For Quick Alerts
  ALLOW NOTIFICATIONS  
  For Daily Alerts

  'ಝೀರೋ' ಟ್ವಿಟ್ಟರ್ ವಿಮರ್ಶೆ: ನಿರೀಕ್ಷೆ ಹುಸಿಗೊಳಿಸುವ ಸಿನಿಮಾ.!

  |
  KGF Kannada Movie: ಕೆಜಿಎಫ್ ಚಿತ್ರಕ್ಕೆ ತಡೆ ಕೋರಿದ್ದ ಅರ್ಜಿ ಹಿಂಪಡೆದ ವೆಂಕಟೇಶ್ | FILMIBEAT KANNADA

  ಭಾರತೀಯ ಸಿನಿ ಪ್ರಿಯರಿಗೆ ಇವತ್ತು ಸಂತಸದ ಹಬ್ಬ. ಯಾಕಂದ್ರೆ, ಸ್ಯಾಂಡಲ್ ವುಡ್ ನಲ್ಲಿ ಇವತ್ತು ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆ.ಜಿ.ಎಫ್' ಬಿಡುಗಡೆ ಆಗಿದ್ದರೆ, ಬಾಲಿವುಡ್ ನಲ್ಲಿ ಇಂದು ಕಿಂಗ್ ಖಾನ್ ಶಾರುಖ್ ಅಭಿನಯದ 'ಝೀರೋ' ಚಿತ್ರ ತೆರೆಗೆ ಬಂದಿದೆ.

  'ಕೆ.ಜಿ.ಎಫ್' ಚಿತ್ರಕ್ಕಂತೂ ಒಳ್ಳೆ ಓಪನ್ನಿಂಗ್ ಸಿಕ್ಕಿದ್ದು, ಎಲ್ಲೆಡೆ ಪಾಸಿಟೀವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ರೆ, ಶಾರುಖ್ ಖಾನ್ ಅಭಿನಯದ 'ಝೀರೋ' ಚಿತ್ರಕ್ಕೆ ಮಾತ್ರ ಮಿಶ್ರ ಪ್ರತಿಕ್ರಿಯೆ ಲಭಿಸಿದೆ.

  ಅಭಿಮಾನಿಗಳ ನಿರೀಕ್ಷೆ ಮಟ್ಟ ತಲುಪುವಲ್ಲಿ 'ಝೀರೋ' ವಿಫಲವಾಗಿದೆ. ಇದು ನಿರೀಕ್ಷೆ ಹುಸಿಗೊಳಿಸುವ ಸಿನಿಮಾ ಎಂದು ಹಲವರು ಟ್ವೀಟ್ ಮಾಡುತ್ತಿದ್ದಾರೆ. 'ಝೀರೋ' ಚಿತ್ರವನ್ನ ಕಣ್ತುಂಬಿಕೊಂಡ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ನೀಡುತ್ತಿರುವ ವಿಮರ್ಶೆಗಳತ್ತ ಕೊಂಚ ಕಣ್ಣಾಡಿಸೋಣ, ಬನ್ನಿ...

  ನಿರಾಸೆ ಮೂಡಿಸುವ ಚಿತ್ರ

  ನಿರಾಸೆ ಮೂಡಿಸುವ ಚಿತ್ರ

  ಬಾಲಿವುಡ್ ನ ಪ್ರಖ್ಯಾತ ಟ್ರೇಡ್ ಎಕ್ಸ್ ಪರ್ಟ್ ತರಣ್ ಆದರ್ಶ್ ಮಾಡಿರುವ ಟ್ವೀಟ್ ಇದು. ''ಝೀರೋ' ಚಿತ್ರ ಅಧ್ವಾನವಾಗಿದೆ. ಶಾರುಖ್ ಮತ್ತು ನಿರ್ದೇಶಕ ಆನಂದ್.ಎಲ್.ರೈ ಕಾಂಬಿನೇಶನ್ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಆದ್ರೆ, ಈ ಸಿನಿಮಾ ನಿರಾಸೆ ಮೂಡಿಸುತ್ತೆ'' ಎಂದಿದ್ದಾರೆ ತರಣ್ ಆದರ್ಶ್. ಅಲ್ಲದೇ, ಚಿತ್ರಕ್ಕೆ ಇವರು ಒಂದುವರೆ ಸ್ಟಾರ್ ಕೊಟ್ಟಿದ್ದಾರೆ.

  ಸೊನ್ನೆ ನಿರೀಕ್ಷೆ.!

  ಸೊನ್ನೆ ನಿರೀಕ್ಷೆ.!

  ''ಒಂದ್ಕಾಲದಲ್ಲಿ ಶಾರುಖ್ ಚಿತ್ರಗಳು ಅಂದ್ರೆ ಎದೆಬಡಿತ ಜೋರಾಗುತ್ತಿತ್ತು. ಆದ್ರೀಗ, ಝೀರೋ ಬಗ್ಗೆ ಇರುವ ನಿರೀಕ್ಷೆ ಝೀರೋ. ಕೆಲ ವರ್ಷಗಳಿಂದ ಶಾರುಖ್ ಯಾಕೋ ಸ್ಕ್ರಿಪ್ಟ್ ಗಳನ್ನು ಚೆನ್ನಾಗಿ ಆಯ್ಕೆ ಮಾಡುತ್ತಿಲ್ಲ'' ಎಂಬುದು ವೀಕ್ಷಕರೊಬ್ಬರ ಅಭಿಪ್ರಾಯ.

  ಶೀರ್ಷಿಕೆಗೆ ತಕ್ಕ ಹಾಗಿರುವ ಚಿತ್ರ.!

  ಶೀರ್ಷಿಕೆಗೆ ತಕ್ಕ ಹಾಗಿರುವ ಚಿತ್ರ.!

  ''ಝೀರೋ' ಎಂಬ ಶೀರ್ಷಿಕೆಗೆ ತಕ್ಕ ಹಾಗಿದೆ ಚಿತ್ರ. ಮೊದಲಾರ್ಧ ಸರಾಗವಾಗಿ ಸಾಗುವ ಚಿತ್ರ ದ್ವಿತೀಯಾರ್ಧದಲ್ಲಿ ಪೇಲವವಾಗುತ್ತದೆ. ಚಿತ್ರದಿಂದ ತೂಕಡಿಕೆ ಬಂದರೂ ಅಚ್ಚರಿ ಇಲ್ಲ. ರೇಟಿಂಗ್ - ಒಂದುವರೆ ಸ್ಟಾರ್''

  ಆಟ ಮುಗೀತು.!

  ಆಟ ಮುಗೀತು.!

  ''ಝೀರೋ ಆಟ ಮುಗಿದ ಹಾಗೆ ಕಾಣುತ್ತಿದೆ. ಇನ್ನಾದರೂ ತಮಗೆ ಒಪ್ಪುವ ಚಿತ್ರಗಳನ್ನು ಶಾರುಖ್ ಖಾನ್ ಆಯ್ಕೆ ಮಾಡಿಕೊಳ್ಳಲಿ'' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

  ಬೋರಿಂಗ್.!

  ಬೋರಿಂಗ್.!

  ''ಚಿತ್ರದ ಓಪನಿಂಗ್ ಚೆನ್ನಾಗಿದ್ದರೂ, ಬರ್ತಾ ಬರ್ತಾ ತುಂಬಾ ಬೋರಿಂಗ್ ಆಯ್ತು. ಒಳ್ಳೆಯ ನಿರ್ದೇಶಕ ಆಗಿದ್ದರೂ, ಶಾರುಖ್ ಖಾನ್ ಗೆ ಫ್ಲಾಪ್ ಚಿತ್ರ ಕೊಟ್ಟಿದ್ದಾರೆ'' ಎಂಬುದು ಅಭಿಮಾನಿಯೊಬ್ಬರ ಅಭಿಪ್ರಾಯ.

  ಇದೊಂದು ಭಾವನೆ

  ಇದೊಂದು ಭಾವನೆ

  ''ಇಂಟರ್ವೆಲ್ ವರೆಗೂ ಚಿತ್ರ ಚೆನ್ನಾಗಿದೆ. ಶಾರುಖ್ ನಟನೆ ಇಷ್ಟ ಆಯ್ತು. ಇದು ಚಿತ್ರ ಅಲ್ಲ. ಇದೊಂದು ಭಾವನೆ'' ಅಂತ ಟ್ವೀಟ್ ಮಾಡಿದ್ದಾರೆ ಅಭಿಮಾನಿ.

  ಮನರಂಜನೆ ನೀಡುತ್ತೆ

  ಮನರಂಜನೆ ನೀಡುತ್ತೆ

  ''ಝೀರೋ' ಚಿತ್ರದ ಮೊದಲಾರ್ಧ ಚೆನ್ನಾಗಿದೆ. ಗ್ರಾಫಿಕ್ಸ್ ವರ್ಕ್ ಗುಡ್. ದ್ವಿತೀಯಾರ್ಧ ಕೊಂಚ ಸ್ಲೋ. ಒಟ್ಟಾರೆ, ಚಿತ್ರ ಮನರಂಜನೆ ಕೊಡುತ್ತೆ'' ಎಂದು ಬಾಲಿವುಡ್ ಮೇನಿಯಾ ಟ್ವೀಟ್ ಮಾಡಿದೆ.

  English summary
  Shahrukh Khan starrer 'Zero' is getting mixed response in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X