For Quick Alerts
  ALLOW NOTIFICATIONS  
  For Daily Alerts

  ನಯನತಾರಾ ಸ್ಟೂಡೆಂಟ್ ಆದ ನಟ ಅಜಿತ್ ಕುಮಾರ್

  |

  ಬೆಡಗಿ ನಯನತಾರಾ ಪ್ರಭುದೇವರ ಬಿಟ್ಟು ಮತ್ತೆ ಸಿನಿಮಾ ನಟನೆ ಮುಂದುವರಿಸಿದ್ದು ಈಗ ಇತಿಹಾಸ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ನಯನತಾರಾ, ಇದೀಗ ನಿರ್ದೇಶನದತ್ತ ತಮ್ಮ ಕಣ್ಣು ನೆಟ್ಟಿದ್ದಾರೆ. ವಿಷ್ಣುವರ್ಧನ್ ನಿರ್ದೇಶನದ ಹೊಸ ಚಿತ್ರದಲ್ಲೀಗ ಇವರು ಸಹಾಯಕರಾಗಿದ್ದಾರೆ. ನಿರ್ದೇಶಕಿಯಾಗುವ ಕನಸಿಗೆ ರೂಪ ಕೊಡುತ್ತಿದ್ದಾರೆ. ಕನ್ನಡದ ಸೂಪರ್ ಚಿತ್ರದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಜೋಡಿಯಾಗಿ ನಟಿಸಿದ್ದ ನಯನತಾರಾಗೆ ಕನ್ನಡದಲ್ಲೂ ಅಭಿಮಾನಿ ಲೋಕವಿದೆ.

  ಇಂತಿಪ್ಪ ನಯನತಾರಾ, ಎಎಮ್ ರತ್ನಂ ನಿರ್ಮಾಣ ಹಾಗೂ ಅಜಿತ್ ಕುಮಾರ್ ನಾಯಕತ್ವದ ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ನಾಯಕಿ ಕೂಡ. ತಮ್ಮ ಭಾಗದ ನಟನೆಯನ್ನು ಮುಗಿಸಿರುವ ನಯನಾ, ಇದೀಗ ವಿಷ್ಣುವರ್ಧನ್ ಅವರಿಗೆ ನಿರ್ದೇಶನದಲ್ಲಿ ಸಹಾಯಕಿಯಾಗಿ ಸೇರಿಕೊಂಡಿದ್ದಾರೆ. ಉಳಿದ ಸಹಾಯಕ ನಿರ್ದೇಶಕರ ಜೊತೆ ನಟಿ ನಯನತಾರಾ ಕೂಡ ಸಹಾಯ ಮಾಡಿಕೊಂಡು ನಿರ್ದೇಶನ ಕಲಿಯುತ್ತಿದ್ದಾರೆ.

  ನಟ ಅಜಿತ್ ಕುಮಾರ್ ಭಾಗದ ಕೆಲವು ದೃಶ್ಯಗಳನ್ನು ಈಗಾಗಲೇ ನಯನತಾರಾ ನಿರ್ದೇಶಿಸಿ ಚಿತ್ರೀಕರಿಸಿದ್ದಾರೆ. ನಿರ್ದೇಶನದಲ್ಲಿ ತುಂಬಾ ಆಸಕ್ತಿ ತೋರಿಸುತ್ತಿರುವ ನಯನತಾರಾಗೆ ಭವಿಷ್ಯದಲ್ಲಿ ನಿರ್ದೇಶಕಿಯಾಗುವ ಕನಸಿದೆ ಎಂಬುದು ಆ ಚಿತ್ರತಂಡದ ಎಲ್ಲರಿಗೂ ಅರ್ಥವಾಗಿದೆ. ಭವಿಷ್ಯದ ಈ ನಿರ್ದೇಶಕಿಗೆ ಸಹಾಯಕರಾಗಲು ಅದೆಷ್ಟು ಹುಡುಗರು ಕನಸು ಕಾಣುತ್ತಿದ್ದಾರೋ ನಾರಾಯಣನೇ ಬಲ್ಲ!

  ಅಜಿತ್ ಕುಮಾರ್ ಹೊಸ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದೆ. ಇದನ್ನು ಬೆಂಗಳೂರು ಹಾಗೂ ಮುಂಬೈನ ಕೆಲ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು ಮುಂದಿನ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ವಿದೇಶಕ್ಕೆ ಪ್ರಯಾಣ ಬೆಳೆಸುವ ಸಂಭವವಿದೆ. ಅಜಿತ್-ನಯನತಾರಾರ ಹೆಸರಿಡದ ಈ ಚಿತ್ರದ ತಾರಾಬಳಗದಲ್ಲಿ ಆರ್ಯ, ತಾಪ್ಸಿ, ಮಹೇಶ್ ಮಾಂಜ್ರೇಕರ್, ಸುಮಾ ರಂಗನಾಥನ್, ಕಿಶೋರ್ ಹಾಗೂ ಮುಂತಾದವರಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Nayantara seems to be ready to wear directors cap. The actress has reportedly directed a few scenes of Ajith Kumar in the upcoming Vishnuvardhan movie.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X