For Quick Alerts
  ALLOW NOTIFICATIONS  
  For Daily Alerts

  'ಅಲ ವೈಕುಂಠಪುರಂ ಲೋ' ಟ್ವಿಟ್ಟರ್ ವಿಮರ್ಶೆ: ಅಲ್ಲು ಅರ್ಜುನ್ ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು?

  |

  ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಅಲ ವೈಕುಂಠಪುರಂ ಲೋ' ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಇಮ್ಮಡಿಗೊಳಿಸಿದ್ದ ಸಿನಿಮಾ, ಇಂದು ಬೆಳಗ್ಗೆ ದೇಶದಾದ್ಯಂತ ತೆರೆಗೆ ಬಂದಿದೆ. ಅಲ್ಲು ಅರ್ಜುನ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ.

  ಅಲ್ಲು ಅರ್ಜುನ್ ಹೇರ್ ಸ್ಟೈಲ್ ಬಗ್ಗೆ ಕಾಲೆಳೆದ ನಟಿಅಲ್ಲು ಅರ್ಜುನ್ ಹೇರ್ ಸ್ಟೈಲ್ ಬಗ್ಗೆ ಕಾಲೆಳೆದ ನಟಿ

  ಅಲ್ಲು ಅರ್ಜುನ್ ಜೀವನದಲ್ಲಿ ಇವರಿಬ್ಬರು ತುಂಬಾ ಇಂಪಾರ್ಟೆಂಟ್

  'ಅಲ ವೈಕುಂಠಪುರಂ ಲೋ' ನಿರ್ದೇಶಕ ತ್ರಿವಿಕ್ರಮ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ನಿನ್ನ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ರಿಲೀಸ್ ಆದರೆ ಇಂದು ಅಲ್ಲು ಅರ್ಜುನ್ ಸಿನಿಮಾ ರಿಲೀಸ್ ಆಗಿದೆ. ತೆಲುಗು ಚಿತ್ರಾಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಮನರಂಜನೆ ಸಿಗುತ್ತಿದೆ. ಇಂದು ರಿಲೀಸ್ ಆದ ಅಲ್ಲು ಅರ್ಜುನ್ 'ಅಲ ವೈಕುಂಠಪುರಂ ಲೋ' ನೋಡಿ ಪ್ರೇಕ್ಷಕರು ಉತ್ತಮ ವಿಮರ್ಶೆ ನೀಡುತ್ತಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹಾಗಾದರೆ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ಹೇಳಿದ್ದೇನು? ಪ್ರೇಕ್ಷಕರ ಚಿಕ್ಕದಾದ ವಿಮರ್ಶೆ ಹೇಗಿದೆ? ಮುಂದೆ ಓದಿ..

  ಫ್ಯಾಮಿಲಿ ಎಂಟಟೈನರ್ ಸಿನಿಮಾ

  ಫ್ಯಾಮಿಲಿ ಎಂಟಟೈನರ್ ಸಿನಿಮಾ

  "ಇದು ಸಂಪೂರ್ಣ ಫ್ಯಾಮಿಲಿ ಎಂಟಟೈನರ್ ಸಿನಿಮಾ. ಮತ್ತೆ ನಿರ್ದೇಶಕ ತ್ರಿವಿಕ್ರಮ್ ತನ್ನ ಸಾಮರ್ಥ್ಯಕ್ಕೆ ಮರಳಿದ್ದಾರೆ. ಅಲ್ಲು ಅರ್ಜುನ್ ಕಾಮಿಡಿ, ಆಕ್ಷನ್, ಡ್ಯಾನ್ಸ್, ಅಭಿನಯ ಬೆಂಕಿ. ಎಂದಿನಂದೆ ತಮನ್ ಸಂಗೀತ 100 ಪರ್ಸೆಂಟ್ ರಾಕ್ಡ್. ನೋ ಲ್ಯಾಗ್ ನೋ ಬೇರಿಂಗ್. ಒಟ್ಟಾರೆಯಾಗಿ ಸುಂದರವಾದ ಸಿನಿಮಾ. ಅತ್ಯುತ್ತಮ ಫ್ಯಾಮಿಲಿ ಎಂಟಟೈನರ್ ಸಿನಿಮಾಗಳಲ್ಲಿ ಒಂದಾಗಿದೆ" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

  ಸಂಗೀತ ಚಿತ್ರದ ಶಕ್ತಿ

  ಸಂಗೀತ ಚಿತ್ರದ ಶಕ್ತಿ

  "ಉತ್ತವಾದ ಅನುಭವ ನೀಡುತ್ತೆ. ಅತ್ಯುತ್ತಮ ಎಂಟಟೈನರ್ ಸಿನಿಮಾ. ಸ್ಕ್ರೀನ್ ಪ್ಲೇ ಇಷ್ಟವಾಗಿಲ್ಲ. ಅದೂ ಬಿಟ್ಟರೆ ಸಿನಿಮಾ ಸಂತೋಷವಾಗಿ ಕೊನೆಗೊಳುತ್ತದೆ. ಮೋಡಿ ಮಾಡುವ ತಮನ್ ಸಂಗೀತ ಚಿತ್ರದ ಮೇಜರ್ ಶಕ್ತಿ. ಚಿತ್ರದಲ್ಲಿ ಅಲ್ಲು ಅರ್ಜುನ್ ಸಂಪೂರ್ಣವಾಗಿ ಬದಲಾಗಿದ್ದಾರೆ. ಎಲ್ಲಾ ರೀತಿಯಲ್ಲೂ ಉತ್ತಮವಾದ ಪ್ರದರ್ಶನ ನೀಡಿದ್ದಾರೆ"

  ರಣ್ವೀರ್ ಸಿಂಗ್ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್ರಣ್ವೀರ್ ಸಿಂಗ್ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್

  ಪ್ರತಿಯೊಬ್ಬರಿಗೂ ಭರ್ಜರಿ ಟ್ರೀಟ್

  ಪ್ರತಿಯೊಬ್ಬರಿಗೂ ಭರ್ಜರಿ ಟ್ರೀಟ್

  "ಅಲ್ಲು ಅರ್ಜುನ್ ಡ್ಯಾನ್ಸ್, ಕಾಮಿಡಿ ಸಮಯ ಮತ್ತು ಅಭಿನಯ ಪ್ರತಿಯೊಬ್ಬರಿಗೂ ಭರ್ಜರಿ ಟ್ರೀಟ್ ಆಗಿದೆ. ಚಿತ್ರದ ಬ್ಯಾಗ್ರೌಂಡ್ ಸಂಗೀತ ಮತ್ತು ಕ್ಯಾಮರಾ ಕೆಲಸ ಚಿತ್ರದ ಪ್ರಮುಖ ಹೈಲೆಟ್ಸ್, ಮೊದಲ ಅರ್ಧ ಡೀಸೆಂಟ್ ಆಗಿದೆ. ಎರಡನೆ ಭಾಗ ಅತ್ಯುತ್ತಮವಾಗಿದೆ. ಒಟ್ಟಾರೆಯಾಗಿ ನಿರ್ದೇಶಕ ತ್ರಿವಿಕ್ರಮ್ ಅವರ ಮಾರ್ಕ್ ಎಂಟಟೈನರ್" ಎಂದು ಚಿಕ್ಕದಾಗಿ ವಿಮರ್ಶೆ ಮಾಡಿದ್ದರೆ.

  ದಶಕದ ಬ್ಲಾಕ್ ಬಸ್ಟರ್ ಹಿಟ್

  ದಶಕದ ಬ್ಲಾಕ್ ಬಸ್ಟರ್ ಹಿಟ್

  "ದಶಕದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ. ಹಿಂದೆಂದೂ ಇಲ್ಲ ಮುಂದಿಯೂ ಇಂತಹ ಸಿನಿಮಾ ಬರಲ್ಲ. ಸಂಪೂರ್ಣ ಫ್ಯಾಮಿಲಿ ಎಂಟಟೈನರ್. ಹಾಡುಗಳ ಅದ್ಭುತವಾಗಿವೆ. ಒಂದೆ ಒಂದು ದೃಶ್ಯವು ಲಿಂಕ್ ತಪ್ಪಿದ ಹಾಗೆ ಅನಿಸುವುದಿಲ್ಲ. ಹಾಡುಗಳ ಪ್ಲೇಸ್ ಮೆಂಟ್ ಚೆನ್ನಾಗಿದೆ" ಎಂದು ಬರೆದುಕೊಂಡಿದ್ದಾರೆ.

  ಫಸ್ಟ್ ಮಹೇಶ್ ಬಾಬು, ನೆಕ್ಸ್ಟ್ ಅಲ್ಲು ಅರ್ಜುನ್: ಧೂಳೆಬ್ಬಿಸುತ್ತಿರುವ ತೆಲುಗು ನಟರು.!ಫಸ್ಟ್ ಮಹೇಶ್ ಬಾಬು, ನೆಕ್ಸ್ಟ್ ಅಲ್ಲು ಅರ್ಜುನ್: ಧೂಳೆಬ್ಬಿಸುತ್ತಿರುವ ತೆಲುಗು ನಟರು.!

  'ರೇಸ್ ಗುರಂ' ನಂತರ ಉತ್ತಮ ಸಿನಿಮಾ

  'ರೇಸ್ ಗುರಂ' ನಂತರ ಉತ್ತಮ ಸಿನಿಮಾ

  "ರೇಸ್ ಗುರಂ ನಂತರ ಅಲ್ಲು ಅರ್ಜುನ್ ಅಭಿನಯದ ಉತ್ತಮವಾದ ಸಿನಿಮಾ. ಸಂಪೂರ್ಣ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಅಭಿನಯ ಜೊತೆಗೆ ಹಾಸ್ಯವು ಹದವಾಗಿ ವಿಶ್ರಣವಾಗಿದೆ. ಅನಾವಶ್ಯಕ ಡೈಲಾಗ್ ಮತ್ತು ಹೀರೋಯಿಸಂ ಈ ಸಿನಿಮಾದಲ್ಲಿ ಇಲ್ಲ. ತಮನ್ ಸಂಗೀತ ಅದ್ಬುತವಾಗಿದೆ. ಬಿಜಿಎಂ ಮತ್ತು ಚಿತ್ರದ ಭಾವನಾತ್ಮಕ ದೃಶ್ಯಗಳು ಅದ್ಭುತವಾಗಿವೆ"

  English summary
  Tollywood actor Allu Arjun starrer ala vaikunta puram lo film twitter review. Ala Vaikunta puramlo film released to worldwide today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X