For Quick Alerts
  ALLOW NOTIFICATIONS  
  For Daily Alerts

  ಮುತ್ತಯ್ಯ ಮುರಳೀಧರನ್ ಬಯೋಪಿಕ್ ವಿವಾದ ಕುರಿತು ಸ್ಪಷ್ಟನೆ ನೀಡಿದ ನಿರ್ಮಾಪಕ

  |

  ವಿಜಯ್ ಸೇತುಪತಿ ನಟಿಸುತ್ತಿರುವ ಮುತ್ತಯ್ಯ ಮುರಳೀಧರನ್ ಬಯೋಪಿಕ್ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಶ್ರೀಲಂಕಾ ಆಟಗಾರನ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸುತ್ತಿರುವುದು ಟೀಕೆಗೆ ಗುರಿಯಾಗಿದೆ.

  ಶ್ರೀಲಂಕಾದಲ್ಲಿರುವ ತಮಿಳರ ಮೇಲೆ ಅಲ್ಲಿನ ಸರ್ಕಾರ ದಬ್ಬಾಳಿಕೆ ಮಾಡಿದೆ, ತಮಿಳರ ಮೇಲೆ ಹಲ್ಲೆ ಮಾಡಿದೆ, ಅನೇಕ ತಮಿಳರನ್ನು ಹತ್ಯೆಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ತಮಿಳರ ಪರವಾಗಿ ಮುತ್ತಯ್ಯ ಮುರಳೀಧರನ್ ಮಾತನಾಡಿರಲಿಲ್ಲ.

  ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ವಿರೋಧ: #ShameOnVijaySethupati ಟ್ರೆಂಡ್

  ಹೀಗಿರುವಾಗ, ತಮಿಳು ನಟನೊಬ್ಬ ಶ್ರೀಲಂಕಾ ಧ್ವಜದ ಜೆರ್ಸಿಯನ್ನು ತೊಟ್ಟು ಸಿನಿಮಾ ಮಾಡಲು ಮುಂದಾಗಿರುವುದು ದುರಂತ ಎಂದು ಟೀಕಿಸಲಾಗುತ್ತಿದೆ. ವಿಜಯ್ ಸೇತುಪತಿಯ ನಿರ್ಧಾರವನ್ನು ಖಂಡಿಸಲಾಗುತ್ತಿದೆ.

  ಈ ಕುರಿತು ನಿರ್ಮಾಣ ಸಂಸ್ಥೆ (DAR MOTION PICTURE) ಮಾಧ್ಯಮ ಪ್ರಕಟಣೆ ಮಾಡಿದೆ. ''800 ಸಿನಿಮಾ ಸಂಫೂರ್ಣವಾಗಿ ಕ್ರೀಡಾ ಆಧಾರಿತ ಚಿತ್ರ. ಇದರಲ್ಲಿ ರಾಜಕೀಯ ಮಾಡುವುದು ಬೇಡ. ತಮಿಳರಿಗೆ ಹಾಗೂ ತಮಿಳರ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಅಂಶ ಇದರಲ್ಲಿ ಇರುವುದಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.

  ಮುತ್ತಯ್ಯ ಮುರಳೀಧರನ್ ಬಯೋಪಿಕ್: '800' ಮೋಷನ್ ಪೋಸ್ಟರ್ ಗೆ ಅಭಿಮಾನಿಗಳು ಫಿದಾ

  ''ವಿಜಯ್ ಸೇತುಪತಿ ನಾಯಕನಾಗಿ ನಟಿಸಿರುವ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ '800' ಚಿತ್ರದ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದ್ರೆ, ಇದು ಸಂಪೂರ್ಣವಾಗಿ ಕ್ರೀಡಾ ಆಧಾರಿತ ಚಿತ್ರ ಎಂದು ಹೇಳಲು ಬಯಸುತ್ತೇನೆ. ಈ ಚಿತ್ರವೂ ತಮಿಳು ಸಮುದಾಯಕ್ಕೆ ಸೇರಿದ ಜಗತ್ತಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ವ್ಯಕ್ತಿಯ ಸಾಧನೆ ಕಥೆ. ಈ ಚಿತ್ರವೂ ಯಾವುದೇ ಸಮುದಾಯಕ್ಕೆ ಅನುಕೂಲವಾಗುವಂತೆ ರಾಜಕೀಯವಾಗಿ ಹೇಳಿಕೆ ನೀಡುವುದಿಲ್ಲ'' ಎಂದು ತಿಳಿಸಿದ್ದಾರೆ.

  ''ಯುವ ಪೀಳಿಗೆಗೆ ತಮ್ಮ ಕನಸುಗಳನ್ನು ಸಾಧಿಸಲು ಪ್ರೇರಣೆಯಾಗಲಿದೆ. ತಮಿಳರ ಭಾವನೆಗಳನ್ನು ಯಾವುದೇ ರೀತಿಯಲ್ಲಿ ನೋಯಿಸುವ ಯಾವುದೇ ದೃಶ್ಯಗಳನ್ನು ಇದರಲ್ಲಿ ಪ್ರದರ್ಶಿಸುವುದಿಲ್ಲ'' ಎಂದು ತಯಾರಕರು ಭರವಸೆ ನೀಡಿದ್ದಾರೆ.

  ''ಈ ಚಿತ್ರವೂ ಶ್ರೀಲಂಕಾದ ತಮಿಳು ಚಲನಚಿತ್ರ ಸಮುದಾಯದ ಕಲಾವಿದರು ಮತ್ತು ತಂತ್ರಜ್ಞರಿಗೆ ಜಾಗತಿಕ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಕಲೆ ಗಡಿಯನ್ನು ಮೀರಿದೆ. ಇದು ಎಲ್ಲೆಡೆ ಜನರನ್ನು ಒಂದುಗೂಡಿಸುತ್ತದೆ. ಕಲಾವಿದರು ಜಗತ್ತಿಗೆ ಸೇರಿದವರು. ಸಕಾರಾತ್ಮಕತೆ, ಪ್ರೀತಿ ಮತ್ತು ಭರವಸೆಯನ್ನು ಮಾತ್ರ ಹರಡಲು ನಾವು ಬಯಸುತ್ತೇವೆ'' ಎಂದು ಸ್ಪಷ್ಟನೆ ನೀಡಿದ್ದಾರೆ.

  English summary
  Producers of ''800 the film'' issued a press note after the negativity about the actor and film. The note clarified to the film is totally a sports-drama and will take care of the public sentiment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X