For Quick Alerts
  ALLOW NOTIFICATIONS  
  For Daily Alerts

  Soojidaara Review : ಹರಿದ ಬದುಕಿಗೆ ಹೊಲಿಗೆ ಹಾಕುವ 'ಸೂಜಿದಾರ'

  |

  ಜೀವನ ಎಂಬ ನಾಟಕದಲ್ಲಿ ನಾವು ಕೆಲವೊಮ್ಮೆ ನಮ್ಮ ಪಾತ್ರದ ಬದಲಿಗೆ ಬೇರೆ ಪಾತ್ರವನ್ನೇ ಮಾಡುವ ಪರಿಸ್ಥಿತಿ ಬರುತ್ತದೆ. 'ಸೂಜಿದಾರ' ಸಿನಿಮಾ ಕೂಡ ಅಂತಹ ಪರಿಸ್ಥಿತಿಯಲ್ಲಿ ಇರುವ ಎರಡು ಪಾತ್ರಗಳ ಕಥೆಯಾಗಿದೆ. ಸೂಜಿದಾರವನ್ನು ಬಟ್ಟೆ ಹೊಲಿಯಲು ಮಾತ್ರವಲ್ಲದೆ, ಮೈ ಮನವನ್ನು ಹೋಲಿಯಲು ಬಳಸಿದ್ದಾರೆ. ಎರಡು ಪಾತ್ರಗಳ ಈ ಭಾವನಾತ್ಮಕ ಕಥೆ ಇಷ್ಟ ಆಗುತ್ತದೆ.

  Rating:
  3.0/5
  Star Cast: ಹರಿಪ್ರಿಯಾ ಹಾಗೂ ಯಶವಂತ್ ಶೆಟ್ಟಿ
  Director: ಮೌನೇಶ್ ಬಡಿಗೇರ್

  ಓಡುವ ಶಂಕರ, ನಿಂತಿರೋ ಪದ್ಮ

  ಓಡುವ ಶಂಕರ, ನಿಂತಿರೋ ಪದ್ಮ

  ಸಿನಿಮಾದ ಮೊದಲ ದೃಶ್ಯದಿಂದ ನಾಯಕ ಶಂಕರ (ಯಶವಂತ್ ಶೆಟ್ಟಿ) ಓಡುತ್ತಿರುತ್ತಾನೆ. ಪ್ರತಿ ಹಂತದಲ್ಲಿಯೂ ಭಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುತ್ತಾನೆ. ಇತ್ತ ಪದ್ಮ ಒಂದೇ ಮನೆಯಲ್ಲಿ ಸೆರೆಯಾಗಿ ಇರುತ್ತಾಳೆ. ಇಬ್ಬರ ಈ ಪರಿಸ್ಥಿತಿಗೆ ಒಂದೇ ಘಟನೆ ಕಾರಣ ಆಗಿರುತ್ತದೆ. ಆ ಘಟನೆ ಏನು? ಇಬ್ಬರು ಹಿನ್ನಲೆ ಏನು? ಎನ್ನುವುದೇ ಈ ಸಿನಿಮಾ.

  ಸಂದರ್ಶನ : 'ಯಾವತ್ತೂ ಹೀರೋ ಆಗಬಾರದು' ಎಂದಿದ್ದ ಯಶ್ ಶೆಟ್ಟಿ ನಿಯಮ ಮುರಿದರು

  ಎರಡು ಪಾತ್ರಗಳು - ಒಂದು ಸೂಜಿ, ಮತ್ತೊಂದು ದಾರ

  ಎರಡು ಪಾತ್ರಗಳು - ಒಂದು ಸೂಜಿ, ಮತ್ತೊಂದು ದಾರ

  ಸಿನಿಮಾದಲ್ಲಿ ಎರಡು ಮುಖ್ಯ ಪಾತ್ರಗಳು ಬರುತ್ತದೆ. ಅದೇ ಶಂಕರ (ಯಶವಂತ್ ಶೆಟ್ಟಿ) ಮತ್ತು ಪದ್ಮಾ (ಹರಿಪ್ರಿಯಾ). ಈ ಎರಡು ಪಾತ್ರಗಳು ಸೂಜಿದಾರ ಇದ್ದ ಹಾಗೆ. ಒಬ್ಬರ ಹರಿದ ಜೀವನವನ್ನು ಮತ್ತೊಬ್ಬರು ಹೊಲಿಯುತ್ತಾರೆ. ಈ ಎರಡು ಪಾತ್ರಗಳ ಪ್ಲಾಶ್ ಬ್ಯಾಕ್ ಕಥೆಯ ಮೇಲೆ ಇಡೀ ಸಿನಿಮಾ ನಿಂತಿದ್ದೆ.

  ಇಬ್ಬರ ಹಿನ್ನಲೆ ಕಥೆಗೆ ಆಧಾರ

  ಇಬ್ಬರ ಹಿನ್ನಲೆ ಕಥೆಗೆ ಆಧಾರ

  ತಲೆ ಮರೆಸಿಕೊಂಡು ಓಡಾಡುತ್ತಿರುವ ಶಂಕರ ಕೊನೆಗೆ ಚಿತ್ರದುರ್ಗಕ್ಕೆ ಬರುತ್ತಾನೆ. ಅಲ್ಲಿಯೇ ಒಂದು ಕೆಲಸಕ್ಕೆ ಸೇರಿಕೊಂಡು, ಒಂದು ಮನೆ ಬಾಡಿಗೆ ತೆಗೆದುಕೊಳ್ಳುತ್ತಾನೆ. ಅದೇ ಮನೆಯ ಪಕ್ಕದಲ್ಲಿ ಪದ್ಮ ವಾಸ ಮಾಡುತ್ತಾ ಇರುತ್ತಾಳೆ. ಹೀಗೆ ಶುರುವಾಗುವ ಸಿನಿಮಾ ನಂತರ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತದೆ.

  ನಟ, ನಟಿಯ ಮೌನವೇ ಮಾತು

  ನಟ, ನಟಿಯ ಮೌನವೇ ಮಾತು

  ನಟಿ ಹರಿಪ್ರಿಯಾ ಹಾಗೂ ಯಶವಂತ್ ಶೆಟ್ಟಿ ಪಾತ್ರಗಳಿಗೆ ಜಾಸ್ತಿ ಡೈಲಾಗ್ ಇಲ್ಲ. ಅವರು ಮೌನದಲ್ಲಿಯೇ ಮಾತನಾಡುತ್ತಾರೆ. ನೂರಾರೂ ನೋವುಗಳ ಜೊತೆಗೆ ಅವರು ನಟಿಸಿದ್ದಾರೆ. ಸ್ಟಾರ್ ನಟಿಯಾಗಿ ಅವರ ಪಾತ್ರದ ಆಯ್ಕೆ ಮತ್ತು ಅದನ್ನು ನಿಭಾಯಿಸುವರು ರೀತಿಗೆ ಚಪ್ಪಾಳೆ ಹೊಡೆಯಬೇಕು. ಯಶವಂತ್ ಶೆಟ್ಟಿ ಕೂಡ ತಮ್ಮ ಹಿಂದಿನ ಸಿನಿಮಾಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಇಷ್ಟ ಆಗುತ್ತದೆ. ಅವರಿಗೂ ಇಲ್ಲಿ ಡೈಲಾಗ್ ಕಡಿಮೆ.

  ಇಷ್ಟ ಆಗುವ ಪಾತ್ರಗಳು

  ಇಷ್ಟ ಆಗುವ ಪಾತ್ರಗಳು

  ಸಿನಿಮಾದ ಕೆಲವು ಪಾತ್ರಗಳು ಬಹಳ ಮಜಾ ನೀಡುತ್ತವೆ. ಹೂ ಮಾರುವ ಹುಡುಗಿಯ ಪಾತ್ರದಲ್ಲಿ ಚೈತ್ರ ಕೊಟ್ಟುರು ಸೊಗಸಾಗಿ ನಟಿಸಿದ್ದಾರೆ. ಅವರ ಪಾತ್ರದಲ್ಲಿ ಲವಲವಿಕೆ ಇದೆ. ಅವರನ್ನು ಸಿನಿಮಾದ ಎರಡನೇ ನಾಯಕಿ ಎಂದು ಹೇಳಬಹುದು. ಸುಚ್ಚೇಂದ್ರ ಪ್ರಸಾದ್ ಎಂದಿನಂತೆ ಅಬ್ಬರಿಸಿದ್ದಾರೆ. ಉಳಿದಂತೆ, ಚೋಟು ಪಾತ್ರ ಸೇರಿದಂತೆ ಸಣ್ಣ ಸಣ್ಣ ಪಾತ್ರಗಳು ಇಷ್ಟ ಆಗುತ್ತವೆ.

  ಸಂಗೀತ, ಕ್ಯಾಮರಾ, ನಿರ್ದೇಶನ

  ಸಂಗೀತ, ಕ್ಯಾಮರಾ, ನಿರ್ದೇಶನ

  ಸಿನಿಮಾದ ಸಂಗೀತ ಚೆನ್ನಾಗಿದೆ. ಕಥೆಗೆ ತಕ್ಕ ಹಾಡುಗಳು ಹಾಗೂ ಹಿನ್ನಲೆ ಸಂಗೀತ ಮೆಚ್ಚುಗೆ ಪಡೆಯುತ್ತದೆ. ಕ್ಯಾಮರಾ ವರ್ಕ್ ಸಹ ಅಡ್ಡಿ ಇಲ್ಲ. ನಿರ್ದೇಶಕ ಮೌನೇಶ್ ಬಡಿಗೇರ್ ಅನುಭವ ಸಿನಿಮಾಗೆ ಸಹಾಯ ಆಗಿದೆ. ಒಂದು ಘಟನೆಯನ್ನು ಇಟ್ಟುಕೊಂಡು ಒಂದೊಳ್ಳೆ ಕಥೆ ಮಾಡಿ, ಅದನ್ನು ಸಿನಿಮಾ ರೂಪಕ್ಕೆ ತಂದಿದ್ದರೆ.

  ಈ ಅಂಶಗಳನ್ನು ತಡೆದುಕೊಳ್ಳಬೇಕು

  ಈ ಅಂಶಗಳನ್ನು ತಡೆದುಕೊಳ್ಳಬೇಕು

  ಸಿನಿಮಾದಲ್ಲಿ ಪದೇ ಪದೇ ಕೆಲವು ದೃಶ್ಯಗಳು ರಿಪೀಟ್ ಆಗುತ್ತವೆ. ಪ್ರೇಕ್ಷಕರು ಗೊಂದಲ ಆಗಲಿ ಎನ್ನುವ ಕಾರಣಕ್ಕೆನೇ ಕೆಲವು ದೃಶ್ಯಗಳನ್ನು ಹಿಂದು ಮುಂದಾಗಿ ಹೇಳಿದ್ದರೆ ಎನ್ನಿಸಿಬಿಡುತ್ತದೆ. ಈ ಅಂಶವನ್ನು ಬಿಟ್ಟು ನೋಡಿದರೆ, ಸಿನಿಮಾದ ಚೆನ್ನಾಗಿದೆ.

  ಚಿತ್ರದ ವಿಷಯ ಚೆನ್ನಾಗಿದೆ

  ಚಿತ್ರದ ವಿಷಯ ಚೆನ್ನಾಗಿದೆ

  ಸಿನಿಮಾಗೆ ಆಯ್ಕೆ ಮಾಡಿರುವ ವಿಷಯ ಚೆನ್ನಾಗಿದೆ. ಅದನ್ನು ಮನರಂಜನೆಯ ಜೊತೆಗೆ ಚೆನ್ನಾಗಿ ಹೇಳಿದ್ದಾರೆ. ಕೆಲವು ಸಣ್ಣ ಪುಟ್ಟ ಕೊರತೆಗಳ ನಡುವೆಯೂ, ಇದೊಂದು ಒಳ್ಳೆಯ ಸಿನಿಮಾವಾಗಿ ನಿಲುತ್ತದೆ. ವಿಭಿನ್ನ ರೀತಿಯ ಚಿತ್ರಗಳನ್ನು ಹಾಗೂ ಕ್ಲಾಸ್ ಸಿನಿಮಾ ಇಷ್ಟ ಪಡುವವರು ಆರಾಮಾಗಿ ಚಿತ್ರವನ್ನು ನೋಡಬಹುದಾಗಿದೆ.

  English summary
  Actress Haripriya Soojidara kannada movie review. The movie has full of emotions, class audience will enjoy the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X