For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: 'ಪುಷ್ಪ' ಡೈಲಾಗ್ ಅನ್ನು ಪುಷ್ಪಗಿಂತಲೂ ಅದ್ಭುತವಾಗಿ ಹೇಳಿದ ವಿಕ್ರಂ!

  |

  ಒಳ್ಳೆಯ ನಟ ಪಾತ್ರವೊಂದನ್ನು ಚೆನ್ನಾಗಿ ನಟಿಸಿದರೆ ಅದ್ಭುತವಾದ ನಟ ಒಂದು ಪಾತ್ರವನ್ನು ಹತ್ತು ರೀತಿಯಲ್ಲಿ ನಟಿಸಬಲ್ಲವನಾಗಿರುತ್ತಾನೆ. ಅಂಥಹಾ ಅದ್ಭುತವಾದ ನಟರಲ್ಲಿ ತಮಿಳಿನ ಚಿಯಾನ್ ವಿಕ್ರಂ ಒಬ್ಬರು.

  ಅವರ 'ಅಪರಿಚಿತುಡು' ಅಥವಾ 'ಅನ್ನಿಯನ್' ಸಿನಿಮಾ ನೋಡಿ ವಿದೇಶಿಗರೂ ಗಾಬರಿಯಾಗಿಬಿಟ್ಟಿದ್ದರು. ಸೆಕೆಂಡ್‌ ಸೆಕೆಂಡ್‌ಗೂ ಅವರ ಮುಖಭಾವ, ಧ್ವನಿಯ ಏರಿಳಿತ ಕಂಡು ಬಾಲಿವುಡ್‌ ಸೂಪರ್ ಸ್ಟಾರ್‌ಗಳು ಸಹ ಅಬ್ಬಾ ಎಂದುಕೊಂಡಿದ್ದರು.

  ಭಾರತೀಯ ಜನಪ್ರಿಯ ನಟರ ಪಟ್ಟಿಯಲ್ಲಿ ಕನ್ನಡದ ಒಬ್ಬನೇ ನಟ! ಭಾರತೀಯ ಜನಪ್ರಿಯ ನಟರ ಪಟ್ಟಿಯಲ್ಲಿ ಕನ್ನಡದ ಒಬ್ಬನೇ ನಟ!

  ಇದೀಗ ಚಿಯಾನ್ ವಿಕ್ರಂ ಮತ್ತೊಮ್ಮೆ ಯಾವೆಂಥಹಾ ಪ್ರತಿಭಾನ್ವಿತ ಎಂಬುದನ್ನು ತೋರಿಸಿದ್ದಾರೆ. ಅದೂ ಸಿನಿಮಾ ಪ್ರಚಾರದ ವೇದಿಕೆಯಲ್ಲಿ. ವಿಕ್ರಂ, ತಮ್ಮ ಮುಂದಿನ ಸಿನಿಮಾ 'ಕೋಬ್ರಾ'ದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ 'ಪುಷ್ಪ' ಸಿನಿಮಾದ ಡೈಲಾಗ್‌ ಅನ್ನು ಹತ್ತು ರೀತಿಯಲ್ಲಿ ಹೆಳಿರುವುದು ಸಖತ್ ವೈರಲ್ ಆಗಿದೆ.

  ''ಪುಷ್ಪ' ಅಂದ್ರೆ ಫ್ಲವರ್ ಅನ್ಕೊಂಡ್ಯಾ ಫೈಯರ್' ಎಂಬುದು ಪುಷ್ಪ ಸಿನಿಮಾದ ಜನಪ್ರಿಯ ಡೈಲಾಗ್ ಇದೇ ಡೈಲಾಗ್ ಅನ್ನು ತಮಿಳಿನಲ್ಲಿ ಹಲವು ರೀತಿಯಲ್ಲಿ ಚಿಯಾನ್ ವಿಕ್ರಂ ಹೇಳಿದ್ದಾರೆ. ಮೊದಲಿಗೆ ಸಿನಿಮಾದಲ್ಲಿ ಅಲ್ಲು ಅರ್ಜುನ್ ಆ ಡೈಲಾಗ್ ಅನ್ನು ಹೇಗೆ ಹೇಳಿದ್ದಾರೋ ಹಾಗೆ ಹೇಳಿದ ವಿಕ್ರಂ. ಆ ನಂತರ ಅದೇ ಡೈಲಾಗ್ ಅನ್ನು ಹಲವು ಮಾದರಿಯಲ್ಲಿ ಹೇಳಿ ಜನರನ್ನು ರಂಜಿಸಿದರು.

  ವಿಕ್ರಂ ಅವರು 'ಪುಷ್ಪ' ಸಿನಿಮಾದ ಡೈಲಾಗ್ ಹೇಳಿದ ರೀತಿಗೆ ಪಕ್ಕದಲ್ಲಿ ಕೂತಿದ್ದ ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಅವಕ್ಕಾಗಿ ಬಿಟ್ಟರು. ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರೇಕ್ಷಕರಂತೂ ಶಿಳ್ಳೆ-ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ವಿಕ್ರಂ ಹೀಗೆ ಭಿನ್ನ ಮಾದರಿಯಲ್ಲಿ ಡೈಲಾಗ್ ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಕ್ರಂ ಅಭಿಮಾನಿಗಳ ಜೊತೆಗೆ ಅಲ್ಲು ಅರ್ಜುನ್ ಅಭಿಮಾನಿಗಳು ಸಹ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  ವಿಕ್ರಂ ನಟನೆಯ 'ಕೋಬ್ರಾ' ಸಿನಿಮಾ ಆಗಸ್ಟ್ 31 ರಂದು ಬಿಡುಗಡೆ ಆಗಲಿದೆ. 'ಕೆಜಿಎಫ್' ಖ್ಯಾತಿಯ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಇರ್ಫಾನ್ ಪಠಾಣ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಅಜಯ್ ಜ್ಞಾನಮುತ್ತು ನಿರ್ದೇಶನ ಮಾಡಿದ್ದು, ಸಂಗೀತ ನಿರ್ದೇಶನ ಮಾಡಿರುವುದು ಎ.ಆರ್.ರೆಹಮಾನ್. ಸಿನಿಮಾ ನಿರ್ಮಾಣ ಮಾಡಿರುವುದು ಎಸ್‌ಎಸ್ ಲಲಿತ್ ಕುಮಾರ್.

  'ಕೋಬ್ರಾ' ಬಳಿಕ ಭಾರಿ ಬಜೆಟ್‌ನ 'ಪೊನ್ನಿಯನ್ ಸೆಲ್ವನ್' ಸಿನಿಮಾ ಬಿಡುಗಡೆ ಆಗಲಿದ್ದು, ಈ ಸಿನಿಮಾದಲ್ಲಿ ಸಹ ವಿಕ್ರಂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಣಿರತ್ನಂ ನಿರ್ದೇಶನದ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇದೆ. ವಿಕ್ರಂ ಜೊತೆಗೆ ನಟಿ ಐಶ್ವರ್ಯಾ ರೈ, ಕಾರ್ತಿ, ತ್ರಿಶಾ, ಜಯಂ ರವಿ, ಪ್ರಕಾಶ್ ರೈ, ಕಿಶೋರ್, ಲಕ್ಷ್ಮಿ ರೈ ಇನ್ನೂ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೂ ಸಹ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

  English summary
  Tamil star actor Chiyan Vikram said Pushpa movie dialogue in ten ways. Video went viral on social media

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X