For Quick Alerts
  ALLOW NOTIFICATIONS  
  For Daily Alerts

  ಗಜಿನಿ ಚಿತ್ರದ ಬಗ್ಗೆ ನಯನತಾರ ಬೇಸರ: ಕೊನೆಗೂ ಸ್ಪಷ್ಟನೆ ನೀಡಿದ ಮುರುಗದಾಸ್

  |

  ಸೌತ್ ಇಂಡಸ್ಟ್ರಿಯ ಬಹುಬೇಡಿಕೆ ನಟಿ ನಯನತಾರ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ದರ್ಬಾರ್ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಗೆ ಬರಲಿದೆ.

  ಈ ಚಿತ್ರವನ್ನು ಸ್ಟಾರ್ ಡೈರೆಕ್ಟರ್ ಎ ಆರ್ ಮುರುಗದಾಸ್ ನಿರ್ದೇಶಿಸಿದ್ದಾರೆ. ಬಹಳ ವರ್ಷದ ನಂತರ ಮುರುಗದಾಸ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಯನತಾರ ಇತ್ತೀಚಿಗಷ್ಟೆ ಮುರುಗದಾಸ್ ಅವರ ಹಳೆಯ ಚಿತ್ರದ ಬಗ್ಗೆ ಕಾಮೆಂಟ್ ಮಾಡಿದ್ದರು.

  ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ನಯನತಾರಾ: ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ನಯನತಾರಾ: ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

  ಸುಮಾರು 15 ವರ್ಷದ ಹಿಂದೆ ರಿಲೀಸ್ ಆಗಿದ್ದ ಗಜಿನಿ ಸಿನಿಮಾದಲ್ಲಿ ನಯನತಾರ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಸಿದ್ದರ ಬಗ್ಗೆ ನಯನತಾರ ಬೇಸರ ವ್ಯಕ್ತಪಡಿಸಿದ್ದರು. ಇದು ಚಿತ್ರರಂಗದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಅಷ್ಟಕ್ಕೂ, ಮುರುಗದಾಸ್ ಸಿನಿಮಾ ಬಗ್ಗೆ ನಯನತಾರ ಹೇಳಿದ್ದೇನು? ನಯನತಾರ ಕಾಮೆಂಟ್ ಗೆ ಡೈರೆಕ್ಟರ್ ನೀಡಿದ ಸ್ಪಷ್ಟನೆ ಏನು? ಮುಂದೆ ಓದಿ....

  ಗಜಿನಿ ಮಾಡಬಾರದಿತ್ತು

  ಗಜಿನಿ ಮಾಡಬಾರದಿತ್ತು

  2005ರಲ್ಲಿ ತೆರೆಕಂಡಿದ್ದ ಸಿನಿಮಾ ಗಜಿನಿ. ಚಂದ್ರಮುಖಿ ನಂತರ ನಯನತಾರಗೆ ಆರಂಭದ ದಿನಗಳಲ್ಲಿ ಸಕ್ಸಸ್ ನೀಡಿದ ಚಿತ್ರ. ಅಸಿನ್ ಮತ್ತು ನಯನತಾರ ಇಬ್ಬರು ನಾಯಕಿಯಾಗಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆಗಿತ್ತು. ಹಿಂದಿಯಲ್ಲೂ ಈ ಸಿನಿಮಾ ರೀಮೇಕ್ ಆಗಿತ್ತು. ''ಇಂತಹ ಚಿತ್ರದಲ್ಲಿ ನಟಿಸಿದ್ದು ನಾನು ತಪ್ಪು ಮಾಡಿದೆ'' ಎಂದು ನಯನತಾರ ಹೇಳಿದ್ದರು.

  ನಯನಾತಾರ ಸಿನಿ ಜೀವನದಲ್ಲಿ 'ಆ ಸಿನಿಮಾ' ಮಾಡಬಾರದಿತ್ತಂತೆನಯನಾತಾರ ಸಿನಿ ಜೀವನದಲ್ಲಿ 'ಆ ಸಿನಿಮಾ' ಮಾಡಬಾರದಿತ್ತಂತೆ

  ಕಥೆ ಹೇಳಿದಂತೆ ಪಾತ್ರ ಬರಲಿಲ್ಲ

  ಕಥೆ ಹೇಳಿದಂತೆ ಪಾತ್ರ ಬರಲಿಲ್ಲ

  ''ಎ ಆರ್ ಮುರುಗದಾಸ್ ಗಜಿನಿ ಸಿನಿಮಾದ ಕಥೆ ಹೇಳುವ ಸಮಯದಲ್ಲಿ ಚೆನ್ನಾಗಿ ವಿವರಿಸಿದ್ದರು. ಆದರೆ, ಸಿನಿಮಾ ನೋಡಿದ್ಮೇಲೆ ಅದು ಸಂಪೂರ್ಣವಾಗಿ ಬದಲಾಗಿತ್ತು. ಆಮೇಲೆ ಅನಿಸತು, ಈ ಚಿತ್ರವನ್ನು ನಾನು ಮಾಡಬಾರದಿತ್ತು'' ಎಂದು ಬೇಸರ ವ್ಯಕ್ತಪಡಿಸಿದ್ದರು.

  ಡೈರೆಕ್ಟರ್ ಏನಂದ್ರು?

  ಡೈರೆಕ್ಟರ್ ಏನಂದ್ರು?

  2004ರಲ್ಲಿ ಈ ಸಿನಿಮಾ ಬಂದಿತ್ತು. ಹದಿನೈದು ವರ್ಷದ ಬಳಿಕ ಸಿನಿಮಾ ಬಗ್ಗೆ ನಯನತಾರ ಈ ರೀತಿ ಹೇಳಿಕೆ ನೀಡಿದ್ದರು. ಇಷ್ಟು ವರ್ಷದ ಬಳಿಕ ಹೀಗೆ ಯಾಕೆ ಹೇಳಿದರು ಎಂಬುದು ಗೊತ್ತಾಗಲಿಲ್ಲ. ಇದುವರೆಗೂ ಈ ಬಗ್ಗೆ ಪ್ರತಿಕ್ರಿಯೆ ನೀಡದ ಮುರುಗದಾಸ್ ಕೊನೆಗೂ ಮೌನಮುರಿದ್ದಾರೆ. ''ನಾನು ಉದ್ದೇಶಪೂರ್ವಕವಾಗಿ ಒಬ್ಬ ಕಲಾವಿದನನ್ನು ಹೆಚ್ಚಾಗಿ, ಒಬ್ಬ ಕಲಾವಿದನನ್ನು ಕಡಿಮೆಯಾಗಿ ತೋರಿಸಲ್ಲ. ಕಥೆ ಬೇಡಿಕೆಗೆ ತಕ್ಕಂತೆ ಕೆಲವು ಬದಲಾವಣೆಗಳು ಅವಶ್ಯಕ. ಗಜಿನಿ ವಿಚಾರದಲ್ಲೂ ಅದೇ ಆಗಿದ್ದು'' ಎಂದು ಸ್ಪಷ್ಟನೆ ನೀಡಿದ್ದಾರೆ.

  'ದರ್ಬಾರ್' ಚಿತ್ರಕ್ಕೆ ನಯನತಾರ!

  'ದರ್ಬಾರ್' ಚಿತ್ರಕ್ಕೆ ನಯನತಾರ!

  ಎ ಆರ್ ಮುರುಗದಾಸ್ ನಿರ್ದೇಶನದ ಗಜಿನಿ ಸಿನಿಮಾದಲ್ಲಿ ನಾಯಕಿಯಾಗಿದ್ದ ನಯನತಾರ, ಬಳಿಕ ಮುರುಗದಾಸ್ ನಿರ್ಮಾಣದ 'ರಾಜರಾಣಿ' ಸಿನಿಮಾ ಮಾಡಿದ್ರು. ಈಗ ರಜನಿಕಾಂತ್ ಜೊತೆ ದರ್ಬಾರ್ ಮಾಡಿದ್ದಾರೆ. ದರ್ಬಾರ್ ಚಿತ್ರಕ್ಕೆ ನಾಯಕಿ ಆದ್ಮೇಲೆ ನಯನತಾರ ಗಜಿನಿ ಬಗ್ಗೆ ಇಂತಹ ಹೇಳಿಕೆ ನೀಡಿದ್ದರು.

  English summary
  Director A R Murugadoss finally react on Nayanthara's old statement about ghajini movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X