For Quick Alerts
  ALLOW NOTIFICATIONS  
  For Daily Alerts

  ಕಾಂತಾರ ವೀಕ್ಷಿಸಿದ ವಿನಯ್, ಯುವ & ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?

  |

  ಕಾಂತಾರ ನಿನ್ನೆ ( ಸೆಪ್ಟೆಂಬರ್ 29 ) ರಾತ್ರಿಯಿಂದ ಸತತವಾಗಿ ಪದೇ ಪದೇ ಕೇಳಿ ಬರುತ್ತಿರುವ ಚಿತ್ರದ ಹೆಸರು. ಇಂದು ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿರುವ ಕಾಂತಾರ ಚಿತ್ರದ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ನಿನ್ನೆ ರಾಜ್ಯದ ಹಾಗೂ ಹೊರ ರಾಜ್ಯಗಳ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಆಯೋಜನೆ ಮಾಡಲಾಗಿತ್ತು. ಪ್ರೀಮಿಯರ್ ಶೋಗಳು ಮುಗಿಯುತ್ತಿದ್ದಂತೆ ಎಲ್ಲಾ ಕಡೆಯಿಂದ ಬಂದದ್ದು ಒಂದೇ ವಿಮರ್ಶೆ. ಅದುವೇ ಕಾಂತಾರ 'ಮಾಸ್ಟರ್‌ ಪೀಸ್' ಎಂಬುದು.

  ಹೀಗೆ ಪ್ರೀಮಿಯರ್ ಶೋನ ವಿಮರ್ಶೆ ಹೊರಬೀಳುತ್ತಿದ್ದಂತೆ ಸಿನಿ ಪ್ರೇಮಿಗಳು ನಾವು ಯಾವಾಗ ಕಾಂತಾರ ನೋಡುತ್ತಿವೋ ಎಂದು ತಮ್ಮ ಹತ್ತಿರದ ಚಿತ್ರಮಂದಿರಗಳ ಟಿಕೆಟ್ ಬುಕ್ ಮಾಡಲು ಆರಂಭಿಸಿದರು. ಇನ್ನು ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಲು ನಟಿ ರಮ್ಯಾ, ರಕ್ಷಿತ್ ಶೆಟ್ಟಿ, ಸಂತೋಷ್ ಆನಂದ್ ರಾಮ್, ವಿನಯ್ ರಾಜ್ ಕುಮಾರ್, ಸಿಂಪಲ್ ಸುನಿ, ಯುವರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಆಗಮಿಸಿದ್ದರು.

  ಅಪ್ಪು ನಿಧನದ ನಂತರ ಹೆಚ್ಚಾಗಿ ಚಿತ್ರಮಂದಿರಗಳಿಗೆ ಬಾರದೆ ಇದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾಂತಾರ ಚಿತ್ರ ವೀಕ್ಷಿಸಲು ವಿನಯ್ ಹಾಗೂ ಯುವ ರಾಜ್ ಕುಮಾರ್ ಜತೆ ಆಗಮಿಸಿದ್ದರು. ಹೀಗೆ ತಮ್ಮ ಕುಟುಂಬಕ್ಕೆ ಆಪ್ತ ಗೆಳೆಯರಾಗಿರುವ ವಿಜಯ್ ಕಿರಗಂದೂರು ಅವರ ನಿರ್ಮಾಣದ ಕಾಂತಾರ ಚಿತ್ರವನ್ನು ವೀಕ್ಷಿಸಿದ ನಂತರ ದೊಡ್ಮನೆ ಮೊಮ್ಮಕ್ಕಳು ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಚಿತ್ರದ ವಿಮರ್ಶೆಗಳನ್ನು ಹಂಚಿಕೊಳ್ಳುವುದರ ಮೂಲಕ ಕಾಂತಾರ ಚಿತ್ರವನ್ನು ಬೆಂಬಲಿಸಿದ್ದಾರೆ.

  ಏನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ ಎಂದ ವಿನಯ್

  ಏನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ ಎಂದ ವಿನಯ್

  ಕಾಂತಾರ ಚಿತ್ರವನ್ನು ಚಿತ್ರತಂಡದ ಜತೆ ಪ್ರೀಮಿಯರ್ ಶೋನಲ್ಲಿ ವೀಕ್ಷಿಸಿದ ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ ಚಿತ್ರದ ಕಥೆಗೆ ಮನಸೋತಿದ್ದಾರೆ. ಚಿತ್ರದ ಗುಂಗಿನಲ್ಲೇ ಇದ್ದ ಅವರು ಚಿತ್ರದ ಬಗ್ಗೆ ಏನು ಹೇಳಬೇಕು ಅಂತಾನೆ ಗೊತ್ತಾಗ್ತಿಲ್ಲ ಚಿತ್ರ ಮಾತ್ರ ಸಿಂಪ್ಲಿ ಅಮೇಸಿಂಗ್ ಎಂದು ಕೊಂಡಾಡಿದರು.

  ನ್ಯೂನತೆಯೇ ಇಲ್ಲದ ಚಿತ್ರವೆಂದ ಅಶ್ವಿನಿ ಪುನೀತ್

  ನ್ಯೂನತೆಯೇ ಇಲ್ಲದ ಚಿತ್ರವೆಂದ ಅಶ್ವಿನಿ ಪುನೀತ್

  ಕಾಂತಾರ ಚಿತ್ರವನ್ನು ವೀಕ್ಷಿಸಿದ ನಂತರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಪುನೀತ್ ಪತ್ನಿ ಅಶ್ವಿನಿ ಹೊಂಬಾಳೆ ಫಿಲ್ಮ್ಸ್ ಮತ್ತೊಮ್ಮೆ ಗೆದ್ದಿದೆ ಎಂದಿದ್ದಾರೆ. ರಿಶಬ್ ಶೆಟ್ಟಿ ನಟನೆಯನ್ನು ಹೊಗಳಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಉಳಿದ ಪಾತ್ರಧಾರಿಗಳನ್ನು ಸಹ ಮೆಚ್ಚಿಕೊಂಡಿದ್ದಾರೆ. ಚಿತ್ರದ ಛಾಯಾಗ್ರಹಣ ಮತ್ತು ಸಂಗೀತವನ್ನು ಕೊಂಡಾಡಿದ ಅಶ್ವಿನಿ ಚಿತ್ರದಲ್ಲಿ ನ್ಯೂನ್ಯತೆಗಳೇ ಇಲ್ಲ ಎಂದಿದ್ದಾರೆ ಹಾಗೂ ಇಡೀ ಚಿತ್ರತಂಡಕ್ಕೆ ವಂದನೆ ಎಂದು ಅಭಿನಂದಿಸಿದ್ದಾರೆ.

  ಚಿತ್ರಮಂದಿರದಲ್ಲೇ ನೋಡಬೇಕು!

  ಚಿತ್ರಮಂದಿರದಲ್ಲೇ ನೋಡಬೇಕು!

  ರಿಷಬ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಹೊಸ ಅನುಭವವನ್ನು ನೀಡುತ್ತದೆ. ಚಿತ್ರವನ್ನು ತಪ್ಪದೆ ಚಿತ್ರಮಂದಿರಗಳಲ್ಲಿಯೇ ವೀಕ್ಷಿಸಿ. ಇಡೀ ಚಿತ್ರತಂಡ ಅತ್ಯದ್ಭುತ ಕೆಲಸ ನಿರ್ವಹಿಸಿದೆ ಎಂದು ಟ್ವೀಟ್ ಮಾಡುವ ಮೂಲಕ ಯುವ ರಾಜ್ ಕುಮಾರ್ ಕಾಂತಾರ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

  English summary
  Yuva Rajkumar, Vinay Rajkumar and Ashwini Puneeth Rajkumar praised Kantara movie after watching premiere show. Read on
  Friday, September 30, 2022, 17:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X