For Quick Alerts
  ALLOW NOTIFICATIONS  
  For Daily Alerts

  The Social Dilemma: ಸ್ಮಾರ್ಟ್‌ಫೋನ್ ಉಳ್ಳವರು ನೋಡಲೇಬೇಕಾದ ಡಾಕ್ಯುಮೆಂಟರಿ

  |

  ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡಿರುವ ಹೊಸ ಡಾಕ್ಯುಮೆಂಟರಿ 'ದಿ ಸೋಷಿಯಲ್ ಡಿಲೆಮಾ' ಬಹಳಷ್ಟು ಸದ್ದು ಮಾಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಯೊಂದಕ್ಕೆ ಈ ಡಾಕ್ಯುಮೆಂಟರಿ ಇನ್ನಷ್ಟು ದನಿ ನೀಡಿದೆ.

  Rating:
  3.5/5

  ಫೇಸ್‌ಬುಕ್, ಗೂಗಲ್, ಯೂಟ್ಯೂಬ್, ಟ್ವಿಟ್ಟರ್, ಫಿನ್‌ಟ್ರಸ್ಟ್ ಹೀಗೆ ಅನೇಕ ಸಾಮಾಜಿಕ ಜಾಲತಾಣಗಳು ತನ್ನ ಬಳಕೆದಾರರನ್ನು ಹೇಗೆ ಮೋಸ ಮಾಡುತ್ತಿವೆ, ಹೇಗೆ ತನ್ನ ಬಳಕೆದಾರರ ಮೇಲೆ ಪ್ರಭಾವ ಬೀರುತ್ತಿವೆ ಎಂಬುದನ್ನು ಪರಿಣಾಮಕಾರಿಯಾಗಿ ವಿವರಿಸುತ್ತದೆ ಈ ಡಾಕ್ಯುಮೆಂಟರಿ.

  ಒಂದೂವರೆ ಗಂಟೆ ಸುಮಾರು ಅವಧಿಯ ಈ ಡಾಕ್ಯುಮೆಂಟರಿಯಲ್ಲಿ ಗೂಗಲ್, ಟ್ವಿಟ್ಟರ್, ಫೇಸ್‌ಬುಕ್, ಪಿನ್‌ಟ್ರಸ್ಟ್, ಸ್ಯಾನ್‌ಚಾಟ್ ಇನ್ನೂ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮುಖ್ಯ ಹುದ್ದೆಯಲ್ಲಿದ್ದ ಮಾಜಿ ನೌಕರರೇ ತಮ್ಮ ಸಂಸ್ಥೆಗಳು ಹೇಗೆ ಕೆಲಸ ಮಾಡುತ್ತಿದ್ದವು ಎಂಬುದನ್ನು ವಿವರಿಸುತ್ತಾರೆ. ಅವರ ಪ್ರತಿ ಮಾಹಿತಿಯೂ ನೋಡುಗರನ್ನು ಗಾಬರಿಗೊಳಿಸುತ್ತದೆ.

  ಗಮನವೇ ಹರಿದಿರದಿದ್ದ ಹಲವು ಪ್ರಶ್ನೆಗಳಿಗೆ ಉತ್ತರ

  ಗಮನವೇ ಹರಿದಿರದಿದ್ದ ಹಲವು ಪ್ರಶ್ನೆಗಳಿಗೆ ಉತ್ತರ

  ವಾಟ್ಸ್‌ಆಪ್‌ನಲ್ಲಿ 'ಟೈಪಿಂಗ್' ಎಂದು ಏಕೆ ಬರುತ್ತದೆ, ಭಿನ್ನವಲ್ಲದ ಗೆಳೆಯರ ಪಟ್ಟಿಯನ್ನು ಹೊಂದಿರುವ ಇಬ್ಬರು ಫೇಸ್‌ಬುಕ್ ಖಾತೆದಾರರಿಗೆ ಫೇಸ್‌ಬುಕ್ ನೀಡುವ ಫೀಡ್ ಬೇರೆ ಏಕೆ ಇರುತ್ತದೆ. ಅದದೇ ಜನರನ್ನು ಫಾಲೋ ಮಾಡಿದ್ದರೂ ಸಹ ಟ್ವಿಟ್ಟರ್‌ ಪ್ರತಿಯೊಬ್ಬರಿಗೂ ಏಕೆ ಬೇರೆ-ಬೇರೆ ಫೀಡ್‌ಗಳನ್ನು ನೀಡುತ್ತದೆ. ವಿಡಿಯೋ ದ ಹಿಂದೆ ವಿಡಿಯೋ ಏಕೆ ಪ್ಲೇ ಆಗುತ್ತದೆ ಇನ್ನೂ ಹಲವಾರು ನಮ್ಮ ಗಮನವೇ ಹರಿದಿರದಿದ್ದ ವಿಷಯಗಳಿಗೆ ಡಾಕ್ಯುಮೆಂಟರಿಯಲ್ಲಿ ಉತ್ತರ ಸಿಗುತ್ತದೆ.

  ಸುಳ್ಳು ಸುದ್ದಿಗಳು ಫೇಸ್‌ಬುಕ್‌ನಲ್ಲಿ ಆರು ಪಟ್ಟು ಬೇಗ ಹರಡುತ್ತವೆ!

  ಸುಳ್ಳು ಸುದ್ದಿಗಳು ಫೇಸ್‌ಬುಕ್‌ನಲ್ಲಿ ಆರು ಪಟ್ಟು ಬೇಗ ಹರಡುತ್ತವೆ!

  ಡಾಕ್ಯುಮೆಂಟರಿಯಲ್ಲಿ ಹೇಳಿರುವಂತೆ ನಿಜವಾದ ಸುದ್ದಿಗಿಂತಲೂ ಸುಳ್ಳು ಸುದ್ದಿ ಫೇಸ್‌ಬುಕ್‌ನಲ್ಲಿ ಆರು ಪಟ್ಟು ವೇಗವಾಗಿ ಹರಡುತ್ತದೆಯಂತೆ. ಸುಳ್ಳು ಸುದ್ದಿ-ನಿಜವಾದ ಸುದ್ದಿಯನ್ನು ಫೇಸ್‌ಬುಕ್, ಗೂಗಲ್ ಗುರುತಿಸಬಲ್ಲದೆ. ಸುಳ್ಳು ಸುದ್ದಿಗಳು ಹೆಚ್ಚಾದರೆ ಆಗಬಹುದಾದ ಅನಾಹುತಗಳು, ಈಗಾಗಲೇ ಅನಾಹುತಗಳು ಇನ್ನೂ ಹಲವು ವಿಷಯಗಳ ಬಗ್ಗೆ ಡಾಕ್ಯುಮೆಂಟರಿಯಲ್ಲಿ ಚರ್ಚೆಯಿದೆ.

  'ವಿಶಲ್‌ಬ್ಲೋವರ್‌' ಗಳ ಸ್ವ ಅನುಭವ

  'ವಿಶಲ್‌ಬ್ಲೋವರ್‌' ಗಳ ಸ್ವ ಅನುಭವ

  ವ್ಯಕ್ತಿಗಳು ಕ್ಯಾಮೆರಾಮುಂದೆ ಕೂತು ಮಾತನಾಡುವುದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣದ ಅಪಾಯಗಳ ಬಗ್ಗೆ ವಿವಿಧೆಡೆಗಳಲ್ಲಿ ಸರ್ಕಾರಗಳನ್ನು ಎಚ್ಚರಿಸಲು ನಡೆದ ಪ್ರಯತ್ನಗಳು, ಸರ್ಕಾರಗಳು ಸ್ಪಂದಿಸಿರುವ ರೀತಿ. 'ವಿಶಲ್‌ಬ್ಲೋವರ್‌' ಗಳು ತಾವೇಕೆ ಇದರ ವಿರುದ್ಧ ಮಾತನಾಡುತ್ತಿದ್ದೇವೆ ಎಂಬುದನ್ನು ಸಹ ಕ್ಯಾಮೆರಾ ಮುಂದೆ ಹೇಳಿದ್ದಾರೆ. ತಮಗಾದ ಅನುಭವಗಳು, ಹೇಗೆ ತಾವೇ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಇಟ್ಟುಕೊಂಡು 'ಸಾಮೂಹಿಕ ಅಂಕುಶ' ಹಾಕಲು ಪ್ರಯತ್ನಿಸಲಾಗುತ್ತಿದೆ ಎಂಬುದನ್ನು ವರ್ಣಿಸಿದ್ದಾರೆ.

  ಕೃತಕ ಬುದ್ಧಿಮತ್ತೆಗೆ ನಮ್ಮನ್ನು ಒಪ್ಪಿಸಿಕೊಳ್ಳುತ್ತಿರುವ ರೀತಿ

  ಕೃತಕ ಬುದ್ಧಿಮತ್ತೆಗೆ ನಮ್ಮನ್ನು ಒಪ್ಪಿಸಿಕೊಳ್ಳುತ್ತಿರುವ ರೀತಿ

  ಸಾಮಾಜಿಕ ಜಾಲತಾಣಗಳ ಕಾರ್ಯವಿಧಾನ, ಕೃತಕ ಬುದ್ಧಿವಂತಿಕೆ (ಎಐ) ಕೈಗೆ ನಮ್ಮನ್ನು ನಾವು ಒಪ್ಪಿಸಿಕೊಳ್ಳುತ್ತಿರುವ ರೀತಿ. ಹೇಗೆ ಎಲ್ಲಾ ಸಾಮಾಜಿಕ ಜಾಲತಾಣಗಳು ನಿಧಾನಕ್ಕೆ ತಮ್ಮ ಗ್ರಾಹಕರನ್ನು ತಮ್ಮ ಅಡಿಯಾಳುಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಗ್ರಾಹಕರನ್ನೇ ಹೇಗೆ ಹಣ ಉಳ್ಳವರಿಗೆ ಮಾರಿಕೊಳ್ಳುತ್ತಿದ್ದಾರೆ. ಹೇಗೆ ನಮಗೇ ಗೊತ್ತಿಲ್ಲದೆ ನಮ್ಮ ತಲೆಯಲ್ಲಿ ನಿರ್ದಿಷ್ಟ ವಿಚಾರಗಳನ್ನು ತುಂಬುತ್ತಿದ್ದಾರೆ ಎಲ್ಲವನ್ನೂ ದಿ ಸೋಷಿಯಲ್ ಡಿಲೆಮಾ ಚರ್ಚಿಸುತ್ತದೆ.

  ಪ್ರಯತ್ನಕ್ಕೆ ನೆಟ್‌ಫ್ಲಿಕ್ಸ್‌ ಅಭಿನಂದನಾರ್ಹ

  ಪ್ರಯತ್ನಕ್ಕೆ ನೆಟ್‌ಫ್ಲಿಕ್ಸ್‌ ಅಭಿನಂದನಾರ್ಹ

  ಡಾಕ್ಯುಮೆಂಟರಿ ತೀರಾ ವಾಚ್ಯವಾಗದಂತೆ ಸಂಗೀತ, ಕ್ಯಾಮೆರಾ ಆಂಗಲ್‌ಗಳ ಬದಲಾವಣೆ ಜೊತೆಗೆ ವಿಷಯಕ್ಕೆ ಪೂರಕವಾಗಿ ಕತೆಯೊಂದನ್ನು ತೋರಿಸಲಾಗಿದೆ. ಎಲ್ಲೋ ಇರುವ 'ಎಐ' ಅಥವಾ ಕೆಲವು ಎಂಜಿನಿಯರ್‌ಗಳು ಇನ್ನೆಲ್ಲೋ ಇರುವ ವ್ಯಕ್ತಿಯ ಮೇಲೆ ಪ್ರಭಾವ ಬೀರುವುದನ್ನು ಚೆನ್ನಾಗಿಯೇ ಕಾಣಿಸಲಾಗಿದೆ. ಫೇಸ್‌ಬುಕ್‌, ಟ್ವಿಟ್ಟರ್‌ನಂತೆ ನೆಟ್‌ಫ್ಲಿಕ್ಸ್‌ ಸಹ ತನ್ನ ಗ್ರಾಹಕರೊಂದಿಗೆ 'ಆಟವಾಡುತ್ತದೆ'. ಆದರೆ ತಮ್ಮದೇ ಬಳಗದ ಕರಾಳ ಮುಖವನ್ನು ತೋರಿಸುವ ಪ್ರಯತ್ನವಾದರೂ ನೆಟ್‌ಫ್ಲಿಕ್ಸ್‌ ಮಾಡಿರುವುದಕ್ಕೆ ಅದು ಅಭಿನಂದನಾರ್ಹ.

  English summary
  Netflix recently released The Social Dilemma documentary which talks about mass manipulation of Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X