕೊಟ್ಟು ಚಿತ್ರನೋಡಿ ನಂತರ ತಾವೇ ವಿಮರ್ಶಿಸುವುದು ಒಳಿತು.

  ಏನೇ ಆಗಲಿ, ರಘು ಶಾಸ್ತ್ರೀ ನಿರ್ದೇಶಿಸಿರುವ, ವಿನಯ್ ರಾಜ್ ಕುಮಾರ್ ಮತ್ತು ಪ್ರಥಮ ಬಾರಿ ಕನ್ನಡದಲ್ಲಿ ನಟಿಸಿರುವ ರುಕ್ಷಾರ್ ಮೀರ್ ಪ್ರಮುಖ ಭೂಮಿಕೆಯಲ್ಲಿರುವ, ವಿಭಿನ್ನ ಕಥಾಹಂದರವಿರುವ 'ರನ್ ಆ್ಯಂಟನಿ' ಬಗ್ಗೆ ಕನ್ನಡ ಪತ್ರಕರ್ತರು ಏನೆನ್ನುತ್ತಾರೆ? ಹೊಗಳಿದ್ದಾರಾ, ತೆಗಳಿದ್ದಾರಾ, ವಸ್ತುನಿಷ್ಠವಾಗಿ ವಿಮರ್ಶಿಸಿದ್ದಾರಾ ಮುಂದೆ ಓದಿರಿ. [ವಿಮರ್ಶೆ: ಸ್ಲೋ ಮೋಷನ್ ನಲ್ಲಿ ಓಡುವ 'ರನ್ ಆಂಟನಿ']

  ***

  ರನ್ ಆ್ಯಂಟನಿ ಚಿತ್ರ ವಿಮರ್ಶೆ: ಜೋಡಿಪಥ ರಸ್ತೆಯಲ್ಲಿ ಓಡುವ ರನ್ ಆ್ಯಂಟನಿ (ವಿಜಯ್ ಕರ್ನಾಟಕ)

  ಆ್ಯಂಟನಿ ಡಿಸೋಜಾ (ವಿನಯ್ ರಾಜ್‌ಕುಮಾರ್) ನಿವೃತ್ತ ಸೇನಾಧಿಕಾರಿಯ ಮಗ. ಅಪ್ಪನಂತೆಯೇ ದೇಶದ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡವ. ಸ್ನೇಹಿತೆ ಕನ್ನಿಕಾ (ಸುಶ್ಮಿತಾ ಜೋಷಿ)ಳಿಗೆ ಪ್ರಪೋಸ್ ಮಾಡಲು ಹೋದಾಗ, ಆಕೆ ಮೋಸಗಾತಿ ಅಂತ ಗೊತ್ತಾಗುತ್ತದೆ. ಅಪಾರವಾಗಿ ಪ್ರೀತಿಸುತ್ತಿದ್ದ ತನ್ನ ಹುಡುಗಿ ಕೈಕೊಟ್ಟಳು ಅಂತ ಅತಿ ಎತ್ತರದ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಾನೆ. ಅದು ವಿಫಲವಾದಾಗ ರೈಲ್ವೆ ಹಳಿಗೆ ತಲೆ ಕೊಡಲು ಬರುತ್ತಾನೆ. ['ರನ್ ಆಂಟನಿ' ನಟಿ ಸುಶ್ಮಿತಾ ಜೋಷಿ ಬಗ್ಗೆ ಒಂದಿಷ್ಟು ವಿಚಾರಗಳು]

  Run Anthony Review by Kannada movie critics


  ಅಲ್ಲಿ ಯಶು (ರುಕ್ಷಾರ್ ಮೀರ್) ಅನ್ನುವ ಮತ್ತೊಬ್ಬ ಹುಡುಗಿ ಪರಿಚಯ ಆಗುತ್ತಾಳೆ. ಅವಳ ಮಾತಿನಿಂದಾಗಿ ತಾನು ಜೀವಿಸಬೇಕು ಅಂದುಕೊಳ್ಳುತ್ತಾನೆ ಆ ಆ್ಯಂಟನಿ. ಆಕೆಯ ಮೇಲೆ ಪ್ರೇಮಾಂಕುರವಾದಾಗ ದುರ್ಘಟನೆಯೊಂದು ನಡೆಯುತ್ತದೆ. ತಾನು ಮಾಡದೇ ಇರುವ ತಪ್ಪಿಗೆ ಆ್ಯಂಟನಿ ಬಲಿಪಶು ಆಗಬೇಕಾಗುತ್ತದೆ. ಅದರಿಂದ ಆತ ತಪ್ಪಿಸಿಕೊಂಡು, ತಾನು ದೇಶಭಕ್ತನ ಮಗ ಅನ್ನುವುದನ್ನು ಸಾಬೀತು ಪಡಿಸಲು ಓಡುತ್ತಾನೆ. ಆ ಘಟನೆ ಯಾವುದು? ಇವನೇಕೆ ಆ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾನೆ ಅನ್ನುವುದೇ ಸಿನಿಮಾ.

  ***

  ರನ್ ಆ್ಯಂಟನಿ ಓಟದಲ್ಲಿ ಸುಸ್ತಾದ ಕಥಾಹಾದಿ! (ಕನ್ನಡ ಪ್ರಭ)

  ಇಡೀ ಚಿತ್ರದಲ್ಲಿ ಭಯೋತ್ಪಾದನೆಯ ನೆರಳು. ಸಾಮಾನ್ಯವಾಗಿ ಟೆರರಿಸಂ ಅಂಶಗಳಿರುವ ಸಿನಿಮಾಗಳು ಎಂದಾಗ ಯಾವುದೋ ಒಂದು ಸಮುದಾಯದ ವಿರುದ್ಧ ಬೆರಳು ಮಾಡಿ ತೋರಿಸುವುದು ಅಥವಾ ಎರಡು ಧರ್ಮಗಳ ನಡುವಿನ ಕಚ್ಚಾಟ ಮಾಡಿಸಿ ಕೊನೆಗೂ ನಾವೆಲ್ಲರೂ ಭಾರತೀಯರು ಎನ್ನವಂಥ ಮಾತುಗಳನ್ನು ಹೇಳಿಸುವುದಷ್ಟೇ ಇಲ್ಲಿವರೆಗೂ ನೋಡಿದ್ದೇವೆ. ಆ್ಯಂಟನಿ ಇಂಥದ್ದೇ ಕತೆ ಒಳಗೊಂಡಿದ್ದರೂ ಧರ್ಮ ಅಥವಾ ದೇಶದ ಗಡಿಗಳ ಬಗ್ಗೆ ಮಾತನಾಡಲ್ಲ. ['ಸುಮ್ಮನೆ' ಹಾಡು ಕೇಳಿ ಹಾಗೆ ಒಮ್ಮೆ ಕಳೆದು ಹೋಗಿ]

  Run Anthony Review by Kannada movie critics


  ಇಲ್ಲೇ ರನ್ ಆ್ಯಂಟನಿ ವಿಭಿನ್ನತೆ ತೋರುತ್ತದೆ. ಮುಗ್ದರನ್ನು ಮಾನವ ಬಾಂಬುಗಳಂತೆ ತಯಾರು ಮಾಡುವ ಮತ್ತು ಮನುಷ್ಯ ಬಾಂಬುಗಳಿಂದ ಉಂಟಾಗುವ ಸಾವು-ನೋವಿನ ಕತೆ ಇಲ್ಲದೆ. ಆದರೆ, ಇಲ್ಲಿ ಮಾನವ ಬಾಂಬ್ ಆಗಿರುವುದು ಹುಡುಗಿ. ಆಕೆಯ ಪ್ರೀತಿಗೆ ಬೀಳುವ ಆ್ಯಂಟನಿ ಇಡೀ ಪ್ರಕರಣ ಆರೋಪಿ ಸ್ಥಾನದಲ್ಲಿ ನಿಲ್ಲವುದು ಹೇಗೆ? ಜತೆಗೆ ಆತನ ಓಟ ಯಾವುದರತ್ತ? ಕುತೂಹಲ ಇದ್ದವರು ಈ ಸಿನಿಮಾವನ್ನು ಚಿತ್ರಮಂದಿರಲ್ಲಿ ನೋಡಬಹುದು.

  ***

  ಸ್ಲೋ ಪಿಕಪ್, ಅಲ್ಲಲ್ಲಿ ಹಿಕಪ್ (ವಿಶ್ವವಾಣಿ)

  ಆ್ಯಂಟನಿ ಬಹುಮಹಡಿ ಕಟ್ಟಡದಿ೦ದ ಬಿದ್ದು ಆತ್ಮಹತ್ಯೆಗೆ ಯತ್ನಿಸುತ್ತಾನೆ. ಪ್ರೀತಿಯಿ೦ದ ಮೋಸ ಹೋದವನು ಸಾಯಬೇಕು ಅ೦ತ ಹೊರಟಾಗ ರೈಲ್ವೇ ನಿಲ್ದಾಣದ ಬಳಿ ಒಬ್ಬಳು ಸು೦ದರ ಹುಡುಗಿ ಸಿಗುತ್ತಾಳೆ. ಅವಳ ರೂಪಕ್ಕೆ ಮನಸೋಲೋ ಆ್ಯಂಟನಿ ಅವಳನ್ನೂ ಪ್ರೀತಿಸುತ್ತಾನೆ. ಆದರೆ ಅವಳು ಸೂಸೈಡ್ ಬಾ೦ಬರ್ ಆಗಿ ಸಾಯೋಕೆ ಬ೦ದವಳು ಅ೦ಥ ಗೊತ್ತಾಗುವ ವೇಳೆಗೆ ಮೊದಲಾಧ೯ ಮುಗಿದು ಇ೦ಟರ್ವಲ್. ಎರಡು ದಿನ ಎರಡನೇ ಪ್ರೀತಿಯ ಜೊತೆ ಓಡಾಡಿದ ಆ್ಯಂಟನಿ ಅಲ್ಲಲ್ಲಿ ಸಿಸಿಟಿವಿಗಳಲ್ಲಿ ಸೆರೆಯಾಗಿ ಮಾಧ್ಯಮಗಳಲ್ಲಿ ಭಯೋತ್ಪಾದಕನಾಗಿ ಬಿ೦ಬಿತವಾಗ್ತಾನೆ. ಆದರೆ ನಿಜವಾಗಿ ಬಾ೦ಬ್ ಹಾಕಿದ ಭಯೋತ್ಪಾದಕ ಯಾರು ಅ೦ತ ಹುಡುಕೋದೇ ನಿಜವಾದ ಸಾಥ೯ಕತೆ ಅ೦ತ ಇನ್ವೆಸ್ಟಿಗೇಟೀವ್ ಜನ೯ಲಿಸ್ಟ್ ಆಗಿ ಬರುವ ಸಾಯಿಕುಮಾರ್ ಹೇಳುವ ಮಾತು ಆ್ಯಂಟನಿಯ ರನ್ನಿ೦ಗ್ ಗೆ ನಿಜವಾದ ವೇಗ ತ೦ದುಕೊಡುತ್ತೆ.

  Run Anthony Review by Kannada movie critics


  ಆದರೆ ಆ್ಯಂಟನಿಯನ್ನು ಮತ್ತಷ್ಟು ವೇಗವಾಗಿ ಓಡಿಸೋಕೆ ಚಿತ್ರಕಥೆಯ ಮೂಲಕ ನಿದೇ೯ಶಕರು ಪ್ರಯತ್ನಿಸಿದ್ದರೆ ಪ್ರೇಕ್ಷಕ ಚಿತ್ರಮ೦ದಿರದಲ್ಲಿ ರಿಲ್ಯಾಕ್ಸ್ ಆಗುತ್ತಿರಲಿಲ್ಲ. ಹಾಗಾಗಿ ಆ್ಯಂಟನಿಯದ್ದು ಮಿ೦ಚಿನ ಓಟ ಎನ್ನುವ ಸಾಧ್ಯತೆ ಇಲ್ಲ. ಹಾಗಾಗಿ ಆ್ಯಂಟನಿಯ ಓಟಕ್ಕೆ ಜನ ಓಟು ಹಾಕುವುದು ಕಷ್ಟ. ಆ್ಯಂಟನಿ ಹುಡುಕೋಕೆ ಹೊರಟ ಭಯೋತ್ಪಾದಕರು ಯಾರು ಅ೦ತ ಗೊತ್ತಾದಾಗ ಪ್ರೇಕ್ಷಕ ಒ೦ದು ಕ್ಷಣ ಥ್ರಿಲ್ ಆಗುತ್ತಾನೆ. ಕ್ಲೈಮ್ಯಾಕ್ಸ್ ಲ್ಲಿ ಡಲ್ ಆಗುತ್ತಾನೆ. ಆರ೦ಭದಿ೦ದಲೂ ಪ್ರೀತಿಪ್ರೇಮದ ಗು೦ಗಲ್ಲಿ ಕಥೆಯನ್ನು ಹೆಣೆದಿರುವ ರಘುಶಾಸ್ತ್ರೀ ವೇಗವನ್ನು ಕಾಯ್ದುಕೊ೦ಡಿಲ್ಲ.

  ***

  ಓಟ ಮುಗಿಯುವ ತನಕ ಕಾಯುವವರಿಗೆ ಒಳ್ಳೆಯ ಆಟ (ಉದಯವಾಣಿ)

  ಆ ಕ್ಷಣದಲ್ಲಿ ಎಲ್ಲಿಗೆ ಹೋಗಬೇಕೋ ಗೊತ್ತಿಲ್ಲ. ಮುಂದೇನು ಮಾಡಬೇಕು ಅಂತ ಗೊತ್ತಿಲ್ಲ. ಯಾರನ್ನು ನಂಬುವ ಹಾಗೂ ಇಲ್ಲ . ಅವನಿಗಿರೋದು ಒಂದೇ ದಾರಿ. ರನ್ ರನ್ ರನ್.... ಅವನು ಓಡುವುದಕ್ಕೆ ಶುರು ಮಾಡುತ್ತಾನೆ. ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೇ ಓಡುತ್ತಾನೆ. ತಾನು ನಿರಪರಾಧಿ ಎಂದು ಸಾಬೀತು ಮೂಡುವುದಕ್ಕೂ ಸಾಕ್ಷಿಗಳನ್ನು ಕಲೆಹಾಕುವುದಕ್ಕೆ ಓಡುತ್ತಾನೆ. ಹಾಗೆ ಓಡುತ್ತಾ ತಾನು ನಿರಪರಾಧಿ ಎಂದು ಪ್ರೂವ್ ಮಾಡುತ್ತಾನಾ?

  Run Anthony Review by Kannada movie critics


  ಒಂದೊಮ್ಮೆ ನೆಮ್ಮದಿಯಾಗಿದ್ದ ಆ್ಯಂಟನಿ ಅಂಥದ್ದೊಂದು ಪ್ರಸಂಗಕ್ಕೆ ಸಿಲುಕುವುದವುದೇ ವಿಚಿತ್ರ. ಲವ್ ಫೆಲ್ಯೂವರ್ ನಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳವುದಕ್ಕೆ ಪ್ರಯತ್ನಿಸುವ ಅವನಿಗೆ, ಹುಡುಗಿ ಸಿಗುತ್ತಾಳೆ. ರಾತ್ರಿ ಹೊತ್ತು ಯಾರೋ ವಿಲನ್ ಗಳಿಂದ ಆ ಹುಡುಗಿಯನ್ನು ರಕ್ಷಿಸುತ್ತಾನೆ. ನೋಡುವುದಕ್ಕೆ ಮದುವೆಯಿಂದ ಸೀದಾ ಓಡಿಬಂದು, ಇನ್ಯಾರದೋ ಜೊತೆಗೆ ಓಡಿ ಹೋಗುವ ಹುಡುಗಿಯಂತೆ ಅವಳು ಕಾಣುತ್ತಾಳೆ. ದುಷ್ಟರ ಕಾಟ ಹೆಚ್ಚಿರುವುದರಿಂದ, ಅವನ ಸಹಾಯ ಕೇಳುತ್ತಾಳೆ. ತನ್ನ ಬಾಯ್ ಫ್ರೆಂಡ್ ಗೆ ಬೇಕು ಅಂತ ಮಾಲ್ ಗೆ ಹೋಗಿ ಉಡುಗೊರೆಗಳನ್ನು ಕೊಳ್ಳುತ್ತಾಳೆ. ಅವನು ಟಿಕೆಟ್ ತರುವುದಕ್ಕೆ ಹೋದಾಗ ರೈಲಿನ ಮೇಲೆ ಹಾರಿ ಆತ್ಮಹತ್ಯೆ ಮಾಡುಕೊಳ್ಳುವ ಪ್ರಯತ್ನ ಮಾಡುತ್ತಾಳೆ.

  English summary
  Kannada movie Run Anthony review by Kannada movie critics. The film has Vinay Rajkumar, Rukshar Mir in the lead role. Raghu Shastry has directed the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X