For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಸೋತಿದ್ದಕ್ಕೆ ವಿಶಾಲ್‌ ವಿರುದ್ಧ ನಿರ್ಮಾಪಕ ದೂರು: 8 ಕೋಟಿಗೆ ಬೇಡಿಕೆ

  |

  ತಮಿಳು ನಟ ವಿಶಾಲ್‌ ಗೆ ಯಾಕೋ ಸಮಯವೇ ಸರಿ ಇದ್ದಂತಿಲ್ಲ. ಕೆಲವು ದಿನಗಳ ಹಿಂದಷ್ಟೆ ತೆರಿಗೆ ಇಲಾಖೆಯಿಂದ ನೊಟೀಸ್ ಪಡೆದು, ದಂಡ ಹೇರಿಸಿಕೊಂಡ ವಿಶಾಲ್, ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

  ವಿಶಾಲ್ ನಟನೆಯ 'ಚಕ್ರ' ಸಿನಿಮಾ ಬಿಡುಗಡೆಗೆ ತಯಾರಾಗಿತ್ತು. ಸಿನಿಮಾದ ಬಿಡುಗಡೆಯ ದಿನಾಂಕವನ್ನೂ ಸಹ ನಿಗದಿ ಮಾಡಲಾಗಿತ್ತು. ಆದರೆ ಈಗ ಸಿನಿಮಾ ಬಿಡುಗಡೆ ಮಾಡದಂತೆ ನ್ಯಾಯಾಲಯ ತಡೆ ನೀಡಿದೆ.

  ಗರ್ಲ್‌ಫ್ರೆಂಡ್‌ ಜೊತೆಗಿನ ಚಿತ್ರ ಹಂಚಿಕೊಂಡ ಖ್ಯಾತ ಯುವ ನಟ

  ವಿಶಾಲ್ ಅವರ ಈ ಹಿಂದಿನ ಸಿನಿಮಾ 'ಆಕ್ಷನ್‌' ನ ನಿರ್ಮಾಪಕರು ವಿಶಾಲ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಶಾಲ್ ಅವರಿಂದ ನನಗೆ ಆಗಿರುವ ನಷ್ಟವನ್ನು ತುಂಬಿಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿದೆ.

  'ಆಕ್ಷನ್‌' ಸಿನಿಮಾಕ್ಕೆ 44 ಕೋಟಿ ಬಂಡವಾಳ

  'ಆಕ್ಷನ್‌' ಸಿನಿಮಾಕ್ಕೆ 44 ಕೋಟಿ ಬಂಡವಾಳ

  ಆಕ್ಷನ್ ಸಿನಿಮಾವನ್ನು ಟ್ರಿಡೆಂಟ್ ಆರ್ಟ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸಿತ್ತು. ಸಿನಿಮಾಕ್ಕೆ 44 ಕೋಟಿ ಬಂಡವಾಳ ಹೂಡಲಾಗಿತ್ತು. ಆದರೆ ಸಿನಿಮಾವು ಬಾಕ್ಸ್‌ಆಫೀಸ್‌ನಲ್ಲಿ ಹೀನಾಯವಾಗಿ ನೆಲಕಚ್ಚಿತು. ಬಂಡವಾಳದ ಅರ್ಧದಷ್ಟೂ ಹಣ ಮರಳಿ ಬರಲಿಲ್ಲ.

  ನಿರ್ಮಾಣ ಸಂಸ್ಥೆಯೊಂದಿಗೆ ವಿಶಾಲ್ ಒಪ್ಪಂದ

  ನಿರ್ಮಾಣ ಸಂಸ್ಥೆಯೊಂದಿಗೆ ವಿಶಾಲ್ ಒಪ್ಪಂದ

  ಟ್ರಿಡೆಂಟ್ ಆರ್ಟ್ಸ್ ನೀಡಿರುವ ದೂರಿನ ಪ್ರಕಾರ, ಸಿನಿಮಾವು 20 ಕೋಟಿ ಗಳಿಸಲು ವಿಫಲವಾದರೆ ನಷ್ಟದಲ್ಲಿ ಭಾಗ ಹೊರುವುದಾಗಿ ವಿಶಾಲ್, ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದರ ಪ್ರಕಾರ ಅವರು 8 ಕೋಟಿ ಹಣವನ್ನು ನೀಡಬೇಕಿದೆ ಎಂದು ಆರೋಪಿಸಲಾಗಿದೆ.

  ಹಣ ನೀಡಿರಲಿಲ್ಲ ನಟ ವಿಶಾಲ್

  ಹಣ ನೀಡಿರಲಿಲ್ಲ ನಟ ವಿಶಾಲ್

  2019 ರಲ್ಲಿ ಬಿಡುಗಡೆ ಆಗಿದ್ದ ಆಕ್ಷನ್ ಸಿನಿಮಾವು ತಮಿಳಿನಲ್ಲಿ 7.70 ಕೋಟಿ ತೆಲುಗಿನಲ್ಲಿ 4 ಕೋಟಿ ಹಣ ಗಳಿಸಿತ್ತು. ಒಪ್ಪಂದದ ಪ್ರಕಾರ ವಿಶಾಲ್ 8.27 ಕೋಟಿ ಹಣವನ್ನು ಆಕ್ಷನ್ ಸಿನಿಮಾದ ನಿರ್ಮಾಪಕ ಆರ್.ರವೀಂದ್ರನ್‌ಗೆ ನೀಡಬೇಕಿತ್ತು. ಆದರೆ ವಿಶಾಲ್ ಈ ಹಣವನ್ನು ನೀಡಿರಲಿಲ್ಲ.

  ಶೂಟಿಂಗ್ ಬಿಟ್ಟು Rashmika ಏನ್ಮಾಡ್ತಿದ್ದಾರೆ ನೋಡಿ |Filmibeat Kannada
  'ಚಕ್ರ' ಸಿನಿಮಾ ಬಿಡುಗಡೆಗೆ ತಡೆ

  'ಚಕ್ರ' ಸಿನಿಮಾ ಬಿಡುಗಡೆಗೆ ತಡೆ

  ಇದೀಗ ವಿಶಾಲ್ ನಟನೆಯ 'ಚಕ್ರ' ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಈ ಸಮಯದಲ್ಲಿ ನೊಟೀಸ್ ಕಳಿಸಿರುವ ಮದ್ರಾಸ್ ಹೈಕೋರ್ಟ್‌ ಸಿನಿಮಾಕ್ಕೆ ಬಿಡುಗಡೆಗೆ ತಡೆ ಒಡ್ಡಿದೆ. ಆಕ್ಷನ್ ಸಿನಿಮಾದ ಪ್ರಕರಣ ಇತ್ಯರ್ಥವಾದ ಬಳಿಕವೇ ಚಕ್ರಂ ಬಿಡುಗಡೆ ಆಗುವ ಸಾಧ್ಯತೆ ಇದೆ.

  English summary
  Film actor Vishal gets notice. Madras high court put stay on Vishal's movie Chakra scheduled to release on OTT.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X