For Quick Alerts
  ALLOW NOTIFICATIONS  
  For Daily Alerts

  ಅಶ್ಲೀಲ ಚಿತ್ರಗಳು ವೈರಲ್: ಪುತ್ರಿ ಜೊತೆ ದೂರು ನೀಡಿದ ನಟಿ

  |

  ನಟಿಯರ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ವೈರಲ್ ಮಾಡುವ ಉದ್ಯಮವೇ ಇದ್ದಂತಿದೆ. ಹಲವು ನಟಿಯರ ಅಶ್ಲೀಲ ಚಿತ್ರಗಳೆಂದು ಹೇಳಲಾಗುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ, ಇಂಟರ್ನೆಟ್‌ನಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ.

  ಹೀಗೆ ವೈರಲ್ ಆಗುವ ನಟಿಯರ ಅಶ್ಲೀಲ ಚಿತ್ರಗಳು, ವಿಡಿಯೋಗಳಲ್ಲಿ ಬಹುತೇಕವು ನಕಲಿ ಆಗಿರುತ್ತವೆ. ಕೆಲವು ದಿನಗಳ ಹಿಂದಷ್ಟೆ ನಟಿ ತಮಿಳು ನಟಿ ರೇಷ್ಮಾ ಎಂಬುವರ ಅಶ್ಲೀಲ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೊಬ್ಬ ನಟಿಯ ಅಶ್ಲೀಲ ಚಿತ್ರಗಳು ವೈರಲ್ ಆಗಿವೆ.

  ಹೊಸ ವರ್ಷಕ್ಕೆ ಪುನೀತ್ ರಾಜ್‌ಕುಮಾರ್ ಶುಭಾಶಯ: ಅಪ್ಪು ಆಡಿಯೋ ವೈರಲ್! ಹೊಸ ವರ್ಷಕ್ಕೆ ಪುನೀತ್ ರಾಜ್‌ಕುಮಾರ್ ಶುಭಾಶಯ: ಅಪ್ಪು ಆಡಿಯೋ ವೈರಲ್!

  ಜನಪ್ರಿಯ ನಟಿ ಪ್ರವೀಣಾ ನಾಯರ್ ಅವರ ಅಶ್ಲೀಲ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ, ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, ಆ ಕುರಿತಂತೆ ನಟಿಯು ದೂರು ನೀಡಿದ್ದಾರೆ. ಅಸಲಿಗೆ ಇವುಗಳು ನಕಲಿ ಚಿತ್ರಗಳಂತೆ. ಯಾರೋ ಕಿಡಿಗೇಡಿಗಳು ನಟಿಯ ಮುಖ ಬಳಸಿ ಅಶ್ಲೀಲ ಚಿತ್ರಗಳನ್ನ, ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ದಾರೆ.

  ಕಳೆದ ವರ್ಷವೇ ನಟಿ ಪ್ರವೀಣಾ ನಾಯರ್ ಈ ಕುರಿತಂತೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು ಆಗ ಪಕ್ಯಾರಾಜ್ ಹೆಸರಿನ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದರು. ಈಗಲೂ ನಟಿಯ ಹೊಸ ತಿದ್ದಿದ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿರುವ ಕಾರಣ ಮತ್ತೊಮ್ಮೆ ನಟಿ ಪ್ರವೀಣಾ ನಾಯರ್ ಪೊಲೀಸರಿಗೆ ದೂರು ನೀಡಿದ್ದಾರೆ.

  ಈ ಬಾರಿ ನಟಿಯ ಚಿತ್ರದ ಜೊತೆಗೆ ನಟಿಯ ಮಗಳ ಚಿತ್ರವನ್ನೂ ಕಿಡಿಗೇಡಿಗಳು ತಿದ್ದಿ ಅಶ್ಲೀಲ ಚಿತ್ರವಾಗಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ಕಾರಣಕ್ಕೆ ಈ ಬಾರಿ ನಟಿ ಪ್ರವೀಣಾ ನಾಯರ್ ಜೊತೆಗೆ ಅವರ ಮಗಳೂ ಸೇರಿ ಸೈಬರ್ ಪೊಲೀಸ್ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ.

  ನನ್ನ ತೇಜೋವಧೆ ಮಾಡುವ ಉದ್ದೇಶದಿಂದಲೇ ನನ್ನ ಹಾಗೂ ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಿ ನಮ್ಮ ಕುಟುಂಬದವರ ಚಿತ್ರಗಳನ್ನು ತಿದ್ದು ಅಶ್ಲೀಲ ಚಿತ್ರಗಳನ್ನು ಹಂಚಲಾಗುತ್ತಿದೆ. ಈ ಹಿಂದೆ ನಾನು ಇಂಥಹಾ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದೆ ಅದೇ ಕಾರಣಕ್ಕಾಗಿ ಈಗ ನಾನೂ ಹಾಗೂ ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದಿದ್ದಾರೆ.

  ಕೇರಳ ಮೂಲದ ನಟಿಯಾಗಿರುವ ಪ್ರವೀಣಾ, 1992 ರಲ್ಲಿ ಬಾಲನಟಿಯಾಗಿ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ 'ಕಲಿಯುಂಚಾಲ್' ಹೆಸರಿನ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ನೀಡಿದರು. ಆ ಬಳಿಕ ಹಲವು ಮಲಯಾಳಿ ಸಿನಿಮಾಗಳ ಜೊತೆಗೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೂ ನಟಿಸಿದರು. ತಮಿಳಿನಲ್ಲಿ ಹಲವಾರು ಹಿಟ್ ಸಿನಿಮಾಗಳಲ್ಲಿ, ಸ್ಟಾರ್ ನಟರೊಟ್ಟಿಗೆ ಪ್ರವೀಣಾ ನಾಯರ್ ನಟಿಸಿದ್ದಾರೆ.

  ನಮ್ಮ ಕೊಟ್ಟಮಣಿ, ಮಹಾರಾಣಿ, ಆದಿ ಪರಾಶಕ್ತಿ, ಪ್ರಿಯಮನವಾಲ್, ಮಹರ್ಷಿ, ರಾಜಾ ರಾಣಿ 2, ಇನಿಯಾ ಇನ್ನೂ ಹಲವು ಧಾರಾವಾಹಿಗಳಲ್ಲಿ ಪ್ರವೀಣಾ ನಾಯರ್ ನಟಿಸಿದ್ದಾರೆ.

  English summary
  Famous actress Praveena Nair and her daughter gave complaint to cyber police about them morphed pics which went viral on social media.
  Sunday, January 1, 2023, 18:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X