Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಮಿಳು ನಟ ಅಜಿತ್-ಶಾಲಿನಿ ಲವ್ ಸ್ಟೋರಿಯಲ್ಲಿ ಇತ್ತು ಬಿಗ್ ಟ್ವಿಸ್ಟ್: AK47 ಸೀಕ್ರೆಟ್ ಕೋಡ್!
ಸಿನಿಮಾರಂಗದಲ್ಲಿ ಬ್ರೇಕಪ್, ವಿಚ್ಛೇದನ ಮಾಡಿಕೊಂಡಿರುವ ಜೋಡಿಗಳು ಹತ್ತು ಹಲವು. ಬ್ರೇಕಪ್ ಸುದ್ದಿಗಳನ್ನು ಕೇಳಿ, ಕೇಳಿ ಈ ಚಿತ್ರರಂಗದವರ ಕಥೆಯೇ ಇಷ್ಟು ಎನ್ನುವಂತಾಗಿದೆ. ಆದರೆ ಸಿನಿಮಾದಲ್ಲಿ ಒಂದಷ್ಟು ತಾರಾ ಜೋಡಿಗಳಿವೆ, ಅವರು ಪ್ರೀತಿಸಿ ಮದುವೆ ಆಗಿ ದಶಕಗಳಿಂದ ಆ ಪ್ರೀತಿಯನ್ನು ಹಾಗೆ ಕಾಪಾಡಿಕೊಂಡು ಬರ್ತಿದ್ದಾರೆ. ಅದರಲ್ಲಿ ತಮಿಳು ನಟ ಅಜಿತ್ ಶಾಲಿನಿ ಜೋಡಿ ಕೂಡ ಒಂದು.
ಅಜಿತ್ ಶಾಲಿನಿ ಅವರು ಸದ್ಯ ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈ ಜೋಡಿಯ ಪ್ರೇಮ್ ಕಹಾನಿ ಅತ್ಯಂತ ರೋಚಕ. ಇವರ ಲವ್ ಸ್ಟೋರಿ ಕೇಳಿದರೆ ನಿಮಗೂ ಅಚ್ಚರಿ ಆಗಬಹುದು. ಅಷ್ಟರ ಮಟ್ಟಿಗೆ ಇವರ ಲವ್ ಸ್ಟೋರಿ ಮಜವಾಗಿದೆ.
ಅನೇಕ ತಮಿಳು ಸೆಲೆಬ್ರಿಟಿಗಳು ತಾವು ಪ್ರೀತಿಸಿದವರ ಜೊತೆಗೆ ಮದುವೆ ಆಗಿದ್ದಾರೆ. ಸಿನಿಮಾಗಳಲ್ಲಿ ಮಾತ್ರ ಅಲ್ಲ, ಸಿನಿಮಾ ಹೊರತಾಗಿಯೂ ಹಲವು ತಾರಾ ಜೋಡಿಗಳು, ನಿಜ ಜೀವನದಲ್ಲಿಯೂ ಪ್ರೇಮಕಥೆಯನ್ನು ಹೊಂದಿದೆ, ಬಳಿಕ ದಂಪತಿಗಳಾಗಿ ಮಾದರಿ ಜೀವನ ನಡೆಸುತ್ತಿದ್ದಾರೆ. ತಮಿಳು ಚಿತ್ರೋದ್ಯಮದಲ್ಲಿ ಅಂತಹ ಜೋಡಿಗಳಲ್ಲಿ ಅಜಿತ್ ಮತ್ತು ಶಾಲಿನಿ ಅವರ ಪ್ರೇಮಕಥೆಯು ಅತಿ ಅಪರೂಪ ಎನಿಸುತ್ತದೆ.

ಅಜಿತ್ ಜೊತೆ ನಟಿಸಲು ತಿರಸ್ಕರಿಸಿದ್ದರು ಶಾಲಿನಿ!
ಅಜಿತ್ ಮತ್ತು ಶಾಲಿನಿ ಇಬ್ಬರು ಮೊದಲು ಒಟ್ಟಿಗೆ ನಟಿಸಿದ್ದು, 'ಅಮರಕಲಂ' ಚಿತ್ರದಲ್ಲಿ. ಶಾಲಿನಿ ಅವರಿಗೆ ಕಾಲೇಜು ಪರೀಕ್ಷೆ ಇದ್ದ ಕಾರಣ, ಮೊದಲು ಈ ಚಿತ್ರವನ್ನು ತಿರಸ್ಕರಿಸಿದ್ದರಂತೆ. ಆದರೆ ಚಿತ್ರದ ನಿರ್ದೇಶಕ ಶರಣ್ ಅವರು ಶಾಲಿನಿ ಅವರ ಪರೀಕ್ಷೆ ಮುಗಿದ ಬಳಿಕ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ಹಾಗಾಗಿ ಈ ಚಿತ್ರದ ಮೂಲಕ ಈ ತಾ ಜೋಡಿ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಅಭಿನಯಿಸುವುದು ಸಾಧ್ಯ ಆಯ್ತು.

ಚಾಕು ಚುಚ್ಚಿದಾಗ ಅರಿವಾಯಿತು ಪ್ರೀತಿ!
ಅಜಿತ್ ಮತ್ತು ಶಾಲಿನಿಗೆ ತಮ್ಮ ಪ್ರೀತಿ ಅರಿವಾದ ಕ್ಷಣವೇ ಬಲು ರೋಚಕ. ಸಿನಿಮಾ ರಂಗದಲ್ಲಿ ಇಬ್ಬರೂ ಕೂಡ ದೊಡ್ಡ ಹೆಸರು ಮಾಡಿದ್ದರು. ಆಗ 'ಅಮರಕಲಂ' ಚಿತ್ರದ ಮೂಲಕ ಮೊದಲ ಬಾರಿಗೆ ಒಂದಾಗಿದ್ದರು. ಈ ಚಿತ್ರದ ಒಂದು ದೃಶ್ಯದಲ್ಲಿ ನಟ ಅಜಿತ್ ಶಾಲಿನಿ ಅವರಿಗೆ ಚಾಕು ಚುಚ್ಚ ಬೇಕಾಗುತ್ತದೆ. ಆಗ ಅಜಿತ್ ಅವರು ಚಾಕುವನ್ನು ತಪ್ಪಾಗಿ ಬಳಸಿ ಶಾಲಿನಿ ಮಣಿಕಟ್ಟಿಗೆ ತೀವ್ರವಾಗಿ ಗಾಯ ಮಾಡುತ್ತಾರೆ. ಈ ಘಟನೆಯ ಬಗ್ಗೆ ಅವರು ಹೆಚ್ಚಾಗಿ ಚಿಂತಾಕ್ರಾಂತರಾಗಿದ್ದರಂತೆ. ಆಗಲೇ ಅಜಿತ್ ಅವರಿಗೆ ಶಾಲಿನಿ ಮೇಲಿನ ಪ್ರೀತಿ ಇರುವುದು ಅರಿವಾಯಿತಂತೆ.

ಅಜಿತ್-ಶಾಲಿನಿ ಸೀಕ್ರೆಟ್ ಕೋಟ್ AK47!
'ಅಮರಕಲಂ' ಚಿತ್ರೀಕರಣದ ಸಮಯದಲ್ಲಿ, ಅಜಿತ್ ಮತ್ತು ಶಾಲಿನಿ ನಡುಗೆ ಪ್ರೇಮಾಂಕುರವಾಗಿತ್ತಂತೆ. ಇಬ್ಬರೂ ಈ ಚಿತ್ರದ ಶೂಟಿಂಗ್ ವೇಳೆ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆದರೆ ಈ ವಿಚಾರ ಯಾರಿಗೂ ತಿಳಿಯಂತೆ ಮುಚ್ಚಿಟ್ಟಿದ್ದರಂತೆ. ಆದರೆ ಅವರು ರಹಸ್ಯವಾಗಿ ಮಾತನಾಡಿಳ್ಳುತ್ತಾ ಇದ್ದರಂತೆ. ಅದಕ್ಕಾಗಿ AK47 ಎನ್ನುವ ಸೀಕ್ರೇಟ್ ಕೋಡ್ ಬಳಸುತ್ತಿದ್ದರಂತೆ. ಇದೇ ಕೋಡ್ ಮೂಲಕ ಇಬ್ಬರು ಶೂಟಿಂಗ್ ವಿರಾಮ ವೇಳೆಯಲ್ಲಿ ಸೆಟ್‌ನಲ್ಲಿ ಮಾತನಾಡುತ್ತಿದ್ದರಂತೆ. ಈ ವಿಚಾರವನ್ನು ಸಂದರ್ಶನದಲ್ಲಿ ನಟ ಕುಂಚಕೋ ಬೋಬನ್ ಹೇಳಿಕೊಂಡಿದ್ದಾರೆ.

ಮದುವೆ ಬಳಿಕ ಸಿನಿಮಾ ಬಿಟ್ಟ ಶಾಲಿನಿ!
ನಂತರ 2000ರಲ್ಲಿ ವಿವಾಹವಾದರು ಮತ್ತು ಈಗ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಸಿನಿಮಾಗಳಲ್ಲಿ ನಟಿಸುತ್ತಿದ್ದ ಶಾಲಿನಿ, ಮದುವೆಯ ನಂತರ ನಟನೆಯನ್ನು ಬಿಟ್ಟು ಬಿಟ್ಟಿದ್ದಾರೆ. ಈ ಜೋಡಿಯ ಪ್ರೇಮಕಥೆಗೆ ಸಾಕ್ಷಿ ಆದ ಸಿನಿಮಾ ಮಂದಿ ಸದಾ ಅಚ್ಚರಿ ವ್ಯಕ್ತಪಡಿಸುತ್ತಾರೆ. ಇದು ಒಂದು ಕಾಲ್ಪನಿಕ ಕಥೆಯಂತೆ ಇದೆ ಎಂದು ಹೇಳುತ್ತಾರೆ.