»   » ಸ್ತ್ರೀಶಕ್ತಿಯ ಕನ್ನಡಿ 'ಮಾಮ್' ಶ್ರೀದೇವಿ

ಸ್ತ್ರೀಶಕ್ತಿಯ ಕನ್ನಡಿ 'ಮಾಮ್' ಶ್ರೀದೇವಿ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬಿಟೌನ್ ನಲ್ಲಿ ಕಳೆದ ಮೂರು-ನಾಲ್ಕು ತಿಂಗಳಿಂದ ಚಿತ್ರದ ಫಸ್ಟ್ ಲುಕ್ ಮತ್ತು ಟ್ರೈಲರ್ ನಿಂದಲೇ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದ್ದ ಚಿತ್ರವೆಂದರೆ 'ಮಾಮ್'. ಈ ಚಿತ್ರ ಇಂದು ತೆರೆಕಂಡಿದೆ.

  ಬಹುಭಾಷಾ ನಟಿ ಶ್ರೀದೇವಿ ರವರ 300 ನೇ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಅವರು ತಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮುದ್ದಿನ ಮಗಳ ರಕ್ಷಣೆಗೆ ಅಪಹಪಿಸುವ ತಾಯಿಯಾಗಿ, ತಮ್ಮ ಸಂಭಾಷಣೆಯಿಂದ ಪ್ರೇಕ್ಷಕರನ್ನು ಭಾವುಕತೆಯಲ್ಲಿ ಸಿಲುಕಿಸಿದ್ದಾರೆ. ಅತ್ಯಾಚಾರ ಎಂಬುದು ದೇಶದಲ್ಲಿ ಒಂದು ರೀತಿಯಲ್ಲಿ ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿರುವ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಗಳೊಬ್ಬಳ ತಾಯಿ ಹೇಗಿರಬೇಕು ಎಂಬುದನ್ನು 'ಮಾಮ್' ಚಿತ್ರದ ಮೂಲಕ ಶ್ರೀದೇವಿ ನಿರೂಪಿಸಿದ್ದಾರೆ. ಇಂತಹ ತಾಯಿಯಂದಿರು ದೇಶಕ್ಕೆ ಹೆಚ್ಚು ಬೇಕು ಎಂಬುದನ್ನು 'ಮಾಮ್' ಚಿತ್ರ ಸಾರಿದೆ. ಈ ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಮುಂದೆ ಓದಿರಿ.

  ಚಿತ್ರ: 'ಮಾಮ್'
  ನಿರ್ದೇಶಕ: ರವಿ ಉಡ್ಯಾವಾರ್
  ನಿರ್ಮಾಣ: ಬೋನೆ ಕಪೂರ್
  ಸಂಗೀತ: ಎ.ಆರ್.ರೆಹಮಾನ್
  ತಾರಾಗಣ: ಶ್ರೀದೇವಿ, ಅಕ್ಷಯ್ ಖನ್ನಾ, ಅದ್ನಾನ್ ಸಿದ್ಧಿಕಿ, ಸಜಲ್ ಆಲಿ, ನವಾಜುದ್ಧೀನ್ ಸಿದ್ಧಿಕಿ,
  ಬಿಡುಗಡೆ: ಜುಲೈ 7, 2017

  ಕಥಾಹಂದರ

  ಪ್ರೌಢಶಾಲೆಯಲ್ಲಿ ಓದುತ್ತಿರುವ ಆರ್ಯ ಎಂಬ ಬಾಲಕಿ ತನ್ನ ಕ್ಲಾಸ್‌ಮೆಟ್ ಮೋಹಿತ್ ಮತ್ತು ಆತನ ಸಹಚರರಿಂದ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ನಂತರ ಈ ಅಪರಾಧಿಗಳನ್ನು ಮುಗ್ಧರೆಂದು ನ್ಯಾಯಾಲಯ ತೀರ್ಪುನೀಡುತ್ತದೆ. ಆದರೆ ಈ ಅಪರಾಧಿಗಳಿಗೆ ಆರ್ಯಳ ಮಲತಾಯಿ ಹಾಗೂ ಶಿಕ್ಷಕಿ ಆಗಿರುವ ದೇವಕಿ(ಶ್ರೀದೇವಿ) ತಕ್ಕ ಪಾಠ ಕಲಿಸಲು ತನ್ನದೇ ಆದ ಮಾರ್ಗದಲ್ಲಿ ಮುಂದಾಗುತ್ತಾಳೆ. ಈ ಕೆಲಸ ಕಷ್ಟಸಾಧ್ಯವಾದ್ದರಿಂದ ದೇವಕಿಗೆ ಖಾಸಗಿ ತನಿಖೆದಾರರೊಬ್ಬರು ಸಹಾಯ ಮಾಡಲು ಮುಂದಾದಾಗ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯ ಪ್ರವೇಶಿಸುತ್ತಾರೆ. ನಂತರ ದೇವಕಿ ಈ ಅಪರಾಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾಳಾ? ಮುಂದೆ ಏನಾಗುತ್ತದೆ ಎಂಬುದೇ ಚಿತ್ರ.

  ಅತ್ಯಾಚಾರಿಗಳಿಗೆ ತಕ್ಕ ಪಾಠಕಲಿಸುವ 'ಮಾಮ್'

  ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿರುವ ಪ್ರಸ್ತುತ ಸಮಾಜದಲ್ಲಿ ಹೆಣ್ಣೊಬ್ಬಳು ಅಥವಾ ಹೆಣ್ಣು ಮಗಳೊಬ್ಬಳ ತಾಯಿಯೊಬ್ಬಳು ಹೇಗಿರಬೇಕು ಎಂಬುದನ್ನು 'ಮಾಮ್' ಚಿತ್ರದ ಮೂಲಕ ನಟಿ ಶ್ರೀದೇವಿ ಸಾಭಿತು ಪಡಿಸಿದ್ದಾರೆ. ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಬೇಡಿ, ಅತ್ಯಾಚಾರಕ್ಕೆ ಮುಂದಾಗಬೇಡಿ. ಒಂದು ವೇಳೆ ದುಷ್ಟರೇ ನೀವು ಆ ರೀತಿ ಮಾಡಿದ್ದೇ ಆದಲ್ಲಿ ಆಕೆಯ ತಾಯಿಯನ್ನು ಎದುರಿಸಲು ಸಿದ್ಧರಾಗಿರಿ ಎಂಬ ಖಡಕ್ ಎಚ್ಚರಿಕೆಯನ್ನು 'ಮಾಮ್' ಮುಖಾಂತರ ಹೇಳಲಾಗಿದೆ.

  ಶ್ರೀದೇವಿ ಅಭಿನಯ

  'ಮಾಮ್' ಚಿತ್ರದಲ್ಲಿನ ಅಭಿನಯದ ಮೂಲಕ ಶ್ರೀದೇವಿ ರವರು ಬಾಲಿವುಡ್ ನ ಎವರ್ ಗ್ರೀನ್ ಅತ್ಯುತ್ತಮ ನಟಿ ಎಂದು ಸಾಬೀತು ಪಡಿಸಿದ್ದಾರೆ. ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತಿಕೊಂಡು, ದೇವಕಿ ಪಾತ್ರವನ್ನು ಅವರು ಬಿಟ್ಟರೆ ಇತರೆ ಯಾರು ಸಹ ಮಾಡಲು ಸಾಧ್ಯವಿರಲಿಲ್ಲ ಎಂಬ ಫೀಲ್ ಆಗುತ್ತದೆ. ಅಲ್ಲದೇ ಬಿಟೌನ್ ನ ಎಲ್ಲಾ ಇತರೆ ನಟಿಯರಿಗೆ ಅವರ ಈ ಪಾತ್ರದಿಂದ ಮಾದರಿಯಾಗಲಿದ್ದಾರೆ.

  ಇತರರು

  ನವಾಜುದ್ಧೀನ್ ಸಿದ್ಧಿಕಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರೇಕ್ಷಕರನ್ನು ಹೆಚ್ಚು ಇಂಪ್ರೆಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಷಯ್ ಖನ್ನಾ ಕ್ರೈಮ್ ಬ್ರ್ಯಾಂಚ್ ಪೊಲೀಸ್ ಅಧಿಕಾರಿಯಾಗಿ ಗಮನಸೆಳೆಯುತ್ತಾರೆ. ಇನ್ನು ಪಾಕಿಸ್ತಾನದ ನಟ ಅದ್ನಾನ್ ಸಿದ್ಧಿಕಿ ಮತ್ತು ನಟಿ ಸಜಲ್ ಆಲಿ ಇದೇ ಮೊದಲ ಬಾರಿಗೆ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಿದ್ದು, ಅವರ ನಟನೆಗೆ ಫುಲ್ ಮಾರ್ಕ್ ನೀಡಬಹುದು.

  ನಿರ್ದೇಶನ

  ಚೊಚ್ಚಲ ನಿರ್ದೇಶಕ ರವಿ ಉಡ್ಯಾವಾರ್ ತಮ್ಮದೇ ಕಥೆಯ ಮೂಲಕ ಪ್ರಸ್ತುತ ಸಮಾಜಕ್ಕೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿಯಾಗುವ ಸ್ಟ್ರಾಂಗ್ ಮೆಸೇಜ್ ನೀಡುವ ಚಿತ್ರವನ್ನು ನೀಡಿದ್ದಾರೆ. ದೇಶದ ಪ್ರತಿಯೊಬ್ಬ ಮಹಿಳೆಗೂ ಈ ಚಿತ್ರ ಸಂಬಂಧಿಸಿದ್ದು, ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಲು ಸ್ಫೂರ್ತಿ ನೀಡುವಲ್ಲಿ ಸಂಶಯವಿಲ್ಲ. ನಿರ್ದೇಶಕರು ಚಿತ್ರವನ್ನು ಅಷ್ಟೇ ಭಾವನಾತ್ಮಕವಾಗಿ ಕಟ್ಟಿಕೊಟ್ಟಿದ್ದು ಯಶಸ್ವಿಯಾಗಿದ್ದಾರೆ.

  ಅನವಶ್ಯಕ ದೃಶ್ಯಗಳಿಂದ ದೂರ

  ಚಿತ್ರ ಸಂಪೂರ್ಣವಾಗಿ ಪ್ರೇಕ್ಷಕರನ್ನು ಹಿಡಿದಿಡುವ ಎಲ್ಲಾ ಎಲಿಮೆಂಟ್ಸ್‌ಗಳನ್ನು ಒಳಗೊಂಡಿದ್ದು, ಯಾವುದೇ ಅನವಶ್ಯಕ ದೃಶ್ಯಗಳು ಚಿತ್ರದಲ್ಲಿಲ್ಲ. ಆದರೆ ಸೆಕೆಂಡ್ ಹಾಫ್ ಬಹುಬೇಗ ಮುಗಿದುಹೋಗುವುದು ಕೊಂಚ ಬೇಸರ ತರಿಸಬಹುದು. ಕೆಲವು ಸೀನ್ ಗಳಲ್ಲಿ ಪ್ರೇಕ್ಷಕರು ಅಳುವುದು ಗ್ಯಾರಂಟಿ.

  ಸಂಗೀತ

  ಎ.ಆರ್.ರೆಹಮಾನ್ ಬ್ಯಾಗ್ರೌಂಡ್ ಮ್ಯೂಸಿಕ್ ಅತ್ಯುತ್ತಮ ಪರಿಣಾಮ ಬೀರಿದೆ. 'Chal Kahin Door ಮತ್ತು O Sona Tere Liye ಹಾಡುಗಳು ತುಂಬಾ ಇಷ್ಟವಾಗುತ್ತವೆ.

  ಫೈನಲ್ ಸ್ಟೇಟ್‌ಮೆಂಟ್

  ಚಿತ್ರದಿಂದ ಅತ್ಯಾಚಾರ ಒಂದು ಸಾಂಕ್ರಾಮಿಕ ರೋಗದಂತೆ ಹರಡಿರುವ ಪ್ರಸ್ತುತ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ದೇವಕಿಯಂತಹ (ಶ್ರೇದೇವಿ) ಅಮ್ಮ ಇರಬೇಕು ಎಂಬುದನ್ನು ಎಲ್ಲರೂ ಚಿಂತಿಸುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಗೂ ಧೈರ್ಯ ತುಂಬುವ ಅಂಶಗಳನ್ನು ಹೊಂದಿರುವ 'ಮಾಮ್' ಚಿತ್ರವನ್ನು ಈ ವೀಕೆಂಡ್ ಗೆ ಮಿಸ್ ಮಾಡದೇ ನೋಡಬಹುದು.

  English summary
  Bollywood Actress Sridevi Starrer Hindi Movie 'Mom' has hit the screens today(July 7th). This Movie review is here

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more