Don't Miss!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಮರ್ಶೆ : 'ಸಂತೆಯಲ್ಲಿ' ಭಕ್ತಿ ಮೆರೆದ 'ಕಬೀರ'ನನ್ನು ತಪ್ಪದೇ ನೋಡಿ
ದಿನ ಬೆಳಗಾದರೆ ಕೊಲೆ, ರಕ್ತಪಾತ, ದ್ವೇಷ, ಹೊಡೆದಾಟ ನೋಡುವ ನಾವೆಲ್ಲರೂ ಮನಃಶಾಂತಿಗಾಗಿ ತಪ್ಪದೆ ವೀಕ್ಷಿಸಲೇ ಬೇಕಾದ ಸಿನಿಮಾ 'ಸಂತೆಯಲ್ಲಿ ನಿಂತ ಕಬೀರ'.
ರಾಜಕೀಯ ಕುತಂತ್ರದ ಪರಿಣಾಮವಾಗಿ ಧರ್ಮದ ಹೆಸರಿನಲ್ಲಿ ಹಿಂದು-ಮುಸ್ಲಿಂ ಕಾದಾಟ ನಡೆಯುತ್ತಿರುವ ಕಾಲ ಘಟ್ಟದಲ್ಲಿ, ತಮ್ಮ ಗೀತೆಗಳಿಂದ ಸತ್ಸಂಗ, ಅಹಿಂಸೆ, ಶಾಂತಿ, ಸದಾಚಾರ ಭೋದನೆ ಮಾಡಿ, ಭಕ್ತಿ ಮಾರ್ಗದಿಂದ ಸಮಾಜವನ್ನು ಪರಿವರ್ತನೆ ಮಾಡಿದ ಮಹಾನುಭಾವ ಸಂತ ಕಬೀರ್ ದಾಸ್.
14/15 ನೇ ಶತಮಾನದಲ್ಲಿ ಜೀವಿಸಿದ್ದ ಸಂತ ಕಬೀರ್ ದಾಸ್ ನ ಜೀವನ ಚರಿತ್ರೆಯನ್ನ ಬೆಳ್ಳಿತೆರೆ ಮೇಲೆ ಅಚ್ಚುಕಟ್ಟಾಗಿ ತೆರೆಗೆ ತಂದು ಇಂದಿನ ಯುಗಕ್ಕೆ ಮಾದರಿ ಆಗಿದ್ದಾರೆ ನಿರ್ದೇಶಕ ಇಂದ್ರ ಬಾಬು.
ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿರುವ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ.....

ಸಂತ 'ಕಬೀರ'ನ ಚಿತ್ರ ಇದು.!
ಸಮಾಜದ ನಿಂದನೆಗೆ ಹೆದರಿದ ಬ್ರಾಹ್ಮಣ ವಿಧವೆಗೆ ಹುಟ್ಟಿದ ಗಂಡು ಮಗು, ನೀರೂ ಮತ್ತು ನೀಮಾ ಎಂಬ ಬಡ, ಮುಸಲ್ಮಾನ ನೇಕಾರರ ಕುಟುಂಬದಲ್ಲಿ 'ಕಬೀರ'ನಾಗಿ ಬೆಳೆಯುತ್ತಾನೆ. ಗೃಹಸ್ಥನಾಗಿ, ನೇಕಾರನಾಗಿ, ಸಮಾಜದ ಒಳಿತು ಬಯಸುವ 'ಕಬೀರ'ನ ಜೀವನಗಾಥೆ ಈ 'ಸಂತೆಯಲ್ಲಿ ನಿಂತ ಕಬೀರ' ಸಿನಿಮಾ.

ಕಬೀರನ ಸಂಪೂರ್ಣ ಜೀವನ ಚರಿತ್ರೆ ಇಲ್ಲ.!
ಸಾಹಿತಿ ಭೀಷ್ಮ ಸಾಹ್ನಿ ರವರ 'ಕಬೀರ್ ಖಡಾ ಬಾಝಾರ್ ಮೇನ್' ನಾಟಕವನ್ನ ಆಧಾರಿಸಿ 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕಥೆ ಹೆಣೆಯಲಾಗಿರುವುದರಿಂದ ಕಬೀರ್ ದಾಸ್ ರವರ ಸಂಪೂರ್ಣ ಜೀವನ ಚರಿತ್ರೆ ಈ ಚಿತ್ರದಲ್ಲಿ ಇಲ್ಲ. ಕಬೀರ ಜೀವನದ ಒಂದು ಕಾಲ ಘಟ್ಟ ಮಾತ್ರ ಚಿತ್ರಿಸಲಾಗಿದೆ.

ಕಬೀರನಾಗಿ ಕಮಾಲ್ ಮಾಡಿರುವ ಶಿವಣ್ಣ
ಮಾಸ್ ಹೀರೋ ಪಾತ್ರಗಳಿಗೆ ಹೇಳಿ ಮಾಡಿಸಿದಂತೆ ನಟಿಸುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಸಂತ ಕಬೀರ'ನಾಗಿ ಅಮೋಘ ಅಭಿನಯ ನೀಡಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಶಿವಣ್ಣ ಮನಮುಟ್ಟುತ್ತಾರೆ.

ಕಣ್ಮನ ಸೆಳೆಯುವ ಸನುಶಾ
ಕಬೀರನ ಪತ್ನಿ ಪಾತ್ರದಲ್ಲಿ ಸನುಶಾ ಕಣ್ಮನ ಸೆಳೆಯುತ್ತಾರೆ. ಮಲ್ಲು ಬೆಡಗಿ ಆಗಿದ್ದರೂ ಕನ್ನಡ ಡೈಲಾಗ್ ಗಳನ್ನ ಸ್ಪಷ್ಟವಾಗಿ ಹೇಳಿದ್ದಾರೆ.

'ಸುಲ್ತಾನ್' ಶರತ್ ಕುಮಾರ್
'ಸಿಕಂಧರ್ ಲೋಧಿ' ಪಾತ್ರದಲ್ಲಿ ಶರತ್ ಕುಮಾರ್ ರವರ ರಾಜ ಗಾಂಭೀರ್ಯ ಮೆಚ್ಚುವಂಥದ್ದು. ಕುರುಡನ ಪಾತ್ರದಲ್ಲಿ ಪ್ರಶಾಂತ್ ಸಿದ್ಧಿ ನಟನೆ ಚೆನ್ನಾಗಿದೆ. ಅವಿನಾಶ್, ಭಗೀರಥಿ ಬಾಯಿ ಕಡಮ್, ಶರತ್ ಲೋಹಿತಾಶ್ವ, ಅನಂತ್ ನಾಗ್ ನಟನೆಗೆ ಫುಲ್ ಮಾರ್ಕ್ಸ್ ಕೊಡಲೇಬೇಕು. ಸಂಜನಾ ಗಲ್ರಾನಿ ಒಂದು ಹಾಡಿಗೆ ಮಾತ್ರ ಸೀಮಿತ.

ಚಾಲೆಂಜ್ ನಲ್ಲಿ ಗೆದ್ದಿದ್ದಾರೆ ಇಂದ್ರ ಬಾಬು
15ನೇ ಶತಮಾನದ ಸ್ಥಿತಿ-ಗತಿಯನ್ನ ಇಂದು ತೆರೆಮೇಲೆ ಕಲಾತ್ಮಕವಾಗಿ ಕಟ್ಟಿಕೊಡುವುದು ಸುಲಭ ಅಲ್ಲ. ಅಂತಹ ಸಾಹಸಕ್ಕೆ ಕೈ ಹಾಕಿ ನಿರ್ದೇಶಕ ಇಂದ್ರ ಬಾಬು ಯಶಸ್ವಿ ಆಗಿದ್ದಾರೆ. ಕಬೀರನ ಪಾತ್ರಕ್ಕೆ ಶಿವಣ್ಣ ಅಕ್ಷರಶಃ ಜೀವ ತುಂಬಿದ್ದಾರೆ.

ಕಾಸ್ಟ್ಯೂಮ್ಸ್ ಚೆನ್ನಾಗಿದೆ.!
ಕಬೀರ್ ದಾಸ್ ರವರು ಜೀವಿಸಿದ್ದ ಅಂದಿನ ಕಾಲಮಾನಕ್ಕೆ ತಕ್ಕಂತೆ ತಯಾರಾಗಿರುವ ಕಾಸ್ಟ್ಯೂಮ್ಸ್ ಚೆನ್ನಾಗಿದೆ.

ಕ್ಯಾಮರಾ ವರ್ಕ್ ಪ್ಲಸ್ ಪಾಯಿಂಟ್.!
ಹಚ್ಚ ಹಸಿರು ಪರಿಸರದಲ್ಲಿ ನೇಕಾರರ ವೃತ್ತಿಗೆ ಸಂಬಂಧ ಪಟ್ಟ ಹಾಗೆ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ಸೆಟ್ ಹಾಕಲಾಗಿದೆ. ಇಡೀ ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ಕ್ಯಾಮರಾ ವರ್ಕ್. ನವೀನ್ ಕುಮಾರ್ ರವರ ಕ್ಯಾಮರಾ ಕೈಚಳಕ ಕಣ್ಣು ಕೋರೈಸುತ್ತೆ.

ಇಸ್ಮಾಯಿಲ್ ದರ್ಬಾರ್ ಸಂಗೀತ
ಬಾಲಿವುಡ್ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಸಂಗೀತ ನೀಡಿರುವ ಎಲ್ಲಾ ಹಾಡುಗಳು ಗುನುಗುವಂತಿವೆ.

ಶಿವಣ್ಣ ಸಿನಿಮಾ ಅಲ್ಲ.!
ಲಾಂಗ್ ಹಿಡಿಯುವ ಶಿವರಾಜ್ ಕುಮಾರ್ ರನ್ನು ಇಷ್ಟ ಪಡುವ ಮಾಸ್ ಅಭಿಮಾನಿಗಳಿಗೆ 'ಸಂತೆಯಲ್ಲಿ ನಿಂತ ಕಬೀರ' ಇಷ್ಟವಾಗುವುದು ಕಷ್ಟ. ಯಾಕಂದ್ರೆ, ಇದು ಅಪ್ಪಟ ಕ್ಲಾಸ್ ಸಿನಿಮಾ. ಕ್ಲಾಸ್ ಆಡಿಯನ್ಸ್ ಗೆ ಖಂಡಿತ ಈ ಚಿತ್ರ ಇಷ್ಟವಾಗುತ್ತದೆ.

ಫೈನಲ್ ಸ್ಟೇಟ್ ಮೆಂಟ್
ಭಯೋತ್ಪಾದನೆ, ಜಾತಿ ಗಲಾಟೆ, ಕೊಲೆ, ಸುಲಿಗೆ ವಿಶ್ವ ವ್ಯಾಪಿ ಆಗಿರುವ ಈಗಿನ ಕಾಲದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿರುವ ಸಂತ ಕಬೀರ್ ದಾಸ್ ರವರ ಜೀವನ ಚರಿತ್ರೆಯನ್ನು ಹೊತ್ತು ತಂದಿರುವ 'ಸಂತೆಯಲ್ಲಿ ನಿಂತ ಕಬೀರ' ಚಿತ್ರವನ್ನ ನೋಡಿದ್ರೆ, ಮನಸ್ಸಿಗೆ ಶಾಂತಿ ಸಿಗುವುದಂತೂ ಖಂಡಿತ.