»   » 'ಯೋಗಿ ದುನಿಯಾ' ನೋಡಿ ಬಂದ ವಿಮರ್ಶಕರ ಮಾತು ಕೇಳಿ

'ಯೋಗಿ ದುನಿಯಾ' ನೋಡಿ ಬಂದ ವಿಮರ್ಶಕರ ಮಾತು ಕೇಳಿ

By Naveen
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನಿನ್ನೆ ರಿಲೀಸ್ ಆದ ಲೂಸ್ ಮಾದ ಯೋಗಿಶ್ ಅಭಿನಯದ 'ಯೋಗಿ ದುನಿಯಾ' ಸಿನಿಮಾ ನೋಡಿ ಜನ ಇಷ್ಟ ಪಟ್ಟಿದ್ದಾರೆ. ಜೂಜು, ಕುಡಿತ, ರೇಸ್, ಡೈಸ್, ಇಸ್ಪಿಟ್, ಬೆಟ್ಟಿಂಗ್ ಹೀಗೆ ಒಂದಲ್ಲ ಒಂದು ಚಟವನ್ನು ಮೈತುಂಬಿಕೊಂಡಿರುವ ವ್ಯಕ್ತಿಯನ್ನು ಅದೇ ಚಟ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವುದನ್ನು ಸಿನಿಮಾದ ಮೂಲಕ ಚೆನ್ನಾಗಿ ತೋರಿಸಿದ್ದಾರೆ. ''ಮನುಷ್ಯನಿಗೆ ಒಂದು ಚಟ ಇದ್ದರೆ ಅದು ಅವನನ್ನು ಚಟ್ಟಕ್ಕೆ ಕರೆದುಕೊಂಡು ಹೋಗುತ್ತದೆ'' ಎನ್ನುವುದು 'ಯೋಗಿ ದುನಿಯಾ' ಸಿನಿಮಾದ ಒನ್ ಲೈನ್ ಸಂದೇಶವಾಗಿದೆ.

  ಇನ್ನು ವಿಮರ್ಶಕರು ಸಹ ಯೋಗಿ ದುನಿಯಾ ನೋಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ''ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ಹೊರಬರುವುದು ಸುಲಭವಲ್ಲ ಎಂಬ ಸಂದೇಶ ಸಾರುವ 'ಯೋಗಿ ದುನಿಯಾ' ಚಿತ್ರ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಾಳಮುಖವನ್ನು ಅನಾವರಣಗೊಳಿಸುತ್ತದೆ.'' ಎಂದು ಸಿನಿಮಾದ ಬಗ್ಗೆ ವಿಮರ್ಶಕರು ಹೇಳಿದ್ದಾರೆ.

  ವಿಮರ್ಶೆ : ಮೆಜೆಸ್ಟಿಕ್ ಎನ್ನುವ ಪಾಪಿ ದುನಿಯಾದಲ್ಲಿ ಪ್ರೀತಿ ಹುಡುಕುವ ವೇಶ್ಯೆ

  ಅಂದಹಾಗೆ, ಕನ್ನಡದ ಜನಪ್ರಿಯ ದಿನ ಪತ್ರಿಕೆಗಳಲ್ಲಿ ಬಂದ ಯೋಗಿ ದುನಿಯಾ ಸಿನಿಮಾ ವಿಮರ್ಶೆ ಮುಂದಿದೆ ಓದಿ..

  ದುನಿಯಾದೊಳಗಿದೆ ಹಸಿ ಹಸಿ ಕನಸು: ವಿಜಯ ಕರ್ನಾಟಕ

  ''ಸ್ಯಾಂಡಲ್ ವುಡ್‌ನ ನಿರ್ದೇಶಕರು ಈಗಾಗಲೇ ರಾಜಧಾನಿಯ ಗಲ್ಲಿ ಗಲ್ಲಿಗಳಲ್ಲಿಯೂ ಕ್ಯಾಮೆರಾ ಇಟ್ಟಿದ್ದಾರೆ. ಆದರೆ, ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್‌ ಎಂಬ ಮಾಯಾಲೋಕದ ಒಳಸುಳಿಯನ್ನು ಅಷ್ಟೊಂದು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿರಲಿಲ್ಲ. ಈಗ ‘ಯೋಗಿ ದುನಿಯಾ' ಮೂಲಕ ಆ ಕೆಲಸವನ್ನೂ ಮಾಡಿದ್ದಾರೆ ನಿರ್ದೇಶಕ ಹರಿ. ದಿನದ 24 ಗಂಟೆಯೂ ಎಚ್ಚರವಿರುವ ಮೆಜೆಸ್ಟಿಕ್‌ನ ಮತ್ತೊಂದು ಮುಖವನ್ನು ಈ ಸಿನಿಮಾದಲ್ಲಿ ತೆರೆದಿಟ್ಟಿದ್ದಾರೆ. ಈ ಕಾರಣದಿಂದಾಗಿ ಈ ಚಿತ್ರ ಗಮನ ಸೆಳೆಯುತ್ತದೆ. ಗಾಂಧಿನಗರದ ಮಡಿಲಿನಲ್ಲಿ ಹಾಯಾಗಿರುವ ಮೆಜೆಸ್ಟಿಕ್‌ನ ರಾತ್ರಿಗಳು ಕೆಲವರಿಗೆ ಕಲರ್‌ಫುಲ್‌, ಇನ್ನೂ ಕೆಲವರಿಗೆ ಕರಾಳ. ಇವೆರಡೂ ಸಿನಿಮಾದ ಕಥಾವಸ್ತು. ಆತ ಕಥಾನಾಯಕ (ಯೋಗೀಶ್ ) ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವಂಥವನು. ಜತೆಗೆ ದಿಕ್ಕು ದೆಸೆಯಿಲ್ಲದವನು. ಮೆಜೆಸ್ಟಿಕ್‌ ಇವನ ಮನೆ. ನಾಯಕಿ ಶೀಲಾ (ಹಿತಾ ಚಂದ್ರಶೇಖರ್‌) ವೇಶ್ಯೆ. ಗಿರಾಕಿಗಾಗಿ ಈಕೆಯೂ ಮಜೆಸ್ಟಿಕ್‌ ಪ್ರದೇಶವನ್ನೇ ನಂಬಿಕೊಂಡಿರುತ್ತಾಳೆ. ಮೊದಲ ನೋಟದಲ್ಲಿಯೇ ನಾಯಕನಿಗೆ ಅವಳ ಮೇಲೆ ಲವ್‌ ಆಗುತ್ತದೆ. ಇಬ್ಬರೂ ಒಟ್ಟಿಗೆ ಬಾಳಲು ನಿರ್ಧರಿಸುತ್ತಾರೆ. ಆದರೆ, ಪರಿಸ್ಥಿತಿಗಳು ಅವರ ಕನಸುಗಳಿಗೆ ಸ್ಪಂದಿಸುವುದಿಲ್ಲ. ಅನೇಕ ಅಡೆತಡೆಗಳನ್ನು ಈ ಜೋಡಿ ಎದುರಿಸಬೇಕಾಗುತ್ತದೆ. ಅವುಗಳನ್ನು ಗೆಲ್ಲುತ್ತಾರಾ? ಸೋಲುತ್ತಾರಾ? ಎನ್ನುವುದೇ ಕ್ಲೈಮ್ಯಾಕ್ಸ್'' - ಶರಣು ಹುಲ್ಲೂರು

  ಬೆಟ್ಟಿಂಗ್ ವಿಷವರ್ತುಲದ 'ದುನಿಯಾ' - ಪ್ರಜಾವಾಣಿ

  ''ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ಹೊರಬರುವುದು ಸುಲಭವಲ್ಲ ಎಂಬ ಸಂದೇಶ ಸಾರುವ 'ಯೋಗಿ ದುನಿಯಾ' ಚಿತ್ರ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಾಳಮುಖವನ್ನು ಅನಾವರಣಗೊಳಿಸುತ್ತದೆ. ಈ ಸಿನಿಮಾದ ಪ್ರಥಮಾರ್ಧದಲ್ಲಿ ಬರೀ ಕುಡಿತ, ನಶೆ, ಅಕ್ರಮ ದಂಧೆಗಳ ಚಿತ್ರಣವೇ ವೈಭವೀಕರಿಸಲ್ಪಟ್ಟಿದೆ. ಆರಂಭದಲ್ಲಿ ಯಾವುದೇ ಜವಾಬ್ದಾರಿಯಿಲ್ಲದೆ ಮಾದಕ ವ್ಯಸನಗಳಿಗೆ ದಾಸನಾಗಿರುವ ನಾಯಕ, ಮುಂದೆ ತ್ಯಾಗಮಯಿ ಪ್ರೇಮಿಯಾಗಿ ಮನ ಗೆಲ್ಲುತ್ತಾನೆ. ಸಾಮಾಜಿಕ ಸಮಸ್ಯೆಯನ್ನು ಇಟ್ಟುಕೊಂಡು ಸಿನಿಮಾದ ಕಥೆ ಹೆಣೆದಿದ್ದರೂ ಅದನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವಂತೆ ನಿರೂಪಿಸುವಲ್ಲಿ ನಿರ್ದೇಶಕರು ಸೋತಿದ್ದಾರೆ ಎನ್ನಬಹುದು. ಬೆಂಗಳೂರಿನ ಮೆಜೆಸ್ಟಿಕ್ ರಾತ್ರಿ ಹೊತ್ತು ಹೇಗಿರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಸುಂದರವಾಗಿ ಚಿತ್ರೀಕರಿಸಲಾಗಿದೆ. ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಕ್ರೌರ್ಯದ ಜೊತೆ ನವಿರಾದ ಪ್ರೇಮ ಕಥೆಯನ್ನು ಕಟ್ಟಿಕೊಡಲು ಯತ್ನಿಸಿದ್ದಾರೆ.'' - ನವೀನ್ ಕುಮಾರ್.ಜಿ

  ಯೋಗಿ ದುನಿಯಾ ವಿಮರ್ಶೆ : ಟೈಮ್ಸ್ ಆಫ್ ಇಂಡಿಯಾ

  Yogi is the perfect example of one of the many youngsters who live aimlessly from one day to the next, with the only hope of getting enough food and alcohol to see him through the next 24 hours. He's living a life that is dangerously close to the world of gambling and betting that seems to be calling out to him all the time. Sheela (Hitha Chandrashekar), who at first sight, comes across as the perfect girl next door, lives a life that's far more complicated that what you see. What happens when the two cross paths?

  Debutant director Hari has spun a story that depicts the dirt that scars many unfortunate people - those who can't get rid of their addiction to gamble and, therefore, also subjects those close to them to the many issues that crop up due to their habits; and those women who live their wretched lives with no hope of leading a normal life in society. Not all is morose, though. The script includes its share of situational comedy that are sure to keep you chuckling even during some of the most emotionally heavy scenes. While it does get a bit preachy at times, the dialogues are definitely a USP.

  ಮೆಜೆಸ್ಟಿಕ್ ಎನ್ನುವ ಪಾಪಿ ದುನಿಯಾದಲ್ಲಿ ಪ್ರೀತಿ ಹುಡುಕುವ ವೇಶ್ಯೆ - ಫಿಲ್ಮಿಬೀಟ್ ಕನ್ನಡ

  ಯೋಗಿ ದುನಿಯಾ' ಒಂದು ಉತ್ತಮ ಸಂದೇಶದ ಸಿನಿಮಾ. ಒಂದು ಒಳ್ಳೆಯ ವಿಷಯ ಇಟ್ಟುಕೊಂಡು ಅದನ್ನು ಜನರಿಗೆ ಅರ್ಥವಾಗುವ ಶೈಲಿಯಲ್ಲಿ ಸಿನಿಮಾದಲ್ಲಿ ಹೇಳಿಲಾಗಿದೆ. ಹೇಳಿರುವ ವಿಷಯ ತುಂಬ ಚೆನ್ನಾಗಿದ್ದರೂ ಸಿನಿಮಾ ಯಾಕೋ ಸ್ವಲ್ಪ ಬೋರ್ ಎನಿಸುತ್ತದೆ. ಇದೊಂದು ಅರ್ಥಹೀನ ಕಮರ್ಶಿಯಲ್ ಸಿನಿಮಾ ಅಲ್ಲ. ಈ ದುನಿಯಾದಲ್ಲಿ ಒಂದು ಕಡೆ, ಒಬ್ಬ ವೇಶ್ಯೆಯನ್ನು ಪ್ರೀತಿಸುವ ಒಳ್ಳೆಯ ಮನಸಿನ ಹುಡುಗ ಇದ್ದಾನೆ. ಜೂಜು ಆಡಲು ಹೆಂಡತಿಯ ತಾಳಿ ಮಾರುವವನು ಇದ್ದಾನೆ. ಸ್ವಲ್ಪ ಸುಧಾರಿಸಿಕೊಂಡು ನೋಡಿದರೆ ಚಿತ್ರದ ಕೊನೆಯಲ್ಲಿ ಒಂದು ಒಳ್ಳೆಯ ಸಂದೇಶ ಸಿಗುತ್ತದೆ.

  ಒಬ್ಬ ವೇಶ್ಯೆಯ ಜೀವನ, ಜೂಜು ಆಡುವ ಹುಡುಗರ ಕೊನೆಯ ಪರಿಸ್ಥಿತಿ, ಚಟಕ್ಕೆ ಬಿದ್ದ ವ್ಯಕ್ತಿಯಿಂದ ಆತನ ಕುಟುಂಬದವರು ಅನುಭವಿಸುವ ನೋವು, ಮೋಸದ ಪ್ರೀತಿ, ಹಣಕ್ಕಾಗಿ ದಂದೆ ನಡೆಸುವ ವ್ಯಕ್ತಿ, ಚಟ ಇದ್ದರೆ ಚಟ್ಟ ಏರಬೇಕಾಗುತ್ತದೆ ಸೇರಿದಂತೆ ಅನೇಕ ಉತ್ತಮ ಸಂದೇಶಗಳನ್ನು ಸಿನಿಮಾದ ತುಂಬ ಹೇಳಲಾಗಿದೆ. ಚಿತ್ರದ ಘನತೆಯನ್ನು ಈ ಅಂಶಗಳು ಹೆಚ್ಚಿಸಿವೆ.

  English summary
  Actor 'Loose Mada Yogesh's 'Yogi Duniya' has hit the screens on march 23rd. The movie is out and out mass entertainer. 'Yogi Duniya' movie critics review is here.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more