For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ : ಹಳ್ಳಿ ಹಳ್ಳಿ ರಾಮಾಯಣ ಇದುವೇ ಕಾನೂರಾಯಣ

  By Pavithra
  |

  ಹಳ್ಳಿ ಎಂದ ಮೇಲೆ ಅಲ್ಲಿ ಒಳ್ಳೆಯವರಂತೆ ಕೆಟ್ಟವರು ಇರುತ್ತಾರೆ. ಮುಗ್ದ ರೈತನನ್ನು ಮೋಸ ಮಾಡಿ ಸಾವಿನ ಬಾಯಿಗೆ ತಳ್ಳುವವರು ಇರುತ್ತಾರೆ. ಅದೇ ರೈತರನ್ನ ಸ್ವಾವಂಭಿಗಳನ್ನಾಗಿ, ಸ್ವಾಭಿಮಾನಿಗಳನ್ನಾಗಿ ಮಾಡಬೇಕು ಎಂದು ಪಟತೊಟ್ಟವರು ಇರುತ್ತಾರೆ. ಕೆಟ್ಟವರನ್ನ ಮಟ್ಟ ಹಾಕುತ್ತಾ ಒಳ್ಳೆಯವರ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಾ ಅದರ ಜೊತೆಯಲ್ಲಿ ಸ್ವಸಹಾಯ ಸಂಘಗಳು ರೈತ ಮಹಿಳೆಯರ ಜೀವನಕ್ಕೆ ಶಕ್ತಿ ನೀಡುವ ಬಗೆಯ ಅಚ್ಚುಕಟ್ಟಾದ ಕಥೆಯೇ ಕಾನೂರಾಯಣ

  ಚಿತ್ರ: ಕಾನೂರಾಯಣ
  ನಿರ್ದೇಶನ: ಟಿ ಎಸ್ ನಾಗಾಭರಣ
  ಸಂಗೀತ: ವಾಸುಕಿ ವೈಭವ್
  ಛಾಯಾಗ್ರಹಣ: ಶ್ರೀನಿವಾಸ್ ರಾಮಯ್ಯ
  ತಾರಾಗಣ: ಟಿ ಎಸ್ ನಾಗಾಭರಣ, ವೀರೇಂದ್ರ ಹೆಗ್ಗಡೆ, ಸೋನು ಗೌಡ, ಸ್ಕಂದ ಅಶೋಕ್, ಸೋನು ಗೌಡ, ದೊಡ್ಡಣ್ಣ, ಸುಂದರ್ ರಾಜ್, ಕರಿಸುಬ್ಬು, ಗಿರಿಜಾ ಲೋಕೇಶ್, ಜಾನ್ಹವಿ ಜ್ಯೋತಿ, ಮನು ಹೆಗ್ಡೆ, ಇನ್ನು ಅನೇಕರು

  ರೈತರ ಸ್ವಾವಲಂಬನೆಯೇ ಸಿನಿಮಾ ಗುರಿ

  ರೈತರ ಸ್ವಾವಲಂಬನೆಯೇ ಸಿನಿಮಾ ಗುರಿ

  ರೈತರ ಸಾವಿನ ಸಂಖ್ಯೆ ಕಡಿಮೆ ಆಗಬೇಕು, ರೈತ ಸ್ವಾವಲಂಬಿಗಳಾಗಬೇಕು. ಮಹಿಳೆಯರು ಆರ್ಥಿಕ ಶಿಸ್ತು ಹಾಗೂ ಉಳಿತಾಯ ಮಾಡುವುದನ್ನು ಕಲಿತುಕೊಳ್ಳಬೇಕು ಎನ್ನುವ ಸಂದೇಶದೊಂದಿಗೆ ನಿಷ್ಕಲ್ಮಷವಾದ ಪ್ರೀತಿ ಇದು ಕಾನೂರಾಯಣ ಚಿತ್ರದ ಕಥಾವಸ್ತು.

  ಹಳ್ಳಿ ಹುಡುಗಿ ಪಾತ್ರಕ್ಕೆ ಜೀವ ತುಂಬಿನ ಸೋನು

  ಹಳ್ಳಿ ಹುಡುಗಿ ಪಾತ್ರಕ್ಕೆ ಜೀವ ತುಂಬಿನ ಸೋನು

  ಕಾನೂರಾಯಣ ಸಿನಿಮಾದಲ್ಲಿ ನಟಿ ಸೋನು ಗೌಡ ಡಿ ಗ್ಮಾಮರ್ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಹಳ್ಳಿ ಹುಡುಗಿಯಾಗಿದ್ದುಕೊಂಡು ನಂತರ ಪಂಚಾಯ್ತಿ ಅಧ್ಯಕ್ಷೆಯಾಗಿ ಅಭಿನಯ ಮಾಡಿರೋ ಸೋನು ಆಕ್ಟಿಂಗ್ ನೋಡುಗರಿಗೆ ಇಷ್ಟವಾಗುತ್ತದೆ. ಕಮರ್ಷಿಯಲ್ ಪಾತ್ರಗಳು ಮಾತ್ರವಲ್ಲದೆ ಎಲ್ಲಾ ರೀತಿಯ ಪಾತ್ರಗಳನ್ನೂ ಸೋನು ಗೌಡ ನಿರ್ವಹಿಸಬಲ್ಲರು ಎನ್ನುವುದು ಈ ಚಿತ್ರದಲ್ಲಿ ನಿರೂಪಿಸಿದ್ದಾರೆ.

  ಭರವಸೆ ಮೂಡಿಸುವ ನವ ನಾಯಕ

  ಭರವಸೆ ಮೂಡಿಸುವ ನವ ನಾಯಕ

  ಚಿತ್ರದಲ್ಲಿ ಮುಖ್ಯ ಪಾತ್ರಗಳು ಹೆಚ್ಚಾಗಿದ್ದು ನವ ನಾಯಕ ಮನು ಹೆಗ್ಡೆ ಅಭಿನಯದ ಮೂಲಕ ಪ್ರೇಕ್ಷಕರನ್ನ ಮೋಡಿ ಮಾಡುತ್ತಾರೆ. ಎರಡನೇ ಸಿನಿಮಾದಲ್ಲೇ ಮನು ಭರವಸೆಯ ನಾಯಕನಾಗಿ ಉಳಿದುಕೊಳ್ಳುವ ಎಲ್ಲಾ ಸಾಧ್ಯತೆಗಳಿದೆ ಎನ್ನುವ ಸೂಚನೆ ನೀಡುತ್ತಾರೆ.

  ನಾಯಕನಾಗಿ ಸ್ಕಂದ ಅಶೋಕ್

  ನಾಯಕನಾಗಿ ಸ್ಕಂದ ಅಶೋಕ್

  ಸದ್ಯ ಕಿರುತೆರೆಯಲ್ಲಿ ಬಾರಿ ಸದ್ದು ಮಾಡುತ್ತಿರುವ ನಟ ಸ್ಕಂದ ಅಶೋಕ್ ಕಾನೂರಾಯಣ ಸಿನಿಮಾದ ಮುಖ್ಯ ಪಾತ್ರಧಾರಿ. ಸಿಟಿಯಿಂದ ಬಂದು ಹಳ್ಳಿಯ ಜನರನ್ನು ಒಗ್ಗೂಡಿಸುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

  ಕ್ಯಾಮೆರಾ ಕೈಚಳಕಕ್ಕೆ ಫುಲ್ ಮಾರ್ಕ್ಸ್

  ಕ್ಯಾಮೆರಾ ಕೈಚಳಕಕ್ಕೆ ಫುಲ್ ಮಾರ್ಕ್ಸ್

  ಕಾನೂರಾಯಣ ಸಿನಿಮಾಗೆ ಶ್ರೀನಿವಾಸ್ ರಾಮಯ್ಯ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಹಳ್ಳಿಯ ಸೌಂದರ್ಯವನ್ನು ತೆರೆಯಲ್ಲಿ ಕಟ್ಟುಕೊಡುವಲ್ಲಿ ಶ್ರೀನಿವಾಸ್ ಅವರ ಕೈಚಳಕ ತುಂಬಾ ಚೆನ್ನಾಗಿದೆ.

  ನಿರ್ದೇಶನದ ಬಗ್ಗೆ ಎರಡು ಮಾತಿಲ್ಲ

  ನಿರ್ದೇಶನದ ಬಗ್ಗೆ ಎರಡು ಮಾತಿಲ್ಲ

  ನಿರ್ದೇಶಕ ಟಿ ಎಸ್ ನಾಗಾಭರಣ ಅವರ ನಿರ್ದೇಶನದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಹಳ್ಳಿ ಸೊಗಡಿನ ಕಥೆಯನ್ನ ತೆರೆ ಮೇಲೆ ತರುವ ಪ್ರಯತ್ನ ತುಂಬಾ ಚೆನ್ನಾಗಿದೆ. ಹಳ್ಳಿಯಲ್ಲಿ ಎಲ್ಲರೂ ಸಮಾನ ಮನಸ್ಕರು ಇರುವುದಿಲ್ಲ ಎನ್ನುವುದನ್ನು ಚೆನ್ನಾಗಿ ನಿರೂಪಣೆ ಮಾಡಿದ್ದಾರೆ.

  ಹಳ್ಳಿಗೆ ಕರೆದೊಯ್ಯುವ ಸಂಗೀತ

  ಹಳ್ಳಿಗೆ ಕರೆದೊಯ್ಯುವ ಸಂಗೀತ

  ಕಮರ್ಷಿಯಲ್ ಸಿನಿಮಾಗಳಿಗಿಂತಲೂ ಭಿನ್ನ ಎನ್ನಿಸುವಂತಿರುವ ಸಂಗೀತ ಕೆಲ ದೃಶ್ಯಗಳನ್ನ ಮನಸ್ಸು ಮುಟ್ಟುವಂತೆ ಮಾಡುತ್ತದೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಹಳ್ಳಿ ಜಾತ್ರೆ ಸಂಭ್ರಮದಿಂದ ದೂರವಾಗಿರುವ ಸಿಟಿ ಜನರಿಗೆ ಹಾಡುಗಳನ್ನ ನೋಡುವಾಗ ಒಂದು ಸುತ್ತು ಹಳ್ಳಿಗೆ ಹೋಗಿ ಬಂದ ಅನುಭವ ನೀಡುತ್ತೆ.

  ಸೆಕೆಂಡ್ ಆಫ್ ಕೊಂಚ ಬೇಸರ

  ಸೆಕೆಂಡ್ ಆಫ್ ಕೊಂಚ ಬೇಸರ

  ಸ್ವಸಹಾಯ ಸಂಘಗಳಿಂದ ಆಗುವ ಉಪಯೋಗಗಳನ್ನ ಮೂಲವಾಗಿಟ್ಟುಕೊಂಡು ಹಳ್ಳಿ ಕಥೆ ಹೇಳಿರುವ ರೀತಿ ಚೆನ್ನಾಗಿದೆ. ಆದರೆ ಸಿನಿಮಾ ಸೆಕೆಂಡ್ ಆಫ್ ನಲ್ಲಿ ಸಿನಿಮಾ ನೋಡುಗರಿಗೆ ಕೊಂಚ ಬೇಸರ ತರಿಸುತ್ತದೆ.

  ಕೊನೆಯ ಮಾತು

  ಕೊನೆಯ ಮಾತು

  ಹಳ್ಳಿ ಸೊಗಡಿನ ಸಿನಿಮಾಗಳು ಕಡಿಮೆ ಆಗುತ್ತಿರುವ ಸಮಯದಲ್ಲಿ ಹಳ್ಳಿಯಲ್ಲಿನ ರಾಜಕೀಯ, ಅಲ್ಲಿನ ಹೆಣ್ಣು ಮಕ್ಕಳ ಪಾಡು, ಸ್ವಸಹಾಯ ಸಂಘದಿಂದಾಗುವ ಉಪಯೋಗ ಇವುಗಳನ್ನೆಲ್ಲಾ ತಿಳಿದುಕೊಳ್ಳಲು ಹಾಗೂ ವರ್ಷ ಪೂರ್ತಿ ಮನೆಯಲ್ಲೇ ಕುಳಿತು ಕೆಲಸ ಮಾಡುವ ಮಹಿಳೆಯರಿಗೆ ಕಾನೂರಾಯಣ ಒಂದು ವಿಶೇಷ ಸಿನಿಮಾ. ಅದರ ಜೊತೆಯಲ್ಲಿ ಸ್ವ-ಸಹಾಯ ಸಂಘದಿಂದ ಸಿನಿಮಾವನ್ನೂ ನಿರ್ಮಾಣ ಮಾಡಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ.

  English summary
  Read Kannada Actress Sonu Gowda and Kannada Actor Skanda Ashok starrer Kannada Movie 'Kanoorayana' review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X