For Quick Alerts
  ALLOW NOTIFICATIONS  
  For Daily Alerts

  ಜಾತಿ ನಿಂದನೆ ಪ್ರಕರಣ: ನಟಿ ಮೀರಾ ಮಿಥುನ್‌ಗೆ ಜಾಮೀನು

  |

  ತಮಿಳು ಚಿತ್ರರಂಗದ ನಟಿ, ಮಾಡೆಲ್ ಮೀರಾ ಮಿಥುನ್ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಶ್ಯಾಮ್ ಅಭಿಷೇಕ್‌ಗೆ ಮದ್ರಾಸ್ ಹೈಕೋರ್ಟ್ ಜಾಮೀನು ನೀಡಿದೆ.

  ನಿಂದನೆ, ಜಾತಿ ಅವಹೇಳನ ಮಾಡಿ ವಿಡಿಯೋ ಪ್ರಕಟಿಸಿದ್ದ ಕಾರಣಕ್ಕೆ ಆಗಸ್ಟ್ 14ರಂದು ಮೀರಾ ಮಿಥುನ್ ಹಾಗೂ ಆಕೆಯ ಬಾಯ್‌ಫ್ರೆಂಡ್ ಅನ್ನು ಚೆನ್ನೈ ಪೊಲೀಸರು ಬಂಧಿಸಿದ್ದರು. ಮೀರಾ ಮಿಥುನ್ ವಿರುದ್ಧ ಜಾತಿ ಅವಹೇಳನ ಪ್ರಕರಣದ ಜೊತೆಗೆ, ಸರ್ಕಾರಿ ಸಿಬ್ಬಂದಿಗಳ ಮೇಲೆ ಹಲ್ಲೆ, ಗಲಭೆಗೆ ಪ್ರಚೋದನೆ ಪ್ರಕರಣಗಳನ್ನು ಸಹ ದಾಖಲಿಸಲಾಗಿತ್ತು.

  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದ ಮಿರಾ ಮಿಥುನ್ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಅದಕ್ಕೂ ಮುನ್ನಾ ಯೂಟ್ಯೂಬ್ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ದಲಿತ ಸಮುದಾಯದವರನ್ನು ತಮಿಳು ಚಿತ್ರರಂಗದಿಂದ ಹೊರಗೆ ಓಡಿಸಬೇಕು ಅವರಿಂದ ಚಿತ್ರರಂಗ ಹಾಳಾಗುತ್ತಿದೆ ಎಂದಿದ್ದರು.

  ಮೀರಾ ಮಿಥುನ್‌ರ ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಟಿಯ ವಿರುದ್ಧ ವಿಡುತಲೈ ಚಿರುತೈಗಳ್ ಕಚ್ಚಿ ಸಂಘಟನೆ ನಾಯಕ ವನ್ನಿ ಅರಸು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಮೀರಾ ಮಿಥುನ್ ಅನ್ನು ಬಂಧಿಸಿದ್ದರು.

  ತಮ್ಮನ್ನು ಬಂಧಿಸಲು ಬಂದಿದ್ದ ಪೊಲೀಸರಿಗೆ ಮೀರಾ ಮಿಥುನ್ ಬೆದರಿಕೆ ಹಾಕಿದ್ದರು. ''ಚೆನ್ನೈ ಪೊಲೀಸರು ದೌರ್ಜನ್ಯ ಮಾಡ್ತಿದ್ದಾರೆ. ಮೂರು ಜನ ಅಧಿಕಾರಿಗಳು ಬಂದಿದ್ದಾರೆ. ನನಗೆ ಕಿರುಕುಳ ಕೊಡ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡ್ತಿದ್ದಾರೆ. ಪೊಲೀಸರು ನನಗೆ ಹಲ್ಲೆ ಮಾಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ವಿಡಿಯೋ ಚಿತ್ರೀಕರಿಸಿದ್ದರು. ''ನನ್ನನ್ನು ಅರೆಸ್ಟ್ ಮಾಡಲು ನಿಮಗೆ ಏನು ಅಧಿಕಾರ ಇದೆ, ಏಕೆ ನನ್ನನ್ನು ಬಂಧಿಸಲು ಬಂದಿದ್ದೀರಾ'' ಎಂದು ಈ ವೇಳೆ ಪೊಲೀಸರನ್ನು ಪ್ರಶ್ನಿಸಿ ಹೈಡ್ರಾಮಾ ಮಾಡಿದ್ದರು ಮೀರಾ ಮಿಥುನ್. ಈ ವೇಳೆ ಮೀರಾ ಮಿಥುನ್‌ರ ಬಾಯ್‌ಫ್ರೆಂಡ್ ಶ್ಯಾಮ್ ಅಭಿಷೇಕ್ ಸಹ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದರು.

  ತಮಿಳು ಚಿತ್ರರಂಗದ ಹಲವು ಸ್ಟಾರ್ ನಟ-ನಟಿಯರ ವಿರುದ್ಧ ಮೀರಾ ಮಿಥುನ್ ಆರೋಪಗಳನ್ನು ಮಾಡಿದ್ದರು. ತಮಿಳು ಚಿತ್ರರಂಗ ವೇಶ್ಯಾಗೃಹ ಇದ್ದಂತೆ ಎಂದೂ ಸಹ ಮೀರಾ ಮಿಥುನ್ ಹೇಳಿದ್ದರು.

  English summary
  Actress Meera Mithun and her boyfriend Shyam Abhishek granted bail in Madras high court. Both were arrested by Chennai police on August 24.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X