»   » ಶಂಕರ್ 'ಐ' ವಿಮರ್ಶೆ: ತೆರೆಯ ಮೇಲೆ ಹೊಸ ವಿಕ್ರಮ

ಶಂಕರ್ 'ಐ' ವಿಮರ್ಶೆ: ತೆರೆಯ ಮೇಲೆ ಹೊಸ ವಿಕ್ರಮ

By: ಶಂಕರ್, ಚೆನ್ನೈ
Subscribe to Filmibeat Kannada

ತಮಿಳಿನ ವೃತ್ತಿಪರ ನಿರ್ದೇಶಕರಲ್ಲಿ ಒಬ್ಬರಾದ ಶಂಕರ್ ಹಾಗೂ ಪಾತ್ರಕ್ಕಾಗಿ ಚಡಪಡಿಸುವ ನಟ ವಿಕ್ರಮ್ ಅವರ ಚಿತ್ರಗಳನ್ನು ತುದಿಗಾಲಲ್ಲಿ ನಿರೀಕ್ಷಿಸುವ ಅಪಾರ ಪ್ರೇಕ್ಷಕರ ವರ್ಗವೇ ಇದೆ. ಇವರಿಬ್ಬರ ಕಾಂಬಿನೇಷನ್ನಿನ 'ಐ' ಚಿತ್ರ ಬುಧವಾರ (ಜ.14) ಜಗತ್ತಿನಾದ್ಯಂತ ತೆರೆಕಂಡಿದೆ. ಇದು ಕೇವಲ ತಮಿಳು, ತೆಲುಗು ಅಥವಾ ಹಿಂದಿ ಎಂದು ಪರಿಭಾವಿಸಿ ಭಾಷೆಯ ಚೌಕಟ್ಟಿನಲ್ಲಿ ನೋಡುವಂತಹ ಚಿತ್ರವಲ್ಲ.

ಚಿತ್ರದ ತಾಂತ್ರಿಕ ಮೌಲ್ಯಗಳು, ಮೇಕಿಂಗ್, ಈ ರೀತಿಯ ಪಾತ್ರಕ್ಕಾಗಿ ವಿಕ್ರಮ್ ತೆಗೆದುಕೊಂಡ ರಿಸ್ಕ್ ಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ವೃತ್ತಿಪರ ನಿರ್ದೇಶಕ, ನಟ ಜೊತೆಗೂಡಿದರೆ ತೆರೆಯ ಮೇಲೆ ಏನೆಲ್ಲಾ ಮ್ಯಾಜಿಕ್ ಮಾಡಬಹುದು ಎಂಬುದಕ್ಕೆ ಈ ಚಿತ್ರ ನಿದರ್ಶನ.

ಚಿತ್ರದಲ್ಲಿ ಲಿಂಗೇಶನ್ ಪಾತ್ರದಲ್ಲಿ ವಿಕ್ರಮ್ ಕಾಣಿಸುತ್ತಾರೆ. ಮಿಸ್ಟರ್ ಇಂಡಿಯಾ ಆಗಲು ಬೆವರರಿಸುವ ಉತ್ಸಾಹಿ ಬಿಲ್ಡರ್ ಆತ. ಚಿತ್ರದ ನಾಯಕಿ ಅಪೂರ್ವ ಚೆಲುವೆ ದಿಯಾ (ಅಮಿ ಜಾಕ್ಸನ್) ರನ್ನು ಭೇಟಿಯಾದ ಲಿಂಗೇಶನ್ ಜೀವನದಲ್ಲಿ ಮಹತ್ತರ ಬದಲಾವಣೆಯಾಗುತ್ತದೆ.

ಚಿತ್ರ:
ನಿರ್ಮಾಪಕರು: ವಿ ರವಿಚಂದ್ರನ್ (ಆಸ್ಕರ್ ಫಿಲಂಸ್ ಪ್ರೈ.ಲಿ)
ಚಿತ್ರಕಥೆ, ನಿರ್ದೇಶನ: ಶಂಕರ್
ಸಂಗೀತ: ಎ.ಆರ್.ರೆಹಮಾನ್
ಛಾಯಾಗ್ರಹಣ: ಪಿ.ಸಿ. ಶ್ರೀರಾಮ್
ಪಾತ್ರವರ್ಗ: ಚಿಯಾನ್ ವಿಕ್ರಮ್, ಅಮಿ ಜಾಕ್ಸನ್, ಸುರೇಶ್ ಗೋಪಿ, ಉಪೇನ್ ಪಟೇಲ್, ಸಂತಾನಂ ಮುಂತಾದವರು.

ದಿಕ್ಕು ಬದಲಿಸುವ ಕಥೆ, ನಾನಾ ತಿರುವುಗಳು

ಲಿಂಗೇಶನ್ ಮನಸ್ಸಿನಲ್ಲಿ ಪ್ರೇಮಾಂಕುರವಾದ ಬಳಿಕ ಆಕೆಯೊಬ್ಬ ವೃತ್ತಿಪರ ರೂಪದರ್ಶಿ ಎಂಬುದು ಗೊತ್ತಾಗುತ್ತದೆ. ದಿಯಾ ಚೆಲುವಿಗೆ ಮಾರುಹೋದ ಲಿಂಗೇಶನ್ 'ಮಿಸ್ಟರ್ ಇಂಡಿಯಾ' ಕನಸು ಅಲ್ಲಿಗೆ ಚೆದುರಿಹೋಗುತ್ತದೆ. ಅಲ್ಲಿಂದ ದಿಕ್ಕು ಬದಲಿಸುವ ಕಥೆ ನಾನಾ ತಿರುವುಗಳನ್ನು ಪಡೆದುಕೊಂಡು ಸಾಗುತ್ತದೆ.

ತೆರೆಯ ಮೇಲೆ ನೋಡಿಯೇ ಆನಂದಿಸಬೇಕು

ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರಬೇಕಾದರೆ ತನ್ನಲ್ಲಿಯೇ ಏನೋ ಒಂದನ್ನು ಕಳೆದುಕೊಳ್ಳುತ್ತಾನೆ ಲಿಂಗೇಶನ್. ಅದಕ್ಕಾಗಿ ಹುಡುಕಾಡುತ್ತಾನೆ. ಹಲವಾರು ರಹಸ್ಯಗಳನ್ನು ಭೇದಿಸಬೇಕಾಗುತ್ತದೆ. ಆ ರಹಸ್ಯಗಳೇನು ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು.

ಚಿತ್ರದ ಹೈಲೈಟ್ ಗಳು ಒಂದೆರಡಲ್ಲ

ವಿಕ್ರಮ್ ಅವರ ಡೆಡಿಕೇಷನ್ ಮತ್ತು ಹಾರ್ಡ್ ವರ್ಕ್, ಶಂಕರ್ ಅವರ ಸನ್ನಿವೇಶಗಳ ಪರಿಕಲ್ಪನೆ, ಅಮಿ ಜಾಕ್ಸನ್ ಅವರ ಕಾಂತಿಯುತ ಚೆಲುವು, ಸಂತಾಮ್ ಅವರ ಹಾಸ್ಯ, ಪಿಸಿ ಶ್ರೀರಾಮ್ ಅವರ ಕಣ್ಣುಕುಕ್ಕುವ ಕ್ಯಾಮೆರಾ ಕೈಚಳಕ, ಮೈನವಿರೇಳಿಸುವ ಆಕ್ಷನ್ ಸನ್ನಿವೇಶಗಳು ಚಿತ್ರದ ಹೈಲೈಟ್ ಗಳು.

ಕಾಲಾವಧಿಗೆ ಸ್ವಲ್ಪ ಕತ್ತರಿ ಹಾಕಬೇಕಿತ್ತು

ಆದರೆ ಹಿಂದಿ ಡಬ್ಬಿಂಗ್ ಚಿತ್ರದಲ್ಲಿ ಲಿಪ್ ಸಿಂಕಿಂಗ್ ಅಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ ಎಂಬುದು ಮೈನಸ್ ಪಾಯಿಂಟ್. ಇದೊಂದು ಸೀದಾಸಾದಾ ಕಥೆಯೇ ಆದರೂ ಅದನ್ನು ತೆರೆಗೆ ತಂದಿರುವ ರೀತಿ, ಪ್ರೇಕ್ಷಕರನ್ನು ಹಿಡಿದಿಡುವ ಮಾಂತ್ರಿಕತೆ ಚಿತ್ರದಲ್ಲಿದೆ. ಚಿತ್ರದ ಕಾಲಾವಧಿಯನ್ನು (189 ನಿಮಿಷ) ಸ್ವಲ್ಪ ಮೊಟುಕುಗೊಳಿಸಬಹುದಿತ್ತು.

ರೆಹಮಾನ್ ಸಂಗೀತದ ಮಾಧುರ್ಯ?

ಈ ಚಿತ್ರದ ಇನ್ನೊಂದು ಗಮನಾರ್ಹ ಅಂಶ ಎಂದರೆ ಎ ಆರ್ ರೆಹಮಾನ್ ಅವರ ಸಂಗೀತ. ರೊಮ್ಯಾಂಟಿಕ್ ಹಾಗೂ ಆಕ್ಷನ್ ಸನ್ನಿವೇಶಗಳಿಗೆ ಅವರ ಹಿನ್ನೆಲೆ ಸಂಗೀತ ಪರ್ಫೆಕ್ಟ್ ಆಗಿ ಮಿಕ್ಸ್ ಆಗಿದೆ. ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ರೆಹಮಾನ್ ಅವರ ಸಂಗೀತದ ಮಾಧುರ್ಯ ಸ್ವಲ್ಪ ಮಾಯವಾಗಿದೆ ಹಾಗೆ ಸುಮ್ಮನೆ.

ಚಿತ್ರದ ಮೈನಸ್ ಪಾಯಿಂಟ್ ಗಳು

ಈ ಚಿತ್ರದ ಬಲು ದೊಡ್ಡ ಕೊರತೆ ಎಂದರೆ ಸ್ಕ್ರೀನ್ ಪ್ಲೇ. ಶಂಕರ್ ಅವರ ಸ್ಕ್ರೀನ್ ಪ್ಲೇ ಅಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಉಪೇನ್ ಪಟೇಲ್ ಅವರ ಅಭಿನಯವೂ ಒಂಥರಾ ಸಹಜವಾಗಿ ಇಲ್ಲದೆ ಯಾಂತ್ರಿಕವಾಗಿರುವುದನ್ನು ಬೊಟ್ಟು ಮಾಡಿ ತೋರಿಸಬಹುದಾದ ಇನ್ನೊಂದು ಅಂಶ. ಸಂಕಲನ ಇನ್ನಷ್ಟು ಮೊನಚಾಗಿರಬೇಕಾಗಿತ್ತು ಅನ್ನಿಸುತ್ತದೆ.

ರಾಷ್ಟ್ರಪ್ರಶಸ್ತಿ ಬಂದರೂ ಅಚ್ಚರಿಯಿಲ್ಲ

ಚಿತ್ರದ ಮೇಕಿಂಗ್, ಶೇಕಡಾ 25ರಷ್ಟು ಭಾಗ ಚೀನಾದಲ್ಲಿ ಚಿತ್ರೀಕರಿಸಲಾಗಿರುವುದು, ಶಂಕರ್ ಮತ್ತವರ ತಂಡ ಪ್ರಯತ್ನ, ವಿಕ್ರಮ್ ಅವರ ಸವಾಲೊಡ್ಡುವ ಪಾತ್ರ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ಒಟ್ಟಾರೆ ಪೈಸಾ ವಸೂಲ್ ಚಿತ್ರ. ರಾಷ್ಟ್ರಪ್ರಶಸ್ತಿ ಬಂದರೂ ಅಚ್ಚರಿಯಿಲ್ಲ.

English summary
Shankar directional movie I (Ai) review. Vikram's dedication and hard work, Shankar's visualization of scenes, Amy and her lustrous beauty is the main attractions of the movie. While screenplay is the biggest drawback in the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada