For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್- ಶಂಕರ್ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸ್ಟಾರ್ ನಟಿ ಎಂಟ್ರಿ

  |

  ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ನಿರ್ದೇಶಕ ಶಂಕರ್ ಮತ್ತು ರಾಮ್ ಚರಣ್ ಸಿನಿಮಾ ಕೂಡ ಒಂದು. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಈ ಹೊಸ ಸಿನಿಮಾ, ನಾಯಕಿ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ತೆಲುಗು ಸ್ಟಾರ್ ರಾಮ್ ಚರಣ್‌ಗೆ ನಾಯಕಿಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

  ರಾಮ್ ಚರಣ್ ಜೊತೆ ನಾಯಕಿಯಾಗಿ ಬಾಲಿವುಡ್ ಸುಂದರಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಮತ್ಯಾರು ಅಲ್ಲ ಕಬೀರ್ ಸಿಂಗ್ ನಾಯಕಿ ಕಿಯಾರಾ ಅಡ್ವಾಣಿ. ರಾಮ್ ಚರಣ್ ಜೊತೆ ರೊಮ್ಯಾನ್ಸ್ ಮಾಡಲು ಕಿಯಾರಾ ಮತ್ತೆ ದಕ್ಷಿಣದ ಕಡೆ ಮುಖಮಾಡಿದ್ದಾರೆ. ಅಂದಹಾಗೆ ಕಿಯಾರಾಗೆ ತೆಲುಗು ಸಿನಿಮಾರಂಗ ಹೊಸದೇನಲ್ಲ. ಈಗಾಗಲೇ ಮಹೇಶ್ ಬಾಬು ಜೊತೆ ಭರತ್ ಅನೇ ನೇನು ಸಿನಿಮಾದಲ್ಲಿ ಕಿಯಾರಾ ನಟಿಸಿದ್ದರು.

  'ಎಂಎಸ್ ಧೋನಿ' ನಾಯಕಿ ಕಿಯಾರಾಗೆ ಹೆಸರು ಬದಲಿಸಿದ್ದು ಯಾರು?'ಎಂಎಸ್ ಧೋನಿ' ನಾಯಕಿ ಕಿಯಾರಾಗೆ ಹೆಸರು ಬದಲಿಸಿದ್ದು ಯಾರು?

  ಬಳಿಕ ಮತ್ತೆ ರಾಮ್ ಚರಣ್ ಜೊತೆ ವಿನಯ ವಿಧೇಯ ರಾಮಾ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಎರಡನೇ ಬಾರಿ ತೆಲುಗು ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ಮತ್ತೆ ರಾಮ್ ಚರಣ್‌ಗೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ದಕ್ಷಿಣ ಭಾರತೀಯ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

  ಶಂಕರ್ ಹೊಸ ಸಿನಿಮಾದ ನಾಯಕಿ ಪಟ್ಟಕ್ಕೆ ಅನೇಕರ ಹೆಸರು ಕೇಳಿಬರುತ್ತಿತ್ತು. ಬಾಲಿವುಡ್, ಕಾಲಿವುಡ್, ಟಾಲಿವುಡ್‌ನ ಟಾಪ್ ನಟಿಯರ ಹೆಸರುಗಳೆಲ್ಲಾ ಓಡಾಡಿಕೊಂಡು ಕೊನೆಗೆ ಕಿಯಾರಾ ಬಳಿ ಬಂದಿದೆ. ಆಫರ್ ಕೇಳಿ ಸಖತ್ ಥ್ರಿಲ್ ಆಗಿದ್ದ ಕಿಯಾರಾ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ನಿನ್ನೆ (ಜುಲೈ 31) ಕಿಯಾರಾ ಹುಟ್ಟುಹಬ್ಬದ ದಿನ ಅಧಿಕೃತವಾಗಿ ಘೋಷಣೆಯಾಗಿದೆ.

  ಅಂದಹಾಗೆ ರಾಮ್ ಚರಣ್ ಮತ್ತು ಶಂಕರ್ ಹೊಸ ಸಿನಿಮಾಗೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡುತ್ತಿದ್ದಾರೆ. ಇನ್ನು ಸಿನಿಮಾಗೆ ಟೈಟಲ್ ಏನಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಸದ್ಯದಲ್ಲೇ ಶೀರ್ಷಿಕೆ ಕೂಡ ಬಹಿರಂಗವಾಗುವ ಸಾಧ್ಯತೆ ಇದೆ.

  ಇನ್ನು ರಾಮ್ ಚರಣ್‌ಗೆ ಇದು 15ನೇ ಸಿನಿಮಾ. ದೊಡ್ಡ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಇದಾಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಸದ್ಯ ರಾಮ್ ಚರಣ್ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಆರ್ ಆರ್ ಆರ್ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಿನಿಮಾದಿಂದ ಮೊದಲ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಸ್ನೇಹಿತರ ದಿನಾಚರಣೆ ಪ್ರಯುಕ್ತ ಚಿತ್ರದಿಂದ ಮೊದಲ ಹಾಡು ಅಭಿಮಾನಿಗಳ ಮುಂದೆ ಬರ್ತಿದೆ.

  ಆರ್ ಆರ್ ಆರ್ ಸಿನಿಮಾ ಮುಗಿಯುತ್ತಿದ್ದಂತೆ ರಾಮ್ ಚರಣ್ ನಿರ್ದೇಶಕ ಶಂಕರ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಅಂದಹಾಗೆ ರಾಮ್ ಚರಣ್ ಆರ್ ಆರ್ ಆರ್ ಮತ್ತು ಶಂಕರ್ ಸಿನಿಮಾ ಜೊತೆಗೆ ಆಚಾರ್ಯ ಸಿನಿಮಾದಲ್ಲೂ ನಟಿಸಿದ್ದಾರೆ. ತನ್ನದೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಆಚಾರ್ಯ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟಿ ಕಾಜಲ್ ಅಗರ್ವಾಲ್ ಮೆಗಾಸ್ಟಾರ್ ಜೊತೆ ಹೆಜ್ಜೆಹಾಕಿದ್ದಾರೆ.

  ಇನ್ನು ನಟಿ ಕಿಯಾರಾ ಅಡ್ವಾಣಿ ಹಿಂದಿ ಮತ್ತು ತೆಲುಗಿನಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ನಟಿ. ಸದ್ಯ 'ಶೇರ್‌ಶಾ' ಆಗಸ್ಟ್ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. 'ಭೂಲ್ ಭುಲೈಯಾ 2' ತೆರೆಗೆ ಬರಲು ಸಜ್ಜಾಗಿದೆ. 'ಜುಗ್ ಜುಗ್ ಜೀಯೋ' ಸಿನಿಮಾದಲ್ಲೂ ಕಿಯಾರಾ ಅಭಿನಯಿಸಿದ್ದಾರೆ. ಇದೆಲ್ಲದರ ಜೊತೆ ರಾಮ್ ಚರಣ್ ಜೊತೆ ಹೊಸ ಸಿನಿಮಾ ಮಾಡಲು ತಯಾರಾಗಿದ್ದಾರೆ.

  English summary
  Bollywood Actress Kiara Advani joins director Shankar and Ram Charan pan India film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X