twitter
    For Quick Alerts
    ALLOW NOTIFICATIONS  
    For Daily Alerts

    'ವಿಕ್ಟರಿ 2' ವಿಮರ್ಶೆ: ಹಳೆ ಎಳೆ, ಹೊಸ ಬೆಳೆ

    |

    ದಿನ ಅದೇ ಕೆಲಸ, ಅದೇ ಸಂಸಾರ, ಅದೇ ಕಾಲೇಜು, ಅದೇ ಜೀವನ ಅಂತ ಬೇಜಾರಿನಲ್ಲಿ ಇರುವವರಿಗಾಗಿಯೇ ಮಾಡಿರುವ ಸಿನಿಮಾ 'ವಿಕ್ಟರಿ 2'. ಎರಡುವರೆ ಗಂಟೆ ನಾನ್ ಸ್ಟಾಪ್ ಆಗಿ ನಗಬೇಕು ಎನ್ನುವವರು 'ವಿಕ್ಟರಿ 2' ಚಿತ್ರವನ್ನು ನೋಡಬಹುದು.

    Rating:
    3.5/5

    ಸಿನಿಮಾ : ವಿಕ್ಟರಿ 2

    ಕಥೆ : ತರುಣ್ ಸುಧೀರ್

    ನಿರ್ದೇಶನ : ಹರಿ ಸಂತೋಷ್

    ಸಂಗೀತ : ಅರ್ಜುನ್ ಜನ್ಯ

    ತಾರಾಗಣ : ಶರಣ್, ಅಪೂರ್ವ, ಅಶ್ಮೀತಾ ಸೂದ್, ರವಿಶಂಕರ್, ಸಾಧು ಕೋಕಿಲ, ಕಲ್ಯಾಣಿ, ತಬಲ ನಾಣಿ

    ಬಿಡುಗಡೆಯ ದಿನಾಂಕ : ನವೆಂಬರ್ 1

    ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು

    ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು

    ಚಂದ್ರು, ಮುನ್ನ, ಸಲೀಮ್, ರಿಚ್ಚಿ ಸಿನಿಮಾದ ಪ್ರಮುಖ ಪಾತ್ರಗಳು. ಈ ನಾಲ್ಕು ಪಾತ್ರಗಳನ್ನು ಮಾಡಿರುವುದು ಶರಣ್. 'ವಿಕ್ಟರಿ' ಚಿತ್ರದಲ್ಲಿ ಚಂದ್ರು ಹಾಗೂ ಮುನ್ನ ಈ ಇಬ್ಬರನ್ನ ನೋಡಿದ್ದ ಪ್ರೇಕ್ಷಕರಿಗೆ ಇಲ್ಲಿ ಇನ್ನೂ ಇಬ್ಬರ ಪರಿಚಯ ಆಗುತ್ತದೆ. ಈ ನಾಲ್ಕು ಜನರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮಜಾ ನೀಡುತ್ತಾರೆ.

    ಕುತೂಹಲಕಾರಿ ಅಂಶ

    ಕುತೂಹಲಕಾರಿ ಅಂಶ

    ಸಿನಿಮಾದಲ್ಲಿ ಕುತೂಹಲಕಾರಿ ಅಂಶ ಅಂದರೆ ಈ ನಾಲ್ಕು ಪಾತ್ರಗಳ ನಡುವಿನ ಸಂಬಂಧ. ಸಂಸಾರಿ ಚಂದ್ರು, ಕಳ್ಳ ಮುನ್ನ, ಡಾನ್ ಸಲೀಮ್ ಈ ಮೂರು ಪಾತ್ರಗಳ ನಡುವಿನ ಜೂಟಾಟ ಚಿತ್ರದ ಕಥೆಯಾಗಿದೆ. ಕೊನೆಗೆ ಬರುವ ರಿಚ್ಚಿ ಪಾತ್ರ ಏನು ಎಂಬದನ್ನು ಸಿನಿಮಾದಲ್ಲಿಯೇ ನೋಡಬೇಕು.

    ವಿಮರ್ಶೆ: 'ಅಮ್ಮಚ್ಚಿ'ಯ ನೆನಪು ಮನರಂಜನೆಯ ಸರಕಲ್ಲ, ಇದೊಂದು ಭಾವನೆ ವಿಮರ್ಶೆ: 'ಅಮ್ಮಚ್ಚಿ'ಯ ನೆನಪು ಮನರಂಜನೆಯ ಸರಕಲ್ಲ, ಇದೊಂದು ಭಾವನೆ

    ಹಳೆ ಎಳೆ, ಹೊಸ ಬೆಳೆ

    ಹಳೆ ಎಳೆ, ಹೊಸ ಬೆಳೆ

    'ವಿಕ್ಟರಿ 2' ಸಿನಿಮಾಗೆ ಬರುವವರು 'ವಿಕ್ಟರಿ' ಚಿತ್ರವನ್ನು ತಲೆಯಲ್ಲಿ ಇಟ್ಟುಕೊಂಡು ಬಂದಿರುತ್ತಾರೆ. ಅಂತಹ ಪ್ರೇಕ್ಷಕರಿಗೆ ಸಿನಿಮಾ ಟೈಟಲ್ ಕಾರ್ಡ್ ನಲ್ಲಿಯೇ ಹತ್ತಿರ ಆಗುತ್ತದೆ. ಹಳೆ ಏಳೆಯನ್ನು ಇಟ್ಟುಕೊಂಡು ಹೊಸ ಬೆಳೆಯನ್ನು ನಿರ್ದೇಶಕರು ಬೆಳೆದಿದ್ದಾರೆ.

    ಶರಣ್ ನಟನೆಗೆ ಪೂರ್ಣ ಅಂಕ

    ಶರಣ್ ನಟನೆಗೆ ಪೂರ್ಣ ಅಂಕ

    ಇಡೀ ಸಿನಿಮಾದ ಶಕ್ತಿ ಶರಣ್ ಅವರ ನಟನೆ. ಶರಣ್ ಕಾಮಿಡಿ ಮಾಡುವುದರಲ್ಲಿ ಎತ್ತಿದ ಕೈ ಅಂತ ಎಲ್ಲರಿಗೂ ತಿಳಿದಿದೆ. ಅದನ್ನು ಅವರು ಇಲ್ಲಿಯೂ ತುಂಬ ಚೆನ್ನಾಗಿ ನಿಭಾಯಿಸಿದ್ದಾರೆ. ಮೊದಲ ದೃಶ್ಯದಿಂದ ಹಿಡಿದು ಕೊನೆಯ ದೃಶ್ಯದವರೆಗೆ ಇಲ್ಲಿ ಇರುವುದು ಬರೀ ನಗು ನಗು ನಗು.

    'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು! 'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!

    ಉಳಿದ ಪಾತ್ರಗಳು

    ಉಳಿದ ಪಾತ್ರಗಳು

    ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಶ್ಮೀತಾ, ಅಪೂರ್ವ ತಮ್ಮ ಪಾತ್ರಗಳಿಗೆ ತಕ್ಕನಾಗಿ ನಟಿಸಿದ್ದಾರೆ. ಹಾಡುಗಳಲ್ಲಿ ಅವರಿಂದ ಗ್ಲಾಮರ್ ತುಂಬಿದೆ. ರವಿಶಂಕರ್ ಹೆಚ್ಚು ಹೆಣ್ಣು ವೇಷದಲ್ಲಿಯೇ ಇರುತ್ತಾರೆ. ಸಾಧುಗೌಡ ಆಗಿ ಸಾಧು ಕೋಕಿಲ ನಗಿಸುತ್ತಾರೆ. ತಬಲ ನಾಣಿ, ಅವಿನಾಶ್, ಕಲ್ಯಾಣಿ ಅನುಭವ ಸಿನಿಮಾಗೆ ಸಹಾಯವಾಗಿದೆ.

    ಕಥೆ, ಚಿತ್ರಕತೆ ನಿರ್ದೇಶನ

    ಕಥೆ, ಚಿತ್ರಕತೆ ನಿರ್ದೇಶನ

    ಅರ್ಜುನ್ ಜನ್ಯ ಸಂಗೀತದ ಹಾಡುಗಳು ಓಕೆ ಓಕೆ. ಎರಡು ಹಾಡುಗಳು ಪದೇ ಪದೇ ಹೇಳಬೇಕು ಅನಿಸುತ್ತದೆ. ಹೆಚ್ಚು ಶ್ರೀಮಂತಿಕೆ ಇಲ್ಲದೆ, ಸುಂದರವಾಗಿ ಸಿನಿಮಾವನ್ನು ನಿರ್ದೇಶಕ ಹರಿ ಸಂತೋಷ್ ಕಟ್ಟಿಕೊಟ್ಟಿದ್ದಾರೆ. ತರುಣ್ ಸುಧೀರ್ ಕಥೆಯನ್ನು ಸಂತು ಮಜಾವಾಗಿ ಹೇಳಿದ್ದಾರೆ.

    ನಕ್ಕು ಬರಬಹುದು

    ನಕ್ಕು ಬರಬಹುದು

    ಒಂದು ಸಿನಿಮಾ ಇರುವುದು ಮನರಂಜನೆಗಾಗಿ ಎಂದು ನಂಬಿದವರು ಈ ಸಿನಿಮಾ ನೋಡಬಹುದು. ಯಾವುದೇ ಲೆಕ್ಕಾಚಾರ ಇಲ್ಲದೆ ಸಿನಿಮಾ ನೋಡಿದರೆ ಪರದೆ ಮೇಲೆ ಬರುವ ಪ್ರತಿ ದೃಶ್ಯಕ್ಕೂ ನಗಬಹುದು.

    English summary
    Actor Sharan's 'Victory 2' kannada movie review.
    Friday, November 2, 2018, 8:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X